Aase Serial:₹4 ಲಕ್ಷ ಕಳ್ಕೊಂಡ ಮನೋಜ್; ಒಡವೆ ಕೊಡೋ ಆಟದಲ್ಲಿ ಟ್ವಿಸ್ಟ್
ಮನೋಜನಿಗೆ ಮೋಸದ ಮೇಲೆ ಮೋಸ ಆಗುತ್ತಲೇ ಇದೆ. ಅಷ್ಟೇ ಸುಲಭವಾಗಿ ಮೋಸ ಹೋಗುತ್ತಿದ್ದಾನೆ. ಸುಮಾರು ನಾಲ್ಕು ಲಕ್ಷ ಹಣವನ್ನು ಖದೀಮರು ಪಂಗನಾಮ ಹಾಕಿದ್ದಾರೆ. ಈ ವಿಷಯಕ್ಕೆ ಮನೋಜ್ ಸಿಕ್ಕಾಪಟ್ಟೆ ಭಯಗೊಂಡಿದ್ದಾನೆ. ಇದೇನಾದರೂ ಮನೆಯವರಿಗೆ ತಿಳಿದರೆ ಖಂಡಿತವಾಗಿಯೂ ನನ್ನನ್ನು ಯಾರೂ ಸುಮ್ಮನೆ ಬಿಡುವುದಿಲ್ಲ ಅನ್ನೋದು ಅರಿವಿಗೆ ಬಂದಿದೆ.
ಈಗೇನು ಮಾಡುವುದು ಎಂದು ಯೋಚನೆ ಮಾಡುತ್ತಲೇ ಪೊಲೀಸ್ ಠಾಣೆ ಮೆಟ್ಟಿಲು ಇರಿದ್ದಾನೆ. ಮನೋಜ್ ಹೋಗಿ ಕಂಪ್ಲೇಂಟ್ ಕೊಟ್ಟ ವೇಳೆ ಪೊಲೀಸರು ಇದೆ ರೀತಿ ಹಲವು ಕಡೆಗಳಲ್ಲಿ ಹಣ ಕಳ್ಳತನ ಮಾಡಲಾಗಿದೆ. ಈ ವಿಚಾರ ಎಲ್ಲರಿಗೂ ತಿಳಿದಿದೆ. ಅವರಂತೆ ನೀವೂ ಮೋಸ ಹೋಗಿದ್ದೀರ. ಇನ್ಮೇಲೆ ಒಂದು ಪಕ್ಷ ಈ ರೀತಿ ನಡೆದರೆ ಖಂಡಿತವಾಗಿಯೂ ಅವರನ್ನು ಸುಮ್ಮನೆ ಬಿಡುವ ಮಾತೆ ಇಲ್ಲ. ಹಾಗೆಯೇ ಖದೀಮರನ್ನು ಹುಡುಕುವ ಪ್ರಯತ್ನವನ್ನು ನಾವು ಮಾಡಿಯೇ ಮಾಡುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಇತ್ತೆ ತನ್ನ ತಾಯಿಗೆ ಹಾಗೂ ರೋಹಿಣಿಗೆ ಈ ವಿಷಯ ಏನಾದರೂ ತಿಳಿದರೆ ಖಂಡಿತವಾಗಿಯೂ ಬಹಳ ದೊಡ್ಡ ತೊಂದರೆಗೆ ಸಿಕ್ಕಿಕೊಳ್ಳುತ್ತೇನೆ ಅನ್ನೋದು ಮನೋಜ್‌ಗೆ ಗೊತ್ತಾಗಿದೆ. ಅದನ್ನು ನೆನಪಿಸಿಕೊಂಡು ಭಯಬಿದ್ದಾನೆ. ಮುಂದೇನು ಎನ್ನುವ ಯೋಚನೆ ಬಂದ ಕೂಡಲೇ ಆತ ನೇರವಾಗಿ ತನ್ನ ಅಮ್ಮನ ಬಳಿ ಬಂದು ಎಲ್ಲಾ ವಿಚಾರವನ್ನು ಹೇಳಿಕೊಂಡು ಅಳಬೇಕು ಅಂದುಕೊಳ್ಳುತ್ತಾನೆ.
