For Quick Alerts
  ALLOW NOTIFICATIONS  
  For Daily Alerts

  ಆಯುರ್ವೇಧ ಚಿಕಿತ್ಸೆಗಾಗಿ ಗೋಮೂತ್ರ ಕುಡಿದಿದ್ದ ಅಕ್ಷಯ್ ಕುಮಾರ್!

  |

  ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರಾಗಿರುವ ನಟ ಅಕ್ಷಯ್ ಕುಮಾರ್, ಆನೆ ಲದ್ದಿಯ ಚಹ ಕುಡಿದಿದ್ದಾರೆಂದರೆ ನೀವು ನಂಬಲೇ ಬೇಕು.

  ಹೌದು, ಬಾಲಿವುಡ್‌ನ ಖ್ಯಾತ ನಟ, ಭಾರತೀಯ ನಟರ ಪೈಕಿ ಶ್ರೀಮಂತ ನಟ ಅಕ್ಷಯ್ ಕುಮಾರ್, ಆನೆ ಲದ್ದಿಯ ಚಹ ಕುಡಿದಿದ್ದಾರೆ. ಅಷ್ಟೇ ಅಲ್ಲ, ತಾವು ಗೋಮೂತ್ರವನ್ನು ಕುಡಿದಿದ್ದಾಗಿ ಹೇಳಿದ್ದಾರೆ ಅವರು.

  ಸಾಹಸ ದೃಶ್ಯಗಳಿಗೆ, ಸಾಹಕ ಕಲೆಗಳಿಂದ ಪ್ರಸಿದ್ಧರಾಗಿರುವ ನಟ ಅಕ್ಷಯ್ ಕುಮಾರ್, ಸಾಹಸ ಯಾತ್ರಿ 'ಮ್ಯಾನ್ ವರ್ಸಸ್ ವೈಲ್ಡ್' ಖ್ಯಾತಿಯ ಬೇರ್ ಗ್ರಿಲ್ಸ್ ಜೊತೆಗೆ ಬಂಡಿಪುರ ಕಾಡಿನಲ್ಲಿ ಸಾಹಸ ಯಾತ್ರೆ ಮಾಡಿದ್ದು, ಅದರ ಎಪಿಸೋಡ್ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ. ಇದೇ ಸಾಹಸ ಯಾತ್ರೆ ಸಂದರ್ಭ ಅಕ್ಷಯ್ ಕುಮಾರ್, ಆನೆ ಲದ್ದಿಯ ಚಹ ಕುಡಿದಿದ್ದಾರೆ.

  ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂರನೇ ಭಾರತೀಯ ಅಕ್ಷಯ್

  ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂರನೇ ಭಾರತೀಯ ಅಕ್ಷಯ್

  ಬೇರ್ ಗ್ರಿಲ್ಸ್ ನ 'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸೂಪರ್ ಸ್ಟಾರ್ ರಜನೀಕಾಂತ್ ನಂತರ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಮೂರನೇ ಭಾರತೀಯ ಅಕ್ಷಯ್ ಕುಮಾರ್.

  ಆನೆ ಲದ್ದಿಯಿಂದ ಮಾಡಿದ ಟೀ ಕುಡಿದ ಅಕ್ಷಯ್

  ಆನೆ ಲದ್ದಿಯಿಂದ ಮಾಡಿದ ಟೀ ಕುಡಿದ ಅಕ್ಷಯ್

  ಅಕ್ಷಯ್ ಕುಮಾರ್ ಭಾಗವಹಿಸಿರುವ ಈ ಎಪಿಸೋಡ್ ಅನ್ನು ರಾಜ್ಯದ ಬಂಡಿಪುರ ಅರಣ್ಯದಲ್ಲಿ ಚಿತ್ರೀಕರಿಸಿದ್ದು, ಸಾಹಸ ಯಾತ್ರೆ ಸಮಯ, ಅಕ್ಷಯ್ ಕುಮಾರ್, ಆನೆ ಲದ್ದಿಯಿಂದ ಮಾಡಿದ ಚಹಾ ಸೇವನೆ ಮಾಡಿದ್ದಾರೆ. ಇದು ಎಪಿಸೋಡ್‌ನ ಟ್ರೇಲರ್‌ನಲ್ಲಿ ಪ್ರಸಾರವಾಗಿದೆ. ಕಾರ್ಯಕ್ರಮ ಡಿಸ್ಕವರಿ ಚಾನೆಲ್‌ನಲ್ಲಿ ಇನ್ನಷ್ಟೆ ಪ್ರಸಾರವಾಗಬೇಕಿದೆ.

  ಗೋಮೂತ್ರ ಕುಡಿದಿರುವುದಾಗಿ ಹೇಳಿದ ಅಕ್ಷಯ್

  ಗೋಮೂತ್ರ ಕುಡಿದಿರುವುದಾಗಿ ಹೇಳಿದ ಅಕ್ಷಯ್

  ಅಕ್ಷಯ್ ಕುಮಾರ್ ಮತ್ತು ನಟಿ ಹುಮಾ ಖುರೇಷಿ ಇನ್‌ಸ್ಟಾಗ್ರಾಂ ಲೈವ್‌ ನಡೆಸಿದ್ದು ಈ ಲೈವ್‌ನಲ್ಲಿ ಬಿಯರ್ ಗ್ರಿಲ್ಸ್‌ ಸಹ ಭಾಗವಹಿಸಿದ್ದರು. ಈ ಸಂದರ್ಭ ತಾವು ಆಯುರ್ವೇಧ ಚಿಕಿತ್ಸೆಯೊಂದರ ಭಾಗವಾಗಿ ಗೋಮೂತ್ರವನ್ನು ಕುಡಿದಿದ್ದಾಗಿ ಸಹ ಹೇಳಿದ್ದಾರೆ ನಟ ಅಕ್ಷಯ್ ಕುಮಾರ್.

  ಮತ್ತೊಮ್ಮೆ ಅಕ್ಷಯ್ ಕುಮಾರ್ ಜೊತೆ ಕೆಲಸ ಮಾಡುತ್ತೇನೆ: ಗ್ರಿಲ್ಸ್

  ಮತ್ತೊಮ್ಮೆ ಅಕ್ಷಯ್ ಕುಮಾರ್ ಜೊತೆ ಕೆಲಸ ಮಾಡುತ್ತೇನೆ: ಗ್ರಿಲ್ಸ್

  ಬಿಯರ್ ಗ್ರಿಲ್ಸ್ ಜೊತೆಗೆ ಸಾಹಸ ಯಾತ್ರೆಯಲ್ಲಿ ಅಕ್ಷಯ್ ಕುಮಾರ್ ಹಲವಾರು ಸಾಹಸಗಳನ್ನು ಮಾಡಿದ್ದಾರೆ. ಜೊತೆಗೆ ತಾವು ಸೈನ್ಯದ ಬಗ್ಗೆ ಏಕೆ ಅಪಾರ ಗೌರವ ಹೊಂದಿದ್ದೇನೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬಿಯರ್ ಗ್ರಿಲ್ಸ್ ಸಹ ಮತ್ತೊಮ್ಮೆ ಅಕ್ಷಯ್ ಕುಮಾರ್ ಜೊತೆಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.

  English summary
  Actor Akshay Kumar participated in adventurist Bear Grylls 'Man vs Wild' program. He drunk tea made from elephant dung.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X