Bigg Boss 17: ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಬ್ರೇಕಪ್ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಅಂಕಿತಾ ಲೋಖಂಡೆ

ಹಿಂದಿ ಸಿನಿಮಾ ಮತ್ತು ಕಿರುತೆರೆ ನಟಿ ಅಂಕಿತಾ ಲೋಖಂಡೆ ಬಿಗ್ ಬಾಸ್ ಸೀಸನ್ 17 ರ ಇತ್ತೀಚಿನ ಸಂಚಿಕೆಯಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗಿನ ತನ್ನ ಬ್ರೇಕಪ್‌ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. 'ಪವಿತ್ರಾ ರಿಶ್ತಾ' ಧಾರಾವಾಹಿ ಸೆಟ್‌ನಲ್ಲಿ ಅಂಕಿತಾ ಮತ್ತು ಸುಶಾಂತ್ ಪ್ರೀತಿಯಲ್ಲಿ ಬಿದ್ದಿದ್ದರು.

ಬಿಗ್ ಬಾಸ್ ಸ್ಪರ್ಧಿ ಮುನಾವರ್ ಫಾರುಕಿ ಅವರೊಂದಿಗೆ ಮಾತನಾಡುವ ವೇಳೆ ಅಂಕಿತಾ ಲೋಖಂಡೆ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ತನ್ನ ಬ್ರೇಕಪ್ ಬಳಿಕ ತಾನು ಅನುಭವಿಸಿದ ಯಾತನೆಯನ್ನು ಹೇಳಿಕೊಂಡಿದ್ದಾರೆ. ಧಾರಾವಾಹಿ ಸೆಟ್‌ನಲ್ಲಿ 2010 ರಲ್ಲಿ ಆರಂಭವಾಗಿದ್ದ ಇವರ ಸಂಬಂಧ ಸುಮಾರು ಏಳು ವರ್ಷಗಳ ನಂತರ 2016 ರಲ್ಲಿ ಕೊನೆಯಾಗಿತ್ತು.

Actor Ankita Lokhande talks about her break up with late ex-boyfriend Sushant Singh Rajput

ಅಂಕಿತಾ ಲೋಖಂಡೆ-ಸುಶಾಂತ್ ಸಿಂಗ್ ರಜಪೂತ್ ಬ್ರೇಕಪ್ ಕಾರಣ

ಅಂಕಿತಾ ಲೋಖಂಡೆ ಮತ್ತು ಸುಶಾಂತ್ ಸಿಂಗ್ ರಜಪೂತ್ ಪವಿತ್ರಾ ರಿಶ್ತಾ ಸೆಟ್‌ನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರು. 2016 ರಲ್ಲಿ ಅವರ ಬ್ರೇಕಪ್ ಭಾರಿ ಚರ್ಚೆಯಾಗಿತ್ತು. 'ಪವಿತ್ರಾ ರಿಶ್ತಾ' ಧಾರಾವಾಹಿಯ ಸೂಪರ್ ಹಿಟ್ ಜೋಡಿ ಬೇರೆಯಾಗಿದ್ದು, ಹಲವರಿಗೆ ಆಶ್ಚರ್ಯ ಮೂಡಿಸಿತ್ತು. ಇಬ್ಬರ ಬಗ್ಗೆ ಕೆಟ್ಟ ಕೆಟ್ ಟರೂಮರ್‌ಗಳು ಹಬ್ಬುದ್ದವು. ಆಗ ಇಬ್ಬರು ಒಬ್ಬರ ಪರ ಒಬ್ಬರು ನಿಂತಿದ್ದರು.

ನಟಿಯನ್ನು ಮದ್ಯವ್ಯಸನಿ ಎಂದು ಕರೆದಾಗ ನಟ ಸುಶಾಂತ್ ಆಕೆಯ ಪರ ನಿಂತು ಆಕೆ ಎಂದೂ ಮದ್ಯವ್ಯಸನಿಯಾಗಿರಲಿಲ್ಲ ಎಂದು ಹೇಳಿದ್ದರು. ಸುಶಾಂತ್‌ನನ್ನು ವುಮೆನೈಸರ್ ಎಂದು ಕರೆದಾಗ ನಟಿ ಆಲೆಯ ಪರ ನಿಂತು ಬೆಂಬಲ ನೀಡಿದ್ದರು. ಹೀಗಾಗಿ ಬೇರ್ಪಟ್ಟರು ಕೂಡ ಇಬ್ಬರ ನಡುವೆ ಉತ್ತಮ ಸಂಬಂಧವಿತ್ತು.

