Bigg Boss Telugu 4; ಈ ಬಾರಿ 'ಬಿಗ್ ಬಾಸ್' ಗೆದ್ದು ಬೀಗಿದ ನಟ ಅಭಿಜಿತ್
ತೆಲುಗು ಬಿಗ್ ಬಾಸ್ ಸೀಸನ್ 4ಗೆ ಅದ್ದೂರಿ ತೆರೆ ಬಿದ್ದಿದೆ. ಕೊರೊನಾ ಬಳಿಕ ಪ್ರಾರಂಭವಾದ ತೆಲಗು ಬಿಗ್ ಬಾಸ್ 4 ಡಿಸೆಂಬರ್ ಯಶಸ್ವಿಯಾಗಿ ಪ್ರಸಾರವಾಗಿ ಡಿಸೆಂಬರ್ 20ರಂದು ಮುಕ್ತಾಯವಾಗಿದೆ. ನಟ ನಾಗಾರ್ಜುನ ನಡೆಸಿಕೊಡುತ್ತಿದ್ದ ಬಿಗ್ ಬಾಸ್ -4 ತೆಲುಗಿನ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿತ್ತು.
ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಅಂದಹಾಗೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಪಟ್ಟ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿ, ನಟ ಅಭಿಜೀತ್ ಪಾಲಾಗಿದೆ. ಹೌದು, ಅಭಿಜಿತ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಅಭಿಜಿತ್ ಗೆ ಮೆಗಾಸ್ಟಾರ್ ಚಿರಂಜೀವಿ ಟ್ರೋಫಿ ಪ್ರದಾನ ಮಾಡಿ, ನಗದು ಬಹುಮಾನ ವಿತರಿಸಿದರು. ಅಭಿಜಿತ್ ವಿನ್ನಿಂಗ್ ಟ್ರೋಫಿ ಜೊತೆಗೆ 25 ಲಕ್ಷ ರೂ ನಗದು ಹಾಗೂ ಒಂದು ಬೈಕ್ ಗೆದ್ದಿದ್ದಾರೆ. ಇನ್ನೂ ರನ್ನರ್ ಅಪ್ ಆಗಿ ಅಖಿಲ್ ಹೊರಹೊಮ್ಮಿದ್ದಾರೆ.

ಇನ್ನು ಸ್ಪರ್ಧಿ ದಿವಿ ಅವರು ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ನಟ ಚಿರಂಜೀವಿ ಅವರೇ ಬಹಿರಂಗ ಪಡಿಸಿದ್ದಾರೆ. ಚಿರಂಜೀವಿ ಮುಂದಿನ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುವ ಅವಕಾಶ ದಿವಿಗೆ ಸಿಕ್ಕಿದೆ. ಇನ್ನು ಮೆಹಬೂಬ್ ಗೆ ಚಿರಂಜೀವಿ ಕಡೆಯಿಂದ 10ಲಕ್ಷ ರೂಪಾಯಿ ಸಿಕ್ಕಿದೆ.
ಈ ಬಾರಿಯ ತೆಲುಗು ಬಿಗ್ ಬಾಸ್ ಅನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ನಾಗಾರ್ಜುನ. ಬಿಗ್ ಬಾಸ್ 4ನ ಹೋಸ್ಟ್ ಆಗಿ ನಟಿ ಸಮಂತಾ ಸಹ ಕಾಣಿಸಿಕೊಂಡಿದ್ದರು. ನಾಗಾರ್ಜುನ ಅನುಪಸ್ಥಿತಿಯಲ್ಲಿ ಸಮಂತಾ ನಿರೂಪಕಿಯಾಗಿ ವೇದಿಕೆ ಏರಿದ್ದರು. ಮೊದಲ ಬಾರಿಗೆ ಸಮಂತಾ ಬಿಗ್ ಬಾಸ್ ಹೋಸ್ಟ್ ಮಾಡಿ ಎಲ್ಲರ ಮನ ಗೆದ್ದಿದ್ದರು.


Click it and Unblock the Notifications











