Aase Serial: ಲಕ್ಕಿ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ; ಲಕ್ಕಿ ಗಿಫ್ಟ್ ಮೇಲೆಯೇ ಶಾಂತಿಯ ಕಣ್ಣು !

By Poorva

ಲಕ್ಕಿ 80ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ರಂಗನಾಥ ಆಚರಿಸಲು ಸಿದ್ಧನಾಗಿದ್ದಾನೆ. ಆತನಿಗೆ ಲಕ್ಕಿ ಎಂದರೆ ಬಹಳ ಇಷ್ಟ ತನ್ನ ತಾಯಿಯ ಜೊತೆಗೆ ಪ್ರೀತಿಯಿಂದ ದಿನ ಕಳೆಯಬೇಕು ಎಂದುಕೊಂಡರೂ ರಂಗನಾಥನಿಗೆ ಅದೃಷ್ಟವಿಲ್ಲ. ತಾಯಿ ಹಳ್ಳಿಯಲ್ಲಿ. ಇವನು ಸಿಟಿಯಲ್ಲಿ ಎನ್ನುವ ಹಾಗೆ ಜೀವನವನ್ನು ಸಾಗಿಸುತ್ತಾನೆ. ಆದರೆ, ಇದೀಗ ರಂಗನಾಥನಿಗೆ ತನ್ನ ತಾಯಿಯ 80ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸುವ ಸಕಾಲ ಒದಗಿ ಬಂದಿದೆ.

ರಂಗನಾಥನ ತಾಯಿಯ ಹುಟ್ಟುಹಬ್ಬಕ್ಕೆ ಮನೆಯಲ್ಲೆಲ್ಲಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಸೂರ್ಯ ಮಾತ್ರ ಮನೆಯಲ್ಲಿ ಕಾಣಿಸದೇ ಇರುವುದನ್ನು ಕಂಡು ಲಕ್ಕಿಗೆ ಬಹಳ ಬೇಸರವಾಗುತ್ತೆ. ಸೂರ್ಯ ಎಲ್ಲಿದ್ದಾನೆ? ಎಂದು ಪದೇ ಪದೇ ಲಕ್ಕಿ ರಂಗನಾಥನನ್ನು ಪ್ರಶ್ನೆ ಮಾಡಿದಾಗ ರಂಗನಾಥ ಮೀನಾ ಬಳಿ ಸೂರ್ಯನಿಗೆ ಫೋನ್ ಮಾಡಲು ಹೇಳುತ್ತಾರೆ. ಮೀನಾ ಅದೆಷ್ಟು ಬಾರಿ ಸೂರ್ಯನಿಗೂ ಕರೆ ಮಾಡಿದರೂ ಆತ ಮೀನಾ ಫೋನನ್ನು ಪಿಕ್ ಮಾಡದಷ್ಟು ಬ್ಯುಸಿಯಾಗಿರುತ್ತಾನೆ. ಆತನಿಗೆ ತನ್ನ ಅಜ್ಜಿ ಲಕ್ಕಿಗೆ ಏನಾದರೂ ಒಂದು ಸ್ಪೆಷಲ್ ಗಿಫ್ಟ್ ನೀಡಬೇಕು ಎಂದುಕೊಂಡು ಗೆಳೆಯರ ಜೊತೆ ಸಾಲ ಕೇಳಲು ಯಾರ ಬಳಿಯು ಹೇಳದೆ ಹೋಗಿರುತ್ತಾನೆ.

Aase Kannada serial March 20th 2025 episode highlights

ಯಾವ ಕಾರಣಕ್ಕೆ ಸೂರ್ಯ ಮನೆಯಿಂದ ಹೊರಗೆ ಹೋಗಿದ್ದಾನೆ ಅನ್ನೋದು ತಿಳಿಯುವುದಿಲ್ಲ. ರಂಗನಾಥ ಕೂಡ ಸೂರ್ಯ ಎಲ್ಲಿಗೆ ಹೋಗಿದ್ದಾನೆ ಎಂದು ಆಲೋಚನೆ ಮಾಡುತ್ತಿರುತ್ತಾರೆ. ಇತ ಮೀನಾ ಹೊರಗಡೆ ಬಂದು ತನ್ನ ಗಂಡ ಎಲ್ಲಿಗೆ ಹೋಗಿದ್ದಾರೆ ಎನ್ನುವ ಆಲೋಚನೆಯಲ್ಲಿ ಮುಳುಗಿರುತ್ತಾಳೆ. ಮೀನಾಳನ್ನು ಅಜ್ಜಿ ಹುಡುಕಿಕೊಂಡು ಬರುತ್ತಾರೆ. "ಸೂರ್ಯ ಮತ್ತು ನಿನ್ನ ನಡುವೆ ಏನಾದರೂ ಜಗಳವಾಯಿತೇ?" ಎಂದು ಅಜ್ಜಿ ಮೀನಾ ಬಳಿ ಕೇಳಿದಾಗ "ಆ ತರಹದ ಜಗಳಗಳು ನಮ್ಮ ನಡುವೆ ಈಗ ಆಗುತ್ತಿಲ್ಲ. ಅವರು ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ" ಎಂದು ಮೀನಾ ಅಜ್ಜಿಯ ಬಳಿ ಹೇಳುತ್ತಾಳೆ. ಈ ಮಾತಿನಿಂದ ಅಜ್ಜಿಗೆ ಸಿಕ್ಕಾಪಟ್ಟೆ ಖುಷಿಯಾಗುತ್ತೆ.

