Aase Serial:ರಾ ರಾ ಸರಸಕೆ ಬಾರ ಎಂದ ಶಾಂತಿ; ರಂಗನಾಥ್‌ ಲುಕ್‌ಗೆ ಮನೆ ಮಂದಿ ಶಾಕ್

By ಪೂರ್ವ

ಮೀನಾ ಕಾಣಿಸದೆ ಇದ್ದಿದ್ದಕ್ಕೆ ಸಖತ್ ಆಗಿಯೇ ಮನೆಯಲ್ಲಿ ಹೈ ಡ್ರಾಮಾ ನಡೆದು ಹೋಯಿತು. ಆದರೆ ಕೊನೆಗೆ ಮೀನಾ ಮನೆಗೆ ಬಂದಿರುವುದನ್ನು ನೋಡಿ ಮೀನಾ ಗಂಡ ಸೂರ್ಯಗೆ ಮತ್ತೆ ಜೀವ ಬಂದ ಹಾಗಾಗಿದೆ. ಮನೆಯಲ್ಲಿ ರಂಪ ರಾದ್ಧಾಂತಗಳು ನಡೆದವು. ಆದರೆ, ಅದೆಲ್ಲವನ್ನೂ ಮನದಲ್ಲಿ ಇಟ್ಟುಕೊಳ್ಳದೆ ಇರುವ ಮೀನಾ ಮರುದಿನ ಎಂದಿನಂತೆ ಅಡುಗೆ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾಗ ರವಿ ಹೆಂಡತಿ ಬಂದು ಸಾರಿ ಕೇಳುತ್ತಾಳೆ. ಆದರೆ ಮೀನಾಗೆ ಇದ್ಯಾವುದನ್ನೂ ನೀವು ಕೇಳುವುದು ಬೇಡ. ನನಗೆ ಯಾರ ಮೇಲು ಬೇಸರವಿಲ್ಲ ಎಂದು ಬಹಳ ಶಾಂತವಾಗಿಯೇ ಹೇಳುತ್ತಾಳೆ.

ಇದೆಲ್ಲವನ್ನೂ ಶಾಂತಿ ಕದ್ದು ಕೇಳಿಸಿಕೊಂಡಿರುತ್ತಾಳೆ. ಶಾಂತಿಗೆ ತನ್ನ ಸೊಸೆ ಮೀನಾ ಎಂದರೆ ಬಹಳ ಕೋಪ. ಆಕೆ ಬಡವರ ಮನೆ ಮಗಳು. ನಮಗೆ ವರದಕ್ಷಿಣೆ ಕೊಟ್ಟಿಲ್ಲ ಎಂದು ಶಾಂತಿ ತನ್ನ ಸೊಸೆ ಮೀನಾಳನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಾಳೆ. ಆದರೂ ಮೀನಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇತ್ತ ರೋಹಿಣಿ ಹಾಗು ಶಾಂತಿ ಹರಟೆ ಹೊಡೆಯುತ್ತಿರುವಾಗ ಅತ್ತೆಗೆ ಟಿಪ್ಸ್ ನೀಡುತ್ತಾಳೆ. ಅತ್ತೆ ನೀವು ಯಾಕೆ ಭರತನಾಟ್ಯ ಕ್ಲಾಸ್ ನಡೆಸಬಾರದು. ನೀವು ಚೆನ್ನಾಗಿ ಭರತ ನಾಟ್ಯ ಮಾಡುತ್ತೀರಿ. ಕ್ಲಾಸ್ ಎಲ್ಲಾದರೂ ತೆಗೆದುಕೊಂಡರೆ ಚೆನ್ನಾಗಿ ಹಣ ಸಂಪಾದಿಸಬಹುದು ಎಂದು ಹೇಳುತ್ತಾಳೆ.

