Anirudh Jatkar: ಆರ್ಯವರ್ಧನ್, ಸುಭಾಷ್ ಆಗಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ!
ಆರ್ಯವರ್ಧನ್ ಎಂಬ ಹೆಸರು ಹಳ್ಳಿ ಹಳ್ಳಿಗೂ ಹಬ್ಬಿದೆ. ಇದಕ್ಕೆ ಕಾರಣ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ. ಈ ಧಾರಾವಾಹಿಯಲ್ಲಿ ಬರುವ ಪಾತ್ರವೇ ಆರ್ಯವರ್ಧನ್. ಆರ್ಯವರ್ಧನ್ ಪಾತ್ರ ನಿರ್ವಹಿಸುತ್ತಿರುವುದು ನಟ ಅನಿರುದ್ಧ ಜತ್ಕರ್
ಅನಿರುದ್ಧ ಜತ್ಕರ್ ಮೂಲತಃ ಧಾರಾವಾಡದವರು. ಹುಟ್ಟಿ ಬೆಳೆದಿದ್ದೆಲ್ಲಾ ಧಾರಾವಾಡವಾದರೂ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಿಂದೂಸ್ತಾನಿ ಸಂಗೀತದಲ್ಲಿ ಡಿಪ್ಲೊಮಾ ಪಡೆದಿರುವ ಅನಿರುದ್ಧ ಜತ್ಕಲ್, ಚಿಟ್ಟೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಗೆ ಪ್ರವೇಶ ಪಡೆದರು.
ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಅನಿರುದ್ಧ್ ನಟಿಸಿದ್ದಾರೆ. ಸದ್ಯ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಅನಿರುದ್ಧ್‌ಗೆ ಈ ಸೀರಿಯಲ್ ಯಶಸ್ಸನ್ನು ತಂದುಕೊಟ್ಟಿದೆ. ಧಾರಾವಾಹಿ ಶುರುವಿಗೂ ಮುನ್ನವೇ ಪ್ರೋಮೊದಿಂದಲೇ ಪ್ರೇಕ್ಷಕರು ಅನಿರುದ್ಧ್ ಪಾತ್ರವನ್ನು ಮೆಚ್ಚಿಕೊಂಡಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ ಅನಿರುದ್ಧ್‌ಗೆ ಯಾವ ಚಿತ್ರಗಳೂ ಹೇಳಿಕೊಳ್ಳುವಂತಹ ಹೆಸರನ್ನು ತಂದುಕೊಡಲಿಲ್ಲ. ಆದರೆ ಈಗ 'ಜೊತೆ ಜೊತೆಯಲಿ' ಧಾರಾವಾಹಿಗೆ ಯಶಸ್ಸನ್ನು ತಂದುಕೊಟ್ಟಿತು. ಈ ಧಾರಾವಾಹಿಯ ಯಶಸ್ಸಿನ ಜೊತೆಗೆ ಅನಿರುದ್ಧ್ ಜನರಿಗೆ ಅತಿ ಹೆಚ್ಚು ಹತ್ತಿರವಾಗಲು ಕೂಡ ಸಹಾಯ ಮಾಡಿತು. ಆರೂರು ಜಗದೀಶ್ ನಿರ್ದೇಶನ ಈ ಧಾರಾವಾಹಿಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೆಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ಅನಿರುದ್ಧ ಅವರು ಕಿರುತೆರೆಗೆ ಬರುವ ಕನಸು ಕೂಡ ಕಂಡಿರಲಿಲ್ಲವಂತೆ. 'ಜೊತೆ ಜೊತೆಯಲಿ' ಧಾರಾವಾಹಿಯ ತಂಡ ಮನೆಗೆ ಬಂದು ಕಥೆ ಹೇಳಿತ್ತಂತೆ. ಕಥೆ ಕೇಳಿ ಪಾತ್ರ ಮೆಚ್ಚಿಕೊಂಡ ಅನಿರುದ್ಧ್ ತಮ್ಮ ನಟನೆಯನ್ನು ಇಷ್ಟಪಟ್ಟಿದ್ದಾರೆ. ಸೀರಿಯಲ್ ಶುರುವಿನಿಂದ ಇಂದಿನವರೆಗೂ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ. ನಾಯಕನಾಗಿ ನಟಿಸಿದ ಅನಿರುದ್ಧ್ ಈಗ ವಿಲನ್ ಆಗಿದ್ದಾರೆ.

