Aase Serial:ಲಕ್ಕಿಯ ಸರ್ಪ್ರೈಸ್ ಗಿಫ್ಟ್ ಸೂರ್ಯ-ಮೀನಾ ಪಾಲು; ಉರಿದು ಬಿದ್ದ ಶಾಂತಿ ಮುಂದೇನು ಮಾಡುತ್ತಾಳೋ?
ಲಕ್ಕಿಗೆ ಮಗ ಸೊಸೆ ಮಕ್ಕಳೆಂದರೆ ಬಹಳ ಪ್ರೀತಿ. ಆದರೆ, ಸೊಸೆ ಹಾಗೂ ದೊಡ್ಡ ಮೊಮ್ಮಗನಿಗೆ ಅಜ್ಜಿಯಿಂದ ಏನಾದರೂ ಧಕ್ಕುತ್ತಾ ಎನ್ನುವುದೇ ಚಿಂತೆಯಾಗಿತ್ತು. ಅಜ್ಜಿ ಯಾವತ್ತೂ ಖುಷಿಯಾಗಿರಲಿ ಎಂದು ಯಾರೂ ಅಂದುಕೊಂಡೇ ಇಲ್ಲ. ಅವರಿಗೆ ಅಜ್ಜಿ ಜೊತೆ ಇರುವ ಹಣವೇ ಮುಖ್ಯವಾಯಿತೇ ಹೊರತು ಅಜ್ಜಿಯಲ್ಲ. ಆದರೆ ಈ ಬಗ್ಗೆ ಯಾರ ಜೊತೆಯೂ ಏನೂ ಹೇಳದೆ ಸುಮ್ಮನಿರುತ್ತಾರೆ. ಅಜ್ಜಿಯ ಮೇಲೆ ಹೆಚ್ಚು ಕಾಳಜಿ ಇರುವ ಹಾಗೆ ಮನೋಜ್ ನಡೆದುಕೊಳ್ಳುತ್ತಾನೆ. ಸೂರ್ಯ ತನ್ನ ಮೆಚ್ಚಿನ ಲಕ್ಕಿಗೆ ಗಿಫ್ಟ್ ಕೊಡಲು ಆಕೆಯ ಗೆಳತಿಯರನ್ನು ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ಕರೆದುಕೊಂಡು ಬರುತ್ತಾನೆ.
ಸೂರ್ಯ ಕೊಟ್ಟ ಸರ್ಪ್ರೈಸ್ ಬಹಳಷ್ಟು ಖುಷಿ ನೀಡುತ್ತೆ. ಮನೆಯವರೆಂದಲೂ ಲಕ್ಕಿಯ ಗೆಳತಿಯರನ್ನು ನೋಡಿ ಬಹಳಷ್ಟು ಖುಷಿ ಪಡುತ್ತಾರೆ. ಲಕ್ಕಿಗಂತೂ ಸ್ವರ್ಗವೇ ತನ್ನ ಕೈಗೆ ಬಂದು ಸೇರಿದೆ ಎನ್ನುವ ಹಾಗೆ ಗೆಳತಿಯರ ಜೊತೆ ಮಾತುಕತೆಗೆ ತೊಡಗುತ್ತಾಳೆ. ಹಾಗೆ ತನ್ನ ಮಗ ಸೊಸೆ ಮೊಮ್ಮಕ್ಕಳನ್ನು ಪರಿಚಯ ಮಾಡಿಸುತ್ತಾರೆ. ಮನೋಜ್‌ನನ್ನು ನೋಡಿ ಲಕ್ಕಿ ಗೆಳತಿಯರು ಇವನೇ ಅಲ್ವಾ ನಿನ್ನ ಮೊದಲನೇ ಮೊಮ್ಮಗ. ಸಣ್ಣ ವಯಸ್ಸಿನಲ್ಲಿ ಓಡೋಡಿ ಬಂದು ನಮ್ಮನ್ನೆಲ್ಲ ತಬ್ಬಿಕೊಂಡು ಎತ್ತಿಕೊಳ್ಳಲು ಹೇಳುತ್ತಿದ್ದ ಎಂದು ಖುಷಿಯಿಂದ ಹೇಳುತ್ತಾರೆ.

ಹಾಗೆ ಸೂರ್ಯ ರವಿ ಬಗ್ಗೆಯೂ ಉತ್ತಮವಾದ ಮಾತು ಹೇಳುತ್ತಾರೆ. ಎಲ್ಲರ ಜೊತೆಗೆ ಮಾತುಕತೆ ಮಾಡಿದ ಲಕ್ಕಿ ಕೇಕ್ ಕಟ್ ಮಾಡಿ ಹುಟ್ಟಿದ ಹಬ್ಬವನ್ನು ಬಹಳ ಅದ್ಭುತವಾಗಿ ಮಾಡಿಕೊಳ್ಳುತ್ತಾಳೆ. ಶಾಂತಿ ಮನೆಗೆ ಬಂದ ಅಥಿತಿಗಳು ಯಾವಾಗ ಹೋಗುತ್ತಾರೆ ಎಂದು ಅಂದುಕೊಳ್ಳುತ್ತಿರುತ್ತಾಳೆ. ಇನ್ನು ಹುಟ್ಟುಹಬ್ಬದ ಕಾರ್ಯಕ್ರಮಗಳು ಮುಗಿದ ಬಳಿಕ ಮನೆಯಿಂದ ಅಥಿತಿಗಳು ಆತಿಥ್ಯ ಮುಗಿಸಿ ಹೋಗುತ್ತಾರೆ. ಇದೆಲ್ಲವನ್ನೂ ನೋಡಿದ ಶಾಂತಿಗೂ ಖುಷಿ ಆಗುತ್ತದೆ. ಹಬ್ಬ ಎಲ್ಲರೂ ಕೂಡ ಹೊರಟು ಹೋದರಲ್ಲಾ ಎನ್ನುವ ಖುಷಿ ಆಕೆಗೆ. ಅತ್ತೆಯ ಬಳಿಗೆ ಬಂದ ಶಾಂತಿ, ಅತ್ತೆ ಅದೇನೋ ಗಿಫ್ಟ್ ಕೊಡುತ್ತೇನೆ ಎಂದು ಹೇಳಿದಿರಿ ಅಲ್ವಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಲಕ್ಕಿ ಬಹಳ ಖುಷಿಯಿಂದ ಹೌದು ಸಣ್ಣ ಗಿಫ್ಟ್ ನೀಡುತ್ತೇನೆ ಎನ್ನುತ್ತಾರೆ.
ಗಿಫ್ಟ್ ಕೊಟ್ಟವರಿಗೆ ಧನ್ಯವಾದ ಹೇಳಿದ ಶಾಂತಿ
ನನಗೆ ಶಾಂತಿ ಕೊಟ್ಟ ಟಿವಿ ಬಹಳ ಇಷ್ಟವಾಯಿತು. ಹಾಗೆಯೇ ದೊಡ್ಡ ಮೊಮ್ಮಗ ಮನೋಜ್ ಸರ ಕೊಟ್ಟಿದ್ದಾನೆ. ಹಾಗೆಯೇ ಮೊಮ್ಮಗಳು ಮುಖಕ್ಕೆ ಮೇಕಪ್ ಅನ್ನು ಹಾಕಿದ್ದಾಳೆ. ಇತ್ತ ರವಿ ತನಗಾಗಿ ಕೇಕ್ ಅನ್ನು ಮಾಡಿಕೊಂಡು ಬಂದಿದ್ದಾನೆ. ಹಾಗೆ ಶ್ರುತಿ ನನಗೋಸ್ಕರ ಮೊಬೈಲ್ ಫೋನನ್ನು ಕೂಡ ಗಿಫ್ಟ್ ನೀಡಿದ್ದಾಳೆ. ಇವರೆಲ್ಲರಿಗೂ ನನ್ನ ಆಶೀರ್ವಾದ ಇದ್ದೆ ಇರುತ್ತದೆ ಎಂದು ಹೇಳುತ್ತಾರೆ ಅಜ್ಜಿ. ಇತ್ತ ಸೂರ್ಯನ ಮುಖ ನೋಡಿದ "ನನಗೆ ಸೂರ್ಯನ ಮೇಲೆ ಬಹಳ ಕೋಪವಿದೆ. ಆತ ನನಗಾಗಿ ಒಂದು ರೂಪಾಯಿ ಖರ್ಚು ಮಾಡಲೇ ಇಲ್ಲ ಎನ್ನುತ್ತಾರೆ.
ಸೂರ್ಯನ ಮೇಲೆ ಮುನಿಸಿಕೊಂಡ ಅಜ್ಜಿ
ನನಗೆ ಅದಕ್ಕೆ ಬೇಸರ ಎಂದು ಸುಮ್ಮನೇ ಲಕ್ಕಿ ಹೇಳುತ್ತಾಳೆ. ಆಕೆಯ ಮಾತು ಕೇಳಿದ ಸೂರ್ಯ "ನಾನು ಬಡವ. ಆದ ಕಾರಣ ನನ್ನಿಂದಾದ ಖುಷಿಯನ್ನಷ್ಟೇ ನಿನಗೆ ನೀಡಿದ್ದೇನೆ" ಎಂದು ಹೇಳಿದಾಗ ಅಜ್ಜಿ ಬಹಳ ಖುಷಿಪಡುತ್ತಾ ತನ್ನ ಮಗನ ಬಗ್ಗೆ ಹೆಮ್ಮೆ ಪಡುತ್ತಾಳೆ. ಹಾಗೆಯೇ ತನ್ನ ಕೈಯಲ್ಲಿದ್ದ ಬಂಗಾರದ ಪದಕವನ್ನು ಸೂರ್ಯಗೆ ಗಿಫ್ಟ್ ಆಗಿ ನೀಡುತ್ತಾಳೆ. ಈ ಘಟನೆಯನ್ನು ನೋಡಿ ಶಾಂತಿ ಹಾಗೆಯೇ ಮನೋಜ್ ಅವಕ್ಕಾಗಿ ನಿಲ್ಲುತ್ತಾರೆ. ಅಜ್ಜಿ ಮನೆಯಿಂದ ಹೊರ ಹೋದ ಬಳಿಕ ಮನೆಯಲ್ಲಿ ಸೂರ್ಯ ಮೀನಾ ಒಡವೆಗಳನ್ನು ಮನೆಯವರೆಲ್ಲರ ಎದುರು ಇಡುತ್ತಾನೆ. ಇತ್ತ ಶಾಂತಿಗೆ ಬಹಳ ಭಯ ಆಗುತ್ತದೆ. ರಂಗನಾಥನ ಬಳಿಗೆ ಬಂದ ಶಾಂತಿ ಸುಮ್ಮನೆ ನಿಲ್ಲುತ್ತಾಳೆ. ಸೂರ್ಯ ಎಲ್ಲರೆದುರು ನಕಲಿ ಒಡವೆಯ ಬಗ್ಗೆ ಪ್ರಸ್ತಾಪ ಮಾಡುತ್ತಾನೆ. ಆದರೆ ಶಾಂತಿ ಈ ಆಪಾದನೆಯನ್ನು ಮೀನಾ ಮೇಲೆ ಹೊರಿಸಲು ಮುಂದಾಗಿದ್ದಾಳೆ.


Click it and Unblock the Notifications