Aase kannada serial todays episode about Shanti and Ranganath Nagavalli dance

ರೋಹಿಣಿ ಮಾತು ಕೇಳಿ ಶಾಂತಿಗೆ ಹೌದು ಅನ್ನಿಸಿತ್ತೆ. ಅಷ್ಟರಲ್ಲಾಗಲೇ ರೋಹಿಣಿ ಪಾರ್ಲರ್‌ಗೆ ಹೋಗಲು ರೆಡಿ ಆಗುತ್ತಾಳೆ. ಅಷ್ಟರಲ್ಲೇ ರೋಹಿಣಿಗೆ ಮತ್ತೊಂದು ಸಂಕಟ ಶುರುವಾಗಿದೆ. ರೋಹಿಣಿ ಬಗ್ಗೆ ಸತ್ಯ ಗೊತ್ತಿದ್ದವ ಆಕೆಯನ್ನು ಹೆದರಿಸಿ, ಬೆದರಿಸಿ ರೋಹಿಣಿ ಕೈಯಲ್ಲಿದ್ದ ಹಣವನ್ನು ದೋಚಲು ಯತ್ನಿಸುತ್ತಿರುತ್ತಾನೆ. ರೋಹಿಣಿ ಆತನ ಮಾತಿಗೆ ಹೆದರಿ ಆತ ಕೇಳಿದಷ್ಟು ಹಣ ಹಾಗೆಯೇ ಆತನಿಗೆ ಬೇಕಾದ ವಸ್ತುಗಳನ್ನು ಫ್ರೀಯಾಗಿಯೇ ಕೊಟ್ಟಿರುತ್ತಾಳೆ. ಎಲ್ಲಾದರೂ ನನ್ನ ಸತ್ಯ ವಿಚಾರಗಳು ಅತ್ತೆಗೆ ಗೊತ್ತಾದರೆ ಖಂಡಿತವಾಗಿಯೂ ನನ್ನನ್ನು ಗಂಟು ಮೂಟೆ ಕಟ್ಟಿ ಮನೆಯಿಂದ ಹೊರ ದಬ್ಬುತ್ತಾರೆ ಎನ್ನುವ ಭಯ ಆಕೆಯನ್ನು ಕಾಡುತ್ತಿರುತ್ತದೆ.

ಬೆದರಿಸಿದ ವ್ಯಕ್ತಿಯನ್ನೇ ಬೆದರಿಸಿದ ರೋಹಿಣಿ

ಇತ್ತ ರೋಹಿಣಿ ಬ್ಯೂಟಿ ಪಾರ್ಲರ್ ಹೋಗುತ್ತೇನೆ ಎಂದು ಹೇಳಿ ನೇರವಾಗಿ ಮನೋಜ್ ಕಂಪನಿಯ ಬಳಿಗೆ ಬರುತ್ತಾಳೆ. ಆ ವೇಳೆ ರೋಹಿಣಿಗೆ ಬೆದರಿಸುವಾತ ಬಂದು ನನಗೆ ಬೇಕಾದದ್ದನ್ನು ಕೊಡಲಿಲ್ಲ ಎಂದಾದರೆ ಎಲ್ಲಾ ವಿಚಾರವನ್ನು ಹೇಳುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಾನೆ. ರೋಹಿಣಿ ಭಯದಿಂದ ಆತ ಕೇಳಿದ ವಸ್ತುಗಳನ್ನೆಲ್ಲ ಕೊಡುತ್ತಾಳೆ. ಟೆಂಪೋದಲ್ಲಿ ಸಾಗಾಟವಾದ ವಸ್ತುಗಳನ್ನು ನೋಡಿದ ಮನೋಜ್ ಇವತ್ತು ಖಂಡಿತವಾಗಿ ನಮಗೆ ಒಳ್ಳೆಯ ಬೋಣಿಯಾಗಿದೆ ಎಂದು ಬಹಳ ಖುಷಿ ಪಡುತ್ತಾನೆ. ರೋಹಿಣಿ ಬಳಿ ಇವತ್ತು ಬಹಳ ಖುಷಿ ಆಗುತ್ತಿದೆ. ಒಳ್ಳೆಯ ಹಣ ಸಂಪಾದನೆ ಆಗಿದೆ ಇವತ್ತು. ನಾನು ಆ ಹಣವನ್ನು ನೋಡಬೇಕು ಎಂದು ಹಣಕ್ಕಾಗಿ ಹುಡುಕಾಡುತ್ತಾನೆ. ಆದರೆ ಹಣ ಇರಲಿಲ್ಲ. ಇದನ್ನು ನೋಡಿದ ಮನೋಜ್ ಹಣ ಕಾಣಿಸುತ್ತಿಲ್ಲ ಎಲ್ಲಿ ರೋಹಿಣಿ? ಎಂದಾಗ ರೋಹಿಣಿ ಕೋಪದಿಂದ ಅವರು ನನ್ನ ಗೆಳೆಯ ಅದಕ್ಕಾಗಿ ಇಎಮ್ಐ ಕನ್ವರ್ಟ್ ಮಾಡಿದ್ದಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಮನೋಜ್ ಮಾತ್ರ ಪೆಚ್ಚು ಮುಖದಿಂದ ಇನ್ನೂ ಮೇಲೆ ಯಾರಿಗೂ ಇಎಮ್ಐ ಕೊಡಬಾರದು ಎಂದು ರೋಹಿಣಿ ಗೆ ವಾರ್ನಿಂಗ್ ಮಾಡುತ್ತಾನೆ.