ಅಂದುಕೊಂಡಂತೆ ಶಾಂತಿ ಬಳಿಗೆ ಮನೋಜ್ ಓಡಿ ಬಂದು ಕಾಲು ಹಿಡಿದುಕೊಳ್ಳುತ್ತಾನೆ. ಮನೋಜ್ ಕಾಲು ಹಿಡಿದಿರುವುದನ್ನು ನೋಡಿದ ಶಾಂತಿಗೆ ಸಿಕ್ಕಾಪಟ್ಟೆ ಭಯವಾಗುತ್ತೆ. ಕೂಡಲೇ ಆತನನ್ನು ಎಬ್ಬಿಸಿ ಸಮಾಧಾನ ಮಾಡಿ ಏನು ಪ್ರಾಬ್ಲಂ ಆಗಿದೆ ಎಂಬುವುದನ್ನು ಹೇಳು ಎಂದು ಹೇಳುತ್ತಾರೆ. ಆಗ ಮನೋಜ್ ಅಮ್ಮನ ಬಳಿ ನಡೆದ ವಿಚಾರವನ್ನು ವಿಸ್ತಾರವಾಗಿ ಹೇಳುತ್ತಾನೆ.

ಮಗನ ಮೇಲೆ ಶಾಂತಿಗೆ ಕೋಪ
ಮನೋಜ್‌ಗೆ ಹಣ ಕಳೆದುಕೊಂಡ ವಿಷಯ ಹೇಳುತ್ತಿದ್ದಂತೆ ಶಾಂತಿಗೆ ಕೋಪ ಉಕ್ಕಿ ಬರುತ್ತೆ. ಮಗನಿಗೆ ಹೊಡೆಯುವುದಕ್ಕೆ ಆರಂಭಿಸುತ್ತಾಳೆ. "ಮನೋಜ್ ನೀನು ಏನು ಮಾಡಿಕೊಂಡು ಬಿಟ್ಟೆ? ಯಾಕಾದರೂ ತನ್ನ ಹೊಟ್ಟೆಯಲ್ಲಿ ಹುಟ್ಟಿದೆ. ಅಷ್ಟು ಹಣವನ್ನು ನಾನು ಹೇಗೆ ಕೊಡಲಿ?" ಎಂದು ಬಹಳ ಕೋಪದಿಂದ ಮನೋಜ್‌ಗೆ ಹೊಡೆಯುತ್ತಾಳೆ. ಮನೋಜ್ ಬಹಳ ಬೇಸರದಿಂದ ಅಮ್ಮ "ನಾನು ಏನು ಮಾಡಲಿ?" ಎಂದು ಜೋರಾಗಿ ಅಳುವುದಕ್ಕೆ ಶುರು ಮಾಡುತ್ತಾನೆ. ಮಗನ ಅಳು ನೋಡಲಾಗದೆ ಶಾಂತಿ ಬೀರುವಲ್ಲಿದ್ದ ಮೀನಾ ತಾಳಿ ಚೈನ್ ಅನ್ನು ಮನೋಜ್‌ಗೆ ಕೊಡುಲು ಮುಂದಾಗುತ್ತಾರೆ.
ಶಾಂತಿ ಕಳ್ಳಾಟ ಸೂರ್ಯ ಮುಂದೆ ಬಯಲಾಯಿತೇ?
