ಬಿಗ್‌ಬಾಸ್ ಮನೆ ಹೋಗಿ 10 ಲಕ್ಷ ಕಳೆದುಕೊಂಡ ನಟ!
ಬಿಗ್‌ಬಾಸ್ ಕಾರ್ಯಕ್ರಮ ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ವೀಕ್ಷಕರನ್ನು ಗಳಿಸಿಕೊಂಡಿದೆ. ಬಿಗ್‌ಬಾಸ್ ಪ್ರಸಾರವಾಗುವ ಬಹುತೇಕ ಭಾಷೆಗಳಲ್ಲಿ ಅದೇ ಆ ಭಾಷೆಯ ಮೆಚ್ಚಿನ ರಿಯಾಲಿಟಿ ಶೋ.
ಸೆಲೆಬ್ರಿಟಿಗಳನ್ನು ಕರೆದುಕೊಂಡು ಬಂದು ಬಿಗ್‌ಬಾಸ್ ಮನೆಯೊಳಗೆ ಇರಿಸಿ ಗೇಮ್ ಆಡಿಸುವ ಸಂಪ್ರದಾಯ ಮೊದಲಿನಿಂದಲೂ ಇದೆ. ಒಮ್ಮೆ ಬಿಗ್‌ಬಾಸ್ ಮನೆ ಒಳಕ್ಕೆ ಹೋದರೆ ಅವರು ಸೆಲೆಬ್ರಿಟಿಗಳಾದಂತೆಯೇ. ಇದಕ್ಕೆ ಹಲವು ಉದಾಹರಣೆಗಳು ಕನ್ನಡದಲ್ಲಿಯೇ ಇವೆ.
ಬಿಗ್‌ಬಾಸ್ ಸ್ಪರ್ಧಿಗಳಿಗೆ ಒಳ್ಳೆಯ ಗುರುತು ತಂದುಕೊಡುತ್ತದೆ ಬಿಗ್‌ಬಾಸ್ ಕಾರ್ಯಕ್ರಮ, ಹಾಗಾಗಿಯೇ ಹಲವರು ಬಿಗ್‌ಬಾಸ್ ಸ್ಪರ್ಧಾಳುಗಳಾಗಲು ನಾನಾ ರೀತಿಯ ಪ್ರಯತ್ನ ಮಾಡುತ್ತಾರೆ. ಕೆಲವರು ಬಿಗ್‌ಬಾಸ್‌ಗಾಗಿಯೇ ಬೇಕೆಂದೇ ವಿವಾದಗಳನ್ನು ಮಾಡಿಕೊಂಡಿದ್ದು ಸಹ ಇದೆ. ಆದರೆ ತೆಲುಗು ಬಿಗ್‌ಬಾಸ್ ಸ್ಪರ್ಧಿಯೊಬ್ಬ ಬಿಗ್‌ಬಾಸ್ ಮನೆಗೆ ಹೋಗಲೆಂದೇ 10 ಲಕ್ಷ ಹಣ ಕಳೆದುಕೊಂಡಿದ್ದಾನೆ!

ಹತ್ತು ಲಕ್ಷ ಹಣ ಕಳೆದುಕೊಂಡ ಅವಿನಾಶ್
ಹೌದು, ನಟ ಅವಿನಾಶ್ ಬಿಗ್‌ಬಾಸ್ ಶೋನಲ್ಲಿ ಪಾಲ್ಗೊಳ್ಳಲೆಂದು ಬರೋಬ್ಬರಿ 10 ಲಕ್ಷ ಹಣ ಕಳೆದುಕೊಂಡಿದ್ದಾರೆ. 'ಜಬರ್ದಸ್ತ್' ಎಂಬ ತೆಲುಗು ಶೋ ನಲ್ಲಿ ನಟಿಸುತ್ತಿದ್ದ ಅವಿನಾಶ್, ಬಿಗ್‌ಬಾಸ್ ನಿಂದಾಗಿ 10 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಶೋ ಅರ್ಧಕ್ಕೆ ಬಿಟ್ಟುಬಂದ ಅವಿನಾಶ್
ಬಿಗ್‌ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಲೆಂದು ಅವಿನಾಶ್ ಶೋ ಅನ್ನು ಅರ್ಧಕ್ಕೆ ಬಿಟ್ಟುಬಂದಿದ್ದಾರೆ. ಆದರೆ ಶೋ ನವರು ಮೊದಲೇ ವಿಧಿಸಿದ್ದ ನಿಯಮದ ಪ್ರಕಾರ ಅರ್ಧಕ್ಕೆ ಶೋ ಬಿಟ್ಟರೆ ಹಣ ಪಾವತಿಸಬೇಕಾಗಿತ್ತು. ಅಂತೆಯೇ ಅವಿನಾಶ್ 10 ಲಕ್ಷ ಹಣ ಪಾವತಿಸಿ ಶೋ ಬಿಟ್ಟುಬಂದಿದ್ದಾರೆ.

