ಮತ್ತೊಂದು ಮದುವೆಗೆ ವೇದಿಕೆಯಾಗುತ್ತಾ ಬಿಗ್ ಬಾಸ್ ? ಧರ್ಮ- ಅನುಷಾ ರೈ ವಿಡಿಯೋ ವೈರಲ್...!

ಬಿಗ್ ಬಾಸ್‌ನ ಪ್ರತಿ ಸೀಸನ್‌ನಲ್ಲಿಯೂ ಒಂದಾದರೂ ಲವ್ ಸ್ಟೋರಿ ಇರಬೇಕೆಂಬ ಅಲಿಖಿತ ನಿಯಮ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹತ್ತು ಹಲವು ಪ್ರೇಮ ಪ್ರಕರಣಕ್ಕೆ ಬಿಗ್ ಬಾಸ್ ಮನೆ ಸಾಕ್ಷಿಯಾಗಿದೆ. ಆದರೆ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಪ್ರೇಮ ಕಹಾನಿ ಹೊರತು ಪಡಿಸಿದರೆ, ಬೇರೆ ಯಾರು ಕೂಡ ಆ ಮನೆಯಾಚೆ ಬಂದು ತಮ್ಮ ಗೂಡು ಕಟ್ಟಿಕೊಳ್ಳಲಿಲ್ಲ. ಮದುವೆಯ ಬಂಧನಕ್ಕೊಳಗಾಗಲಿಲ್ಲ.

ಆದರೂ.. ಲವ್ ಸ್ಟೋರಿಯ ಮೇಲೆ ಬಿಗ್ ಬಾಸ್ ಆಸಕ್ತಿ ಕಡಿಮೆಯಾಗಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಈ ಬಾರಿ ಧರ್ಮ-ಅನುಷಾ ರೈ ಮತ್ತು ಐಶ್ವರ್ಯ ಸಿಂಧೋಗಿ ನಡುವೆ ತ್ರಿಕೋನ ಪ್ರೇಮಕಥೆ ಶುರುವಾಗಿದೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ಇದರ ನಡುವೆ ಧರ್ಮ ಮತ್ತು ಅನುಷಾ ರೈ ಅವರ ವಿಡಿಯೋ ಒಂದು ವೈರಲ್ ಆಗಿದೆ.

A viral old video of Dharma and Anusha surfaces amid love triangle rumours with Aishwarya in BBK 11

ಹೌದು, ಅಸಲಿಗೆ ಧರ್ಮ ಮತ್ತು ಅನುಷಾ ರೈ ಇಂದು ನಿನ್ನೆಯ ಸ್ನೇಹಿತರಲ್ಲ. ನಾಲ್ಕೈದು ವರ್ಷಗಳ ಗೆಳೆತನ ಇವರದ್ದು. ಖಡಕ್ ಸೇರಿ ಇನ್ನೆರಡು ಚಿತ್ರಗಳನ್ನು ಧರ್ಮ ಹಾಗೂ ಅನುಷಾ ರೈ ಮಾಡಿದ್ದಾರೆ. ಈ ಹಿನ್ನೆಲೆ ಇಬ್ಬರ ನಡುವೆ ಆತ್ಮೀಯತೆ ಇದೆ. ಆದರೆ ಅದು ಸ್ನೇಹಕ್ಕೂ ಮೀರಿದ ಬಾಂಧವ್ಯನಾ ಗೊತ್ತಿಲ್ಲ. ಆದರೆ ಅನುಮಾನ ಎಲ್ಲರಲ್ಲಿ ಇದ್ದೇ ಇದೆ. ಹೀಗಿರುವಾಗ ಈ ಅನುಮಾನ ಇನ್ನೂ ಹೆಚ್ಚಾಗುವಂತೆ ಧರ್ಮ ಮತ್ತು ಅನುಷಾ ರೈ ಮಾಡಿರುವ ಜಾಲಿ ರೈಡ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Mr D Pictures ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಆದ ಈ ವಿಡಿಯೋದಲ್ಲಿ ಧರ್ಮ ಬೈಕ್ ಓಡಿಸುತ್ತಿದ್ದರೆ ಹಿಂದೆ ಅನುಷಾ ಹಾಯಾಗಿ ಕುಳಿತುಕೊಂಡು ವಿಡಿಯೋ ಮಾಡಿದ್ದಾರೆ. ಇನ್ನೂ ಈ ವಿಡಿಯೋಗೆ ಅನುಷಾ ರೈ ಮತ್ತು ಧರ್ಮ ಲವ್ ವಿಡಿಯೋ ಎಂಬ ಶೀರ್ಷಿಕೆಯನ್ನು ಕೂಡ ನೀಡಲಾಗಿದೆ.