ಸುಶಾಂತ್ ಇದ್ದಕ್ಕಿದ್ದಂತೆ ಕಣ್ಮರೆಯಾದರು!

BB 17 ರ ಇತ್ತೀಚಿನ ಸಂಚಿಕೆಯಲ್ಲಿ, ಅಂಕಿತಾ ಜೂನ್ 2023 ರಲ್ಲಿ ನಿಧನರಾದ ಸುಶಾಂತ್ ಅವರೊಂದಿಗಿನ ತನ್ನ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. "ಅವರು ಇದ್ದಕ್ಕಿದ್ದಂತೆ ಕಣ್ಮರೆಯಾದರು. ಅವರು ಯಶಸ್ಸನ್ನು ಪಡೆಯುತ್ತಿದ್ದರು. ಆ ವೇಳೆ ಜನ ಅವರಿಗೆ ಇಲ್ಲಸಲ್ಲದನ್ನು ಹೇಳಿಕೊಟ್ಟರು. ಆ ಸಮಯದಲ್ಲಿ ಏನಾಯಿತು ಎಂದು ನನಗೆ ತಿಳಿದಿಲ್ಲ. ಪರವಾಗಿಲ್ಲ. ನಾನು ಅವನನ್ನು ತಡೆಯಲು ಎಂದಿಗೂ ಪ್ರಯತ್ನಿಸಲಿಲ್ಲ" ಎಂದಿದ್ದಾರೆ.

Actor Ankita Lokhande talks about her break up with late ex-boyfriend Sushant Singh Rajput

ಮುಂದುವರಿದು, "ನಮ್ಮ ಬ್ರೇಕಪ್‌ಗೆ ಯಾವುದೇ ಕಾರಣವಿಲ್ಲ. ನಾನು ಖಾಲಿಯಾಗಿದ್ದೆ. ಒಂದು ರಾತ್ರೋರಾತ್ರಿ ನನ್ನ ಜೀವನದಲ್ಲಿ ಬದಲಾಗಿತ್ತು. ನನ್ನ ತಂದೆ ತಾಯಿ ತುಂಬಾ ನೋವು ಅನುಭವಿಸಿದರು. ಸುಶಾಂತ್ ನನ್ನ ಜೊತೆಗೆ ಏಕೆ ಬ್ರೇಕಪ್ ಮಾಡಿಕೊಳ್ಳುತ್ತಿದ್ದೇನೆ ಎಂಬುದಕ್ಕೆ ಕಾರಣವೇ ನೀಡಲಿಲ್ಲ" ಎಂದು ಭಾವುಕರಾಗಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ 2020 ರಲ್ಲಿ ಅವರ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಪ್ರಕರಣ ಇನ್ನು ತನಿಖೆಯಾಗುತ್ತಿದೆ. ಆ ವೇಳೆ ಅವರ ಪ್ರೇಯಸಿಯಾಗಿದ್ದ ನಟಿ ರಿಯಾ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು. ಇನ್ನು, ನಟಿ ಅಂಕಿತಾ ತನ್ನ ಪತಿ ವಿಕ್ಕಿ ಜೈನ್ ಅವರೊಂದಿಗೆ ಬಿಗ್ ಬಾಸ್ ಹಿಂದಿ ಸೀಸನ್ 17 ರಲ್ಲಿ ಸ್ಪರ್ಧಿಯಾಗಿದ್ದಾರೆ.

ಅಂಕಿತಾ ಮಾತಿಗೆ ಪ್ರೇಕ್ಷಕರ ಕಾಮೆಂಟ್

ಇನ್ನು, ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳು ನಟಿ ಅಂಕಿತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಸುಶಾಂತ್ ವಿಷಯ ಸೂಕ್ಷ್ಮವಾಗಿದೆ. ಅದರ ಬಗ್ಗೆ ಮಾತನಾಡಲು ಆಕೆಗೆ ಅರ್ಹತೆಯಿಲ್ಲ. ಹಠಾತ್ ಬ್ರೇಕಪ್ ಎಂದು ಹೇಳುವ ಮೂಲಕ ಆಕೆ ತನ್ನ ತಪ್ಪು ಮುಚ್ಚುತ್ತಿದ್ದಾರೆ" ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
Ankita Lokhande talks about her break up with Sushant Singh Rajput.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X