Don't Miss!
- News
ಇನ್ಫೋಸಿಸ್ ಸಿಇಒ ಆಗಿ ಸಲೀಲ್ ಪರೇಖ್ ಮರು ನೇಮಕ
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Sports
ವೈರಲ್ ಫೋಟೋ: MI vs DC ಪಂದ್ಯದ ವೇಳೆ ಪ್ರೇಕ್ಷಕರ ಗಮನ ಸೆಳೆದ ಈ ಮಿಸ್ಟರಿ ಗರ್ಲ್ಸ್ ಯಾರು?
- Finance
ಟಾಪ್ 10 ಕಂಪನಿಗಳ ಪೈಕಿ 5 ಕಂಪನಿ ಮೌಲ್ಯ 1.78 ಲಕ್ಷ ಕೋಟಿ ಏರಿಕೆ
- Education
IGNOU Re-registration 2022 For July Session : ಜುಲೈ ಸೆಶನ್ ಪ್ರವೇಶಾತಿಗೆ ಮರುನೊಂದಣಿ ಪ್ರಕ್ರಿಯೆ ಆರಂಭ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Technology
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟ ದರ್ಶನ್, ಪುನೀತ್ ರಾಜ್ಕುಮಾರ್ಗೆ ಇವರು ಮಾಡುವ ಕೈಮಾ ಉಂಡೇ ಅಂದ್ರೆ ಪಂಚ ಪ್ರಾಣ!
ನಟ ದರ್ಶನ್ ಮತ್ತು ನಟ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷವಾದ ಊಟದ ಅಭಿರುಚಿ ಇದೆ. ಈ ನಾಯಕ ನಟರು ಆಗಾಗ ತಾವು ಸವಿಯುವ ಊಟದಿಂದಲೇ ಸುದ್ದಿ ಆಗುತ್ತಾರೆ. ಈಗ ಇವರ ಊಟದ ವೈಖರಿ, ಅಭಿರುಚಿ ಬಗ್ಗೆ ಮಾತನಾಡಲು ಕಾರಣ ನಿರ್ದೇಶಕ ತರುಣ್ ಸುಧೀರ್ ಮತ್ತು ಅವರ ತಾಯಿ ಮಾಲತಿ ಸುಧೀರ್.
ಕನ್ನಡ ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಕಾರ್ಯಕ್ರಮ ಒಂದು ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮದ ಹೆಸರು 'ಗೋಲ್ಡನ್ ಗ್ಯಾಂಗ್'. ಕಾರ್ಯಕ್ರಮವನ್ನು ನಟ ಗಣೇಶ್ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರೆಟಿ ಸ್ನೇಹಿತರು ಭಾಗವಹಿಸುತ್ತಾರೆ. ತಮ್ಮ ಸ್ನೇಹ, ಒಡನಾಟ, ನೆನಪುಗಳನ್ನು ಹಂಚಿಕೊಳ್ಳುತ್ತಾರೆ.
ಅಂತೆಯೇ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ, ನಿರ್ದೇಶಕ ತರುಣ್ ಸುಧೀರ್, ನಟ ಶರಣ್, ನಟ ನೆನಪಿರಲಿ ಪ್ರೇಮ್ ಭಾಗವಹಿಸಿದ್ದರು. ಈ ಮೂವರು ಬಹಳ ವರ್ಷದ ಸ್ನೇಹಿತರು. ಹಾಗಾಗಿ ಕಾರ್ಯಕ್ರಮದಲ್ಲಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. ವಿಶೇಷ ಅಂದರೆ ಕಾರ್ಯಕ್ರಮದಲ್ಲಿ ತರುಣ್ ಸುಧೀರ್ ಅವರ ತಾಯಿ ಭಾಗಿ ಆಗಿದ್ದರು. ಅವರು ಕೂಡ ಮಕ್ಕಳ ಸ್ನೇಹದ ಬಗ್ಗೆ ಮಾತನಾಡಿದರು.

ಮಾಲತಿ ಸುಧೀರ್ ಕೈ ರುಚಿಗೆ ಮನಸೋತಿದ್ದ ದರ್ಶನ್, ಪುನೀತ್!
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಒಂದಷ್ಟು ಕುತೂಹಲಕಾರಿ ವಿಚಾರಗಳನ್ನು ತರುಣ್ ಸುಧೀರ್ ಹಂಚಿಕೊಂಡಿದ್ದಾರೆ. ಮಾಲತಿ ಸುಧೀರ್ ಅವರು ಮಾಡುವ ಕೈಮಾ ಉಂಡೆ ಸಾರು ಅಂದರೆ ದರ್ಶನ್ ಮತ್ತು ಪುನೀತ್ ರಾಜ್ಕುಮಾರ್ ಅವರಿಗೆ ಬಲು ಇಷ್ಟವಂತೆ. ಹಾಗಾಗಿ ಎಲ್ಲೇ ತರುಣ್ ಸಿಕ್ಕರು ಕೂಡ, ಅಮ್ಮನಿಗೆ ಫೋನ್ ಮಾಡಿ ಕೈಮಾ ಉಂಡೆ ಯಾವ ಮಾಡಿ ಕೊಡುತ್ತೀರ ಎಂದು ಕೇಳುತ್ತಿದ್ದರಂತೆ. ಈ ಇಬ್ಬರು ನಟರು ಮಾತ್ರವಲ್ಲ. ಸಾಕಷ್ಟು ಮಂದಿಗೆ ಮಾಲತಿ ಸುಧೀರ್ ಅವರು ಮಾಡುವ ಕೈಮಾ ಉಂಡೆ ಸಾರು ಅಂದರೆ ಬಹಳ ಇಷ್ಟ.