ದೊಡ್ಡ ಮೊತ್ತದ ಆಫರ್ ಕೊಟ್ಟ ಬಿಗ್‌ಬಾಸ್
ಕಳೆದ ವಾರ ಬಿಗ್‌ಬಾಸ್ ಸ್ಪರ್ಧೆಗೆ ವೈಲ್ಡ್‌ಕಾರ್ಡ್ ಎಂಟ್ರಿಯಾಗಿ ಅವಿನಾಶ್ ಬಂದಿದ್ದಾರೆ. ಅವಿನಾಶ್ ಅವರಿಗೆ ಭಾರಿ ದೊಡ್ಡ ಮೊತ್ತದ ಆಫರ್ ನೀಡಿಯೇ ಬಿಗ್‌ಬಾಸ್ ಗೆ ಅವರನ್ನು ಕರೆತರಲಾಗಿದೆ ಎನ್ನಲಾಗುತ್ತಿದೆ. ದೊಡ್ಡ ಮೊತ್ತದ ಆಫರ್ ಬಂದ ಕಾರಣವೇ ಹಳೆಯ ಕಾಂಟ್ರಾಕ್ಟ್ ಉಲ್ಲಂಘಿಸಿ ಹತ್ತು ಲಕ್ಷ ದಂಡ ಪಾವತಿಸಿ ಬಿಗ್‌ಬಾಸ್ ಸ್ಪರ್ಧೆಗೆ ಅವಿನಾಶ್ ಬಂದಿದ್ದಾರೆ ಎನ್ನಲಾಗುತ್ತಿದೆ.

ಕೇಳಿದ್ದಕ್ಕಿಂತಲೂ ಐದು ಪಟ್ಟು ಹೆಚ್ಚು ಹಣ!
ಕಳೆದ ವಾರ ಎಲಿಮಿನೇಟ್ ಆದ ಸೂರ್ಯ ಕಿರಣ್ ಹೇಳಿರುವ ಪ್ರಕಾರ, 'ನಾನು ಕೇಳಿದ ಮೊತ್ತಕ್ಕಿಂತ ಐದು ಪಟ್ಟು ಹೆಚ್ಚು ಹಣವನ್ನು ಬಿಗ್‌ಬಾಸ್ ಕಾರ್ಯಕ್ರಮದವರು ನೀಡಿದರು' ಎಂದಿದ್ದರು. ಈಗ ಒಳಗೆ ಇರುವ ಸ್ಪರ್ಧಾಳುಗಳಿಗೆ ಸಹ ಭಾರಿ ದೊಡ್ಡ ಮೊತ್ತದ ಹಣವನ್ನೇ ಬಿಗ್‌ಬಾಸ್ ನೀಡುತ್ತಿದೆಯಂತೆ.

ನಾಗಾರ್ಜುನ ನಡೆಸಿಕೊಡುತ್ತಿರುವ ಬಿಗ್‌ಬಾಸ್
ತೆಲುಗು ಬಿಗ್‌ಬಾಸ್ ಕಾರ್ಯಕ್ರಮ ಪ್ರಸಾರವಾಗಲು ಪ್ರಾರಂಭವಾಗಿ ಎರಡು ವಾರದ ಮೇಲಾಗಿದೆ. ನಟ ನಾಗಾರ್ಜುನ ನಡೆಸಿಕೊಡುತ್ತಿರುವ ಈ ಶೋ ತೆಲುಗಿನಲ್ಲಿ ಹಿಟ್ ಆಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆದಿದೆ. ಬಿಗ್‌ಬಾಸ್ ಬಗ್ಗೆ ಟಾಕ್ ಸಹ ಜೋರಾಗಿದೆ.


Click it and Unblock the Notifications











