Aase Serial: ರೋಹಿಣಿ ನಿಜ ರೂಪ ಮನೆಯವರಿಗೆ ತಿಳಿದರೆ.. ಮುಂದೇನು ರೋಹಿಣಿ ಗತಿ?
ಮನೋಜ ಹಾಗೂ ರೋಹಿಣಿ ಸೇರಿಕೊಂಡು ಇದೀಗ ಹೊಸ ಬ್ಯುಸಿನೆಸ್ ಮಾಡುತ್ತಿದ್ದಾರೆ. ಮನೋಜ್ ಸಿಕ್ಕಾಪಟ್ಟೆ ಸೋಮಾರಿ ಈ ಕೆಲಸವನ್ನಾದರೂ ನೆಟ್ಟಗೆ ಮಾಡಲಿ ಎಂದು ಆತನ ತಂದೆ ರಂಗನಾಥ ಅಂದುಕೊಂಡಿರುತ್ತಾರೆ. ರೋಹಿಣಿಯನ್ನು ಕಂಡರೆ ಶಾಂತಿಗೆ ಬಹಳ ಪ್ರೀತಿ, ಯಾಕೆಂದರೆ ರೋಹಿಣಿ ಬಹಳ ಶ್ರೀಮಂತ ಮನೆತನದಿಂದ ಬಂದವಳು ಅಂದುಕೊಂಡಿದ್ದಾಳೆ. ಆದರೆ, ರೋಹಿಣಿಗೆ ಈ ಮೊದಲೇ ಮದುವೆಯಾಗಿರುವುದು ಯಾರಿಗೂ ಕೂಡ ತಿಳಿದಿರುವುದಿಲ್ಲ. ಇದೀಗ ಅದೆಲ್ಲವೂ ತಿಳಿದುಕೊಳ್ಳುವ ಸಮಯ ಎದುರಾಗಿದೆ.
ಹುಷಾರು ಇಲ್ಲದೆ ಇದ್ದರೂ ಕೂಡ ಅಡಿಗೆಯನ್ನು ಮಾಡಬೇಕು ಎಂದು ಶಾಂತಿ ಪದೇ ಪದೇ ಮೀನಾಳನ್ನ ಪೀಡಿಸುತ್ತಾಳೆ. ಆದರೆ ಇದೆಲ್ಲವನ್ನು ನೋಡಿ ಮೀನಾಳ ಗಂಡ ಸೂರ್ಯ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಶಾಂತಿಗೆ ಮೂವರು ಸೊಸೆಯಂದಿರು. ಮನೆಯಲ್ಲಿ ಅಡುಗೆ ಮಾಡಿ ಎಲ್ಲರಿಗೂ ಊಟ ಬಡಿಸುವ ಅವಳು ಮೀನಾ ಮಾತ್ರ. ರೋಹಿಣಿ ಶ್ರೀಮಂತ ಕುಟುಂಬದಿಂದ ಬಂದವರು ಎಂದು ಶಾಂತಿ ಅಂದುಕೊಂಡಿರುತ್ತಾಳೆ. ಹಾಗೆಯೇ ರವಿಯ ಹೆಂಡತಿ ಕೂಡ ಶ್ರೀಮಂತ ಕುಟುಂಬದಿಂದ ಬಂದವಳು.

ಇದರಿಂದಾಗಿ ಅವರಿಬ್ಬರಿಗೆ ಅಷ್ಟಾಗಿ ಶಾಂತಿ ಕೆಲಸ ಹೇಳುವುದಿಲ್ಲ. ಸೂರ್ಯ ಹಾಗೂ ಮೀನಾ ಆಸ್ಪತ್ರೆಗೆ ಹೋಗಿರುವಾಗ ರೋಹಿಣಿಯ ಮಗ ಹಾಗೂ ತಾಯಿ ಕಾಣಸಿಗುತ್ತಾರೆ. ರೋಹಿಣಿಯ ಮಗನಿಗೆ ಆಕ್ಸಿಡೆಂಟ್ ಆಗಿರುತ್ತದೆ. ಇದರಿಂದಾಗಿ ಆತನಿಗೆ ಆಪರೇಷನ್ ಮಾಡುವ ಅಗತ್ಯ ಇರುತ್ತದೆ. ಹಣೆಯ ಮೇಲೆ ಗಂಭೀರವಾಗಿ ಗಾಯವಾಗಿದ್ದ ರೋಹಿಣಿಯ ಮಗನನ್ನು ನೋಡಿ ತಾಯಿಗೆ ಬಹಳ ನೋವಾಗುತ್ತದೆ. ಹಾಗೆಯೇ ಸಹಾಯ ಮಾಡಿದ ಮೀನಾ ಹಾಗೂ ಸೂರ್ಯಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾಳೆ. ರೋಹಿಣಿ ವಿಚಾರ ತಿಳಿದು ಬೇಗ ಬೇಗ ಆಸ್ಪತ್ರೆಗೆ ಬರುತ್ತಾಳೆ. ಮಗನನ್ನು ನೋಡಿ ಬಹಳ ಬೇಸರಗೊಳ್ಳುತ್ತಾಳೆ. ಅಯ್ಯೋ ನನ್ನ ಮಗನಿಗೆ ಎಂತಹ ಸ್ಥಿತಿ ಬಂತು ಎನ್ನುವ ನೋವಿನಲ್ಲಿರುತ್ತಾಳೆ.
ಮಗಳ ಬಳಿ ಅಳಲು ತೋಡಿಕೊಂಡ ತಾಯಿ
ರೋಹಿಣಿಗೆ ಆಕೆಯ ತಾಯಿ "ನನ್ನಿಂದ ನಿನ್ನ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನೀನು ಈ ವಿಚಾರವನ್ನು ಆದಷ್ಟು ಬೇಗ ನಿನ್ನ ಗಂಡನ ಮನೆಯಲ್ಲಿ ತಿಳಿಸಬೇಕು" ಎಂದು ಹೇಳುತ್ತಾರೆ. ಆಗ ಆಯಿತು ಎಂದು ಒಪ್ಪಿಕೊಳ್ಳುತ್ತಾಳೆ. ಹಾಗೆಯೇ ನಾನು ನಾಳೆ ಬರುತ್ತೇನೆ. ಡಿಸ್ಚಾರ್ಜ್ ಆಗೋ ತನಕ ನಾನು ಇಲ್ಲಿಯೇ ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇತ್ತ ಸೂರ್ಯ ಹಾಗೂ ಮೀನಾ ರೋಹಿಣಿ ಮಗನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಅವರಿಬ್ಬರನ್ನು ಕೂಡ ಮನೆಗೆ ಕರೆದುಕೊಂಡು ಬರುತ್ತಾನೆ.

