ಬೆಳ್ಳಿತೆರೆಗೂ ಮುಂಚೆ ಕಿರುತೆರೆಗೆ ಲಗ್ಗೆಯಿಟ್ಟ ಅಂಬಿ ಪುತ್ರ
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಇದೇ ತಿಂಗಳು 31ರಂದು ಬಿಡುಗಡೆಯಾಗುತ್ತಿದೆ. ಮೇ 29 ಅಂಬಿ ಹುಟ್ಟುಹಬ್ಬವಿದೆ. ಅದಾದ ಎರಡು ದಿನದ ಬಳಿಕ ಮಗನ ಸಿನಿಮಾ ಬೆಳ್ಳಿತೆರೆಗೆ ಪ್ರವೇಶ ಮಾಡ್ತಿದ್ದಾರೆ.
ಅದಕ್ಕೂ ಮುಂಚೆ ಕಿರುತೆರೆಯಲ್ಲಿ ಅಭಿಷೇಕ್ ಅಂಬರೀಶ್ ಮುಂಚಿದ್ದಾರೆ. ಕಿರುತೆರೆ ಅಂದಾಕ್ಷಣ ಯಾವುದೋ ಧಾರಾವಾಹಿ ಅಂತ ಅಂದುಕೊಳ್ಳಬೇಡಿ. ಸೃಜನ್ ಲೋಕೇಶ್ ಸಾರಥ್ಯದ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಅಮರ್ ತಂಡ ಭಾಗಿಯಾಗಿದೆ.
ಅಮರ್ ಸಿನಿಮಾದ ನಾಯಕ ಅಭಿಷೇಕ್, ನಾಯಕಿ ತಾನ್ಯ ಹೋಪ್, ನಟ ರಾಜ್ ದೀಪಕ್ ಶೆಟ್ಟಿ, ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸಂದೇಶ್, ಛಾಯಾಗ್ರಾಹಕ ಸತ್ಯ ಹೆಗ್ಡೆ ಈ ಶೋನಲ್ಲಿ ಭಾಗವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಜಾ ಟಾಕೀಸ್ ತಂಡದಿಂದ ದಿಗ್ಗಜರು ಸ್ಕ್ರಿಪ್ಟ್ ಮಾಡಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಗೆ ಗೌರವ ಸಲ್ಲಿಸಿದ್ದಾರೆ.
ಸದ್ಯಕ್ಕೆ ಅಮರ್ ಸಿನಿಮಾ ತಂಡದೊಂದಿಗೆ ಕಾರ್ಯಕ್ರಮ ಈ ವಾರ ಪ್ರಸಾರ ಆಗುತ್ತಾ ಅಥವಾ ಮುಂದಿನ ವಾರ ಪ್ರಸಾರವಾಗುತ್ತಾ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಬಟ್, ಈಗಾಗಲೇ ರೆಕಾರ್ಡಿಂಗ್ ಮುಗಿದಿದ್ದು, ಪ್ರೋಮೋ ಕೂಡ ಸದ್ಯದಲ್ಲೇ ಬಿಡುಗಡೆಯಾಗಬಹುದು.


Click it and Unblock the Notifications











