Aase Serial: ತಾಯಿಯ ಮೇಲೆ ಸಂಶಯ; ಶಾಂತಿಯ ಗೆಳತಿಯ ಮನೆಯಿಂದ ತನಿಖೆ ಶುರು

By ಪೂರ್ವ

ಸೂರ್ಯಗೆ ಚಿನ್ನ ಕದ್ದವರು ಯಾರು ಏನು ಎಂಬುವುದು ತಿಳಿಯುವವರೆಗೂ ಆತ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಸೂರ್ಯ ಸಿಕ್ಕಾಪಟ್ಟೆ ಬೇಸರದಲ್ಲಿದ್ದಾನೆ. ನನ್ನ ಹೆಂಡತಿಯ ಒಡವೆಗಳು ನಕಲಿ ಎಂದು ತಿಳಿದ ಮೇಲೆ ಸೂರ್ಯನಿಗೆ ನಿದ್ದೆ ಹತ್ತುತ್ತಿಲ್ಲ. ಆತನಿಗೆ ಅಸಲಿ ಚಿನ್ನವನ್ನು ತೆಗೆದುಕೊಂಡು ಹೋಗಿ ನಕಲಿ ಚಿನ್ನವನ್ನು ಅಲ್ಲಿಟ್ಟಿದ್ದು ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ. ಆದರೆ ಶಾಂತಿ ಮತ್ತು ಮನೋಜ್ ಇದಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಹಾಗೆ ಇರುತ್ತಾರೆ.

ಶಾಂತಿ ಮನೋಜ್ ಬಳಿಗೆ ಬಂದು "ಸೂರ್ಯನಿಗೆ ವಿಚಾರಗಳು ತಿಳಿಯುವ ಮುನ್ನ ನೀನು ನಾಲ್ಕು ಲಕ್ಷ ಹಣವನ್ನು ಹೇಗಾದರೂ ಅರೇಂಜ್ ಮಾಡಿ ಆ ಚಿನ್ನದ ಬಳೆಗಳನ್ನು ಹಾಗೂ ಮಾಂಗಲ್ಯದ ಸರವನ್ನು ನೀನು ತರಬೇಕು. ಇಲ್ಲವಾದರೆ ಖಂಡಿತವಾಗಿಯೂ ನಿನ್ನನ್ನು ನಾನು ಸುಮ್ಮನೆ ಬಿಡುವ ಮಾತೆ ಇಲ್ಲ" ಎಂದು ಹೇಳುತ್ತಾರೆ. ಆಗ ಮನೋಜ್‌ "ಅಮ್ಮ ಹೇಗಮ್ಮ ನಾನು ತರುವುದು. ಆಫೀಸ್‌ನಲ್ಲಿ ಸ್ವಲ್ಪ ಹಣ ಆ ಕಡೆ ಈ ಕಡೆ ಆದರೂ ರೋಹಿಣಿಗೆ ಎಲ್ಲಾ ವಿಚಾರಗಳು ತಿಳಿಯುತ್ತೆ. ಅಂತಹದರಲ್ಲಿ ನಾನು ಹೇಗೆ ಹಣ ಆರೇಂಜ್ ಮಾಡುವುದು. ನನ್ನಿಂದ ಏನು ಆಗುತ್ತೋ ಅದನ್ನು ನಾನು ಮಾಡುತ್ತೇನೆ" ಎಂದು ಮನೋಜ್ ತಾಯಿ ಶಾಂತಿಯ ಬಳಿ ಹೇಳುತ್ತಾನೆ. ಆಗ ಶಾಂತಿ "ಮನೋಜ ನೀನು ಏನು ಮಾಡುತ್ತೀಯೋ ನನಗೆ ಗೊತ್ತಿಲ್ಲ. ಆದರೆ ಸೂರ್ಯನಿಗೆ ನಿಜ ವಿಚಾರ ಹೇಳುವ ಮುನ್ನ ಚಿನ್ನದ ಒಡವೆಗಳನ್ನು ರೆಡಿ ಮಾಡಿಸು" ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಬಿರುಸಾಗಿ ನಡೆದು ಒಳಗೆ ಹೋಗುತ್ತಾಳೆ.

