For Quick Alerts
  ALLOW NOTIFICATIONS  
  For Daily Alerts

  ಮೊನ್ನೆ ಚಿತ್ರಮಂದಿರದಲ್ಲಿದ್ದ 'Rambo 2' ಮತ್ತು 'ಕರಾಳ ರಾತ್ರಿ' ಟಿವಿಗೆ ಬಂದೆ ಬಿಡ್ತು

  By Bharath Kumar
  |

  ಮೊನ್ನೆ ಮೊನ್ನೆಯಷ್ಟೇ ಚಿತ್ರಮಂದಿರದಲ್ಲಿ ನೋಡಿದ್ದ ಕನ್ನಡದ ಎರಡು ಹೊಸ ಸಿನಿಮಾಗಳು ಅಷ್ಟರಲ್ಲೇ ಕಿರುತೆರೆಗೆ ಲಗ್ಗೆಯಿಟ್ಟಿದೆ. ಬಿಗ್ ಸ್ಕ್ರೀನ್ ನಲ್ಲಿ ಕಮಾಲ್ ಮಾಡಿದ್ದ ಸೂಪರ್ ಹಿಟ್ ಚಿತ್ರಗಳು ಈಗ ಟಿವಿ ಪ್ರೇಕ್ಷಕರನ್ನ ರಂಜಿಸಲು ಬರ್ತಿದೆ.

  ಹೌದು, ಶರಣ್ ಅಭಿನಯದಲ್ಲಿ ಮೂಡಿ ಬಂದಿದ್ದ 'Rambo 2' ಸಿನಿಮಾ 'ಜೀ ಕನ್ನಡ'ದಲ್ಲಿ ಪ್ರಸಾರವಾಗಲಿದೆ. 'Rambo 2' ಸಿನಿಮಾ ಟಿವಿಯಲ್ಲಿ ಯಾವಾಗ ಪ್ರಸಾರ ಆಗುತ್ತೆ ಎಂಬುದರ ಬಗ್ಗೆ ಸುಳಿವು ನೀಡದ ಜೀ ಕನ್ನಡ, ಅತಿ ಶೀಘ್ರದಲ್ಲಿ ಪ್ರೋಮೋ ಪ್ರಸಾರ ಮಾಡುತ್ತಿದೆ.

  ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದ 'Rambo 2' ಮೇ 18 ರಂದು ಬಿಡುಗಡೆಯಾಗಿತ್ತು. ಶರಣ್, ಆಶಿಕಾ ರಂಗನಾಥ್, ಚಿಕ್ಕಣ್ಣ, ಬುಲೆಟ್ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಸ್ವತಃ ಶರಣ್ ಅವರೇ ಈ ಚಿತ್ರವನ್ನ ನಿರ್ಮಾಣ ಮಾಡಿದ್ದರು.

  ಇನ್ನು 'Rambo 2' ಚಿತ್ರದ ಜೊತೆ ಇನ್ನೊಂದು ಹೊಸ ಸಿನಿಮಾ ಟಿವಿಯಲ್ಲಿ ಬರ್ತಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ 'ಆ ಕರಾಳ ರಾತ್ರಿ'. ಕಾರ್ತಿಕ್ ಜಯರಾಂ, ಅನುಪಮಾ ಗೌಡ, ನವೀನ್ ಕೃಷ್ಣ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಜೂನ್ 19 ರಂದು ಈ ಸಿನಿಮಾ ರಿಲೀಸ್ ಆಗಿತ್ತು.

  ಈ ಸಿನಿಮಾ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಪ್ರಸಾರವಾಗ್ತಿದೆ. ಸೆಪ್ಟೆಂಬರ್ 16 ರಂದು ಈ ಸಿನಿಮಾ ಟೆಲಿಕಾಸ್ಟ್ ಆಗ್ತಿದೆ. ಒಟ್ನಲ್ಲಿ, ಇತ್ತೀಚಿನ ತಿಂಗಳಲ್ಲಿ ಥಿಯೇಟರ್ ನಲ್ಲಿ ಅಬ್ಬರಿಸಿದ್ದ ಸಿನಿಮಾಗಳು ಬೇಗ ಬೇಗನೇ ಕಿರುತೆರೆಗೆ ಬರ್ತಿರುವುದು ಖುಷಿ ನೀಡಿದೆ.

  English summary
  Sharan starrer 'Rambo 2' and karthik jayaram starrer 'aa karaala ratri' premier in tv.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X