For Quick Alerts
  ALLOW NOTIFICATIONS  
  For Daily Alerts

  'ಮಜಾ ಟಾಕೀಸ್'ನಲ್ಲಿ 'ಕೋಳೀಕೆ ರಂಗ' ಹಾಡು ಹಾಡಿದ ಶೈಲಿಗೆ ವಿರೋಧ

  |
  ಕೋಳಿಕೆ ರಂಗ ಹಾಡಿನ ಮೂಲಕ ಗಮನ ಸೆಳೆದ ಕಲಾವತಿ

  'ಕನ್ನಡ ಕೋಗಿಲೆ' ಕಾರ್ಯಕ್ರಮದ ಈ ಬಾರಿಯ ಸ್ಪರ್ಧಿಗಳಲ್ಲಿ ಕಲಾವತಿ ಕೂಡ ಒಬ್ಬರು. 'ನಾನು ಕೋಳೀಕೆರಂಗ' ಹಾಡಿನ ಮೂಲಕ 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ಈ ಗಾಯಕಿ ಗಮನ ಸೆಳೆದಿದ್ದರು. ಆದರೆ ಇದೀಗ ಇದೇ ಹಾಡಿಗೆ ವಿರೋಧ ವ್ಯಕ್ತವಾಗಿದೆ.

  ಕಳೆದ ವಾರ 'ಮಜಾ ಟಾಕೀಸ್' ಸಂಚಿಕೆಗೆ 'ಕನ್ನಡ ಕೋಗಿಲೆ' ತಂಡ ಆಗಮಿಸಿತ್ತು. ಮಾತು, ತಮಾಷೆಯ ಜೊತೆಗೆ ಸ್ಪರ್ಧಿಗಳು ಒಂದೊಂದು ಹಾಡು ಹಾಡಿದರು. ಕಲಾವತಿ ಸರದಿ ಬಂದಾಗ 'ನಾನು ಕೋಳೀಕೆ ರಂಗ' ಹಾಡಿದರು.

  ಮತ್ತೆ ಬಂತು 'ಕನ್ನಡ ಕೋಗಿಲೆ': ಈ ಸಲ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಮತ್ತೆ ಬಂತು 'ಕನ್ನಡ ಕೋಗಿಲೆ': ಈ ಸಲ ಸರ್ಪ್ರೈಸ್ ಮೇಲೆ ಸರ್ಪ್ರೈಸ್

  ಕಲಾವತಿ ಅವರ 'ಕೋಳೀಕೆರಂಗ' ಹಾಡನ್ನು ಕಾರ್ಯಕ್ರಮದಲ್ಲಿ ಇದ್ದವರೆನೋ ಎಂಜಾಯ್ ಮಾಡಿದರು. ಸೃಜನ್ ಲೋಕೇಶ್ ಸಹ ಕುಣಿದರು. ಆದರೆ, ಈ ಹಾಡನ್ನು ಹಾಡಿದ ಶೈಲಿಗೆ ಈಗ ವಿರೋಧ ವ್ಯಕ್ತವಾಗಿದೆ. ಕಲಾವತಿ ಹಾಡಿನ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ..

  ಕೈಲಾಸಂ ಅವರ ಸಾಹಿತ್ಯ ಅಧ್ವಾನವಾಯಿತು

  ಕೈಲಾಸಂ ಅವರ ಸಾಹಿತ್ಯ ಅಧ್ವಾನವಾಯಿತು

  'ನಾನು ಕೋಳೀಕೆ ರಂಗ' ಕನ್ನಡಕ್ಕೊಬ್ಬನೇ ಕೈಲಾಸಂ' ಎಂದು ಬಿರುದಾಂಕಿತರಾದ ಕೈಲಾಸಂ ರವರ ಜನಪ್ರಿಯ ಗೀತೆ. ಈ ಹಾಡನ್ನು 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಕಲಾವತಿ ಹಾಡಿದರು. ಆದರೆ, ಅವರು ಹಾಡಿನ್ನು ತಮ್ಮ ಶೈಲಿಯಲ್ಲಿ ಹಾಡಲು ಹೋಗಿ ಸಾಹಿತ್ಯವನ್ನು ಅಧ್ವಾನಗೊಳಿಸುತ್ತಿದರು ಎಂದು ಸಾಮಾಜಿಕ ಜಾಲತಾಣ ಅಭಿಪ್ರಾಯ ವ್ಯಕ್ತವಾಗಿದೆ.