Aase Kannada serial March 26th full episode Highlights

ಮನೋಜ್‌ ಮಾತ್ರ ಏನು ಮಾಡಬೇಕು ತಿಳಿಯದೇ ಸುಮ್ಮನೆ ಕುಳಿತುಕೊಳ್ಳುತ್ತಾನೆ. ಇತ್ತ ಸೂರ್ಯ ಮೀನಾಗೆ ಕರೆ ಮಾಡಿ, "ಎಲ್ಲಿದ್ದಿಯಾ ಮೀನಾ, ನಾವು ಇವತ್ತು ಕಸ್ತೂರಿ ಆಂಟಿ ಮನೆಗೆ ಹೋಗೋಣ. ಶಾಂತಿ ಎಲ್ಲಾ ವಿಚಾರವನ್ನು ಕಸ್ತೂರಿ ಆಂಟಿ ಬಳಿ ಹೇಳಿರುತ್ತಾರೆ" ಎಂದು ಹೇಳಿದಾಗ ಮೀನಾ ಸರಿ ಅಂತ ಒಪ್ಪಿಕೊಳ್ಳುತ್ತಾಳೆ. "ಹಾಗಾದರೆ ಕಸ್ತೂರಿ ಆಂಟಿಯನ್ನು ಒಮ್ಮೆ ಭೇಟಿಯಾಗಿ ಎಲ್ಲ ವಿಚಾರವನ್ನು ತಿಳಿದುಕೊಳ್ಳೋಣ" ಎಂದು ವೀಣಾ ಹೊರಟು ಸೂರ್ಯನೊಂದಿಗೆ ಕಸ್ತೂರಿ ಆಂಟಿಯ ಮನೆಗೆ ಹೋಗುತ್ತಾರೆ.

ಸೂರ್ಯ ಮೀನಾಳನ್ನು ನೋಡಿ ಕಸ್ತೂರಿ ಶಾಕ್

ಮನೆ ಬಾಗಿಲಿಗೆ ಬಂದ ಮೀನಾ ಹಾಗೂ ಸೂರ್ಯನನ್ನು ನೋಡಿ ಕಸ್ತೂರಿಗೆ ಕೊಂಚ ಶಾಕ್ ಆಗುತ್ತೆ. ಮೊದಲ ಬಾರಿಗೆ ನೀನು ಮತ್ತೆ ಮೀನಾ ಇಲ್ಲಿಗೆ ಬಂದಿದ್ದೀರಾ. ನಿಮ್ಮ ತಾಯಿಯನ್ನು ಬಿಟ್ಟು ಇಲ್ಲಿಗೆ ಯಾರು ಕೂಡ ಬರುತ್ತಿರಲಿಲ್ಲ ಎಂದು ಕೊಂಚ ಬೇಸರದಲ್ಲಿ ಕಸ್ತೂರಿ ಸೂರ್ಯನನ್ನು ಕಂಡು ಹೇಳುತ್ತಾರೆ. ಆಗ ಸೂರ್ಯ ಬಹಳ ಖುಷಿ ಪಡುತ್ತಾ ಆಂಟಿ ನಿಮ್ಮ ಮನೆಯ ಕಡೆಯಿಂದಲೇ ನಾವು ಪಾಸ್ ಆಗುತ್ತಿದ್ವಿ. ಹಾಗೆ ನಿಮಗೆ ಹಣ್ಣು ಹಂಪಲುಗಳನ್ನು ಕೊಟ್ಟು ಹೋಗೋಣ ಎಂದು ಬಂದೆವು ಎಂದು ಹೇಳುತ್ತಾನೆ. ಹಾಗೆಯೇ ಚಿನ್ನದ ಒಡವೆಯ ಬಗ್ಗೆ ಪ್ರಸ್ತಾಪವನ್ನು ಮಾಡುತ್ತಾನೆ. ಇದನ್ನು ಕೇಳಿದ ಕಸ್ತೂರಿಗೆ ಬಹಳ ಭಯವಾಗುತ್ತೆ.

