ಕನ್ನಡ ಕಿರುತೆರೆ ಲೋಕದಲ್ಲಿ ದಾಖಲೆ ಬರೆದ ವಿಷ್ಣುವರ್ಧನ್ ಅಳಿಯ ಅನಿರುದ್ಧ್

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅನಿರುದ್ಧ್ ಮನರಂಜನೆ ಲೋಕದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಂತಹದ್ದು ಏನು ಮಾಡಿದ್ರು ಅಂತ ಅಂದ್ಕೋತಿದ್ದೀರಾ? ಅನಿರುದ್ಧ ಅಭಿನಯದ 'ಜೊತೆ ಜೊತೆಯಲಿ' ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆಗಳಿಸುವ ಜೊತೆಗೆ ಈ ವಾರದ ಟಾಪ್ ಒನ್ ಧಾರಾವಾಹಿಯಾಗಿ ಹೊರಹೊಮ್ಮಿದೆ.

ಜೊತೆ ಜೊತೆಯಲಿ ಧಾರಾವಾಹಿ ಪ್ರಾರಂಭವಾಗಿ ಒಂದು ವಾರ ಆಗಿದೆ. ಝಿ ಕನ್ನಡ ವಾಹಿನಿಯಲ್ಲಿ ಇದೇ ತಿಂಗಳು 9ರಿಂದ ರಾತ್ರಿ 8.30ಕ್ಕೆ ಜೊತೆ ಜೊತೆಯಲಿ ಸೀರಿಯಲ್ ಪ್ರಸಾರವಾಗುತ್ತಿದೆ. 45 ವರ್ಷದ ದೊಡ್ಡ ಉದ್ಯಮಿ ಮತ್ತು 20 ವರ್ಷದ ಯುವತಿಯ ನಡುವೆ ನಡೆೆೆಯುವ ಪ್ರೀತಿಯ ಕಥೆ ಈ ದಾರಾವಾಹಿಯಲ್ಲಿ ಇದೆ.

ನಂಬರ್ ಒನ್ ಸ್ಥಾನದಲ್ಲಿ 'ಜೊತೆ ಜೊತೆಯಲಿ'

ನಂಬರ್ ಒನ್ ಸ್ಥಾನದಲ್ಲಿ 'ಜೊತೆ ಜೊತೆಯಲಿ'

ಅನಿರುದ್ಧ್ ಅಭಿನಯದ ಜೊತೆ ಜೊತೆಯಲಿ ಧಾರಾವಾಹಿ ನಂ.1ಸ್ಥಾನದಲ್ಲಿದೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿಗಳನ್ನು ಹಿಂದಿಕ್ಕಿ, ಮೊದಲ ವಾರದಲ್ಲೆ ನಂ. 1 ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. ಜೊತೆ ಜೊತೆಯಲಿ ಧಾರವಾಹಿಯ ಖ್ಯಾತಿ ಕಂಡು ಮನರಂಜನೆ ಲೋಕವೆ ನಿಬ್ಬೆರಗಾಗಿದೆ. ಗಟ್ಟಿಮೇಳ, ಪಾರು, ಕಮಲಿ ಧಾರವಾಹಿಯನ್ನು ಹಿಂದಿಕ್ಕಿ ಜೊತೆ ಜೊತೆಯಲಿ ಈಗ ಮೊದಲ ಸ್ಥಾನ ಪಡೆದುಕೊಂಡಿದೆ.

