ಪ್ರೀತಿ ಪ್ರೇಮ ಬರಿ ಪುಸ್ತಕದ ಬದನೆಕಾಯಿ ; ಮತ್ತೊಬ್ಬ ನಟಿಯ ಬದುಕಿನಲ್ಲಿ ಬಿರುಗಾಳಿ- 08 ವರ್ಷಗಳ ದಾಂಪತ್ಯ ಅಂತ್ಯ
ಮದುವೆ ಎನ್ನುವುದು ಸಮರಸ ಜೀವನದ ಆರಂಭ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ. ಇನ್ನೂ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಲೋಕದಲ್ಲಿ ನಡೆಯುವಂತಹದ್ದು ಎನ್ನುವುದು ಹಿರಿಯರ ನಂಬಿಕೆ. ಆದರೆ.. ಈಗೀಗ ಮದುವೆ ಕೇವಲ ಆಡಂಬರಕ್ಕೆ ಮಾತ್ರ ಸೀಮಿತವಾಗುತ್ತಿದೆ. ವೈಭವ ಮತ್ತು ಭವ್ಯತೆಗೆ ಮನಸೋತ ಅನೇಕರು ಮದುವೆಯ ಮಹತ್ವವನ್ನೇ ಮರೆಯುತ್ತಿದ್ದಾರೆ.
ಇನ್ನೂ.. ಬಣ್ಣದ ಲೋಕದಲ್ಲಿ ಈ ಮದುವೆ.. ಮನೆ.. ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಹಲವರು ಮಾಡುತ್ತಲೇ ಇರುತ್ತಾರೆ. ಚಿಕ್ಕ ಚಿಕ್ಕ ವಿಚಾರಕ್ಕೆ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಹಲವಾರು ತಾರೆಯರು ಈ ಮದುವೆಯ ಸಂಕೋಲೆಯಿಂದ ಮುಕ್ತರಾಗಿದ್ದಾರೆ. ಈ ಸಾಲಿಗೆ ಈಗ ''ಅಕ್ಷಯಾ ಗುರವ್'' ಕೂಡ ಸೇರಿಕೊಂಡಿದ್ದಾರೆ.

ಹೌದು, ಅಕ್ಷಯಾ ಗುರವ್.. ಬೆಸಿಕಲಿ ಮರಾಠಿ ಮುಲ್ಗಿ. ಬಾಲ ನಟಿಯಾಗಿ "ಮೆಂಡಿಚ್ಯಾ ಪಾನಾವರ್" ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ ಅಕ್ಷಯಾ ಆ ನಂತರ "ರಾಧಾ ಪ್ರೇಮ್ ರಂಗಿ ರಂಗಲಿ".. " ಲವ್ ಲಗ್ನ ಲೋಚಾ" .. ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. "ಆಯಿ ಕುಠೆ ಕಾಯ್ ಕರ್ತೆ" ಧಾರಾವಾಹಿ ಮೂಲಕ ಅಖಂಡ ಮಹಾರಾಷ್ಟ್ರದಲ್ಲಿ ಮನೆ ಮಾತಾದರು.
ಇಂಥಾ ಅಕ್ಷಯಾ ಗುರವ್ ತಮ್ಮ ಸ್ನೇಹಿತನ ಮನೆಯಲ್ಲಿ ಮರಾಠಿ ಚಿತ್ರರಂಗದ ನಿರ್ದೇಶಕ ಮತ್ತು ಛಾಯಾಗ್ರಾಹಕ ಭೂಷಣ್ ವಾಣಿ ಅವರನ್ನು ನೋಡಿದರು. ಮೊದಲ ನೋಟದಲ್ಲಿಯೇ ಪ್ರೀತಿಯಲ್ಲಿ ಬಿದ್ದರು. ಮೇ 23-2017 ರಲ್ಲಿ ಮದುವೆ ಕೂಡ ಆದರು.
ಆ ನಂತರ ನೀಡಿದ ಸಂದರ್ಶನದಲ್ಲಿ ಪತಿ ಭೂಷಣ್ ಅವರ ಪ್ರೀತಿ ಅವರ ಸಹಕಾರ ಮತ್ತು ಬೆಂಬಲದ ಕುರಿತು ಕೂಡ ಮನಸಾರೆ ಮಾತನಾಡಿದ್ದರು. ಭೂಷಣ್ ಅವರನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇ ಎಂಬರ್ಥದಲ್ಲಿ ಮಾತನಾಡಿದ್ದದ್ದ ಅಕ್ಷಯಾ ಏಳೇಳು ಜನ್ಮದಲ್ಲಿಯೂ ಭೂಷಣ್ ಅವರೇ ನನ್ನ ಪತಿಯಾಗಲಿ ಎಂದು ಆಶಿಸಿದ್ದರು.