ಸುಧೀರ್ ಕೊನೆ ಗಳಿಗೆಯಲ್ಲಿ ನೋಡ ಬಯಸಿದ್ದು ಅಂಬರೀಶ್ ಅವರನ್ನು!
ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರಲ್ಲಿ ಹಿರಿಯ ನಟ ದಿವಂಗತ ಸುಧೀರ್ ಅವರು ಕೂಡ ಒಬ್ಬರು. ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಸುಧೀರ್ ಅವರ ಬಗ್ಗೆ ಒಂಷ್ಟು ವಿಚಾರಗಳನ್ನು, ಮಾಲತಿ ಸುಧೀರ್ ಅವರು ಹಂಚಿಕೊಂಡಿದ್ದಾರೆ. ಸುಧೀರ್ ಮತ್ತು ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರು ಇಬ್ಬರು ಆಪ್ತ ಸ್ನೇಹಿತರಾಗಿದ್ದರು. ಸುಧೀರ್ ಅವರು ಮನೆ ಕಟ್ಟಲು ಅಂಬಿ ಸಹಾಯ ಮಾಡಿರುವುದನ್ನು ಮಾಲತಿ ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲಾ ಸುಧೀರ್ ಅವರು ಕೊನೆಯುಸಿರೆಳೆಯುವಾಗ ಅಂಬರೀಶ್ ಅವರನ್ನು ನೋಡ ಬೇಕು ಎಂದು ಕನವರಿಸಿದ್ದರಂತೆ. ಅದು ಅವರ ಕೊನೆ ಆಸೆಯೂ ಆಗಿತ್ತಂತೆ.

ತರುಣ್ ಸುಧೀರ್ ಮದುವೆ ಕನಸು ಬಿಚ್ಚಿಟ್ಟ ಮಾಲತಿ ಸುಧೀರ್!
ಇನ್ನು ಈ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದು ನಿರ್ದೇಶಕ ತರುಣ್ ಸುಧೀರ್ ಮದುವೆ ವಿಚಾರ. ತರುಣ್ ಅವರಿಗೆ ಮದುವೆ ಮಾಡಬೇಕು ಎನ್ನುವುದು ಅಮ್ಮನ ಅತಿ ದೊಡ್ಡ ಆಸೆಯಂತೆ. ಯಾವಾಗಲು ಮಗನಿಗೆ ಮದುವೆ ಮಾಡಬೇಕು ಎನ್ನುವುದೇ ಅವರ ಚಿಂತೆ. ಹಾಗಾಗಿ ಕಾರ್ಯಕ್ರಮದಲ್ಲಿ ಈ ಬಗ್ಗೆಯೂ ಮಾಲತಿ ಸುಧೀರ್ ಅವರು ಮಾತಾಡಿದರು. ಜೊತೆಗೆ ತನ್ನ ಬಳಿಕ ಮಗ ಒಂಟಿ ಆಗಿ ಬಿಡ್ತಾನೆ. ಅದು ಆಗ ಬಾರದು, ಅವನಿಗೆ ಒಬ್ಬ ಸಂಗಾತಿ ಬರಬೇಕು ಎಂದು ಹೇಳುತ್ತಾ ಭಾವುಕರಾದರು ಮಾಲತಿ ಸುಧೀರ್.

ಮದುಮಗನಾದ ತರುಣ್ ಸುಧೀರ್!
ಇನ್ನು ಮಗನಿಗೆ ಮದುವೆ ಮಾಡಬೇಕು, ಮಗನನ್ನು ಮದುಮಗನಾಗಿ ನೋಡ ಬೇಕು ಎನ್ನುವ ತಾಯಿಯ ಆಸೆಯನ್ನು ಕಾರ್ಯಕ್ರಮದಲ್ಲಿ ಪೂರ್ಣ ಮಾಡಲಾಯಿತು. ನಿರ್ದೇಶಕ ತರುಣ್ ಅವರಿಗೆ ಕಾರ್ಯಕ್ರಮದಲ್ಲೇ ಮದುಮಗನ ವೇಷ ಹಾಕಿಸಲಾಯಿತು. ಪಂಚೆ, ಶಲ್ಯ, ಬಾಸಿಂಗ, ಪೇಟ ತೊಟ್ಟು ಥೇಟ್ ಮದುಮಗನ ಹಾಗೆ ಕಂಗೊಳಿಸಿದ್ದಾರೆ ತರುಣ್ ಸುಧೀರ್. ಮಗನನ್ನು ಮದುಮಗನ ರೂಪದಲ್ಲಿ ಕಂಡು ತಾಯಿ ಮಾಲತಿ ಸುಧೀರ್ ಸಂತಸ ವ್ಯಕ್ತ ಪಡಿಸಿದರು.