ಅತ್ತೆಯ ಧ್ವನಿಗೆ ಬೆಚ್ಚಿ ಬಿದ್ದ ಶಾಂತಿ

ಸೂರ್ಯ ಎಲ್ಲಿಗೆ ಹೋಗಿದ್ದಾನೆ ಎನ್ನುವುದು ಮೀನಾಗೂ ಅಜ್ಜಿಗೂ ಇಬ್ಬರಿಗೂ ಗೊತ್ತಾಗುತ್ತಿಲ್ಲ. ಅಷ್ಟರಲ್ಲಿ ಅಜ್ಜಿಗೆ ತನ್ನ ಸೊಸೆಯ ಮೇಲೆ ಬಹಳಷ್ಟು ಸಿಟ್ಟು ಬರುತ್ತೆ. ಶಾಂತಿಯನ್ನು ಬಹಳ ಜೋರಾಗಿ ಕರೆಯುತ್ತಾರೆ. ಅತ್ತೆಯ ಧ್ವನಿ ಕೇಳಿದ ಕೂಡಲೇ ಶಾಂತಿ ಓಡೋಡಿ ಬರುತ್ತಾಳೆ. ಶಾಂತಿಯ ಬಳಿ ಸೂರ್ಯ ಎಲ್ಲಿಗೆ ಹೋಗಿದ್ದಾನೆ ಎಂದು ಅಜ್ಜಿ ಕೇಳಿದಾಗ ಶಾಂತಿ ತನಗೆ ಆತ ಎಲ್ಲಿಗೆ ಹೋಗಿದ್ದಾನೆ ಎನ್ನುವುದು ಗೊತ್ತಿಲ್ಲ ಎಂದು ಹೇಳುತ್ತಾಳೆ.

ಮೀನಾ ಮುಖ ನೋಡಿ ಮುಖ ಸಿಂಡರಿಸಿದ ಶಾಂತಿ

ಶಾಂತಿಯ ಮಾತು ಕೇಳಿ ಲಕ್ಕಿಯ ಕೋಪ ನೆತ್ತಿಗೇರುತ್ತೆ. ಅದನ್ನು ಗಮನಿಸಿ ಶಾಂತಿ ಲಕ್ಕಿಯ ಬಳಿ "ಆತ ಚಿಕ್ಕ ಮಗುವೇನಲ್ಲ. ಖಂಡಿತವಾಗಿಯೂ ಮನೆಗೆ ಬಂದೇ ಬರುತ್ತಾನೆ. ಆದರೆ ಆತ ಕುಡಿತದ ಚಟಕ್ಕೆ ಏನಾದರೂ ಬಿದ್ದಿದ್ದರೆ ಖಂಡಿತವಾಗಿಯೂ ಇವತ್ತು ಮನೆಗೆ ಬರುವುದು ಗ್ಯಾರಂಟಿ ಇಲ್ಲ" ಎನ್ನುವ ಹಾಗೆ ಮಾತನಾಡುತ್ತಾಳೆ. ಈ ಮಾತು ಕೇಳಿ ಲಕ್ಕಿಗೆ ಬಹಳ ಸಿಟ್ಟು ಬರುತ್ತೆ. ಶಾಂತಿಯ ಕಡೆಗೆ ಬೊಟ್ಟು ಮಾಡಿ ತೋರಿಸಿ "ನಿನ್ನಿಂದಾಗಿ, ನಿನ್ನ ಮಾತಿನ ವರಸೆಯಿಂದಾಗಿ ನಿನ್ನ ಮಗ ಇವತ್ತು ಕುಡಿತದ ಚಟಕ್ಕೆ ಬಿದ್ದಿದ್ದಾನೆ. ನನ್ನ ಜೊತೆ ಇರಬೇಕಾದರೆ ಸೂರ್ಯ ಎಷ್ಟು ಚೆನ್ನಾಗಿದ್ದ. ಆತನದ್ದು ಮಗುವಿನ ಮನಸ್ಸು. ಆ ಮನಸನ್ನೇ ಒಡೆದು ಚೂರು ಚೂರು ಮಾಡುತ್ತಿದ್ದೀಯಲ್ಲ. ಇದು ನಿನಗೆ ಸರಿ ಎಂದು ಅನಿಸುತ್ತಿದೆಯಾ ಎಂದು ಅಜ್ಜಿ ಶಾಂತಿ ಬಳಿ ಕೇಳಿದಾಗ? ಶಾಂತಿ ಬಾಯಿಯಿಂದ ಉತ್ತರವೇ ಬರುವುದಿಲ್ಲ.

ಅಜ್ಜಿಯ ಮುಖದಲ್ಲಿ ಸಂತಸ

ಹುಟ್ಟುಹಬ್ಬದ ದಿನ ಬಂದೇ ಬಿಟ್ಟಿದೆ. ಮನೆಯಲ್ಲ ಸಿಂಗಾರಗೊಂಡಿದೆ. ಹಾಗೆ ರವಿ ಹಾಗೂ ಶೃತಿ ಕೇಕ್‌ಗಳನ್ನು ತಂದು ಇಟ್ಟಿರುತ್ತಾರೆ. ರೋಹಿಣಿ ಅಜ್ಜಿಗೆ ಮೇಕಪ್ ಮಾಡಲು ರೆಡಿ ಆಗುತ್ತಾಳೆ. ಒಟ್ಟಾರೆಯಾಗಿ ಅಜ್ಜಿ ತುಂಬಾ ಚೆನ್ನಾಗಿ ಕಾಣಬೇಕು. ಹಾಗೆಯೇ ಅಜ್ಜಿ ಸರ್ಪ್ರೈಸ್ ಗಿಫ್ಟ್ ನಮ್ಮ ಪಾಲಗಬೇಕು ಎನ್ನುವುದು ಎಲ್ಲರ ಮನದಲ್ಲಿ ಇತ್ತು.

More from Filmibeat

English summary
Aase Kannada serial March 20th 2025 episode highlights
Read more about: tv show serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X