3 ಅನುಬಂಧ ಪ್ರಶಸ್ತಿ ಗೆದ್ದು ಕಿರುತೆರೆ ವೀಕ್ಷಕರಿಗೆ ಧನ್ಯವಾದ ಹೇಳಿದ ಕಿರುತೆರ ನಟ ಅಶ್ವಿನ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅನುಬಂಧ ಅವಾರ್ಡ್ಸ್' ಧಾರಾವಾಹಿಗೆ ಇದೀಗ ಹನ್ನೊಂದರ ಹರೆಯ. ಹೌದು, ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿರುವ 'ಅನುಬಂಧ ಅವಾರ್ಡ್ಸ್' ಇದೀಗ ಹನ್ನೊಂದನೇ ವರ್ಷದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿದೆ. ಅಂದ ಹಾಗೇ ಇತ್ತೀಚೆಗಷ್ಟೇ 'ಅನುಬಂಧ ಅವಾರ್ಡ್ಸ್' ನಡೆದಿದ್ದು ಮೂರು ದಿನಗಳ ಸಂಭ್ರಮಕ್ಕೆ ಕಿರುತೆರೆ ಕಲಾವಿದರುಗಳು ಸಾಕ್ಷಿಯಾಗಿದ್ದಾರೆ.
ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕರಿಮಣಿ' ಧಾರಾವಾಹಿಯ ತಂಡಕ್ಕೆ ಇದು ಮೊದಲ ಅನುಬಂಧದ ಸಂಭ್ರಮ. ಅಂದ ಹಾಗೇ 'ಕರಿಮಣಿ' ಧಾರಾವಾಹಿಗೆ ಮೂರು ಅವಾರ್ಡ್‌ಗಳು ಬಂದಿರುವುದು ಖುಷಿಯ ವಿಚಾರ. ಹಾಗೇ 'ಕರಿಮಣಿ' ಧಾರಾವಾಹಿಯ ನಾಯಕ ಕರ್ಣ ಮತ್ತು ಸಾಹಿತ್ಯಾ ಜೋಡಿಗೆ 'ಜಿಯೋ ಸಿನಿಮಾ ಜೋಡಿ' ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದಕ್ಕಿಂತಲೂ ಮುಖ್ಯವಾಗಿ 'ಕರಿಮಣಿ' ಧಾರಾವಾಹಿಯಲ್ಲಿ ನಾಯಕ ಕರ್ಣ ಆಗಿ ಅಭಿನಯಿಸುತ್ತಿರುವ ಅಶ್ವಿನ್ ಅವರಿಗೆ ಎರಡು ಅವಾರ್ಡ್‌ಗಳು ದೊರೆತಿರುವುದು ಕೂಡಾ ಸಂತಸ ತಂದಿದೆ. ಹೌದು, 'ಅನುಬಂಧ ಅವಾರ್ಡ್ಸ್ 2024'ರಲ್ಲಿ 'ಜನ ಮೆಚ್ಚಿದ ಹೊಸ ಪರಿಚಯ' ಪ್ರಶಸ್ತಿಯನ್ನು ಅಶ್ವಿನ್ ಪಡೆದುಕೊಂಡಿದ್ದಾರೆ. ಇದರ ಹೊರತಾಗಿ 'ಜನ ಮೆಚ್ಚಿದ ಸ್ಟೈಲ್ ಐಕಾನ್' ಪ್ರಶಸ್ತಿಯನ್ನು ಇವರು ಪಡೆದಿರುವುದು ವಿಶೇಷ.
ಈ ಸಂತಸದ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಅಶ್ವಿನ್. "ಮೊದಲನೇ ವರ್ಷದ ಅನುಬಂಧದಲ್ಲೇ 3 ಅವಾರ್ಡ್‌ಗಳನ್ನು ಗೆಲ್ಲಿಸಿಕೊಟ್ಟ ನಿಮಗೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ನಿಮ್ಮೆಲ್ಲರನ್ನು ರಂಜಿಸೋಕೆ ಮತ್ತಷ್ಟು ಶ್ರಮ ಹಾಗೂ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. ಮಿಸ್ ಯೂ ವಿನೋದ್ ಸರ್. ಈ ಅವಾರ್ಡ್‌ಗಳು ನಿಮಗೆ ಸಮರ್ಪಣೆ. ನಿಮ್ಮ ಕರ್ಣ" ಎಂದು ಬರೆದುಕೊಂಡಿದ್ದಾರೆ ಅಶ್ವಿನ್.

ಸಾಂಸ್ಕೃತಿಕ ನಗರಿ ಮೈಸೂರಿನ ಹುಡುಗ ಅಶ್ವಿನ್ ಅವರು ಇಂಜಿನಿಯರ್ ಪದವೀಧರ ಹೌದು. ಮೊದಲಿನಿಂದಲೂ ಬಣ್ಣದ ಲೋಕದತ್ತ ವಿಶೇಷ ಒಲವು ಹೊಂದಿದ್ದ ಅಶ್ವಿನ್ ಅವರು ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಹ್ಯಾಂಡ್ ಸಮ್ ಹುಡುಗ.
ಧಾರಾವಾಹಿಯ ಕಥೆಯಲ್ಲಿ ಮೂಲತಃ ಒಳ್ಳೆಯ ಮನುಷ್ಯನಾಗಿರುವ ಕರ್ಣ ಏನೇ ಕೆಟ್ಟದ್ದು ನಡೆದರೆ ಸಹಿಸಲಾರದವನು. ಯಾರಿಗೆ ಏನೇ ತೊಂದರೆ ಆದರೂ ಸಿಡಿದೇಳುವ ಕರ್ಣನನ್ನು ಕಂಡಾಗ ಖಳನಾಯಕನ ಪಾತ್ರವೇನೋ ಎಂದು ಕಿರುತೆರೆ ವೀಕ್ಷಕರಿಗೆ ಅನ್ನಿಸುತ್ತದೆ.
'ಕರಿಮಣಿ' ಧಾರಾವಾಹಿಯ ಕರ್ಣನಾಗಿ ಅಭಿನಯಿಸುವ ಮೊದಲೇ ಕಿರುಚಿತ್ರದಲ್ಲಿ ಅಭಿನಯಿಸಿದ್ದರು ಅಶ್ವಿನ್. ಹೌದು, 'ರಾಗ ಮತ್ತು ತಾಳ' ಎನ್ನುವ ಕಿರುಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಶ್ವಿನ್ ರಂಗಭೂಮಿಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡವರು.
ಇನ್ನು ನಟನೆಯ ಹೊರತಾಗಿ ಫಿಟ್ನೆಸ್ ಫ್ರೀಕ್ ಆಗಿರುವ ಅಶ್ವಿನ್ ಅವರು ತಮ್ಮ ಫಿಟ್ನೆಸ್ ಕುರಿತು ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಸೆಲೆಬ್ರಿಟಿಗಳಿಗೆ ಫಿಟ್ನೆಸ್ ಟ್ರೈನಿಂಗ್ ಕೊಡುವ ಶ್ರೀನಿವಾಸ ಗೌಡ ಅವರ ಬಳಿ ತರಬೇತಿಯನ್ನು ಪಡೆದು ಕೊಳ್ಳುತ್ತಿದ್ದಾರೆ.


Click it and Unblock the Notifications