ಗೆಳತಿಯ ಮನೆಗೆ ಬಂದ ಶಾಂತಿಗೆ ಶಾಕ್

ಆಕೆ ಕೆಲವೊಂದು ಬಾರಿ ಭಯದಲ್ಲಿ ನಿಜಾಂಶವನ್ನು ಬಾಯಿ ಬಿಟ್ಟಿರುತ್ತಾರೆ. ಆದರೆ ಮೆತ್ತಗೆ ಸಾವರಿಸಿಕೊಂಡು ಅದು ಹಾಗಲ್ಲ ಹೀಗೆ ಎಂದು ಸುಳ್ಳನ್ನು ಹೇಳಿ ತಪ್ಪನ್ನು ಮುಚ್ಚಿಡುತ್ತಾಳೆ. ಸೂರ್ಯ ಹಾಗೂ ಮೀನಾ ಕಸ್ತೂರಿ ಬಾಯಿಯನ್ನ ಹೇಗಾದರೂ ಮಾಡಿ ಬಿಡಿಸಬೇಕು ಎಂದು ಅಂದುಕೊಂಡಿರುತ್ತಾಳೆ. ಆದರೆ ಸೂರ್ಯ ಮಾತಿಗೆ ಕೊಂಚ ಬೇಸರಪಟ್ಟ ಕಸ್ತೂರಿ ನಿಜ ಹೇಳಲು ಇನ್ನೇನು ಬಾಯಿ ತೆಗೆಯುತ್ತಾಳೆ. ಅಷ್ಟರಲ್ಲಿ ಕಸ್ತೂರಿ ಮನೆಗೆ ಶಾಂತಿ ಬರುತ್ತಾಳೆ. ಶಾಂತಿಗೆ ಕಸ್ತೂರಿ ಮನೆಯಲ್ಲಿ ಮೀನಾ ಹಾಗೂ ಸೂರ್ಯನನ್ನು ನೋಡಿ ಶಾಕ್ ಆಗುತ್ತೆ. ಇದೇನಪ್ಪ ಇವರಿಬ್ಬರೂ ಇಲ್ಲಿಗೆ ಬಂದಿದ್ದಾರಲ್ಲ. ಯಾಕೆ ಎಂದು ಯೋಚನೆ ಮಾಡುತ್ತಿರುತ್ತಾಳೆ. ಸೂರ್ಯ ಬಳಿ ಶಾಂತಿ "ಇದೇನು ನೀವಿಬ್ಬರೂ ಇಲ್ಲಿಗೆ ಬಂದಿದ್ದೀರಲ್ಲ" ಎಂದು ಪ್ರಶ್ನೆ ಕೇಳಿದಾಗ ಸೂರ್ಯ "ಇಲ್ಲಿಗೆ ಬರಲು ಕೂಡ ನಿನ್ನ ಪರ್ಮಿಷನ್ ಕೇಳಿ ಬರಬೇಕೆಂದು ಏನಿಲ್ಲ" ಎಂದು ಹೇಳಿದಾಗ ಮೀನಾ "ಇಲ್ಲ ಅತ್ತೆ ನಾವು ಕಸ್ತೂರಿ ಆಂಟಿ ಮನೆ ಪಕ್ಕದಿಂದ ಪಾಸಾಕ್ತಿದ್ವಿ. ಹಾಗೆ ಅವರಿಗೆ ಏನಾದರು ಹಣ್ಣು ಹಂಪಲು ತಿನ್ನಲು ಕೊಡೋಣ ಎಂದು ಬಂದ್ವಿ ಅಷ್ಟೇ" ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ.

ಶಾಂತಿಗೆ ಕಾಡಿದೆ ಭಯ

ಶಾಂತಿಗೆ ಭಯಕಾಡುತ್ತದೆ ಕಸ್ತೂರಿ ಎಲ್ಲ ವಿಚಾರವನ್ನು ನೀವು ಸೂರ್ಯನಿಗೆ ಹೇಳಿದ್ಯಾ ಎಂದು ಕೇಳುತ್ತಾಳೆ. ಆಗ ಕಸ್ತೂರಿ " ಇಲ್ಲ ನೀನು ಎಲ್ಲಾದರೂ ಬರೆದಿದ್ದರೆ ಖಂಡಿತವಾಗಿಯೂ ಈ ವಿಚಾರವನ್ನು ಹೇಳಿಬಿಡುತ್ತಿದ್ದೆ" ಈ ಮಾತನ್ನು ಕೇಳಿ ಶಾಂತಿಗೆ ಕೋಪಗೊಳ್ಳುತ್ತಾಳೆ.

More from Filmibeat

English summary
Aase Kannada serial March 26th full episode Highlights.
Read more about: tv show serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X