ಅವನನ್ನು ನಾನು ಮದುವೆಯಾಗಬಾರದಿತ್ತು, ಛೇ ; ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ನಟಿ
'ಮದುವೆ' ಎಂಬ ಮೂರಕ್ಷರದ ಬಂಧನದಲ್ಲಿ ಒಮ್ಮೆ ಸಿಲುಕಿಕೊಂಡರೆ ಅಷ್ಟೇ. ಅದರಿಂದ ಹೊರ ಬರುವುದು ಸುಲಭದ ಮಾತಲ್ಲ. ಈ ಕಾರಣಕ್ಕಾಗಿಯೇ ಮದುವೆ ವಿಚಾರದಲ್ಲಿ ತುಂಬಾನೇ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕು ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ. ಕೈ ಹಿಡಿಯುವ ಜೀವನ ಸಂಗಾತಿಯ ಆಯ್ಕೆಯಲ್ಲಿ ತುಂಬಾ ಎಚ್ಚರ ವಹಿಸಿ ಎಂಬ ಕಿವಿಮಾತನ್ನು ಹೇಳುತ್ತಾರೆ. ಈ ಸಂದರ್ಭದಲ್ಲಿ ಚೂರು ಯಾಮಾರಿದರೂ...
ಎಡವಿದರೂ .. ಜೀವನಪರ್ಯಂತ ಪಶ್ಚಾತಾಪ ಪಡಬೇಕಾಗುತ್ತೆ. ಆತುರಾತುರವಾಗಿ ಮದುವೆಯಾಗಿದ್ದಕ್ಕೆ.. ಆಕರ್ಷಣೆಯನ್ನೇ ಪ್ರೀತಿ ಅಂದುಕೊಂಡಿದ್ದಕ್ಕೆ.. ಯೋಚನೆ ಮಾಡದೇ ಮದುವೆಯಾಗಿದ್ದಕ್ಕೆ .. ಮನೆಯವರ ಬಲವಂತಕ್ಕೆ ಮಣಿದು ಹಸೆಮಣೆ ಏರಿದ್ದಕ್ಕೆ.. ಕಣ್ಣೀರಿನಲ್ಲಿಯೇ ಕೈ ತೊಳೆಯಬೇಕಾಗುತ್ತೆ. ಉದಾಹರಣೆಗೆ ನೀಲಂ ಗಿರಿ.

ಹೌದು, ನೀಲಂ ಗಿರಿ. ಭೋಜ್‌ಪುರಿಯ ಬೆಡಗಿ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ತನ್ನಷ್ಟಕ್ಕೆ ಟಿಕ್ ಟಾಕ್ ಮಾಡಿಕೊಂಡಿದ್ದ ನೀಲಂ ಮೇಲೆ ಅದ್ಯಾವಾಗ ಭೋಜ್‌ಪುರಿಯ ಸೂಪರ್ ಸ್ಟಾರ್ ಪವನ್ ಸಿಂಗ್ ಕಣ್ಣು ಬಿತ್ತೋ. ಅಲ್ಲಿಂದ .. ಇವರ ಅದೃಷ್ಟ ಬದಲಾಯ್ತು. ಸೀದಾ ನಾಯಕಿಯ ಸ್ಥಾನ ಕೂಡ ಸಿಕ್ತು.
ಆ ನಂತರ... ''ಬಾಬುಲ್''.. ''ಟುನ್ ಟುನ್''.. ''ಕಲಾಕಂದ್''.. ''ಇಜ್ಜತ್ ಘರ್''.. ಚಿತ್ರಗಳಲ್ಲಿ ಕಾಣಿಸಿಕೊಂಡ ನೀಲಂ ಹಲವು ಮ್ಯೂಸಿಕ್ ಆಲ್ಬಂಗಳಿಗೆ ಹೆಜ್ಜೆಯನ್ನು ಹಾಕಿದರು. ಇಂಥಾ ನೀಲಂ ಗಿರಿ .. ಸದ್ಯ ಸಲ್ಮಾನ್ ಖಾನ್ ಸಾರಥ್ಯದ ''ಬಿಗ್ ಬಾಸ್ ಸೀಸನ್ 19''ರಲ್ಲಿ ಭಾಗವಹಿಸಿದ್ದಾರೆ. ಕಳೆದ 58 ದಿನಗಳಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಇದೇ ಸಮಯದಲ್ಲಿ ತಮ್ಮ ಹಳೆಯ ದಿನಗಳನ್ನು ನೆನೆದು ಕಣ್ಣೀರನ್ನು ಹಾಕಿದ್ದಾರೆ.
