ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಹೊಸ ಬ್ಯುಸಿನೆಸ್ ಶುರು ಮಾಡಿದ ಆಸೆ ಧಾರಾವಾಹಿ ನಟಿ ಅಮೃತಾ ರಾಮಮೂರ್ತಿ..!
ಅಮೃತಾ ರಾಮಮೂರ್ತಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗೆ ಹುಷಾರಿಲ್ಲದೆ ಆಸ್ಪತ್ರೆ ಸೇರಿದ್ದ ನಟಿಯ ಬಗ್ಗೆ ಅಭಿಮಾನಿಗಳು ಬಹಳಷ್ಟು ಆತಂಕ ವ್ಯಕ್ತಪಡಿಸಿದ್ದರು. ಬಳಿಕ ಅಮೃತಾ ಅವರೇ ಖುದ್ದಾಗಿ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದರು. ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದರು. ಇಂತಹ ಅಮೃತಾ ರಾಮಮೂರ್ತಿಯವರು ಸೋಷಿಯಲ್ ಮೀಡಿಯಾದಲ್ಲಿ ಇದೀಗ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ತನ್ನ ಗಂಡನೊಂದಿಗೆ ಅಮೃತ ಮಾತನಾಡುತ್ತಾ ಇರುವ ವಿಡಿಯೋ ನೋಡಿ ಅನೇಕರು ಖುಷಿ ಪಟ್ಟಿದ್ದಾರೆ. ಅಮೃತಾ ರಾಮ ಮೂರ್ತಿ ಯವರು ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಆಸೆ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ. ಅಮೃತಾ ರಾಮ ಮೂರ್ತಿ ಹಾಗೂ ಆಕೆಯ ಗಂಡ ರಘು ಇಬ್ಬರು ಸೇರಿ ತಮ್ಮ ಹೊಸ ಬ್ಯುಸಿನೆಸ್ ಬಗ್ಗೆ ವಿಡಿಯೋ ಮಾಡಿದ್ಧಾರೆ. ಕೇವಲ ನಟನೆಗೆ ತನ್ನನ್ನು ತಾನು ಮೀಸಲಿಡದೆ ಬೇರೆ ಬ್ಯುಸಿನೆಸ್ ಮಾಡಬೇಕು ಎಂಬ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಳ್ಳುತ್ತಿರುವ ವಿಚಾರವನ್ನು ಅಮೃತಾ ಹಂಚಿಕೊಂಡಿದ್ಧಾರೆ

ಹೌದು, ಸೀರೆ ಬ್ಯುಸಿನೆಸ್‌ನ ಅಮೃತಾ ಶುರು ಮಾಡಿದ್ಧಾರೆ. ಅಮೃತಾ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸೀರೆಯನ್ನುಟ್ಟು ಫೋಟೋ ಗೆ ಪೋಸ್ ನೀಡುತ್ತಾರೆ. ಜನರಿಗೆ ಕೂಡ ಅಂತಹ ಸೀರೆಯೇ ಕೈಗೆಟುಕುವ ದರದಲ್ಲಿ ಮಾರಾಟ ಮಾಡಬೇಕು ಎನ್ನುವುದು ಅಮೃತಾ ಆಸೆ. ಆದ ಕಾರಣ ತಾನೇ ಖುದ್ದಾಗಿ ಹೋಗಿ ಯಾವ ರೀತಿ ಸೀರೆ ಡಿಸೈನ್ ಬೇಕು ಎಂಬುವುದನ್ನು ತಿಳಿದುಕೊಂಡು ರೆಡಿ ಮಾಡಿಕೊಡುತ್ತಾರೆ. ಇನ್ನೂ ಅಮೃತಾ ಅವರು ಸೀರೆ ಬ್ಯುಸಿನೆಸ್ ಗೆ ಹೊಸ ಹೆಸರನ್ನು ನೀಡಿದ್ದಾರೆ. ನೀರೆ ಸೀರೆ ಎನ್ನುವ ಟೈಟಲ್ ನ್ನು ಅವರು ನೀಡಿದ್ದಾರೆ.
ಅಮೃತಾ ಗೆ ಸಾಥ್ ನೀಡಿದ ಗಂಡ
ಅಮೃತಾಗೆ ಅವರ ಪತಿ ರಘು ಅವರು ಕೂಡ ಸಾಥ್ ನೀಡುತ್ತಿದ್ದಾರೆ. ಬಹು ದಿನದ ಕನಸೊಂದನ್ನು ಅಮೃತಾ ಅವರು ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಅಮೃತಾ ರಾಮಮೂರ್ತಿ ಕಾಲ ಕಳೆಯುತ್ತಿದ್ದಾರೆ. ರೀಲ್ಸ್ ಮೂಲಕ ಎಲ್ಲರ ಮನಸನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇನ್ನೂ ಹೆಚ್ಚಾಗಿ ಅಮೃತ ರಾಮಮೂರ್ತಿಯವರು ನೆಗೆಟಿವ್ ರೋಲ್ ಮೂಲಕ ಎಲ್ಲರ ಮನಸನ್ನು ಗೆದ್ದಿರುವುದಂತೂ ಸತ್ಯ.
ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿರುವ ನಟಿ
ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಮೊಟ್ಟ ಮೊದಲ ಬಾರಿಗೆ ಅಮೃತಾ ಮಿಸ್ಟರ್ & ಮಿಸ್‌ಸ್ ರಂಗೇಗೌಡ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಆ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ಹಾಗೆಯೇ ನಟನಾಗಿ ರಾಘವೇಂದ್ರ ಕಾಣಿಸಿಕೊಂಡಿದ್ದರು ಆ ವೇಳೆ ಅವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಅದಾದ ಬಳಿಕ ಅವರಿಬ್ಬರೂ ಮದುವೆ ಆಗಿದ್ದಾರೆ. ಇದೀಗ ಅವರಿಗೆ ಪುಟ್ಟ ಮಗಳು ಕೂಡ ಇದ್ದಾಳೆ. ಸದ್ಯ ಅಮೃತಾ ರಾಮಮೂರ್ತಿ ಅವರು ಹೊಸ ವ್ಯಾಪಾರ ಶುರು ಮಾಡಲು ಮುಂದಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಅನೇಕರು ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಸೀರೆ ವ್ಯಾಪಾರದಲ್ಲಿ ಕೂಡ ಗೆಲುವು ನಿಮಗೆ ಸಿಗಲಿ ಬ್ಯುಸಿನೆಸ್ ಯಶಸ್ವಿಯಾಗಲಿ ಎಂದು ಹರಸಿ ಹಾರೈಸುತ್ತಿದ್ಧಾರೆ.


Click it and Unblock the Notifications











