»   » ಸೀರಿಯಲ್ ಸ್ಟಾರ್ 'ರಾಧಾ ಕಲ್ಯಾಣ' ಚಂದನ್ ಸಂದರ್ಶನ

ಸೀರಿಯಲ್ ಸ್ಟಾರ್ 'ರಾಧಾ ಕಲ್ಯಾಣ' ಚಂದನ್ ಸಂದರ್ಶನ

Posted By:
Subscribe to Filmibeat Kannada
<ul id="pagination-digg"><li class="next"><a href="/tv/actor-chandan-serial-radha-kalyana-fame-talks-068821.html">Next »</a></li></ul>
Chandan
ಕಿರುತೆರೆಯ 'ಸ್ಟಾರ್' ನಟ ಎಂದೇ ಸದ್ಯಕ್ಕೆ ಖ್ಯಾತಿ ಪಡೆದಿರುವ ನಟ 'ಚಂದನ್' ಮಂಡ್ಯದ ಗಂಡು. ಮಂಡ್ಯದಲ್ಲಿ ಹುಟ್ಟಿ ಮೈಸೂರಿನಲ್ಲಿ ಬೆಳೆದ ಚಂದನ್, ಡಾ ವಿಷ್ಣುವರ್ಧನ್, ಅಂಬರೀಷ್, ದರ್ಶನ್, ಲವ್ಲಿ ಸ್ಟಾರ್ ಪ್ರೇಮ್, ಯಶ್ ನಂತರ ಆ ಕಡೆಯಿಂದ ಮತ್ತೊಬ್ಬ ನಟರಾಗಿ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ಇವರೇನೂ ಕನ್ನಡ ಪ್ರೇಕ್ಷಕರಿಗೆ ಹೊಸಬರಲ್ಲ.

ಕಾರಣ, ಚಂದನ್ ಈಗಾಗಲೇ ಕಿರುತೆರೆಯ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಜೊತೆಗೆ ಈಗಾಗಲೇ ಕೆಲವು ಸಿನಿಮಾಗಳಲ್ಲೂ ಮುಖ ತೋರಿಸಿರುವ ಸಿನಿಪ್ರೇಕ್ಷಕರಿಗೂ ಪರಿಚಯವಿರುವ ನಟ. ಅಷ್ಟೇ ಅಲ್ಲ, ಈ ಚಂದನ್, ಹೆಸರಿಗೆ ತಕ್ಕಂತೆ ತುಂಬಾ 'ಚಂದದ ಹುಡುಗ'.

'ಪ್ಯಾಟೆ ಮಂದಿ ಕಾಡಿಗೆ ಹೋದ್ರು' ರಿಯಾಲಿಟಿ ಶೋ ಮೂಲಕವೂ ಎಲ್ಲರಿಗೂ ಚಿರಪರಿಚಿತರಾದವರು ಈ ಚಂದನ್. ಇದೀಗ ಸತತ 300 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ' ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ರಾಧಾ ಕಲ್ಯಾಣ'ದ ನಾಯಕ ಕೃಷ್ಣ ಪಾತ್ರಧಾರಿ ಈ ಚಂದನ್.

ಅಚ್ಚರಿಯ ವಿಷಯವೆಂದರೆ, ಸಾಮಾನ್ಯವಾಗಿ ಎಲ್ಲ ಧಾರಾವಾಹಿಗಳ ಮೂಲಕ ನಾಯಕಿಯರು ಪ್ರಖ್ಯಾತರಾದರೆ ಮಹಾ ಅಚ್ಚರಿ, ಅಪವಾದವೆಂಬಂತೆ ಈ ಧಾರಾವಾಹಿಯ ನಾಯಕ ನಟ ಚಂದನ್, ಎಲ್ಲರಿಗಿಂತ ಹೆಚ್ಚು ಜನಪ್ರಿಯ.

ಚಂದನ್ ಈಗ ಎಲ್ಲೇ ಹೋಗಲಿ, ಬರಲಿ.. ಜನ ಅವರನ್ನು ಸುತ್ತುವರಿದು ನಿಂತುಬಿಡುತ್ತಾರೆ. ಇತ್ತೀಚಿಗೆ ಉಡುಪಿ ಹಾಗೂ ಶಿವಮೊಗ್ಗದಲ್ಲಿ ನಡೆದ 'ರಾಧಾ ಕಲ್ಯಾಣ' ಧಾರಾವಾಹಿಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚಂದನ್ ಅವರಿಗೆ ಭಾರಿ ಜನಪ್ರಿಯತೆಯ ಅರಿವಾಗಿದೆ. ಹೊರಗಡೆ ಓಡಾಡುವುದು ಕಷ್ಟ... ಕಷ್ಟ ಎನ್ನುವ ಅರಿವು ಈಗ ಸ್ವತಃ ಚಂದನ್ ಅವರಿಗೂ ಬಂದಿದೆಯಂತೆ.

ಇಷ್ಟು ದಿನ 'ಸೀರಿಯಲ್ ಲೋಕ'ದಲ್ಲಿ ಮಿಂಚುತ್ತಿದ್ದ ನಟ ಚಂದನ್, ಇದೀಗ ಸಿನಿಮಾ ನಟನಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರದೇ ಕಥೆ, ಚಿತ್ರಕಥೆ ಹೊಂದಿರುವ 'ರಂಗ ಶಂಕರ' ಹೆಸರಿನ ಚಿತ್ರದಲ್ಲಿ ಸದ್ಯವೇ ನಟಿಸಲಿರುವ ಚಂದನ್, 'ಒನ್ ಇಂಡಿಯಾ ಕನ್ನಡ'ದ ಶ್ರೀರಾಮ್ ಭಟ್ ಜೊತೆ ನಡೆಸಿದ ಮಾತುಕತೆ ಇಲ್ಲಿದೆ, ಓದಿ...

*ನಿಮ್ಮ ಊರು, ವಿದ್ಯಾಭ್ಯಾಸದ ಬಗ್ಗೆ ಹೇಳಿ...

ಹುಟ್ಟಿದ್ದು ಮಂಡ್ಯದಲ್ಲ್ಲಿ. ನಮ್ಮಪ್ಪ ವೇಣುಗೋಪಾಲ್ ಹಾಗೂ ಅಮ್ಮ ಸಾವಿತ್ರಮ್ಮ. ನಾನು ಹುಟ್ಟಿದ್ದು ಮಂಡ್ಯದಲ್ಲಾದರೂ ನಾನು ಚಿಕ್ಕವನಿರುವಾಗಲೇ ಮಂಡ್ಯದಿಂದ ನಮ್ಮ ಕುಟುಂಬ ಮೈಸೂರಿಗೆ ಹೋಗಿ ನೆಲೆಸಿದ್ದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆವರೆಗೆ ನಾನು ಓದಿದ್ದು ಮೈಸೂರಿನಲ್ಲಿ. ಮುಂದಿನ ವಿದ್ಯಾಭ್ಯಾಸ ಅಂದರೆ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದು ಮಂಡ್ಯದಲ್ಲಿ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/tv/actor-chandan-serial-radha-kalyana-fame-talks-068821.html">Next »</a></li></ul>
English summary
Actor Chandan, Zee Kannada serial 'Radha Kalyana' fame is one of the popular Star of TV Media. Now he is acting in the Serial Radha Kalyana and debuting in to Movies very shortly. Chandan to act in a movie, which includes his own Story and Screen Play in next month. &#13; &#13;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada