'ವಧು'ವಿಗಾಗಿ ಮತ್ತೆ ಬಣ್ಣ ಹಚ್ಚಿದ ಅಭಿಷೇಕ್ ಶ್ರೀಕಾಂತ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಲಕ್ಷಣ' ಕೂಡಾ ಒಂದು. 'ಲಕ್ಷಣ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ಮಿಂಚಿ, ಸೀರಿಯಲ್ ವೀಕ್ಷಕರ ಮನ ಸೆಳೆದಿದ್ದ ಅಭಿಷೇಕ್ ಶ್ರೀಕಾಂತ್ ಇದೀಗ ಕಿರುತೆರೆಗೆ ಮರಳಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ವಧು'ವಿನಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಅಭಿಷೇಕ್ ಶ್ರೀಕಾಂತ್.
ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯೂ 'ವಧು' ಧಾರಾವಾಹಿಯ ಹೊಸ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅದು ಸಖತ್ ಸದ್ದು ಮಾಡುತ್ತಿದೆ. 'ಲಕ್ಷಣ' ಧಾರಾವಾಹಿಯಲ್ಲಿ ನಾಯಕ ಭೂಪತಿ ತಮ್ಮ ಮೌರ್ಯನಾಗಿ ನಟಿಸಿದ್ದ ಅಭಿಷೇಕ್ ತದ ನಂತರ ಬೇರೆ ಯಾವ ಧಾರಾವಾಹಿಯಲ್ಲಿ ನಟಿಸಿದ್ದಿಲ್ಲ. ಇದೀಗ 'ವಧು' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ ಅಭಿಷೇಕ್ ಶ್ರೀಕಾಂತ್.

'ಲಕ್ಷಣ' ಧಾರಾವಾಹಿಯ ಆರಂಭದಲ್ಲಿ ನೆಗೆಟಿವ್ ರೋಲ್ ಮೂಲಕ ಅಭಿಷೇಕ್ ಶ್ರೀಕಾಂತ್ ಕಾಣಿಸಿಕೊಂಡಿದ್ದರು. ಆದರೆ, ಸಮಯ ಕಳೆದಂತೆ ಮೌರ್ಯ ಪಾತ್ರ ಪಾಸಿಟಿವ್ ಆಗಿ ಬದಲಾಗಿದ್ದು ಮಾತ್ರವಲ್ಲದೇ ಒಂದೇ ಧಾರಾವಾಹಿಯಲ್ಲಿ ಎರಡು ರೀತಿಯ ಪಾತ್ರಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು ಅಭಿಷೇಕ್ ಶ್ರೀಕಾಂತ್. ಒಟ್ಟಿನಲ್ಲಿ ಒಂದೇ ಧಾರಾವಾಹಿಯಲ್ಲಿ ಅಭಿಷೇಕ್ ಅವರ ನೆಗೆಟಿವ್ ಮತ್ತು ಪಾಸಿಟಿವ್ ಮುಖಗಳನ್ನು ನೋಡುವ ಅವಕಾಶ ಕಿರುತೆರೆ ವೀಕ್ಷಕರಿಗೆ ತಿಳಿದಿತ್ತು.
ಅಂದ ಹಾಗೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಜಮಾನಿ' ಧಾರಾವಾಹಿಯ ಮೂಲಕ ಅಭಿಷೇಕ್ ಶ್ರೀಕಾಂತ್ ಕಿರುತೆರೆಗೆ ಕಾಲಿಟ್ಟಿದ್ದರು. ಇಲ್ಲಿಯ ತನಕ ಅಭಿಷೇಕ್ ಅವರು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಅಭಿನಯಿಸಿದ್ದರೂ, ಸಹಜ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಅಭಿಷೇಕ್ ಶ್ರೀಕಾಂತ್ ಅವರು ಯಾವಾಗ ನಟನಾಗಬೇಕು ಎಂದು ಬಯಸಿದ್ದರೂ, ಆಗ ತರಬೇತಿ ಪಡೆಯುವ ನಿರ್ಧಾರವನ್ನು ಕೂಡಾ ಮಾಡಿದರು. ಉಷಾ ಭಂಡಾರಿ ಅವರ ಬಳಿ ನಟನೆಯ ಕೋರ್ಸನ್ನು ಪಡೆದಿರುವ ಇವರು ನಟನೆಯ ಆಗು ಹೋಗುಗಳನ್ನು ಹಂತಹಂತವಾಗಿ ತಿಳಿದುಕೊಂಡರು.
ವಸಿಷ್ಠ ಎನ್ ಸಿಂಹ ನಟನೆಯ 'ತಲ್ವಾರ್‌ಪೇಟೆ' ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಇವರು ಮುಂದೆ 'ಕೆಟಿಎಂ' ಹಾಗೂ 'ಕೋಟಿ' ಎನ್ನುವ ಕನ್ನಡ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.

ನಟನೆಯ ಹೊರತಾಗಿ ಇವರು ಫಿಟ್ನೆಸ್ ಫ್ರೀಕ್ ಹೌದು. ಫಿಟ್ನೆಸ್‌ಗೆ ಬಹಳಷ್ಟು ಪ್ರಾಮುಖ್ಯತೆ ನೀಡುವ ನಟ ಅಭಿಷೇಕ್ ಈ ಹಿಂದೆ ಸಿಕ್ಸ್ ಪ್ಯಾಕ್ ಮಾಡಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದರು. ಇನ್ನು ಡ್ಯಾನ್ಸ್ ನತ್ತಲೂ ವಿಶೇಷ ಒಲವು ಹೊಂದಿರುವ ಇವರು ಡ್ಯಾನ್ಸರ್ ಆಗಿಯೂ ಗುರುತಿಸಿಕೊಂಡವರು. ಸೋಶಿಯಲ್ ಮೀಡಿಯಾದಲ್ಲಿಯೂ ಕೊಂಚ ಮಟ್ಟಿಗೆ ಆ್ಯಕ್ಟೀವ್ ಆಗಿರುವ ಇವರು ಸಮಯ ಸಿಕ್ಕಾಗಲೆಲ್ಲಾ ಪೋಸ್ಟ್ ಹಾಕುತ್ತಿರುತ್ತಾರೆ.


Click it and Unblock the Notifications