ಅಮ್ಮ ಮಗನನ್ನು ನೋಡಿ ರೋಹಿಣಿ ಶಾಕ್
ರೋಹಿಣಿ ಅಮ್ಮ ಹಾಗೂ ಮಗನನ್ನು ಸೂರ್ಯ ಹಾಗೂ ಮೀನಾ ಕರೆದುಕೊಂಡು ಬಂದಿದ್ದಕ್ಕೆ ಸಖತ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅದೇ ರೋಹಿಣಿ ಮಾತ್ರ ಇವರಿಬ್ಬರೂ ಇಲ್ಲಿ ಇರಲಿ ಅತ್ತೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಶಾಂತಿಗೆ ಶಾಕ್ ಆಗುತ್ತದೆ. ಬಳಿಕ ಇವರಿಬ್ಬರು ಇಲ್ಲಿರುವುದಾದರೂ ಎಲ್ಲಿ ಎಂದಾಗ ರೋಹಿಣಿ "ಎರಡು ದಿನದ ಮಟ್ಟಿಗೆ ನಮ್ಮ ರೂಮಿನಲ್ಲಿ ಇರಬಹುದಲ್ವಾ" ಎಂದು ಹೇಳುತ್ತಾಳೆ. ಈ ಮಾತು ಶಾಂತಿಗೆ ಹಾಗೂ ಮನೋಜ್‌ಗೆ ಇನ್ನೂ ಶಾಕ್ ಆಗುತ್ತೆ.
ಮನೋಜನಿಗೆ ಸಂಕಟ
ಮನೋಜ್ ಇದೇನಪ್ಪಾ ರೋಹಿಣಿ ಯಾರಿಗೂ ರೂಮ್ ಕೊಡದವಳು ಇವರಿಗೆ ಬಿಟ್ಟು ಕೊಡುತ್ತಿದ್ದಾಳೆ ಎಂದುಕೊಳ್ಳುತ್ತಾನೆ. ಇತ್ತ ಮನೆಗೆ ಬಂದ ರೋಹಿಣಿ ತಾಯಿ ಹಾಗೂ ಮಗನನ್ನು ಮನೆಗೆ ಸೇರಿಸಿಕೊಳ್ಳುತ್ತಾರೆ ರಂಗನಾಥ. ಶಾಂತಿ ಮಾತ್ರ ರೋಹಿಣಿಯನ್ನು ಕರೆದು "ಇವರು ನಾಳೆಯೇ ಈ ಮನೆಯಿಂದ ಹೊರಗೆ ಹೋಗಬೇಕು. ಇಲ್ಲವಾದರೆ ನಾನು ಸುಮ್ಮನೆ ಇರುವುದಿಲ್ಲ" ಎಂದು ಹೇಳುತ್ತಾಳೆ. ರೋಹಿಣಿ ಮಾತ್ರ ರೂಮ್‌ಗೆ ಹೋಗಿ ಜೋರಾಗಿ ಮಗನನ್ನು ಹಿಡಿದು ಅಳುತ್ತಾಳೆ. ತನ್ನ ಮಗನಿಗೆ ಎಂತಹ ಅವಸ್ಥೆ ಬಂತು ಎಂದು ಗೋಳಾಡುತ್ತಾಳೆ.


Click it and Unblock the Notifications











