Aase Serial: ಮನೋಜ್ ಬಂಡವಾಳವನ್ನು ಬಯಲಿಗೆಳೆದ ಸೂರ್ಯ; ಮುಂದೇನು ಮಾಡುತ್ತಾಳೆ ಶಾಂತಿ?
ಮನೋಜನ ಬಂಡವಾಳ ಎಲ್ಲರ ಮುಂದೆಯೂ ತೆರೆದುಕೊಂಡಿದೆ. ಆತ ನಾಲ್ಕು ಲಕ್ಷ ಹಣವನ್ನು ಸಂಪಾದನೆ ಮಾಡಿದ್ದೇನೆ ಎಂದು ಬಹಳಷ್ಟು ಬೀಗುತ್ತಿದ್ದ. ಆದರೆ ಅದೆಲ್ಲ ಸುಳ್ಳು ಎನ್ನುವುದು ಮನೆಯವರಿಗೆ ತಿಳಿಯುತ್ತದೆ. ಕಳ್ಳರ ಗ್ಯಾಂಗ್ ಎಲ್ಲಾ ಮಿಷನ್‌ಗಳನ್ನು ಬಹಳ ಕಡಿಮೆ ರೇಟಿನಲ್ಲಿ ಮಾರಾಟ ಮಾಡುವುದಕ್ಕೆ ಸಿದ್ಧವಾಗಿರುತ್ತಾರೆ.
ಇದನ್ನು ಕೇಳಿ ಮನೋಜನ ಗೆಳೆಯ ಇಲ್ಲೆಲ್ಲೋ ಆಫ್ ರೇಟಿಗೆ ವಾಷಿಂಗ್ ಮಿಷನ್, ಫ್ರಿಡ್ಜ್ ಎಲ್ಲಾ ಮಾರಾಟಕ್ಕೆ ಇದೆಯಂತೆ ಸೂರ್ಯ ನಾವು ಹೋಗಿ ಅದನ್ನ ನೋಡಿಕೊಂಡು ಬರೋಣ ಎಂದು ಹೇಳುತ್ತಾನೆ. ಆಗ ಸೂರ್ಯ ಆಯಿತು ಎಂದು ಗೆಳೆಯನ ಜೊತೆ ಅಲ್ಲಿಗೆ ಹೋದಾಗ ಪೊಲೀಸರು ಬಂದು ಮುತ್ತಿಗೆ ಹಾಕಿ ಜೈಲಿಗೆ ಕಳುಹಿಸುತ್ತಾರೆ.

ಸೂರ್ಯ ಹಾಗೂ ಆತನ ಗೆಳೆಯ ಇಬ್ಬರೂ ಕೂಡ ತಾವು ತಪ್ಪು ಮಾಡಿಲ್ಲ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಆಗ ಪೊಲೀಸರು ಸ್ವಲ್ಪ ತಡೆದುಕೊಳ್ಳಿ ಎನ್ನುತ್ತಾ ವಿಚಾರಣೆಯಾದ ಬಳಿಕ ನಿಮ್ಮನ್ನು ನಾವು ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆಗ ಸೂರ್ಯ ಹಾಗೂ ಆತನ ಗೆಳೆಯ ಮೌನವಾಗಿರುತ್ತಾರೆ. ಆ ಕೂಡಲೇ ಮೋಸವಾದ ಅಂಗಡಿ ಮಾಲೀಕರು ಓಡಿಕೊಂಡು ಪೊಲೀಸರ ಬಳಿಗೆ ಬರುತ್ತಾರೆ. ಹಾಗೆಯೇ ಅವರವರ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಹಾಗೆಯೇ ಮನೋಜ ಪೊಲೀಸರ ಬಳಿಗೆ ಬರುತ್ತಾನೆ. ಮನೋಜನನ್ನು ಕಂಡ ಸೂರ್ಯ ಹಾಗೂ ಆತನ ಗೆಳೆಯನಿಗೆ ಶಾಕ್ ಆಗುತ್ತೆ.