  ಸೃಜನ್, ಇಂದ್ರಜಿತ್ ಲಂಕೇಶ್ ಗಮನಕ್ಕೆ ಬರಲಿಲ್ಲವೇ

  ಸೃಜನ್, ಇಂದ್ರಜಿತ್ ಲಂಕೇಶ್ ಗಮನಕ್ಕೆ ಬರಲಿಲ್ಲವೇ

  ''ಆಕೆಯ ಗಾಯನವನ್ನು ಹುರಿದುಂಬಿಸುವಂತೆ ಕಾರ್ಯಕ್ರಮದಲ್ಲಿ ಎಲ್ಲರೂ ಕುಣಿದು ಕುಪ್ಪಳಿಸಿದರು. ಆದರೆ ತಾತನ ಕಾಲದಿಂದ ಅಪ್ಪ ಅಮ್ಮನ ಜೊತೆ ರಂಗಭೂಮಿಯ ಹಿನ್ನೆಲೆಯಲ್ಲೇ ಬೆಳೆದು ಬಂದ ಸೃಜನ್ ಲೋಕೇಶ್ ಸಹ ಕುಣಿದದ್ದು ಬೇಸರವೆನಿಸಿತು. ಕನ್ನಡ ರಂಗಭೂಮಿಯ ದಿಕ್ಕನ್ನೇ ಬದಲಾಯಿಸಿ ಜನಸಾಮಾನ್ಯರನ್ನು ರಂಗದ ಮೇಲೆ ತಂದ ಧೀಮಂತ ನಾಟಕಕಾರ ಟಿ.ಪಿ. ಕೈಲಾಸಂರವರ ಸಾಹಿತ್ಯ ಅಧ್ವಾನವಾಗುತ್ತಿರುವುದು ಲೋಕೇಶ್ ರವರ ನಾಟಕಕಾರ ಪುತ್ರ ಸೃಜನ್, ಪಿ.ಲಂಕೇಶ್ ಪುತ್ರ ಇಂದ್ರಜಿತ್ ರವರ ಗಮನಕ್ಕೆ ಬರಲಿಲ್ಲವೇ?'' ಎಂದು ವೀಕ್ಷಕರೊಬ್ಬರು ಪ್ರಶ್ನೆ ಮಾಡಿದ್ದಾರೆ.

  ಅನುಪಮಾ ಬದಲು 'ಕನ್ನಡ ಕೋಗಿಲೆ ಸೀಸನ್ 2'ಗೆ ಹೊಸ ಆಂಕರ್ ಅನುಪಮಾ ಬದಲು 'ಕನ್ನಡ ಕೋಗಿಲೆ ಸೀಸನ್ 2'ಗೆ ಹೊಸ ಆಂಕರ್

  ನೀವು ನೋಡಲೇ ಬೇಡಿ ಎನ್ನುವ ಉತ್ತರ ಬಂತು

  ನೀವು ನೋಡಲೇ ಬೇಡಿ ಎನ್ನುವ ಉತ್ತರ ಬಂತು

  ''ಟಿವಿಯಲ್ಲಿ ಹಾಡನ್ನು ನೋಡಿ ಈ ಕುರಿತು ಸಂಬಂಧಪಟ್ಟ ಕಾರ್ಯಕ್ರಮದ ನಿರ್ವಾಹಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ 'ಆ ಕಾರ್ಯಕ್ರಮವನ್ನು ನೀವು ನೋಡಲೇ ಬೇಡಿ' ಎಂಬ ಉದ್ಧಟತನದ ಉತ್ತರ ನೀಡಿದರಂತೆ. ಕವಿ ಕಲ್ಪನೆಯ ಕನ್ನಡ ಸಾಹಿತ್ಯವನ್ನು ಕುಲಗೆಡಿಸುವ ಅಧಿಕಾರವನ್ನು ಇವರಿಗೆ ನೀಡಿದವರು ಯಾರು ? ಟಿ ಆರ್ ಪಿ ಗೋಸ್ಕರ ಇವರೇನು ಬೇಕಾದರೂ ಮಾಡಬಹುದೇ?'' ಎಂದು ಸಾಹಿತ್ಯಾಸಕ್ತರು ಅಸಮಾಧಾನಗೊಂಡಿದ್ದಾರೆ.