Aase kannada serial todays episode about Shanti and Ranganath Nagavalli dance

ಅತ್ತೆಯ ಮಾವನ ಗೆಟಪ್ ನೋಡಿ ಮೀನಾಗೆ ಶಾಕ್

ಇತ್ತ ರೋಹಿಣಿ ತನ್ನನ್ನೇ ಆಟ ಆಡಿಸುತ್ತಿರುವವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಲೇಬೇಕು ಎಂದು ಆಲೋಚನೆ ಮಾಡುತ್ತಾನೆ. ಹೀಗಾಗಿ ರೋಹಿಣಿ ರೌಡಿಗಳಿಗೆ ಹಣ ಕೊಟ್ಟು ತನಗೆ ಹಿಂಸೆ ನೀಡುವವನ ಬಗ್ಗೆ ಸುಳಿವು ನೀಡಿ ಈತನಿಗೆ ಬುದ್ಧಿ ಕಲಿಸಿ ಎಂದು ಹೇಳುತ್ತಾಳೆ. ಆ ರೌಡಿಗಳು ರೋಹಿಣಿಗೆ ಹಿಂಸೆ ನೀಡುವಾತನಿಗೆ ಸಖತ್ ಆಗಿಯೇ ಗೂಸಾ ನೀಡುತ್ತಾರೆ. ಹೇಗಾದರೂ ಮಾಡಿ ಗೊಂಡಾಗಳಿಂದ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಓಡಿ ಹೋಗುತ್ತಾನೆ. ಇನ್ನು ಮನೆಗೆ ಎಲ್ಲರೂ ಬಂದ ಬಳಿಕ ಅವರೆಲ್ಲರಿಗೂ ಆಶ್ಚರ್ಯ ಕಾದಿರುತ್ತದೆ. ಶಾಂತಿ ಹಾಗೂ ರಂಗನಾಥ ಭರತನಾಟ್ಯ ನೃತ್ಯ ಮಾಡಲು ರೆಡಿಯಾಗಿರುತ್ತಾರೆ. ಅವರಿಬ್ಬರ ವೇಷ ಭೂಷಣವನ್ನು ನೋಡಿ ಮೀನಾ ಅವಕ್ಕಾದರೆ, ರೋಹಿಣಿಗೆ ಸರ್ಪ್ರೈಸ್ ಎನಿಸುತ್ತದೆ. ಆಪ್ತಮಿತ್ರ ಚಿತ್ರದ ಹಾಡಿಗೆ ರಂಗನಾಥ್ ಹಾಗೂ ಶಾಂತಿ ಇಬ್ಬರು ಸ್ಟೆಪ್ ಹಾಕುತ್ತಾರೆ. ಇಬ್ಬರನ್ನೂ ನೋಡಿ ಮನೆ ಮಂದಿಗೆ ನಗೆಗಡಲಲ್ಲಿ ತೇಲುತ್ತಾರೆ.

More from Filmibeat

English summary
Aase kannada serial march 1st episode about Shanti and Ranganath Nagavalli dance;
Read more about: serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X