»   » ರಮೇಶ್ ವೀಕೆಂಡ್ ಕಾರ್ಯಕ್ರಮಕ್ಕೆ ಅಂಬಿ ಬರಲ್ಲ ಅಂದಿದ್ರು, ಯಾಕೆ?

ರಮೇಶ್ ವೀಕೆಂಡ್ ಕಾರ್ಯಕ್ರಮಕ್ಕೆ ಅಂಬಿ ಬರಲ್ಲ ಅಂದಿದ್ರು, ಯಾಕೆ?

Posted By:
Subscribe to Filmibeat Kannada

ನಟನಾಗಿ ಜೊತೆ ಜೊತೆಗೆ ಪಾಲಿಟಿಕ್ಸ್ ನಲ್ಲಿ ತಮ್ಮ ಜರ್ನಿ ಶುರು ಮಾಡಿರುವ ಹಿರಿಯ ನಟ ಅಂಬರೀಶ್ ಅವರು ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

ಅಂದಹಾಗೆ ಅಂಬರೀಶ್ ಅವರನ್ನು ವೀಕೆಂಡ್ ಕಾರ್ಯಕ್ರಮದ ಮೊದಲ ಕಂತಿಗೆ ಆಹ್ವಾನಿಸಲು ಜೀ ಕನ್ನಡ ವಾಹಿನಿ ನಿರ್ಧರಿಸಿತ್ತು. ಆದರೆ ಅಂಬಿ ಅವರಿಗೆ ಹಲವಾರು ಕಾರ್ಯಕ್ರಮಗಳು ಇದ್ದಿದ್ದರಿಂದ ಪೋಸ್ಟ್ ಪೋನ್ ಆಗಿತ್ತು.[ರಾಕಿಂಗ್ ಸ್ಟಾರ್ ಮತ್ತು ರೆಬೆಲ್ ಸ್ಟಾರ್ ಮತ್ತೆ ಒಂದಾದ್ರೆ?]

Actor Ambareesh in Weekend with Ramesh

ಇದೀಗ ಅಂಬರೀಶ್ ಅವರ ನಿಜ ಜೀವನದ ಕಥೆಗಳು ಈ ವಾರ ಎಲ್ಲಾ ವೀಕ್ಷಕರ ಮತ್ತು ಅಭಿಮಾನಿಗಳ ಎದುರು ಬಹಿರಂಗಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಅಂಬರೀಶಣ್ಣ ಅವರ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್, ನಟ ಅವಿನಾಶ್, ನಟಿ ತಾರಾ, ನಟ ಜೈಜಗದೀಶ್ ಮುಂತಾದವರು ಆಗಮಿಸಿ ಅಂಬಿ ಅವರ ಸಿಹಿ ನೆನಪುಗಳನ್ನು ವೀಕೆಂಡ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.[ರೆಬಲ್ ಸ್ಟಾರ್ ಅಂಬರೀಶ್ ಗೆ ಶತ್ರುಘ್ನ ಸಿನ್ಹಾ ಗುರುಗಳು!]

ವೇದಿಕೆಗೆ ಬಂದ ತಕ್ಷಣ ಅಂಬರೀಶಣ್ಣ ಅವರು ಏನಂದ್ರು ಗೊತ್ತಾ? 'ಮೊದಲು ನನ್ನನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಬರಬೇಕು ಅಂದ್ರು, ನಾನು ಆಗಲ್ಲ ಅಂದೆ, ಯಾಕಂದ್ರೆ, ಈ 'ವೀಕೆಂಡ್ ವಿತ್ ರಮೇಶ್' ತುಂಬಾ ಫೇಮಸ್‌ ಆಗಿ ಜನ ಎಲ್ಲಾ ಇದನ್ನು ನೋಡಿದವರು ಸಿನಿಮಾ ಮರೆತು ಬಿಡ್ತಾರೆ ಅಂತ ನಾನು ಮಾಡಲ್ಲ ಅಂದೆ'. ಅಂತ ಅಂಬರೀಶಣ್ಣ ನುಡಿದಿದ್ದಾರೆ.[ಅಂಬರೀಶ್ ಮನೆಯ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ನೋಡಿದ್ದೀರಾ?]

Actor Ambareesh in Weekend with Ramesh

ಈಗಾಗಲೇ ಅಂಬರೀಶಣ್ಣ ಅವರ ಕಾರ್ಯಕ್ರಮದ ಎಪಿಸೋಡ್ ನ ಶೂಟಿಂಗ್ ಮುಗಿದಿದ್ದು ಈ ವಾರ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇದೇ ಶನಿವಾರ ಮತ್ತು ಭಾನುವಾರ ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟ ಅಂಬರೀಶಣ್ಣನ ನೆನಪಿನ ಮೂಟೆಗಳು ಒಂದೊಂದಾಗಿ ಬಿಚ್ಚಲಿದೆ ಅಲ್ಲಿಯವರೆಗೆ ಈ ಪ್ರೋಮೋ ನೋಡಿ...

Rebel Star - Dr. M.H.Ambareesh - WWR2

This weekend is with Rebel Star - Dr. M.H.Ambareesh!#WWR2 Sat-Sun at 9pm #StayTuned for a mega episode with the rebel star #ZeeKannada To watch the full episodes of all our shows logon to www.zeekannadatv.com

Posted by Zee Kannada on Tuesday, January 19, 2016
English summary
Actor turned politician who normally does not attend chat shows and reality programmes recently attended the 'Weekend with Ramesh - 2' and shared his experiences.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada