'ಜೊತೆ ಜೊತೆಯಲಿ' ಸೀರಿಯಲ್‌ಯಿಂದ ಹೊರಗೆ: ನಿಜವಲ್ಲ ಎಂದ ಅನಿರುದ್ಧ
ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾದ ಧಾರಾವಾಹಿಗಳಲ್ಲಿ 'ಜೊತೆ ಜೊತೆಯಲಿ' ಕೂಡ ಒಂದು. ಜೀ ಕನ್ನಡದಲ್ಲಿ ಹಲವು ದಿನಗಳಿಂದ 'ಜೊತೆ ಜೊತೆಯಲಿ' ಧಾರಾವಾಹಿ ಪ್ರಸಾರವಾಗುತ್ತಿದೆ. ಕಿರುತೆರೆ ವೀಕ್ಷಕರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಈ ಸೀರಿಯಲ್‌ನಲ್ಲಿ ಇವರ ಪಾತ್ರಗಳ ಮೂಲಕವೇ ಹೆಚ್ಚು ಜನಪ್ರಿಯಗೊಂಡ ಕತೆ ಇದು.
ಆದ್ರೀಗ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಎಲ್ಲವೂ ಸರಿಯಿಲ್ಲ. ನಟ ಅನಿರುದ್ಧ್ ವಿರುದ್ಧ 'ಜೊತೆ ಜೊತೆಯಲಿ' ತಂಡ ತಿರುಗಿಬಿದ್ದಿದೆ ಎನ್ನಲಾಗಿದೆ. ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಮತ್ತು ಸೀರಿಯಲ್ ತಂಡದ ನಡುವೆ ವೈಮನಸ್ಸು ಯಾಕೆ ಉಂಟಾಗಿದೆ ಎನ್ನಲಾಗಿದೆ.
ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೆಲ್ಲವನ್ನೂ ತಂಡ ಅಧಿಕೃತವಾಗಿ ಹೇಳಿಲ್ಲವಾದರೂ, ಸತ್ಯ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಇನ್ನು ಈ ಬಗ್ಗೆ ನಟ ಅನಿರುದ್ಧ ಫಿಲ್ಮೀಬೀಟ್ ಜೊತೆ ಮಾತನಾಡಿದ್ದಾರೆ. ನಡೆದದ್ದು ಏನು? ಈ ರೀತಿ ಸುದ್ದಿ ಹರಿದಾಡಲು ಕಾರಣವೇನು ಎನ್ನುವ ಬಗ್ಗೆ ಹೇಳಿದ್ದಾರೆ. ಮುಂದೆ ಓದಿ...
Recommended Video


ನಟ ಅನಿರುದ್ಧ ಪ್ರತಿಕ್ರಿಯೆ!
ಹೆಸರಾಂತ ಧಾರಾವಾಹಿ 'ಜೊತೆ ಜೊತೆಯಲಿ' ಇಂದ ನಟ ಅನಿರುದ್ಧ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಮನಸ್ತಾಪದ ವಿಚಾರವಾಗಿ ಈ ಧಾರಾವಾಹಿಯ ಅನಿರುದ್ಧರನ್ನು ಕೈಬಿಡಲಾಗಿದೆ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದಾರೆ ನಟ ಅನಿರುದ್ಧ. "ನಾನು ಕೂಡ ಈ ವಿಚಾರವಾಗಿ ಹಲವು ಸುದ್ದಿಗಳು ಹರಿದಾಡುತ್ತಿರುವುದನ್ನು ಗಮನಿಸಿದ್ದೇನೆ. ಮುಂಜಾನೆಯಿಂದ ಇದಕ್ಕೆ ಸಂಬಂಧಪಟ್ಟ ಹಲವು ಸುದ್ದಿಗಳನ್ನು ಕೂಡ ಓದುತ್ತಾ ಇದ್ದೇನೆ. ಇದು ಕೇವಲ ಹರಿದಾಡುತ್ತಿರುವ ಸುದ್ದಿಗಳೇ ಹೊರತು ಧಾರಾವಾಹಿ ತಂಡ ಅಥವಾ ವಾಹಿನಿ ನನ್ನ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಹಾಗಾಗಿ ನಾನು ಅವರನ್ನು ಭೇಟಿಯಾಗಲು ಈಗ ಹೋಗುತ್ತಿದ್ದೇನೆ, ಮುಂದೆ ಏನಾಗುತ್ತದೋ ನೋಡಬೇಕು" ಎಂದಿದ್ದಾರೆ ನಟ ಅನಿರುದ್ಧ.

