Aase Serial: ಅಜ್ಜಿ ಕೊಡುವ ಉಡುಗೊರೆ ಯಾರ ಪಾಲಾಗುತ್ತೆ? ಬಯಲಾಯ್ತಾ ಚಿನ್ನದ ಅಸಲಿಯತ್ತು?
ರಂಗನಾಥನ ಮನೆಗೆ ಲಕ್ಕಿ ಬಂದಾಯಿತು. ಲಕ್ಕಿ ಹುಟ್ಟುಹಬ್ಬದ ಪ್ರಯುಕ್ತ ಮನೆಯವರೆಲ್ಲ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡಿಕೊಂಡಿರುತ್ತಾರೆ. ರಂಗನಾಥನಿಗೆ ತನ್ನ ತಾಯಿಯೇ ಪ್ರಪಂಚ. ತಾಯಿಯನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎನ್ನುವ ಬೇಸರ ರಂಗನಾಥನಲ್ಲಿ ಯಾವತ್ತಿಂದಲೋ ಇದೆ. ಇತ್ತ ರಂಗನಾಥ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿರುವುದೇನೋ ನಿಜ. ಆದರೆ, ರಂಗನಾಥನ ಹೆಂಡತಿ ಶಾಂತಿಗೆ ಅತ್ತೆಯನ್ನು ಕಂಡರೆ ಆಗುವುದಿಲ್ಲ. ಆದಕಾರಣ ಶಾಂತಿ ತಂದೆ ಕೊಟ್ಟ ಮನೆಯಲ್ಲಿ ರಂಗನಾಥ ಉಳಿದು ಕೊಂಡಿದ್ದಾನೆ.
ಇದರಿಂದ ಲಕ್ಕಿಗೆ ಯಾವುದೇ ಬೇಸರವಾಗುವುದಿಲ್ಲ. ಮಕ್ಕಳನ್ನು ಮೊಮ್ಮಕ್ಕಳನ್ನು ದೂರದಿಂದಲೇ ನೋಡಿಕೊಂಡು ಬಹಳ ಖುಷಿ ಪಟ್ಟುಕೊಂಡಿದ್ದಾಳೆ. ಆದರೆ ಮೂವರು ಮೊಮ್ಮಕ್ಕಳಲ್ಲಿ ಲಕ್ಕಿಗೆ ಸೂರ್ಯ ಎಂದರೆ ಬಹಳ ಶ್ರೇಷ್ಠ. ಆತನ ಜೊತೆ ಬಹಳ ಕಾಲ ಕಳೆದಿದ್ದಾಳೆ ಲಕ್ಕಿ. ಹೇಳಬೇಕೆಂದರೆ ಚಿಕ್ಕ ವಯಸ್ಸಿನಿಂದಲೂ ಸೂರ್ಯನಿಗೆ ಲಕ್ಕಿ ಹೇಳಿದ ಮಾತೆ ವೇದ ವಾಕ್ಯವಾಗಿರುತ್ತದೆ. ತನ್ನ ತಾಯಿ ಹೆಚ್ಚಾಗಿ ಮನೋಜನಿಗೆ ಪ್ರಾಮುಖ್ಯತೆ ಕೊಟ್ಟಾಗ ಸೂರ್ಯನಿಗೆ ಸಿಕ್ಕಾಪಟ್ಟೆ ಬೇಸರವಾಗುತ್ತಿತ್ತು.

