Exclusive: ಬಿಗ್‌ ಬಾಸ್ ಸೀಸನ್ 9ಕ್ಕೆ ಅನಿರುದ್ಧ್ ಎಂಟ್ರಿ? ನನ್ನನ್ನು ಯಾರು ತಡೆಯೋಕ್ಕಾಗಲ್ಲ!

ನಟ ಅನಿರುದ್ಧ್ ಜತ್ಕರ್ ಬಿಗ್‌ ಬಾಸ್ ಸೀಸನ್‌ 9ರ ಸ್ಪರ್ಧಿಯಾಗಿ ದೊಡ್ಮನೆಗೆ ಹೋಗುತ್ತಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಸದ್ಯ ಬಿಗ್‌ ಬಾಸ್‌ ಕನ್ನಡ ಓಟಿಟಿ ಮೊದಲ ಸೀಸನ್‌ ಮುಗಿಯುತ್ತಾ ಬಂದಿದೆ. ಇನ್ನು ಬಿಗ್‌ ಬಾಸ್‌ ಸೀನಸ್‌ 9ರ ಪ್ರೋಮೋ ಕೂಡ ರಿಲೀಸ್ ಆಗಿ ಸದ್ದು ಆಗ್ತಿದೆ. ಈ ಬಾರಿ ಯಾರೆಲ್ಲಾ ದೊಡ್ಮನೆಯ ದೊಡ್ಡಾಟಕ್ಕೆ ಹೋಗುತ್ತಾರೆ ಅನ್ನುವ ಚರ್ಚೆ ಶುರುವಾಗಿದೆ. ಈ ಬಾರಿ ಬಿಗ್‌ ಬಾಸ್‌ ಶೋಗೆ ಹೋಗುವ ಬಗ್ಗೆ ನಟ ಅನಿರುದ್ಧ್ ಪ್ರತಿಕ್ರಿಯಿಸಿದ್ದಾರೆ.

'ಜೊತೆ ಜೊತೆಯಲಿ' ಧಾರಾವಾಹಿಯಿಂದ ನಟ ಅನಿರುದ್ಧ್ ಹೊರ ಬಂದಿರುವುದು ಗೊತ್ತೇಯಿದೆ. ಈ ಹಿಂದಿನ ಸೀಸನ್‌ಗಳ ಸಮಯದಲ್ಲೇ ಬಿಗ್‌ ಬಾಸ್ ಮನೆಗೆ ಅನಿರುದ್ಧ್ ಹೋಗುತ್ತಾರೆ ಅನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ನಿಜವಾಗಿರಲಿಲ್ಲ. ಸದ್ಯ ನಟ ಅನಿರುದ್ಧ್ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಹಾಗಾಗಿ ಅವರು ದೊಡ್ಮನೆಗೆ ಹೋಗಬಹುದು ಅನ್ನುವು ಕೆಲವರ ಲೆಕ್ಕಾಚಾರ. ಸಾಕಷ್ಟು ಜನ ಅಭಿಮಾನಿಗಳು ಕೂಡ ಬಿಗ್‌ಬಾಸ್ ಮನೆಯಲ್ಲಿ ಅನಿರುದ್ಧ್ ಅವರನ್ನು ನೋಡಲು ಬಯಸಿದ್ದಾರೆ.

ಬಿಗ್‌ ಬಾಸ್ ಓಟಿಟಿ ಶೋನಲ್ಲಿರುವ 4 ಜನ ಅತ್ಯುತ್ತಮ ಸ್ಪರ್ಧಿಗಳಿಗೆ ನೇರವಾಗಿ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್‌ಗೆ ಟಿಕೆಟ್ ಸಿಗಲಿದೆ. ಇನ್ನುಳಿದ 12 ಜನ ಸ್ಪರ್ಧಿಗಳು ಯಾರು ಎನ್ನುವ ಚರ್ಚೆ ಶುರುವಾಗಿದೆ. ನಟ ಅನಿರುದ್ಧ್‌ ಕೂಡ ಈ ಲಿಸ್ಟ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ಅನಿರುದ್ಧ್‌ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.

 ಬಿಗ್‌ ಬಾಸ್ ಮನೆಗೆ ಅನಿರುದ್ಧ್ ಜತ್ಕರ್?

ಬಿಗ್‌ ಬಾಸ್ ಮನೆಗೆ ಅನಿರುದ್ಧ್ ಜತ್ಕರ್?

ಈ ಹಿಂದೆ ಕೂಡ ಅನಿರುದ್ಧ್ ಬಿಗ್‌ ಬಾಸ್‌ ಮನೆಗೆ ಹೋಗುತ್ತಾರೆ. ಶೋ ಆಯೋಜಕರು ಅವರನ್ನು ಸಂಪರ್ಕಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಿರುದ್ಧ್ "ಇಲ್ಲ ನಾನು ಬಿಗ್‌ ಬಾಸ್ ಮನೆಗೆ ಹೋಗುತ್ತಿಲ್ಲ. ಇದೆಲ್ಲ ಬರೀ ಊಹಾಪೋಹ ಅಷ್ಟೆ" ಎಂದು ಮಾಹಿತಿ ನೀಡಿದ್ದಾರೆ.