ಮನಸ್ತಾಪ ಇದೇ ಮೊದಲಲ್ಲ: ಅನಿರುದ್ಧ!
ಮಾತು ಮುಂದುವರೆಸಿ, ಸೀರಿಯಲ್ ತಂಡದ ಜೊತೆಗಿನ ಮನಸ್ತಾಪದ ಮುನಿಸಿನ ಬಗ್ಗೆ ಮಾತನಾಡಿದ್ದಾರೆ. ತಂಡದ ಜೊತೆಗೆ ನಿಮಗೆ ಏನಾದರೂ ಜಗಳವಾಯಿತಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅನಿರುದ್ಧ, "ಮನಸ್ತಾಪ, ಜಗಳ ಮನೆಯಲ್ಲೂ ಕೂಡ ಆಗುತ್ತದೆ ಅಲ್ಲವೇ. ಮನೆಯಲ್ಲಿ ಜಗಳ ಮನಸ್ತಾಪ ಬಂದಾಗಲೆಲ್ಲ ನಾವು ಅದನ್ನು ಹೊರಗೆ ಎಳೆಯುವುದಿಲ್ಲ. ಮನೆಯಲ್ಲಿ ನಾವೇ ಅದನ್ನು ಸರಿಪಡಿಸಿಕೊಳ್ಳುತ್ತೇವೆ ಇದು ಕೂಡ ಹಾಗೆ. ತಂಡದಲ್ಲಿ ಮನಸ್ತಾಪ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಸಣ್ಣಪುಟ್ಟ ವಿಚಾರಗಳು ನಡೆದಿವೆ. ಅದನ್ನೆಲ್ಲ ಹೇಗೆ ಹೊರತಂದು ದೊಡ್ಡದಾಗಿ ಬಿಂಬಿಸುವುದು ಏಷ್ಟು ಸರಿ. ಅಷ್ಟಕ್ಕೂ ನಡೆದಿರುವುದು ಏನು ಎಂದು ನನಗೆ ಗೊತ್ತಿಲ್ಲ. ತಂಡದ ಜೊತೆ ಮಾತುಕತೆ ಮಾಡಿದ ಬಳಿಕವೇ ತಿಳಿಯಲಿದೆ" ಎಂದಿದ್ದಾರೆ.

ತಂಡದ ನಿರ್ಧಾರದ ಮೇಲೆ ನನ್ನ ತೀರ್ಮಾನ!
ನಟ ಅನಿರುದ್ಧ ಅವರು ಕೊಟ್ಟಿರುವ ಪ್ರತಿಕ್ರಿಯೆಯನ್ನು ನೋಡಿದರೆ, ತಂಡದಲ್ಲಿ ಮನಸ್ತಾಪ ಉಂಟಾಗಿರುವ ಬಗ್ಗೆ ತಿಳಿದು ಬರುತ್ತದೆ. ಯಾವುದೋ ವಿಚಾರಕ್ಕೆ ತಂಡದಲ್ಲಿ ಕಿರಿಕ್ ಆಗಿದೆ ಎನ್ನುವುದಂತೂ ಗೊತ್ತಾಗುತ್ತದೆ. ಹಾಗಂತ ಅನಿರುದ್ಧ ಅವರನ್ನು ಧಾರಾವಾಹಿ ತೆಗೆದುಹಾಕಲಾಗಿದೆ ತೆಗೆದು ಹಾಕುವುದಾಗಿ ತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಈ ಬಗ್ಗೆಯೂ ಮಾತನಾಡಿದ ಅವರು. "ತಂಡ ನನ್ನ ಜೊತೆಗೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ, ಅವರ ನಿರ್ಧಾರದ ಮೇಲೆ ನನ್ನ ಮುಂದಿನ ತೀರ್ಮಾನ ಇರುತ್ತದೆ." ಎಂದು ಹೇಳಿದ್ದಾರೆ.

ನಿರ್ಧಾರದ ಬಳಿಕ ಸುದ್ದಿಗೋಷ್ಟಿ!
ಇನ್ನು ಈ ವಿಚಾರವಾಗಿ ನಟ ಅನಿರುದ್ಧ ಸುದ್ದಿಗೋಷ್ಠಿಯನ್ನು ನಡೆಸಲು ತೀರ್ಮಾನ ಮಾಡಿದ್ದಾರೆ, "ಈ ವಿಚಾರದಲ್ಲಿ ಇನ್ನೂ ಯಾವುದೇ ನಿರ್ಧಾರಗಳು ಆಗಿಲ್ಲ, ನಾನು ತಂಡದ ಜೊತೆಗೆ ಮಾತನಾಡಲು ಹೋಗುತ್ತಿದ್ದೇನೆ. ತಂಡದ ನಿರ್ಧಾರ ನನ್ನನ್ನು ಧಾರವಾಹಿ ಇಂದ ಕೈಬಿಡುವುದೇ ಆದರೆ, ನಾನು ಇದಕ್ಕೆ ನನ್ನ ಮುಂದಿನ ತೀರ್ಮಾನ ಮತ್ತು ಪ್ರತಿಕ್ರಿಯೆಯನ್ನು ಸುದ್ದಿಗೋಷ್ಠಿ ಮಾಡುವ ಮೂಲಕ ಕೊಡುತ್ತೇನೆ" ಎಂದಿದ್ದಾರೆ. ನಟ ಅನಿರುದ್ಧ ಹೇಳಿಕೊಂಡಿದ್ದಾರೆ. ಹಾಗಾಗಿ ಸದ್ಯಕ್ಕೆ ಮೂಡಿರುವ ಪ್ರಶ್ನೆ ಎಂದರೆ, ಈ ಧಾರವಾಹಿಯಲ್ಲಿ ಅನಿರುದ್ಧ ಆರ್ಯವರ್ಧನ ಪಾತ್ರದಲ್ಲಿ ಮುಂದುವರಿಯುತ್ತಾರಾ ಅಥವಾ ಅವರ ಪಾತ್ರವನ್ನು ಬದಲಾಯಿಸಿ ಬೇರೆ ನಟನ ಆಗಮನವಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











