'ಪುಣ್ಯವತಿ' ಹೀರೊಗೆ ಸಿಕ್ಕಿತೇ 'ಬ್ರಹ್ಮಗಂಟು'? ಸ್ಮಾಲ್ ಗ್ಯಾಪ್ ಕೊಟ್ಟು ಬಂದ ನಟ ಭುವನ್ ಸತ್ಯ!

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಬ್ರಹ್ಮಗಂಟು. ಇದರ ಹೀರೋ ಯಾರು? ಅಕ್ಕ ತಂಗಿಯರ ಜೀವನ ಪ್ರೀತಿ, ತ್ಯಾಗ ಇತ್ಯಾದಿಗಳನ್ನು ಕಥಾ ಹಂದರವಾಗಿಟ್ಟುಕೊಂಡು ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಬ್ರಹ್ಮಗಂಟು' ಬಗ್ಗೆ ಈಗಾಗಲೇ ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲ ಮೂಡಿದೆ.

ಈ ಧಾರಾವಾಹಿಯ ನಾಯಕ ನಟಿಯಾಗಿ ಕಾವ್ಯಾ ರಮೇಶ್ ಹಾಗೂ ದಿವ್ಯಾ ಪಾಲಕ್ಕಲ್ ನಟಿಸುತ್ತಿರುವುದು ಖಚಿತವಾಗಿದೆ. ಇದೀಗ ಧಾರಾವಾಹಿಗೆ ನಾಯಕ ನಟನಾಗಿ ನಟ ಭುವನ್ ಸತ್ಯ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯು ಹೊರಬಿದ್ದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಣ್ಯವತಿ' ಧಾರಾವಾಹಿಯಲ್ಲಿ ನಾಯಕನಾಗಿ ಭುವನ್ ಸತ್ಯ ನಟಿಸುತ್ತಿದ್ದರು.

Actor Bhuvan Sathya as the lead in the Brahmagantu serial

'ಪುಣ್ಯವತಿ' ಎಂಬ ಧಾರಾವಾಹಿ ಕಳೆದ ವರ್ಷ ಶುರುವಾಗಿ ಒಂದು ವರ್ಷದಲ್ಲಿ ಮುಗಿದಿತ್ತು. ಈ ಧಾರಾವಾಹಿಯಲ್ಲಿ ಹ್ಯಾಂಡ್ಸಮ್ ಹೀರೋ ಆಗಿ ಮಿಂಚಿದ ನಟ ಭುವನ್ ಸತ್ಯ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. ಧಾರಾವಾಹಿ ಬೇಗ ಮುಗಿದರೂ ಪ್ರೇಕ್ಷಕರು ಅಭಿಮಾನಿಗಳು ಭುವನ್ ಸತ್ಯ ಅವರನ್ನು ಮತ್ತೆ ಬೇರೆ ಧಾರಾವಾಹಿಯಲ್ಲಿ ನಟಿಸುವುದನ್ನು ನೋಡುವ ಕಾತುರ, ಕುತೂಹಲ ಹಾಗೂ ಅಪೇಕ್ಷೆಯನ್ನು ಹೊರಹಾಕಿದ್ದರು.

ಬಹುಶಃ ಇದೀಗ ಆ ಅಪೇಕ್ಷೆ ನಿಜವಾಗಲಿದೆ. 'ಬ್ರಹ್ಮಗಂಟು' ಎಂಬ ಹೊಸ ಧಾರಾವಾಹಿಯಲ್ಲಿ ನಟ ಭುವನ್ ಸತ್ಯ ಅವರು ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಚಾರ ಹೊರ ಬಿದ್ದಿದ್ದು, ಈ ಬಗ್ಗೆ ಅಭಿಮಾನಿಗಳು ಹಾಗೂ ಪ್ರೇಕ್ಷಕರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಈ ಮಾಹಿತಿಯನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