ತನ್ನ ಅಣ್ಣನೇ ಆಕೆಗೆ ಬಹಳಷ್ಟು ಇಷ್ಟ ಎಂದು ಮನಸ್ಸಿನಲ್ಲಿ ಸಾಕಷ್ಟು ಬಾರಿ ನೊಂದುಕೊಳ್ಳುತ್ತಾನೆ. ಇದೀಗ ಸೂರ್ಯ ಹೆಂಡತಿ ಮೇಲೆ ಶಾಂತಿ ಕಣ್ಣು ಬಿದ್ದಿದೆ. ಬಡ ಮನೆಯಿಂದ ನನ್ನ ಮನೆಗೆ ಮೀನಾ ಬಂದಿದ್ದಾಳೆ. ಆಕೆಯ ಬಳಿಗೆ ತನಗೇನು ಗಿಟ್ಟಲ್ಲ ಎಂದುಕೊಂಡು ಆಕೆಯನ್ನು ತನ್ನ ಮಾತುಗಳಿಂದ ನೋಯಿಸುತ್ತಾಳೆ. ತುಂಬಾ ಕೆಲಸ ಮಾಡಿಸುತ್ತಾ ಕಷ್ಟ ಶಾಂತಿ ಕೊಡುತ್ತಿದ್ದಾಳೆ. ಆದರೆ ಮೊದಲೆಲ್ಲ ಸೂರ್ಯ ಏನು ಮಾತನಾಡುತ್ತಿರುತ್ತಿರಲಿಲ್ಲ. ಆದರೆ ಇದೀಗ ಸೂರ್ಯಗೆ ಬಹಳಷ್ಟು ಕೋಪ ಬರುತ್ತೆ. ಲಕ್ಕಿಗೆ ಏನಾದರೂ ಗಿಫ್ಟ್ ಕೊಡಬೇಕೆಂದುಕೊಂಡ ಸೂರ್ಯಗೆ ಬಹಳಷ್ಟು ಬೇಸರವಾಗಿದೆ. ಕೈಯಲ್ಲಿರುವ ಬಂಗಾರ ಡ್ಯುಬ್ಲಿಕೆಟ್ ಆಗಿದ್ದ ಕಾರಣ ಸೂರ್ಯ ಏನು ಮಾತನಾಡದೆ ಸುಮ್ಮನೆ ಇದ್ದ. ಮನೆಯಲ್ಲಿ ಲಕ್ಕಿ ಹುಟ್ಟುಹಬ್ಬ ಆಗಿ ಹೋಗಲಿ ಅದಾದ ಬಳಿಕ ತಾನು ಈ ಬಗ್ಗೆ ಪ್ರಶ್ನೆ ಮಾಡುತ್ತೇನೆ ಎಂದು ಸೂರ್ಯ ಅಂದುಕೊಳ್ಳುತ್ತಾನೆ.
ಮನೆ ಮಂದಿಯಿಂದ ಲಕ್ಕಿಗೆ ಅದ್ದೂರಿ ಸ್ವಾಗತ
ಲಕ್ಕಿಗೆ ಮನೆ ಮಂದಿಯಿಂದ ಅದ್ದೂರಿಯಾದ ಸ್ವಾಗತ ಸಿಕ್ಕಿದೆ. ಮನೆಯವರು ಲಕ್ಕಿಯನ್ನು ಆರತಿ ಎತ್ತಿ ಮನೆಯೊಳಗೆ ಕರೆದುಕೊಂಡು ಬರುತ್ತಾರೆ. ಆದರೆ ಮನೆಯೊಳಗೆ ಮೀನ ಇಲ್ಲದ್ದನ್ನ ಕಂಡು ಲಕ್ಕಿ ಇದೇನು ಮೀನಾ ಎಲ್ಲೂ ಕಾಣುತ್ತಿಲ್ಲ ಎಂದು ಜೋರಾಗಿ ಕೇಳುತ್ತಾಳೆ. ಈ ಮಾತನ್ನು ಕೇಳಿದ ಸೂರ್ಯ, ಮೀನಾ ಮನೆಯೊಳಗೆ ಇದ್ದಾಳೆ. ಆಕೆ ನಿನಗೆ ಆರತಿ ಎತ್ತಲು ತಟ್ಟೆಯನ್ನು ಕೂಡ ಎತ್ತುಕೊಂಡು ಬರುತ್ತಿದ್ದಳು. ಆದರೆ ಮಧ್ಯದಲ್ಲಿ ಏನೋ ಆಗಿದೆ ಎಂದು ಹೇಳಿದಾಗ ಅಜ್ಜಿ ಜೋರಾಗಿಯೇ ಮೀನಾಳನ್ನು ಕರೆಯುತ್ತಾರೆ.
