For Quick Alerts
  ALLOW NOTIFICATIONS  
  For Daily Alerts

  ನಿರೂಪಣೆಯಿಂದ ಮತ್ತೆ ಧಾರಾವಾಹಿ ಕಡೆ ಮುಖ ಮಾಡಿದ ಮಾಸ್ಟರ್ ಆನಂದ್

  |

  ಸ್ಯಾಂಡಲ್ ವುಡ್ ನಟ, ನಿರ್ದೇಶಕ ಮತ್ತು ನಿರೂಪಕ ಮಾಸ್ಟರ್ ಆನಂದ್ ಈಗ ಮತ್ತೆ ಧಾರಾವಾಹಿ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ.

  ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ನಟನೆ ನಿರ್ದೇಶನದ ಜೊತೆಗೆ ರಿಯಾಲಿಟಿ ಶೋ ಹೋಸ್ಟ್ ಆಗಿ ಜನಪ್ರಿಯತೆ ಪಡೆದಿರುವ ಮಾಸ್ಟರ್ ಆನಂದ್ ಇದೀಗ ಮತ್ತೆ ಧಾರಾವಾಹಿ ನಿರ್ದೇಶನ ಮಾಡಲು ತಯಾರಿ ನಡೆಸಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಿರುತೆರೆ ನಟಿ ರಶ್ಮಿದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಿರುತೆರೆ ನಟಿ ರಶ್ಮಿ

  ಮೂರು ವರ್ಷಗಳ ಹಿಂದೆ ನಿಗೂಢ ರಾತ್ರಿ ಎಂಬ ಹಾರರ್ ಥ್ರಿಲ್ಲರ್ ಧಾರಾವಾಹಿ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಇದೀಗ ಮತ್ತೆ ಹೊಸ ಧಾರಾವಾಹಿ ಪ್ರಾರಂಭ ಮಾಡುತ್ತಿದ್ದು, ತನ್ನ ಧಾರಾವಾಹಿಗೆ ಆಡಿಷನ್ ಕರೆದಿದ್ದಾರೆ. ಈ ಬಗ್ಗೆ ಮಾಸ್ಟರ್ ಆನಂದ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಆಡಿಷನ್ ಜೊತೆಗೆ ಎಚ್ಚರಿಕೆ ನೀಡಿದ ಆನಂದ್

  ಆಡಿಷನ್ ಜೊತೆಗೆ ಎಚ್ಚರಿಕೆ ನೀಡಿದ ಆನಂದ್

  ಮಾಸ್ಟರ್ ಆನಂದ್ ಆಡಿಷನ್ ಕರೆಯುವ ಜೊತೆಗೆ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ. ಆಡಿಷನ್ ನಲ್ಲಿ ತುಂಬಾ ಮೋಸವಾಗುತ್ತೆ, ಮಾಸ್ಟರ್ ಆನಂದ್ ಧಾರಾವಾಹಿಗೆ ಕಲಾವಿದರು ಬೇಕು ಎಂದು ಹೇಳಿ ಹಣ ಕೇಳಿ ಮೋಸ ಮಾಡುತ್ತಾರೆ. ಹಾಗಾಗಿ ನೇರವಾಗಿ ನಾನೇ ವಿಡಿಯೋ ಮೂಲಕ ಹೇಳುತ್ತಿರುವೆ, ಇದನ್ನ ಮಾತ್ರ ಪರಿಗಣಿಸಿ ಎಂದು ಮಾಸ್ಟರ್ ಆನಂದ್ ಬಹಿರಂಗ ಪಡಿಸಿದ್ದಾರೆ.

  ಕಲಾವಿದರು ಬೇಕಾಗಿದ್ದಾರೆ

  ಕಲಾವಿದರು ಬೇಕಾಗಿದ್ದಾರೆ

  ಯಾರೆಲ್ಲ ಕಲಾವಿದರು ಬೇಕಾಗಿದ್ದಾರೆ ಎಂದು ಆನಂದ್ ವಿವರವಾಗಿ ಹೇಳಿದ್ದಾರೆ. 24ರಿಂದ 30 ವರ್ಷ ವಯಸ್ಸಿನ ನಾಯಕ ನಟ, 18ರಿಂದ 30ವರ್ಷದ ನಟಿ, 16ರಿಂದ 60 ವರ್ಷದ ಪೋಷಕ ನಟಿ ಪಾತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ' ಎಂದು ಹೇಳಿದ್ದಾರೆ.