ಹೌದು, ತನ್ನ ಐಶಾರಾಮಿ ಜೀವನಶೈಲಿಯಿಂದ ಸದ್ಯ ''ಬಿಗ್ ಬಾಸ್'' ಮನೆಯಲ್ಲಿ ಸದ್ದು ಗದ್ದಲ ಮಾಡುತ್ತಿರುವ ತಾನ್ಯಾ ಮಿತ್ತಲ್ ಜೊತೆ ಇತ್ತೀಚೆಗೆ ನೀಲಂ ಮಾತನಾಡುವ ಸಮಯದಲ್ಲಿ ತಾನ್ಯಾ ಮದುವೆಯ ಕುರಿತು ನೀಲಂ ಅವರಲ್ಲಿ ಪ್ರಶ್ನೆ ಕೇಳಿದ್ದಾರೆ. ಈ ಸಮಯದಲ್ಲಿ ಭಾವುಕರಾದ ನೀಲಂ ನಮ್ಮ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಪರಸ್ಪರ ಸಮ್ಮತ ಮತ್ತು ಸಹಮತದಿಂದನೇ ಇಬ್ಬರು ದೂರ ಆದೆವು ಆದರೆ ಆ ಕ್ಷಣ ಭಾವನಾತ್ಮಕವಾಗಿತ್ತು ಎಂದು ಹೇಳಿದ್ದಾರೆ.
ನಮ್ಮ ಸಂಬಂಧದಲ್ಲಿ ಯಾವತ್ತು ಖುಷಿ ಎನ್ನುವುದು ಇರಲೇ ಇಲ್ಲ ಎಂದು ಹೇಳಿರುವ ನೀಲಂ, ಮದುವೆಯ ನಿರ್ಧಾರ ನಾನು ನನ್ನ ಜೀವನದಲ್ಲಿ ತೆಗೆದುಕೊಂಡ ಅತೀ ದೊಡ್ಡ ತಪ್ಪು ನಿರ್ಧಾರ, ಆ ದಿನಗಳನ್ನು ನೆನಪು ಮಾಡಿಕೊಂಡರೆ ಸಾಕು ನನಗೆ ಅತೀವ ದುಃಖ ಆಗುತ್ತೆ ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ ತಮ್ಮ ತಂದೆಯ ತ್ಯಾಗ, ಕಷ್ಟದ ಕುರಿತು ಕೂಡ ಮಾತನಾಡುತ್ತಾ ಭಾವುಕರಾಗಿರುವ ನೀಲಂ ನಮ್ಮ ತಂದೆ ನಮ್ಮನ್ನು ತುಂಬಾ ಕಷ್ಟಪಟ್ಟು ಸಾಕಿ ಸಲುಹಿದ್ದಾರೆ. ಮರ ಕಡಿಯುವ ಕೆಲಸ ಅವರು ಮಾಡುತ್ತಿದ್ದರು. ಎರಡು ಹೊತ್ತಿನ ಊಟಕ್ಕೂ ತುಂಬಾ ಕಷ್ಟ ಪಡಬೇಕಿತ್ತು ಎಂದು ಹೇಳಿದ್ದಾರೆ.
ಅಂದ್ಹಾಗೇ ''ಬಿಗ್ ಬಾಸ್ 19''ರ ಅತ್ಯಂತ ಪ್ರಬಲ ಸ್ಫರ್ಧಿಗಳಲ್ಲಿ ನೀಲಂ ಗಿರಿ ಒಬ್ಬರಾಗಿದ್ಧಾರೆ. ಹಲವರು ನೀಲಂ ಈ ಬಾರಿ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಸದ್ಯ 58 ದಿನಗಳನ್ನು ಹಿಂದಿಯ ''ಬಿಗ್ ಬಾಸ್'' ಪೂರೈಸಿದ್ದು ಮನೆಯಿಂದ ನಗ್ಮಾ.. ನಟಾಲಿಯಾ.. ಆವೇಜ್ ದರ್ಬಾರ್ ಮತ್ತು ಝೈಶ್ ಖಾದ್ರಿ ಹೊರಗಡೆ ಬಂದಿದ್ದಾರೆ. 14 ಜನ ಇನ್ನು ಮನೆಯಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ವೈಲ್ಡ್ ಕಾರ್ಡ್ ಮೂಲಕ ಇನ್ನೂ ಕೆಲವರು ಮನೆಯೊಳಗೆ ಹೋಗುವ ಸಾಧ್ಯತೆ ಇದೆ. ಈ ವಾರ ಮನೆಯಲ್ಲಿ ಏನೆಲ್ಲಾ ರಂಪ ರಾಮಾಯಣ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











