For Quick Alerts
  ALLOW NOTIFICATIONS  
  For Daily Alerts

  ನಟ ಅಕ್ಷತ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್; ಆ ನಟಿ ಮತ್ತು ಸಹೋದರಿಯ ವಿರುದ್ಧ FIR ದಾಖಲು

  By ಫಿಲ್ಮ್ ಡೆಸ್ಕ್
  |

  ಸೆಪ್ಟಂಬರ್ 27, ಮುಂಬೈನ ಅಂಧೇರಿ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದ ಬಿಹಾರ ಮೂಲದ ನಟ ಅಕ್ಷತ್ ಉತ್ಕರ್ಷ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಸಂಬಂಧ ಈಗ ಒಬ್ಬಳು ನಟಿ ಮತ್ತು ಆಕೆಯ ಸಹೋದರಿಯ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿದೆ.

  ಈ ಸಂಬಂಧ ಅಕ್ಷತ್ ತಂದೆ ವಿಜಯಕಾಂತ್ ಚೌಧರಿ ಬಿಹಾರದ ಮುಜಾಫರ್ ಫುರದ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ. ಅಕ್ಷತ್ ಸ್ನೇಹಿತೆ ಮತ್ತು ನಟಿ ಮಗನನ್ನು ಮದುವೆಯಾಗಲು ಬಯಸಿದ್ದಳು ಆದರೆ ಅಕ್ಷತ್ ನಿರಾಕರಿಸಿದ್ದಾನೆ. ಹಾಗಾಗಿ ಆಕೆ ಸಹೋದರಿಯರ ಜೊತೆ ಸೇರಿ ಮಗನನ್ನು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ಪೊಲೀಸರು, ಸೆಕ್ಷನ್ 302 ಮತ್ತು 34ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಂಬೋಲಿ ಪೊಲೀಸರು ಹೇಳಿದ್ದಾರೆ.

  ಅಂಬೋಲಿ ಪೊಲೀಸರು, ತನ್ನ ಕೋಣೆಯ ಸೀಲಿಂಗ್ ಫ್ಯಾನ್ ನಲ್ಲಿ ಅಕ್ಷತ್ ಮೃತದೇಹ ನೇಣುಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹೇಳಿಕೆ ನೀಡಿದ್ದರು. ಆಕಸ್ಮಿಕ ಸಾವಿನ ಪ್ರಕರಣ ಎಂದು ಪೊಲೀಸರು ದಾಖಲಿಸಿಕೊಂಡಿದ್ದರು. ನಟ ಅಕ್ಷತ್ ಕೆಲಸ ವಿಲ್ಲದೆ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿ ಕೊಲೆ ಆರೋಪವನ್ನು ಮುಂಬೈ ಪೊಲೀಸರು ತಳ್ಳಿಹಾಕಿದ್ದರು.

  ಅಕ್ಷತ್ ಅಪಾರ್ಟ್ಮೆಂಟ್ ನಲ್ಲಿ ಗೆಳತಿ ಜೊತೆ ವಾಸಿಸುತ್ತಿದ್ದರು. ಅವರ ಹೇಳಿಕೆ ಪ್ರಕಾರ ನಟ ಅಕ್ಷತ್ ಊಟ ಮಾಡುವ ಮೊದಲು ಎಂದಿನಂತೆ ಇದ್ದರು ನಂತರ ನಿದ್ರೆಗೆ ಜಾರಿದ್ದರು ಎಂದು ಹೇಳಿದ್ದಾರೆ. ಬಳಿಕ ರಾತ್ರಿ 11.30 ಗಂಟೆ ಸುಮಾರಿಗೆ ಅವಳು ವಾಶ್ ರೂ ಹೋಗಲು ಎದ್ದಾಗ ಅಕ್ಷತ್ ತನ್ನ ಕೋಣೆಯಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ನಂತರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಕೂಪರ್ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  ಪ್ರಾಥಮಿಕ ವಿಚಾರಣೆ ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ನೇಣು ಬಿಗಿದ ಕಾರಣ ಸಾವನ್ನಪ್ಪಿರುವುದ್ದು, ಕೊಲೆಯಲ್ಲ ಎನ್ನುವ ಮಾಹಿತಿ ಬಂದಿದೆ ಎಂದು ಅಂಬೋಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

  English summary
  Actor Akshat Utkarsh death case: Mumbai police lodge FIR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X