40ನೇ ವರ್ಷದಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ ಬಿಗ್ ಬಾಸ್ ಸ್ಫರ್ಧಿ ; 1200 ಕೋಟಿ ಒಡತಿ ಮನೆಗೆ ಬಂದ ಪುಟ್ಟ ರಾಜಕುಮಾರ

''ಬಿಗ್ ಬಾಸ್‌''ಗೆ ಅದಕ್ಕೆ ಆದ ಇತಿಹಾಸ ಇದೆ. ಬೇರೆ ಬೇರೆ ಭಾಷೆಯಲ್ಲಿ ಇಲ್ಲಿಯವರೆಗೆ ಹಲವು ವರ್ಷಗಳ ಕಾಲ ''ಬಿಗ್ ಬಾಸ್'' ಪ್ರಸಾರವನ್ನು ಕಂಡಿದೆ. ಆ ಪೈಕಿ ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ''ಬಿಗ್ ಬಾಸ್'' ಬೇರೆ ಎಲ್ಲಾ ಭಾಷೆಗಳಲ್ಲಿನ ''ಬಿಗ್ ಬಾಸ್‌''ಗಿಂತ ವಯಸ್ಸಿನಲ್ಲಿ ಹಿರಿಯ. ಹಿಂದಿಯಲ್ಲಿ ''ಬಿಗ್ ಬಾಸ್'' 19 ವಸಂತ ಪೂರೈಸಿದ್ದರೆ ಕನ್ನಡದಲ್ಲಿ ''ಬಿಗ್ ಬಾಸ್‌''ಗೆ ಈಗ ಹದಿಮೂರನೇ ಹರೆಯಕ್ಕೆ ಕಾಲಿಡುತ್ತಿದೆ.

ಇನ್ನೂ ತೆಲುಗು ಮತ್ತು ತಮಿಳು ''ಬಿಗ್ ಬಾಸ್'' 09 ವರ್ಷದಾದ್ದರೆ ಮಲಯಾಳಂನ ''ಬಿಗ್‌ ಬಾಸ್'' ಕಳೆದ 07 ವರ್ಷಗಳಿಂದ ಪ್ರಸಾರವಾಗುತ್ತಿದೆ. ಇಂತಹ ಹಿನ್ನೆಲೆ ಹೊಂದಿರುವ ಈ ''ಬಿಗ್ ಬಾಸ್'' ಮನೆಗೆ ಇಲ್ಲಿಯವರೆಗೆ ಹಲವಾರು ಜನ ಆಯಾ ಭಾಷೆಗಳಲ್ಲಿ ಸ್ಫರ್ಧಿಯಾಗಿ ಹೋಗಿದ್ದಾರೆ. ಕೆಲವರು ಗೆದ್ದು ಸೋತಿದ್ದಾರೆ. ಇನ್ನೂ ಕೆಲವರು ಸೋತು ಗೆದ್ದಿದ್ದಾರೆ. ಆ ಪೈಕಿ ಆಶ್ಕಾ ಗೊರಾಡಿಯಾ ಕೂಡ ಒಬ್ಬರು.

Bigg Boss 6 Aashka Goradia and Brent Goble Welcome Baby Boy No 2

ಹೌದು, ಆಶ್ಕಾ ಗೊರಾಡಿಯಾ.. ಒಂದ್ಕಾಲದ ಸೀರಿಯಲ್ ನಾಯಕಿ. ಎರಡು ದಶಕದ ಹಿಂದೆ ಅಂದರೆ 2002ರಲ್ಲಿಯೇ ಬಣ್ಣದ ಕನಸೊತ್ತು ಮುಂಬೈನಲ್ಲಿ ಓಡಾಡುತ್ತಿದ್ದ ಆಶ್ಕಾ, ಒಂದೆರಡು ವರ್ಷ ಪಡಬಾರದ ಕಷ್ಟವನ್ನೂ ಪಟ್ಟರು. ಆ ನಂತರ ''ಕುಸುಮ್'' ಸೀರಿಯಲ್​ನಲ್ಲಿ ಕುಮುದ್ ಪಾತ್ರದ ಮೂಲಕ ಜನ ಮನ ಗೆದ್ದರು.

ಆ ನಂತರ ''ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ''.. ''ಸಿಂಧೂರ್ ತೇರೇ ನಾಮ್ ಕಾ''.. ''ಮೇರೆ ಅಪ್ನೆ''.. ಸೇರಿ ಕೆಲ ಧಾರಾವಾಹಿಯಲ್ಲಿ ಆಕ್ಟ್ ಮಾಡಿದ ಆಶ್ಕಾ 2012ರಲ್ಲಿಯೇ ''ಬಿಗ್ ಬಾಸ್'' ಮನೆಯನ್ನೂ ಪ್ರವೇಶಿಸಿದರು. ''ಬಿಗ್ ಬಾಸ್‌'' ನಿಂದ ಬಂದ ನಂತರ ಬದುಕು ಬದಲಾಗುತ್ತೆ ಎಂದು ಆಶ್ಕಾ ಅಂದುಕೊಂಡಿದ್ದರು. ಆದರೆ, ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು.