  ಕ್ಯಾಬರೆ-ಟಪಾಂಗುಚಿ ಶೈಲಿಯಲ್ಲೆಲ್ಲಾ ಹಾಡುತ್ತಾರೆ

  ಕ್ಯಾಬರೆ-ಟಪಾಂಗುಚಿ ಶೈಲಿಯಲ್ಲೆಲ್ಲಾ ಹಾಡುತ್ತಾರೆ

  ''ನಾನು ಕೋಳಿಕೆರಂಗ' ಗೀತೆಯನ್ನು ಕ್ಯಾಬರೆ-ಟಪಾಂಗುಚಿ ಶೈಲಿಯಲ್ಲೆಲ್ಲಾ ಹಾಡಿ ಸಾಹಿತ್ಯವನ್ನು ಅದಲು ಬದಲು ಮಾಡಿ ಏನೇನೋ ಉಚ್ಛರಿಸುತ್ತಾ 'ಮಜಾ ನೀಡುವೆವು' ಎಂದು ನೀವೇನಾದರೂ ಹೇಳಿದರೆ ಅಂತಹ ಮಜ ನಿಮಗೇ ಇರಲಿ. ಕನ್ನಡ ಸಾಹಿತ್ಯಕ್ಕೆ ಬೆಲೆ ನೀಡದ ಯಾವ ಕಾರ್ಯಕ್ರಮವೂ ಕನ್ನಡಿಗರಿಗೆ ಬೇಡ.'' ಎಂದು ಮತ್ತೊಬ್ಬರು ಆಕ್ರೋಶವನ್ನು ಹೊರಹಾಕಿದ್ದಾರೆ.

  ಈ ಹಿಂದೆಯೂ ಇದೇ ತರದ ತಪ್ಪುಗಳು ಆಗಿವೆ

  ಈ ಹಿಂದೆಯೂ ಇದೇ ತರದ ತಪ್ಪುಗಳು ಆಗಿವೆ

  ''ಕೋಳಿಕೆ ರಂಗ'ವನ್ನು ಹಾಡಿದ ಈ ಗಾಯಕಿಯ ಬೇರೆ ಹಾಡುಗಳನ್ನೂ ಕೆಲವೊಮ್ಮೆ ಕೇಳಿದ್ದೇನೆ. ಅದೇ ವಾಹಿನಿಯ ಹಾಡಿನ ಕಾರ್ಯಕ್ರಮದಲ್ಲಿನ ಸುಗಮ ಸಂಗೀತ ಸುತ್ತು ಅಥವಾ ರಂಗ ಸಂಗೀತದ ಸುತ್ತು ಬಂದಾಗಲೂ ಇದೇ ಗೋಳು. ಅಲ್ಲಿ ತೀರ್ಪುಗಾರರಾಗಿ ಕುಳಿತಿರುವವರು ಯಾವ ತಪ್ಪುಗಳನ್ನೂ ತಪ್ಪು ಎನ್ನದೆ, ಸರಿ ಮಾಡದೆ ಎಲ್ಲದ್ದಕ್ಕೂ ಜೈ ಎನ್ನುತ್ತಿದ್ದರೆ ಈ ಕಾರ್ಯಕ್ರಮಗಳ ಉದ್ದೇಶದ ಕುರಿತಾಗಿಯೇ ಪ್ರಶ್ನೆಗಳು ಏಳುತ್ತವೆ.'' ಎಂದು ರಂಗಭೂಮಿ ನಿರ್ದೇಶಕರೊಬ್ಬರು ಘಟನೆಯನ್ನು ವಿವರಿಸಿದ್ದಾರೆ.

  English summary
  A viewer unhappy with Kannada Kogile singer Kalavathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X