ಪ್ರೇಕ್ಷಕರು ಮೆಚ್ಚಿದ ಆರ್ಯವರ್ಧನ್-ಅನು ಪಾತ್ರ

ಪ್ರೇಕ್ಷಕರು ಮೆಚ್ಚಿದ ಆರ್ಯವರ್ಧನ್-ಅನು ಪಾತ್ರ

ಜೊತೆ ಜೊತೆಯಲಿ ಧಾರಾವಾಹಿಯ ಮುಖ್ಯಪಾತ್ರ ಆರ್ಯವರ್ಧನ್ ಅಂದ್ರೆ ಅನಿರುದ್ಧ್ ನಿಭಾಯಿಸುತ್ತಿರುವ ಪಾತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ. 45 ವರ್ಷದ ಆರ್ಯವರ್ಧನ್ ಗೆ ಜೋಡಿಯಾಗಿ 20 ವರ್ಷದ ಅನು ಕಾಣಿಸಿಕೊಳ್ಳುತ್ತಿದ್ದಾರೆ. ಅನು ಪಾತ್ರಕ್ಕೆ ನಟಿ ಮೇಘನಾ ಶೆಟ್ಟಿ ಬಣ್ಣಹಚ್ಚಿದ್ದಾರೆ. ಇಲ್ಲಿ ಆರ್ಯವರ್ಧನ್ ದೊಡ್ಡ ಮನೆತನದ ದೊಡ್ಡ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಅನು ಮಧ್ಯಮ ವರ್ಗದ ಹೆಣ್ಣು ಮಗಳಾಗಿ ಮಿಂಚಿದ್ದಾರೆ.

25ವರ್ಷ ವಯಸ್ಸಿನ ಅಂತರ

25ವರ್ಷ ವಯಸ್ಸಿನ ಅಂತರ

'ಜೊತೆ ಜೊತೆಯಲಿ' ಇದೆ ಹೆಸರಿನಲ್ಲಿ ಮೊದಲು ಧಾರಾವಾಹಿ ಪ್ರಸಾರವಾಗುತ್ತಿತ್ತು. ಆ ಧಾರಾವಾಹಿಯಲ್ಲಿ ಹೀರೋ ತನಗಿಂತ ಐದು ವರ್ಷ ದೊಡ್ಡವಳಾಗಿರುವ ನಾಯಕಿಯನ್ನು ಪ್ರೀತಿಸುವ ಕಥೆ ಆಗಿತ್ತು. ಆದ್ರೆ ಸದ್ಯ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ 45ವರ್ಷದ ಹೀರೋ 20 ವರ್ಷದ ನಾಯಕಿ. 25 ವರ್ಷ ವಯಸ್ಸಿನ ಅಂತರ ವಿರುವ ಇಬ್ಬರ ಪ್ರೀತಿಯ ಕಥೆ ಇದಾಗಿದೆ. ವಯಸ್ಸು ಮಾತ್ರವಲ್ಲದೆ ಜೀವನ ಶೈಲಿ, ಅಂತಸ್ತು ಯಾವುದರಲ್ಲೂ ಇಲ್ಲಿ ಹೊಂದಿಕೆ ಇಲ್ಲ.

ಆರೂರು ಜಗದೀಶ್ ನಿರ್ದೇಶನ

ಆರೂರು ಜಗದೀಶ್ ನಿರ್ದೇಶನ

ಈ ಹಿಂದೆ ಶುಭವಿವಾಹ, ಜೋಡಿಹಕ್ಕಿಯಂತಹ ಧಾರಾವಾಹಿ ನಿರ್ದೇಶನ ಮಾಡಿದ್ದ ಆರೂರು ಜಗದೀಶ್ ಈಗ ಜೊತೆ ಜೊತೆಯಲಿ ಧಾರಾವಾಹಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರೋಮೋ ಮೂಲಕವೆ ಕಿರುತೆರೆ ಪ್ರೇಕ್ಷಕರ ಮನಸೆಳೆದಿದ್ದ ಜೊತೆ ಜೆೊತೆಯಲಿ, ಧಾರಾವಾಹಿ ಪ್ರಸಾರ ವಾದಾಗಿನಿಂದ ವಿಶೇಷ ಆಸಕ್ತಿ ತೋರಿಸಿ ನೋಡುತ್ತಿದ್ದಾರೆ. ಸಿನಿಮಾಗಳನ್ನು ಮಾಡುತ್ತಿದ್ದ ನಟ ಅನಿರುದ್ಧ್ ಈಗ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

More from Filmibeat

English summary
Actor Anirudh starrer Jote Joteyali serial has kannada number 1 serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X