ಇದಕ್ಕೆ ಕೈಗನ್ನಡಿ ಎಂಬಂತೆ ಮೇಲೇರಬೇಕಿದ್ದ ಆಶ್ಕಾ ಬದುಕು ನಿಧಾನಗತಿಯಲ್ಲಿ ಸಾಗಲು ಶುರುವಾಯಿತು. ಇನ್ನೇನು.. ಬಂದ ದಾರಿಗೆ ಸುಂಕ ಇಲ್ಲ ಎಂದು ಮರಳಬೇಕೆನ್ನುವಷ್ಟರಲ್ಲಿ ''ನಾಗಿನ್'' ಧಾರಾವಾಹಿ ಇವರಿಗೆ ಎಲ್ಲಿಲ್ಲದ ಜನಪ್ರಿಯತೆ ತಂದು ಕೊಡ್ತು.

''ನಾಗಿನ್'' ನಂತರ ಆಶ್ಕಾ ಕಿರುತೆರೆಯ ಪ್ರಪಂಚದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಬೇಕಿತ್ತು. ಆದರೆ.. ದುರಾದೃಷ್ಟ ಈ ಬಾರಿಯೂ ಕೂಡ ಆಶ್ಕಾ ಅವರನ್ನು ಕಿರುತೆರೆ ಅದ್ಯಾಕೋ ಒಪ್ಪಿಕೊಳ್ಳಲಿಲ್ಲ. ಹೀಗಾಗಿಯೇ ಏನೋ ಬೇಸತ್ತು, ಕಿರುತೆರೆಗೆ ಗುಡ್ ಬೈ ಹೇಳಿದ ಆಶ್ಕಾ ಗೊರಾಡಿಯಾ ಇವತ್ತು 1200 ಕೋಟಿಯ ಒಡತಿ ಅಂದರೆ ನೀವು ನಂಬ್ಲೇಬೇಕು.

Bigg Boss 6 Aashka Goradia and Brent Goble Welcome Baby Boy No 2

ಹೌದು, ಯಾವಾಗ ಕಿರುತೆರೆ ತನ್ನ ಕೈ ಹಿಡಿಯುತ್ತಿಲ್ಲವೆನ್ನುವ ಸತ್ಯ, ಆಶ್ಕಾಗೆ ಮನವರಿಕೆಯಾಯಿತೋ ಅವತ್ತೇ ಆಶ್ಕಾ ತಮ್ಮ ಗಮನವನ್ನು ಬೇರೆ ಕ್ಷೇತ್ರದ ಕಡೆ ಕೊಡಲು ಶುರುಮಾಡಿದ್ದರು. ಭಾರತೀಯರು ಎಂದೂ ನೋಡದ ಕಾಸ್ಮೆಟಿಕ್ ಪ್ರಾಡಕ್ಟ್​​ಗಳನ್ನ ತರಬೇಕು. ಅದೂ ಕೂಡ ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಪ್ರೊಫೆಷನಲ್ ಮೇಕಪ್​ನ ಸೌಲಭ್ಯ ಸಿಗಬೇಕು ಅನ್ನೋ ಕನಸು ಕಂಡರು.

ಇವರ ಈ ಕನಸಿಗೆ ಇವರ ಕಾಲೇಜಿನ ಸ್ನೇಹಿತರಾದ ಪ್ರಿಯಾಂಕ್ ಶಾ ಹಾಗೂ ಅಶುತೋಷ್ ವಲಾನಿ ಕೈ ಜೋಡಿಸಿದರು. ಆ ನಂತರ ಮೂವರು ರೆನೆ ಕಾಸ್ಮೆಟಿಕ್ಸ್ ಸಂಸ್ಥೆಯನ್ನ ಹುಟ್ಟು ಹಾಕಿದರು

ಈಗ ಇವರ ಒಡೆತನದ ''ರೆನೆ ಕಾಸ್ಮೆಟಿಕ್ಸ್'' ಶುರುವಾಗಿ ಈಗ 6 ವರ್ಷಗಳಾಗಿವೆ. ಈ ಆರು ವರ್ಷದಲ್ಲಿ ''ರೆನೆ ಕಾಸ್ಮೆಟಿಕ್ಸ್'' ನ ಮೌಲ್ಯ 1200 ಕೋಟಿ ರೂಪಾಯಿಗೆ ತಲುಪಿದೆ. ಆಫ್ ಲೈನ್ ಹಾಗೂ ಆನ್ ಲೈನ್ ಮಾರುಕಟ್ಟೆಯಲ್ಲಿ ''ರೆನೆ ಕಾಸ್ಮೆಟಿಕ್ಸ್''​ನ 200ಕ್ಕೂ ಹೆಚ್ಚು ಪ್ರಾಡಕ್ಟ್​ಗಳು ಮಾರಾಟವಾಗ್ತಿವೆ.