ಶಾಂತಿ ತರಾತುರಿಯಲ್ಲಿ ಚಿನ್ನದ ಸರವನ್ನು ಚೀಲದಲ್ಲಿ ಹಾಕಿಕೊಂಡು ಮನೋಜನ ಬಳಿಗೆ ಬರುವಾಗ ಮೀನಾ ಶಾಂತಿಗೆ ಡಿಕ್ಕಿ ಹೊಡೆಯುತ್ತಾಳೆ. ಮೊದಲೇ ಟೆನ್ಷನ್‌ನಲ್ಲಿ ಇದ್ದ ಶಾಂತಿ ಮೀನಾಗೆ ಸಿಕ್ಕಾಪಟ್ಟೆ ಬೈಯುತ್ತಾಳೆ. ಆಗ ಮೀನಾ ಕೈಯಲ್ಲಿದ್ದ ತರಕಾರಿ ಚೀಲ ಹಾಗೂ ಶಾಂತಿ ಕೈಯಲ್ಲಿ ಇದ್ದ ಚಿನ್ನದ ಚೀಲ ಅದಲು ಬದಲು ಆಗುತ್ತೆ. ಶಾಂತಿ ತರಕಾರಿ ಚೀಲವನ್ನು ತೆಗೆದುಕೊಂಡು ಹೋಗಿ ಮನೋಜ್‌ಗೆ ಕೊಡುತ್ತಾಳೆ. ಮನೋಜ್ ಅದರಲ್ಲಿ ಚಿನ್ನ ಇದೆ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಇತ್ತ ಅಡುಗೆ ರೂಮ್‌ಗೆ ಬಂದ ಶಾಂತಿ ಮೀನಾ ತಂದಿರುವ ತರಕಾರಿ ಏನಿದೆ ಎಂದು ನೋಡಿದಾಗ ಅದರಲ್ಲಿ ಚಿನ್ನ ಇರುತ್ತೆ. ಅಯ್ಯೋ ಮನೋಜ್ ತೆಗೆದುಕೊಂಡು ಹೋಗಿದ್ದು ತರಕಾರಿ ಚೀಲ ಎಂದುಕೊಂಡು ಶಾಂತಿ ಚಿನ್ನ ಚೀಲವನ್ನು ತೆಗೆದುಕೊಂಡು ಮನೆಯ ಹೊರಗೆ ಬರುತ್ತಾಳೆ. ಅಡುಗೆ ಮನೆಯಲ್ಲಿ ತರಕಾರಿ ಚೀಲ ಕಾಣಿಸದೆ ಇರುವುದನ್ನು ಕಂಡು ಮೀನಾ ಶಾಂತಿ ಬಳಿಗೆ ಬಂದು ಅತ್ತೆ ತರಕಾರಿ ಚೀಲ ನೀವೇನು ನೋಡಿದ್ರಾ ಎಂದು ಪ್ರಶ್ನೆ ಮಾಡುತ್ತಾಳೆ. ನೀನು ನಾನು ಡಿಕ್ಕಿ ಹೊಡೆದ ವೇಳೆ ಅದಲು ಬದಲಾಗಿದೆ ತರಕಾರಿ ಚೀಲವನ್ನು ಮನೋಜ್ ತೆಗೆದುಕೊಂಡು ಹೋಗಿದ್ದಾನೆ. ಇದು ನನ್ನ ಬ್ಲೌಸ್ ಪೀಸ್. ಅದನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾನೆ ಎಂದು ಮೀನಾಗೆ ಶಾಂತಿ ಹೇಳುತ್ತಾಳೆ.
ತಾಯಿ ಬಗ್ಗೆ ಸೂರ್ಯನಿಗೆ ಅನುಮಾನ
ಸೂರ್ಯಗೆ ತಾಯಿ ಮೇಲೆ ಕೊಂಚ ಮಟ್ಟಿಗೆ ಅನುಮಾನ. ನಾನೇ ಆ ಬ್ಲಾಸ್ ಪೀಸ್ ಕೊಟ್ಟು ಬರುತ್ತೇನೆ ಎಂದು ಹೇಳಿದರು ಅಮ್ಮ ಕೊಡುತ್ತಿಲ್ಲ. ಯಾಕೆ ಈ ಅಮ್ಮ ಹೀಗೆ ಆಡುತ್ತಿದ್ದಾರೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ. ಆ ಕೂಡಲೇ ಮನೋಜ್ ಓಡಿ ಅಮ್ಮನ ಬಳಿಗೆ ಬರುತ್ತಾನೆ. ಶಾಂತಿ ಮನೋಜ್ ಅನ್ನು ನೋಡಿ ತನ್ನ ಕೈಯಲ್ಲಿದ್ದ ಚಿನ್ನದ ಬ್ಯಾಗ್ ಅನ್ನು ಕೊಡುತ್ತಾಳೆ. ತರಕಾರಿ ಬ್ಯಾಗ್ ಅನ್ನು ಮೀನಾಗೆ ಕೊಡುತ್ತಾಳೆ. ಇನ್ನು ಮನೋಜ್ ಚಿನ್ನದ ಹಣ ಸಿಕ್ಕಿತು ಎಂದುಕೊಂಡು ಅಲ್ಲಿಂದ ಒಂದೇ ಸಮನೆ ಓಡಿ ಹೋಗುತ್ತಾನೆ.


Click it and Unblock the Notifications