ಅಜ್ಜಿಯನ್ನು ನೋಡಿ ಖುಷಿಪಟ್ಟ ಮೀನಾ
ಮೀನಾಳನ್ನು ನೋಡಿದ ಅಜ್ಜಿಗೆ ಬಹಳ ಖುಷಿಯಾಗುತ್ತದೆ. ಅಜ್ಜಿಯನ್ನು ಓಡಿ ಬಂದು ಅಪ್ಪಿ ಹಿಡಿದು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಾಳೆ. ಇನ್ನು ಮನೆ ಮಂದಿ ಎಲ್ಲಾ ಅಜ್ಜಿಗೆ ವಿಶ್ ಮಾಡುತ್ತಾರೆ. ಇದೆಲ್ಲವನ್ನ ನೋಡಿದ ಲಕ್ಕಿಗೆ ಬಹಳಷ್ಟು ಖುಷಿಯಾಗುತ್ತದೆ. ಹಾಗೆ ಲಕ್ಕಿ ಎಲ್ಲರಿಗೂ ಜೋರಾಗಿ "ಈ ಬಾರಿ ನನಗೆ ಯಾರು ಇಷ್ಟವಾದ ಗಿಫ್ಟ್ ಅನ್ನು ಕೊಡುತ್ತಾರೋ ಅವರಿಗೆ ನಾನು ಒಂದು ಗಿಫ್ಟ್ ಅನ್ನು ನೀಡುತ್ತೇನೆ" ಎಂದು ಹೇಳುತ್ತಾರೆ. ಈ ಮಾತು ಕೇಳಿ ಸೂರ್ಯನಿಗೆ ಬಹಳಷ್ಟು ಬೇಸರವಾಗುತ್ತದೆ. ಲಕ್ಕಿಗೆ ತಾನೇನಾದರೂ ಗಿಫ್ಟ್ ಕೊಡಬೇಕೆಂದುಕೊಂಡಿದ್ದೆ. ಆದರೆ ಎಲ್ಲವೂ ಕೂಡ ಹಾಳಾಗಿ ಹೋಯಿತು. ಹಣ ಕೂಡ ಎಲ್ಲಿಯೂ ಸಿಗುತ್ತಿಲ್ಲ. ಹೀಗಿದ್ದಾಗ ಲಕ್ಕಿಗೆ ಹೇಗೆ ನಾನು ಗಿಫ್ಟ್ ನೀಡಲಿ" ಎಂದು ಆಲೋಚನೆ ಮಾಡುತ್ತಾನೆ.
ಗಂಡನಿಗೆ ಬುದ್ದಿ ಹೇಳಿದ ಮೀನಾ
ಈ ವಿಚಾರವನ್ನು ಮೀನಾ ಬಳಿ ಹೇಳಿದಾಗ ಅಜ್ಜಿಗೆ ಬಂಗಾರದ ಒಡವೇನೆ ಇಷ್ಟ ಆಗಬೇಕಾಗಿಲ್ಲ. ಅವರನ್ನು ಮೆಚ್ಚಿಸಲು ಬೇರೆ ರೀತಿಯಲ್ಲಿ ಪ್ರಯತ್ನ ಮಾಡುವ ಎಂದು ಗಂಡನಿಗೆ ಸಾಂತ್ವನ ಹೇಳುತ್ತಾಳೆ. ಇತ್ತ ಶ್ರುತಿ ಹಾಗೂ ರವಿ ಅಜ್ಜಿಗೆ ಏನು ಗಿಫ್ಟ್ ನೀಡುವುದು ಎಂದು ಆಲೋಚನೆ ಮಾಡುತ್ತಿರುತ್ತಾರೆ. ಆ ಬಳಿಕ ಲಕ್ಕಿ ರೆಸ್ಟ್ ತೆಗೆದುಕೊಳ್ಳಲು ಹೋಗುತ್ತಾರೆ. ಮನೋಜ ಹಾಗೂ ರೋಹಿಣಿ ಈ ಬಗ್ಗೆ ಆಲೋಚನೆ ಮಾಡುತ್ತಿರುತ್ತಾರೆ. ಆಗ ಅಲ್ಲಿಗೆ ಬಂದ ಶಾಂತಿ "ಅತ್ತೆಗೆ ಉತ್ತಮ ಉಡುಗೊರೆ ಕೊಟ್ಟರೆ ಖಂಡಿತವಾಗಿಯೂ ಉತ್ತಮವಾದ ಗಿಫ್ಟ್ ನಿಮ್ಮನ್ನು ಹುಡುಕುತ್ತಾ ಬರುತ್ತದೆ" ಎಂದಾಗ ಮನೋಜ ಮಾತ್ರ ಆದೇ ಕಣ್ಣಿನಿಂದ ಅಮ್ಮನನ್ನು ನೋಡುತ್ತಿರುತ್ತಾನೆ. ಮನೆಯಲ್ಲಿ ಮಾತುಕತೆ ಆಗುತ್ತಿರುವಾಗ ಸೂರ್ಯ ಬಹಳ ಬೇಸರದಿಂದ ಮನೆಯಿಂದ ಹೊರಗೆ ಹೋಗುತ್ತಾನೆ. ಆತನಿಗೆ ತಾನು ಕೋಪ ಮಾಡಿಕೊಂಡರೆ ಖಂಡಿತವಾಗಿಯೂ ಒಳಗೆ ಅಡಗಿದ್ದ ಕೋಪ ಹೊರಗೆ ಬಂದು ಬಿಡುತ್ತದೆ ಎನ್ನುವುದು ಗೊತ್ತಿದೆ.