ಇನ್ನೂ ಗುಜರಾತ್​ನ ಅಹ್ಮದಾಬಾದ್​ನಲ್ಲಿ ಶುರು ಮಾಡಿ ಇವತ್ತು ಅಮೆರಿಕಾ, ಆಸ್ಟ್ರೇಲಿಯಾ, ಯುಎಇ.. ಹೀಗೆ ಅಂತರಾಷ್ಟ್ರೀಯ ಮಾರುಕಟ್ಟೆಗೂ ಲಗ್ಗೆ ಇಟ್ಟಿರುವ ''ರೆನೆ ಕಾಸ್ಮೆಟಿಕ್ಸ್'' ದೇಶ-ವಿದೇಶದ ಪ್ರತಿಷ್ಠಿತ ಬ್ರ್ಯಾಂಡ್‌ಗಳ ವಿರುದ್ಧ ಸ್ಫರ್ಧೆ ಮಾಡುತ್ತಿದೆ. ಪೈಪೋಟಿಯನ್ನೂ ನೀಡುತ್ತಿದೆ. ಉದ್ಯಮಿ ಜೊತೆ ಯೋಗ ಶಿಕ್ಷಕಿ ಕೂಡ ಆಗಿರುವ ಆಶ್ಕಾ ಸದ್ಯ ಗೋವಾದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ಧಾರೆ.


ಇಂಥಾ ಆಶ್ಕಾ ಗೊರಾಡಿಯಾ ಈಗ ಎರಡನೇ ಮಗುಗೆ ಜನ್ಮ ನೀಡಿದ್ಧಾರೆ. ತಮ್ಮ ಮಗುಗೆ ರಿಚರ್ಡ್ ಥಿಯೋಡರ್ ಗೋಬಲ್‌ ಎಂದು ನಾಮಕರಣವನ್ನು ಮಾಡಿದ್ಧಾರೆ. ಈ ಸಿಹಿ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಆಶ್ಕಾ ಮೇ 1, 2026 ರಂದು ನಮ್ಮ ಹೃದಯಕ್ಕೆ ಬಂದಿದ್ದಾನೆ, ಈ ಪುಟ್ಟ ಕಂದ - ರಿಚರ್ಡ್ ಥಿಯೋಡರ್ ಗೋಬಲ್. ದೇವರ ಅದ್ಭುತ ಕೊಡುಗೆ ಎಂದು ಬರೆದುಕೊಂಡಿದ್ಧಾರೆ. ವಿಲಿಯಂ ಅಲೆಕ್ಸಾಂಡರ್‌ಗೆ ಈಗ ತಮ್ಮ ಸಿಕ್ಕಿದ್ಧಾನೆ. ಇಬ್ಬರು ಗಂಡು ಮಕ್ಕಳು. ಇನ್ಮುಂದೆ ಶುರುವಾಗಲಿದೆ ಸಾಹಸದ ಸುಂದರ ಪಯಣ ಎಂದಿದ್ಧಾರೆ. ದಿವ್ಯಾಂಕಾ ತ್ರಿಪಾಠಿ, ರಿಧಿಮಾ ಪಂಡಿತ್, ಮೌನಿ ರಾಯ್ ಹೀಗೆ ಚಿತ್ರರಂಗದ ಹಲವರು ಸದ್ಯ ಆಶ್ಕಾ ಗೊರಾಡಿಯಾಗೆ ಶುಭ ಕೋರುತ್ತಿದ್ಧಾರೆ.

ಅಂದ್ಹಾಗೇ 2016 ರಲ್ಲಿ ಲಾಸ್ ವೇಗಸ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಆಶ್ಕಾ ಗೊರಾಡಿಯಾ ಮತ್ತು ಬ್ರೆಂಟ್ ಮುಖಾಮುಖಿಯಾಗಿದ್ದರು. ಮೊದಲ ನೋಟದಲ್ಲೇ ಪ್ರೇಮಾಂಕುರವೂ ಆಯ್ತು. ಡಿಸೆಂಬರ್ 1-2017ರಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದ ಇಬ್ಬರು ಆ ನಂತರ ಡಿಸೆಂಬರ್ 3-2017ರಂದು ಹಿಂದೂ ಸಂಪ್ರದಾಯದಂತೆ ತಮ್ಮ ಹೊಸ ಬದುಕಿಗೆ ಮುನ್ನುಡಿ ಬರೆದರು.

ಆಶ್ಕಾ ಮೇಲಿನ ಪ್ರೀತಿಗೆ ಅಮೆರಿಕಾದಲ್ಲಿದ್ದ ಕೆಲಸಕ್ಕೆ ಗುಡ್ ಬೈ ಹೇಳಿದ ಬ್ರೆಂಟ್ ಭಾರತಕ್ಕೆ ಬಂದರು. ಅಕ್ಟೋಬರ್ 27, 2023 ಮೊದಲ ಮಗುವನ್ನು ಬರ ಮಾಡಿಕೊಂಡರು. ಈಗ ಎರಡನೇ ಬಾರಿ ಪೋಷಕರಾಗಿದ್ದಾರೆ ಆಶ್ಕಾ ಮತ್ತು ಬ್ರೆಂಟ್.

English summary
Aashka Goradia & Brent Goble share the first glimpse of their newborn son, Richard Theodore Goble. A heartwarming update for the power couple’s fans!
Read more about: biggboss pregnent pregnency
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X