Actor Bhuvan Sathya as the lead in the Brahmagantu serial

ಭುವನ್ ಸತ್ಯ ಅವರೇ ಈ ಧಾರಾವಾಹಿಯಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವುದಾದರೆ ಅವರ ಪಾತ್ರ ಯಾವ ರೀತಿ ಇರುತ್ತದೆ? ಯಾವ ಗೆಟಪ್‌ನಲ್ಲಿ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಾರೆ ಎಂಬೆಲ್ಲ ಪ್ರಶ್ನೆಗಳು ಕಿರುತೆರೆ ವೀಕ್ಷಕರಲ್ಲಿ, ಅಭಿಮಾನಿಗಳಲ್ಲಿ ಹುಟ್ಟಿವೆ.

ನಟ ಭುವನ್ ಸತ್ಯ ಮೂಲತಃ ಡ್ಯಾನ್ಸರ್ ಕೂಡ ಹೌದು. 'ಪುಣ್ಯವತಿ' ಧಾರಾವಾಹಿ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಇವರು ನಟನೆಯಲ್ಲಿಯೂ ಸೈನಿಸಿಕೊಂಡಿದ್ದರು. ಇದೀಗ ಬ್ರಹ್ಮಗಂಟು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದ್ದು ನಟ ಭುವನ್ ಸತ್ಯ ಅವರ ಇನ್‌ಸ್ಟಾಗ್ರಾಂನಲ್ಲಿಯೂ ಈ ವಿಚಾರವಾಗಿ ಕೆಲವು ಫೋಟೋಗಳು ಶೇರ್ ಆಗಿವೆ.

'ಬ್ರಹ್ಮಗಂಟು' ಧಾರಾವಾಹಿಯ ತೆರೆ ಹಿಂದಿನ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ನಟ ಭುವನ್ ತಾವೇ ಈ ಧಾರಾವಾಹಿಯಲ್ಲಿ ನಟಿಸುತ್ತಿರುವುದೆಂಬುದನ್ನು ಖಚಿತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲಂತೂ ಸಕ್ಕತ್ ಆ್ಯಕ್ಟಿವ್ ಇರುವ ನಟ ಭುವನ್ ಸತ್ಯ ಆಗಾಗ ಸ್ಟೈಲಿಶ್ ಫೋಟೋ ಶೂಟ್‌ಗಳನ್ನು ಮಾಡಿಸುತ್ತಿದ್ದು, ಅದನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಇನ್ನು ಈ ಧಾರಾವಾಹಿಯ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದ್ದು ಜನಮನ ಗೆದ್ದಿದೆ. ಮತ್ತೆ ತಮ್ಮ ಫೇವರೆಟ್ ಹ್ಯಾಂಡ್‌ಸಮ್ ನಟನನ್ನು ನೋಡುವ ಹಂಬಲದಲ್ಲಿ ಪ್ರೇಕ್ಷಕರಿದ್ದಾರೆ. ಧಾರಾವಾಹಿ ಹೆಸರು 'ಬ್ರಹ್ಮಗಂಟು' ಎಂದಿದ್ದು ಅದು ಅಕ್ಕ ತಂಗಿಯ ಕಥೆಯನ್ನು ಹೇಳುತ್ತಿದೆ. ಹಾಗಾದರೆ ಇಲ್ಲಿ ಭುವನ್ ಅವರ ಪಾತ್ರ ಹಾಗೂ ಕಥೆಯ ಮಹತ್ವವೇನು? ಎಂಬ ಪ್ರಶ್ನೆ ಮೂಡಿದೆ. ಎಲ್ಲಾ ಕುತೂಹಲ ಹಾಗೂ ಪ್ರಶ್ನೆಗಳಿಗೆ ಉತ್ತರ ಪಡೆಯಲು ಧಾರಾವಾಹಿ ಆರಂಭವಾಗಲು ಕಾದು ನೋಡಿ ತಿಳಿದುಕೊಳ್ಳಬೇಕಿದೆ.

More from Filmibeat

English summary
Punyavati serial hero Bhuvan Sathya will act in Brahmagantu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X