ಮನೋಜ ಪೊಲೀಸರ ಬಳಿ ಬಂದು ಸರ್ ನನ್ನ ಯಾವುದೇ ಮೆಶಿನ್‌ಗಳು ಇಲ್ಲಿ ಕಾಣಿಸುತ್ತಿಲ್ಲ. ದಯವಿಟ್ಟು ನನಗೆ ನನ್ನ ವಸ್ತುಗಳು ಬೇಕು. ಹೇಗಾದರೂ ಮಾಡಿ ಕೊಡಿಸಿ ನಾನು ಸುಮಾರು ನಾಲ್ಕು ಲಕ್ಷ ಹಣವನ್ನು ಇಲ್ಲಿಗೆ ಸುರಿಸಿದ್ದೇನೆ ಎಂದು ಮನೆಯವರ ಬಳಿ ಸುಳ್ಳು ಹೇಳಿದ್ದೇನೆ. ದಯವಿಟ್ಟು ನನಗೆ ಕೊಡಿಸಿ ಎಂದು ಅಂಗಲಾಚುತ್ತಾನೆ. ಮನೋಜ ಪೊಲೀಸರ ಬಳಿ ಮಾತನಾಡುವುದನ್ನು ಸೂರ್ಯ ರೆಕಾರ್ಡ್ ಮಾಡುತ್ತಾನೆ. ಇತ್ತ ಮನೋಜನಿಗೆ ಪೊಲೀಸರು ಕೊಂಚ ಸಮಾಧಾನ ಮಾಡಿ, ಮನೆಗೆ ಕಳುಹಿಸುತ್ತಾರೆ. ಇತ್ತ ಮನೋಜ ಮನೆಗೆ ಬಹಳ ಅಳುಕಿನಿಂದಲೇ ಹೋಗುತ್ತಾನೆ. ಆತನಿಗೆ ಭಯ ಮನೆಯವರಿಗೆ ತಿಳಿದರೆ ಏನು ಮಾಡುವುದು ಎನ್ನುವ ಟೆನ್ಶನ್ ಇರುತ್ತದೆ.
ಸೂರ್ಯನ ಕೈಯಿಂದ ತಪ್ಪಿಸಿಕೊಳ್ಳಲು ರಣತಂತ್ರ
ಇತ್ತ ಮನೆಗೆ ಬಂದ ಸೂರ್ಯ ಎಲ್ಲರನ್ನೂ ಕರೆಯುತ್ತಾನೆ. ಬಳಿಕ ತಾನು ಎಲ್ಲರಿಗೂ ಒಂದು ಪಿಕ್ಚರ್ ತೋರಿಸುತ್ತೇನೆ ಎಂದು ಹೇಳುತ್ತಾರೆ. ಆಗ ಶಾಂತಿ ಹಾಗೂ ಮನೋಜ್‌ಗೆ ಬಹಳ ಭಯವಾಗುತ್ತದೆ. ಮನೋಜ ಎಲ್ಲರೆದುರು ಟಿವಿ ಪ್ಲೇ ಮಾಡುತ್ತಾನೆ. ಆಗ ರಂಗನಾಥ್‌ಗೆ ಮನೋಜನ ಮೇಲೆ ಬಹಳ ಸಿಟ್ಟು ಬರುತ್ತದೆ. ತನ್ನ ಮಗ ಇಷ್ಟೊಂದು ಪೆದ್ದ ಎಂದು ನನಗೆ ಗೊತ್ತಿರಲಿಲ್ಲ. ಪೆದ್ದ ಆದರೂ ಪರವಾಗಿಲ್ಲ. ಆದರೆ ನಿಜವನ್ನು ಎಲ್ಲರೆದುರು ಹೇಳಬೇಕಿತ್ತು. ಯಾಕೆಂದರೆ ಈ ನಿಜ ವಿಚಾರ ನಮಗೆ ಈ ರೀತಿ ಗೊತ್ತಾಗುವುದಕ್ಕಿಂತ ನೀನು ಹೇಳಿದಾಗಲೇ ನಮಗೆ ಗೊತ್ತಾಗುತ್ತಿದ್ದರೆ, ನಾನು ಯಾವತ್ತೂ ಕೂಡ ಇಷ್ಟೊಂದು ಬೇಸರ ಆಗುತ್ತಿರಲಿಲ್ಲ. ಆದರೆ ನೀನು ಮಾಡಿದ್ದೇನು ಎಂದು ಜೋರಾಗಿ ಹೊಡೆಯುತ್ತಾರೆ.