ನನ್ನನ್ನು ಯಾರು ತಡೆಯೋಕ್ಕಾಗಲ್ಲ!

ನನ್ನನ್ನು ಯಾರು ತಡೆಯೋಕ್ಕಾಗಲ್ಲ!

ನಟ ಅನಿರುದ್ಧ್ ಅವರನ್ನು 2 ವರ್ಷಗಳ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಬೇಡಿ ಎಂದು ಕಿರುತೆರೆ ನಿರ್ಮಾಪಕರ ಸಂಘ ವಾಹಿನಿಗಳಿಗೆ ಮನವಿ ಮಾಡಿದೆ. ಇದೇ ಕಾರಣಕ್ಕೆ ಅನಿರುದ್ಧ್ ಬಿಗ್‌ಬಾಸ್ ಮನೆಗೆ ಹೋಗುತ್ತಿಲ್ಲವಾ ಎನ್ನುವ ಪ್ರಶ್ನೆಗೂ ಉತ್ತರಿಸಿದ್ದಾರೆ. "ನಾನು ಯಾವುದೇ ಕಾರ್ಯಕ್ರಮದಲ್ಲಿ ಕೆಲಸ ಮಾಡುವುದನ್ನು ಯಾರು ತಡೆಯಲು ಸಾಧ್ಯವಿಲ್ಲ. ಇದು ಅವರ ಅಧಿಕೃತ ಹೇಳಿಕೆಯೂ ಅಲ್ಲ, ಈ ಬಗ್ಗೆ ನನಗೆ ಯಾವುದೇ ಪತ್ರವೂ ಬಂದಿಲ್ಲ. ಅವರು ಆ ರೀತಿ ಹೇಳುವದಕ್ಕೆ ಸಾಧ್ಯವೂ ಇಲ್ಲ".

 ನನ್ನ ಹೆಸರು ಕೆಡಿಸುವ ಕೆಲಸ ಮಾಡಿದರು!

ನನ್ನ ಹೆಸರು ಕೆಡಿಸುವ ಕೆಲಸ ಮಾಡಿದರು!

ಕರ್ನಾಟಕದಲ್ಲಿ ಕಿರುತೆರೆ ನಿರ್ಮಾಪಕ ಸಂಘ ಅಸ್ತಿತ್ವದಲ್ಲೇ ಇಲ್ಲ. ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್‌ನಲ್ಲಿ ನಿರ್ಮಾಪಕರದ್ದು ಒಂದು ಅಂಗ ಅಷ್ಟೆ ಎಂದು ಹೇಳಲಾಗುತ್ತದೆ. ಇನ್ನು ಈ ಬಗ್ಗೆ ಮಾತನಾಡಿದ ಅನಿರುದ್ಧ್, "ಅವರು
ಸುಮ್ಮನೆ ಏನೇನೋ ಹೇಳಿ ನನ್ನ ಹೆಸರು ಕೆಡಿಸುವ ಕೆಲಸ ಮಾಡಿದರು ಅಷ್ಟೆ. ಯಾವುದೇ ಶೋನಲ್ಲಿ ನಾನು ಭಾಗವಹಿಸದಂತೆ ತಡೆಯಲು ಸಾಧ್ಯವಿಲ್ಲ. ಸದ್ಯ ನನಗೆ ಬೇರೆ ಕೆಲಸಗಳಿವೆ, ಹಾಗಾಗಿ ಬಿಗ್‌ಬಾಸ್‌ ಮನೆಗೆ ಹೋಗುತ್ತಿಲ್ಲ" ಎಂದಿದ್ದಾರೆ.

ಸೆಪ್ಟೆಂಬರ್ 24ಕ್ಕೆ ಬಿಗ್‌ಬಾಸ್ ಸೀಸನ್‌ 9?

ಸೆಪ್ಟೆಂಬರ್ 24ಕ್ಕೆ ಬಿಗ್‌ಬಾಸ್ ಸೀಸನ್‌ 9?

ಈ ವಾರವೇ ಬಿಗ್‌ ಬಾಸ್ ಓಟಿಟಿ ಮೊದಲ ಸೀಸನ್ ಮುಕ್ತಾಯವಾಗುವ ಸಾಧ್ಯತೆಯಿದೆ. ಒಂದು ವಾರದ ಬಿಡುವಿನ ನಂತರ ಅಂದರೆ ಸೆಪ್ಟೆಂಬರ್ 24ರಿಂದ ಟಿವಿ ಶೋ ಶುರುವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಈಗಾಗಲೇ ಪ್ರೋಮೊ ಕೂಡ ರಿಲೀಸ್ ಆಗಿದ್ದು, ಶೋ ಯಾವಾಗ ಶುರುವಾಗುತ್ತದೆ ಎನ್ನುವ ಮಾಹಿತಿ ಇದರಲ್ಲಿ ಸಿಕ್ಕಿಲ್ಲ.

More from Filmibeat

English summary
Actor Anirudh Jatkar Gives Clarity On Entry in Bigg Boss Season 9 Kannada. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X