ಆದ ಕಾರಣ ಮನೆಯ ಹೊರಗೆ ಹೋದರೆ ಯಾರಿಗೂ ಗೊತ್ತಾಗುವುದಿಲ್ಲ ಅಂದುಕೊಳ್ಳುತ್ತಾನೆ. ಸ್ವಲ್ಪ ಹೊತ್ತಾದ ಬಳಿಕ ರಂಗನಾಥ ಸೂರ್ಯಗೆ ಕರೆ ಮಾಡುತ್ತಾನೆ. ಆದರೆ ಸೂರ್ಯ ಯಾರ ಫೋನ್ ಎತ್ತುವ ಗೋಜಿಗೆ ಹೋಗುವುದಿಲ್ಲ. ಇದರಿಂದ ಗಾಬರಿಗೊಂಡ ರಂಗನಾಥ ಮೀನಾ ಬಳಿ ಹೇಳುತ್ತಾರೆ. ಆಗ ಮೀನಾಗೆ ಕೊಂಚ ಭಯವಾಗುತ್ತೆ. ಮೀನಾ ಕೂಡ ಸೂರ್ಯ ಫೋನ್‌ಗೆ ಕರೆ ಮಾಡುತ್ತಾಳೆ. ಆದರೆ ಸೂರ್ಯ ಯಾವುದೇ ಕರೆಗಳನ್ನು ಸ್ವೀಕರಿಸುವುದಿಲ್ಲ.
ಇಷ್ಟೆಲ್ಲ ನಡೆಯುವುದಕ್ಕೂ ಮುನ್ನ ಸೂರ್ಯನಿಗೆ ಆತನ ಅಮ್ಮನ ಮೇಲೆ ಕೋಪವಿರುತ್ತೆ. ತನ್ನ ಹೆಂಡತಿಯ ಚಿನ್ನದ ಒಡವೆಗಳನ್ನು ಕೊಡುವುದಕ್ಕಿಂತ ಡುಬ್ಲಿಕೇಟ್ ಒಡವೆಗಳನ್ನು ಕೊಟ್ಟಿದ್ದಾಳೆ. ಸಾಲು ಎಂಬಂತೆ ಮನಸ್ಸಿಗೆ ಬಂದಂತೆ ಬೈದಿದ್ದಾರೆ. ಇದು ಸೂರ್ಯನಿಗೆ ನಿದ್ದೆ ಕೆಡಿಸಿದೆ. ಹಾಗೇ ಮನೋಜ ಹಾಗೂ ಅಮ್ಮನನ್ನ ಸುಮ್ಮನಂತೂ ಬಿಡುವುದಿಲ್ಲ ಅಂತ ಸೂರ್ಯ ನಿರ್ಧಾರ ಮಾಡಿದ್ದ. ಇದೇ ವಿಷಯಕ್ಕೆ ಸೂರ್ಯ ಮೀನಾ ಎದುರು ಕೂಗಾಡುತ್ತಾನೆ. ಸೂರ್ಯನ ಕೋಪ ನೋಡಿ ಮೀನಾಗೆ ಸಿಕ್ಕಾಪಟ್ಟೆ ಭಯವಾಗುತ್ತೆ. ಆ ವೇಳೆ ದಿಕ್ಕೇ ತೋಚದ ಹಾಗೆ ನಿಂತು ಬಿಡುತ್ತಾಳೆ. ಮನೋಜ್ ಹಾಗೂ ಅಮ್ಮನ ವಿರುದ್ಧ ಕೆಂಡ ಕಾರುತ್ತಿದ್ದ ಗಂಡನ ಬಳಿಕ ಬಂದು ಮೀನಾ ಸಮಾಧಾನ ಮಾಡುತ್ತಾಳೆ. "ಇವತ್ತು ನೀವು ಚಿನ್ನದ ಒಡವೆಗಾಗಿ ಕೂಗಾಡಿದರೆ, ಮಾವನವರಿಗೆ ಖಂಡಿತವಾಗಿಯೂ ಬೇಸರ ಆಗುತ್ತೆ. ಈಗ ಮನೆಯಲ್ಲಿ ಲಕ್ಕಿಯ ಹುಟ್ಟು ಹಬ್ಬದ ಸಂಭ್ರಮವಿದೆ. ಆ ಸಂಭ್ರಮವನ್ನ ನಾವೇ ಹಾಳು ಮಾಡಿದಂತೆ ಅಗುತ್ತೆ. ಲಕ್ಕಿಯ ಹುಟ್ಟುಹಬ್ಬ ಮುಗಿದ ಬಳಿಕ ನಾವು ಈ ಚಿನ್ನದ ಬಗ್ಗೆ ಅತ್ತೆಯ ಬಳಿ ಕೇಳಿದರೆ ಆಯ್ತು ಎಂದು ಹೇಳಿರುತ್ತಾಳೆ.