ಇನ್ನು 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಾಯಕನೇ ವಿಲನ್ ಕೂಡ ಆಗಿದ್ದಾರೆ. ವರ್ಧನ್ ಗ್ರೂಪ್ಸ್ ಮುಖ್ಯಸ್ಥನಾಗಿರುವ ಆರ್ಯವರ್ಧನ್ ಅನು ಸಿರಿಮನೆಯನ್ನು ಮದುವೆಯಾಗಿದ್ದಾನೆ. ಇವರಿಬ್ಬರಿಗೂ ವಯಸ್ಸಿನ ಅಂತರ ಬಹಳ ಇದೆ. ನಾಯಕನೇ ವಿಲನ್ ಎಂಬ ಸತ್ಯ ಸೀರಿಯಲ್‌ನಲ್ಲಿ ಈಗ ಬಿತ್ತರವಾಗುತ್ತಿದೆ. ರಾಜನಂದಿನಿ ಹಾಗೂ ಅವರ ತಂದೆಯನ್ನು ಕೊಂದು, ಸುಭಾಷ್ ಪಾಟೀಲ್ ಆರ್ಯವರ್ಧನ್ ಆಗಿದ್ದಾನೆ. ಮುಖವಾಡ ಧರಿಸಿ ಬದುಕುತ್ತಿರುವ ಆರ್ಯನ ಲೆಕ್ಕಾಚಾರಗಳನ್ನು ಅನು ಬಿಚ್ಚಿಡಲಿದ್ದಾಳೆ. ಸದ್ಯ ಪ್ರೇಕ್ಷಕರು ನಾಯಕನನ್ನು ಒಪ್ಪಿಕೊಂಡಂತೆಯೇ ಈಗ ವಿಲನ್ ಪಾತ್ರವನ್ನೂ ಮೆಚ್ಚಿಕೊಂಡಿದ್ದಾರೆ.
ಅನಿರುದ್ಧ್ ಈ ಸೀರಿಯಲ್‌ನಲ್ಲಿ ನಟಿಸಲು ಗಡ್ಡ ಬಿಡಬೇಕಾಯಿತು. ನಂತರ ಶ್ರೀಮಂತರಂತೆ ಹಾವ-ಭಾವವನ್ನು ಬದಲಾಯಿಸಿಕೊಳ್ಳಬೇಕಾಯಿತು. ಇದೆಲ್ಲವನ್ನೂ ಮಾಡಿಕೊಂಡ ಅನಿರುದ್ಧ್‌ಗೆ ಈಗ ಸುಭಾಷ್ ಪಾಟೀಲ್ ಪಾತ್ರಕ್ಕಾಗಿ ಮತ್ತೆ ಬಾಡಿ ಟೋನ್ ಮಾಡಿಕೊಂಡಿದ್ದಾರೆ. ಇಪ್ಪತ್ತು ವರ್ಷ ಹಿಂದಿನ ರಾಜನಂದಿನಿ ಕಥೆ ತೋರಿಸುವ ಸಲುವಾಗಿ ಆರ್ಯವರ್ಧನ್ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ. ಗಡ್ಡ ತೆಗೆದು, ಬಾಡಿಯನ್ನು ಫಿಟ್ ಆಗಿಸಿಕೊಂಡಿದ್ದಾರೆ. ಇದಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ ಅನಿರುದ್ಧ. ಸ್ಮಾಟ್ ಆಂಡ್ ಹ್ಯಾಂಡ್ಸಮ್ ಆಗಿ ರಾಜನಂದಿನಿ ಎದುರು ಬಂದಿದ್ದಾರೆ. ಇನ್ನು ರಾಜನಂದಿನಿ ಕಥೆ ಮುಗಿದ ಮೇಲೆ ಮತ್ತೆ ಗಡ್ಡ ಬಿಟ್ಟು ಆರ್ಯವರ್ಧನ್ ಪಾತ್ರಕ್ಕೆ ಸಿದ್ಧತೆ ನಡೆಸಲಿದ್ದಾರೆ.


Click it and Unblock the Notifications