ಕೇವಲ ಇದೊಂದು ವಿಡಿಯೋ ಮಾತ್ರವಲ್ಲದೇ ಇದೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮತ್ತೊಂದು ವಿಡಿಯೋ ಕೂಡ ಹಂಚಿಕೊಳ್ಳಲಾಗಿದ್ದು ಈ ವಿಡಿಯೋದಲ್ಲಿ ಧರ್ಮ ಪೊಲೀಸ್ ಸಮವಸ್ತ್ರದಲ್ಲಿ ಮಿಂಚುತ್ತಿದ್ದರೆ, ಅನುಷಾ ಕೈಯಲ್ಲಿ ಲಾಠಿ ಹಿಡಿದು ಧರ್ಮ ಎದುರು ನಿಂತುಕೊಂಡಿದ್ದಾರೆ. ಈ ವಿಡಿಯೋ ನೋಡುತ್ತಿದ್ದರೆ ಧರ್ಮ ಅಭಿನಯದ ನವಗ್ರಹ ಚಿತ್ರದ ಕಣ್ ಕಣ್ಣ ಸಲಿಗೆ ಹಾಡು ನೆನಪಾಗದೇ ಇರದು. ಈ ಕಾರಣಕ್ಕೆ ಅನೇಕರು ಧರ್ಮ ಮತ್ತು ಅನುಷಾ ರೈ ಅವರದ್ದು ಸ್ನೇಹ ಅಲ್ಲ ಬದಲಿಗೆ ಪ್ರೇಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮುದ್ದಾದ ಜೋಡಿ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ಅಂದ್ಹಾಗೇ ಮೊನ್ನೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಅನುಷಾ ರೈ, ಧರ್ಮ ಮತ್ತು ಐಶ್ವರ್ಯ ಅವರ ತ್ರಿಕೋನ ಪ್ರೇಮಕಥೆಯ ಕುರಿತು ಸುದೀಪ್ ಚರ್ಚೆ ಮಾಡಿದ್ದರು. ಧರ್ಮ ಕೀರ್ತಿರಾಜ್ ಅನುಷಾ ಅವರ ಜೊತೆ ಮಾತನಾಡಿದರೆ ಐಶ್ವರ್ಯ ಅವರ ಮುಖ ಸಣ್ಣದಾಗುತ್ತಾ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಮನೆಯ ಸದಸ್ಯರೆಲ್ಲ ಹೌದು ಹೌದು ಎಂದಿದ್ದರು. ಅನುಷಾ ಜೊತೆ ಧರ್ಮ ಓಡಾಡುತ್ತಿದ್ದರೆ ಐಶ್ವರ್ಯ ಮುಖ ಚಿಕ್ಕದಾಗುತ್ತೆ ಎಂದಿದ್ದರು. ಆದರೆ ಐಶ್ವರ್ಯ ಈ ವಿಚಾರವನ್ನು ತಳ್ಳಿ ಹಾಕಿದ್ದರು. ನಾನು ಧರ್ಮ ಜೊತೆ ಮಾತನಾಡಿದರೆ ಅನುಷಾ ಬೇಸರ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇನ್ನೂ ಇದರ ನಡುವೆ ಅನುಷಾ ಮತ್ತು ಧರ್ಮ ನಡುವೆ ಈ ಹಿಂದೆಯೇ ಲವ್ ಸ್ಟೋರಿ ಶುರುವಾಗಿತ್ತು ಎನ್ನುವ ಸುದ್ದಿ ಕೇಳಿದಾಗ ಐಶ್ವರ್ಯ ಬೇಸರಗೊಂಡಿದ್ದರು.

More from Filmibeat

Read more about: biggboss bigg boss viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X