ಆದರೆ 7 ಜನ್ಮದ ಮಾತುಗಳನ್ನಾಡಿದ್ದ ಅಕ್ಷಯಾ ಅವರ ದಾಂಪತ್ಯ ಕೇವಲ 08 ವರ್ಷಕ್ಕೆ ಮುರಿದು ಬಿದ್ದಿದೆ. ಅಕ್ಷಯಾ ಮತ್ತು ಭೂಷಣ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಇನ್ನೂ ಬೆಂಕಿ ಇಲ್ಲದೆ ಹೊಗೆಯಾಡಲ್ಲ. ಈ ಸುದ್ದಿಗೆ ಪೂರಕವಾಗಿ ಅಕ್ಷಯಾ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ ಮದುಚೆಯ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ತಮ್ಮ ಪತಿ ಸೌರಭ್ ಜೊತೆ ಇರುವ ನೆನಪುಗಳನ್ನೆಲ್ಲಾ ಅಳಸಿ ಹಾಕಿದ್ದಾರೆ.

ಅಕ್ಷಯಾ ಮತ್ತು ಭೂಷಣ್ ದಾಂಪತ್ಯ ಜೀವನ ಮುರಿದು ಬೀಳಲು ಕಾರಣವೇನು..? ಎನ್ನುವುದು ಸದ್ಯ ಗೊತ್ತಿಲ್ಲವಾದರು ಕೂಡ ಮರಾಠಿ ಕಿರುತೆರೆ ಮತ್ತು ಬೆಳ್ಳಿತೆರೆಯ ವರ್ಗದಲ್ಲಿ ಇವರ ಈ ವಿಚ್ಛೇದನದ ಸುದ್ದಿ ಸಾಕಷ್ಟು ಚರ್ಚೆಗೀಡಾಗಿದೆ. ಅಕ್ಷಯಾ ಅವರ ಅಭಿಮಾನಿಗಳಿಗೆ ಕೂಡ ಈ ಸುದ್ದಿ ಕೇಳಿ ಆಘಾತವಾಗಿದೆ. ಇಬ್ಬರ ಈ ವಿಚ್ಛೇದನದ ವಿಚಾರ ಟ್ರೋಲಿಗರಿಗೆ ಸದ್ಯ ಆಹಾರವೂ ಆಗಿದೆ.
ಅಂದ್ಹಾಗೇ ಅಕ್ಷಯಾ ಅವರನ್ನು ಮದುವೆಯಾಗಿದ್ದ ಭೂಷಣ್ ಈ ಹಿಂದೆ ಮರಾಠಿಯಲ್ಲಿ ''ಲಗ್ನ್ ಮುಬಾರಕ್'' ಮತ್ತು ''ಝೊಂಬಿವಿಲಿ'' ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಇದರ ಹೊರತಾಗಿ ರಿಲಯನ್ಸ್ ಜಿಯೋ.. ಸ್ಯಾವ್ಲಾನ್.. ಫ್ಲಿಪ್‌ಕಾರ್ಟ್.. ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಜಾಹೀರಾತುಗಳಿಗೆ ಛಾಯಾಗ್ರಾಹಕನಾಗಿ ಮತ್ತು ನಿರ್ದೇಶಕನಾಗಿಯೂ ಕೂಡ ಕೆಲಸ ಮಾಡಿದ್ದರು.
ಒಟ್ನಲ್ಲಿ ಸದ್ಯ ಅಕ್ಷಯಾ ಗುರವ್ ಮತ್ತು ಭೂಷಣ್ ವಾಣಿ ಅವರ ದಾಂಪತ್ಯದಲ್ಲಿ ಬಿರಕು ಮೂಡಿದೆ ಎನ್ನುವ ಸುದ್ದಿ ಹೊರ ಬಿದ್ದಿದ್ದು, ತಮ್ಮ ಈ ವಿಚ್ಛೇದನದ ಕುರಿತು ಕೇಳಿ ಬರುತ್ತಿರುವ ಮಾತುಗಳಿಗೆ ಇಬ್ಬರು ಪ್ರತಿಕ್ರಿಯೆ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