ಮನೋಜನ ಮೇಲೆ ಕೋಪಿಸಿಕೊಂಡ ರೋಹಿಣಿ
ಮನೋಜನ ಕಡೆ ನೋಡಿ ರೋಹಿಣಿ ಬಹಳ ಕೋಪ ಮಾಡಿಕೊಳ್ಳುತ್ತಾಳೆ. ನೀವು ಏನು ಮಾಡಿದ್ದೀರಿ ಮನೋಜ್. ನಾಲಕ್ಕು ಲಕ್ಷ ಹಣವನ್ನು ಹೇಗೆ ಆರೆಂಜ್ ಮಾಡಿದ್ರಿ. ನೀವು ನನ್ನ ಬಳಿಯೂ ಸುಳ್ಳು ಹೇಳಿದ್ರಿ. ನಿಮಗೆ ನನ್ನ ಬಳಿಯಾದರೂ ನಿಜ ವಿಚಾರ ತಿಳಿಸಬಹುದಿತ್ತು ಎಂದು ಕೋಪ ಮಾಡಿಕೊಳ್ಳುತ್ತಾಳೆ. ಹಾಗೆಯೇ ಮನೋಜ ಎಲ್ಲಿ ಎಲ್ಲರೆದುರು ಹಣದ ವಿಚಾರ ಬಾಯಿಬಿಟ್ಟರೆ ಎನ್ನುವ ಭಯ ಆಕೆಯನ್ನು ಕಾಡುತ್ತೆ.
ನೋವು ತಾಳಲಾರದೆ ಅತ್ತ ಮನೋಜ
ಇತ್ತ ಶಾಂತಿ ಮಾತ್ರ ಯಾಕೆ ನೀನು ಈ ರೀತಿ ಮಾಡಿದೆ? ನೀನು ಮಾಡಿದ್ದು ತಪ್ಪು ಅಲ್ವಾ? ಯಾಕೆ ಹೀಗೆಲ್ಲ ಮಾಡಿ ನನ್ನ ಹೊಟ್ಟೆ ಉರಿಸುತ್ತಿಯಾ? ಇದೀಗ ನೀನು ಯಾವ ಗೆಳೆಯನ ಜೊತೆಗೆ ಹಣ ತೆಗೆದುಕೊಂಡೆ ಎಂದು ಪದೇ ಪದೇ ಹೇಳಿದಾಗ ಮನೋಜನಿಗೆ ಅಮ್ಮ ಹೇಳುತ್ತಿರುವ ಮಾತು ಅರ್ಥ ಆಯಿತು. ಶಾಂತಿ ಇನ್ನೂ ಮನೋಜನಿಗೆ ಹೊಡೆದಾಗ ರೋಹಿಣಿ ಅಡ್ಡ ಬರುತ್ತಾಳೆ. ಅತ್ತೆ ನೀವು ಅವರನ್ನು ಹೊಡೆಯುವುದು ನಿಲ್ಲಿಸಿ. ಏನೋ ಭಯದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಹೇಳುತ್ತಾಳೆ. ಆಗ ಮನೋಜ ಹೋಗಿ ರೋಹಿಣಿಯ ಹಿಂದೆ ನಿಲ್ಲುತ್ತಾನೆ. ಶಾಂತಿ ಅಲ್ಲಿಂದ ನೇರ ರೂಮ್‌ಗೆ ಬಹಳ ಬೇಸರದಿಂದ ಹೋಗುತ್ತಾಳೆ. ರಂಗನಾಥ ಮಾತ್ರ ಬಹಳಷ್ಟು ಬೇಸರ ಪಟ್ಟುಕೊಳ್ಳುತ್ತಾರೆ. ಇಂಥಹ ಮಗ ನನಗೆ ಹುಟ್ಟಿದ್ದಾನಲ್ಲ ಎಂದು ಬಹಳಷ್ಟು ನೊಂದುಕೊಳ್ಳುತ್ತಾರೆ.


Click it and Unblock the Notifications