  ಕೃಷ್ಣನನ್ನು ಅರಸಿ ದೆಹಲಿಗೆ ಬಂದ ಬೆಂಗಳೂರು ಗೋಪಿಕೆ ಪೊಲೀಸರ ವಶದಲ್ಲಿ!ಕೃಷ್ಣನನ್ನು ಅರಸಿ ದೆಹಲಿಗೆ ಬಂದ ಬೆಂಗಳೂರು ಗೋಪಿಕೆ ಪೊಲೀಸರ ವಶದಲ್ಲಿ!

  ಆಡಿಷನ್ ಪ್ರಕ್ರಿಯೆ

  ಆಡಿಷನ್ ಪ್ರಕ್ರಿಯೆ

  ಆಸಕ್ತಿ ಇರುವ ಕಲಾವಿದರು ತಮ್ಮ ಫೋಟೋಗಳನ್ನು ಜಿಮೇಲ್ ಮಾಡಬೇಕು ಎಂದು ವಿಳಾಸವನ್ನು ನೀಡಿದ್ದಾರೆ. ಫೋಟೋ ತಲುಪಿದ ಬಳಿಕ ಕರೆ ಮಾಡಿ ತಿಳಿಸುತ್ತೇವೆ. ನಂತರ ಲೈವ್ ಆಡಿಷನ್ ನಡೆಯುತ್ತೆ ಎಂದು ಹೇಳಿದ್ದಾರೆ. ಈ ಬಗ್ಗೆ ಫೋನ್ ಮಾಡಿ ವಿವರ ನೀಡುವುದಾಗಿ ಆನಂದ್ ಬಹಿರಂಗ ಪಡಿಸಿದ್ದಾರೆ. ಆದರೆ ಪ್ರಕ್ರಿಯೆಯಲ್ಲಿ ಯಾವುದೇ ಹಣ ನೀಡಬೇಕಾಗಿಲ್ಲ ಎಂದು ಮಾಸ್ಟರ್ ಆನಂದ್ ಒತ್ತಿ ಹೇಳಿದ್ದಾರೆ ಹೇಳಿದ್ದಾರೆ.

  ನೆಟ್ಟಿಗರ ಪ್ರತಿಕ್ರಿಯೆ

  ನೆಟ್ಟಿಗರ ಪ್ರತಿಕ್ರಿಯೆ

  ಮಾಸ್ಟರ್ ಆನಂದ್ ವಿಡಿಯೋಗೆ ಸಾಕಷ್ಟು ಜನ ಕಾಮೆಂಟ್ಸ್ ಮಾಡಿದ್ದು, ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಸದ್ಯ ಆಡಿಷನ್ ಪ್ರಕ್ರಿಯೆ ಪ್ರಾರಂಭ ಮಾಡಿರುವ ಆನಂದ್ ಮುಂದಿನ ವರ್ಷದಿಂದ ಧಾರಾವಾಹಿ ಶುರು ಮಾಡಲಿದ್ದಾರೆ. ಆದರೆ ಧಾರಾವಾಹಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆನಂದ್ ಬಿಟ್ಟುಕೊಟ್ಟಿಲ್ಲ.

  ಮಾಸ್ಟರ್ ಆನಂದ್ ನಿರ್ದೇಶನದ ಧಾರಾವಾಹಿಗಳು

  ಮಾಸ್ಟರ್ ಆನಂದ್ ನಿರ್ದೇಶನದ ಧಾರಾವಾಹಿಗಳು

  ಮಾಸ್ಟರ್ ಆನಂದ್ ಈ ಹಿಂದೆ 'ಎಸ್‌ಎಸ್‌ಎಲ್‌ಸಿ ನನ್ ಮಕ್ಳು', 'ಪಡುವಾರಳ್ಳಿ ಪಡ್ಡೆಗಳು', ರೋಬೋ ಫ್ಯಾಮಿಲಿ' ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ. 'ಡ್ರಾಮ ಜ್ಯೂನಿಯರ್ಸ್' ಮತ್ತು 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಹೋಸ್ಟ್ ಮಾಡುವ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ.

  English summary
  Actor And Director Master Anand Audition call for his new serial.
  Monday, December 7, 2020, 9:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X