ಆದರೆ, ಮೀನಾ ಹೇಳೀದ ಮಾತನ್ನು ಸೂರ್ಯ ಈ ಮೊದಲಿಗೆ ಅರ್ಥ ಮಾಡಿಕೊಳ್ಳುವುದಿಲ್ಲ. ಆ ನಂತರ ಮೀನಾ ಹೇಳಿದ ಮಾತನ್ನು ಅರ್ಥ ಮಾಡಿಕೊಂಡು ಸುಮ್ಮನಾಗುತ್ತಾನೆ. ಇದೇ ಸಂದರ್ಭದಲ್ಲಿ ಮನೆಯಲ್ಲಿ ರಂಗನಾಥ ಬಹಳ ಖುಷಿಯಲ್ಲಿ ಇರುತ್ತಾರೆ. ಆದರೆ ಶಾಂತಿಗೆ ಕೊಂಚ ಭಯ ಕಾಡುತ್ತಿದೆ. ಮೀನಾ ಹಾಗೂ ಸೂರ್ಯ ಚಿನ್ನವನ್ನು ತೆಗೆದುಕೊಂಡು ಎಲ್ಲಿಗೆ ಹೋಗಿದ್ದಾರೆ ಎಂದು ಯೋಚನೆ ಮಾಡುತ್ತಾ ಅವರಿಬ್ಬರ ದಾರಿಯನ್ನು ಕಾದಿದ್ದಳು. ಇತ್ತ ರಂಗನಾಥನಿಗೆ ಇದೆಲ್ಲ ಅರಿವಿರಲಿಲ್ಲ. ಮನೆಯಲ್ಲಿ ತಾಯಿಯ ಹುಟ್ಟು ಹಬ್ಬದ ಆಚರಿಸುವ ಸಂಭ್ರಮದಲ್ಲಿ ಇದ್ದರು.
'ಆಸೆ' ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಿತ್ತಿರುವ ಜನಪ್ರಿಯರ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿ ತನ್ನದೇ ಆದ ವೀಕ್ಷಕರ ಬಳಗವನ್ನು ಹೊಂದಿದೆ. ಮಂಡ್ಯ ರಮೇಶ್ ಸೇರಿದಂತೆ ಹಿರಿಯ ಕಲಾವಿದರು ಕಿರಿತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ವೀಕ್ಷಕರನ್ನು ಭಾವನಾತ್ಮಕವಾಗಿ, ತಮಾಷೆಯಾಗಿ ಹಲವು ಆಯಾಮಗಳಲ್ಲಿ ರಂಜಿಸುತ್ತಿದೆ. ಇಂದಿನ ಎಫಿಸೋಡ್ ಕೂಡ ಅಷ್ಟೇ ವೀಕ್ಷಕರಿಗೆ ಕಿಕ್ ಕೊಟ್ಟಿದೆ.


Click it and Unblock the Notifications











