'ಲಕ್ಷ್ಮಿ ನಿವಾಸ' ಧಾರಾವಾಹಿಯ ಸಿದ್ಧೇಗೌಡ ಆಗಿ ಮೋಡಿಮಾಡುತ್ತಿರೋ ಧನಂಜಯ್: ಈ ನಟನ ಹಿನ್ನೆಲೆಯೇನು?
ಜೀ ಕನ್ನಡ ವಾಹಿನಿ ಇತ್ತೀಚೆಗೆ ಹಲವಾರು ಹೊಸ ಧಾರಾವಾಹಿಗಳನ್ನು ಲಾಂಚ್ ಮಾಡಿದೆ. ಅದರಲ್ಲಿ ಕೂಡ 'ಲಕ್ಷ್ಮಿ ನಿವಾಸ' ಒಂದು. ಇತ್ತೀಚೆಗಷ್ಟೇ ಶುರುವಾಗಿರುವ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದಿದೆ. ಮುಖ್ಯವಾಗಿ ಸ್ಯಾಂಡಲ್ ವುಡ್ ನಟಿ ಶ್ವೇತಾ ಅವರು ಲಕ್ಷ್ಮಿಯಾಗಿ ಕಿರುತೆರೆಗೆ ಕಾಲಿಟ್ಟಿದ್ದಾರೆ. ಅದು ಮೊದಲ ಬಾರಿ! ಹೌದು, 'ಕರ್ಪೂರ ಗೊಂಬೆ' ಸಿನಿಮಾದಲ್ಲಿ ಶ್ರುತಿಯ ತಂಗಿಯಾಗಿ ನಟಿಸಿದ್ದ ಶ್ವೇತಾ ಇದೀಗ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.
ಇನ್ನು ಬಹಳ ದೊಡ್ಡ ಕಲಾವಿದರ ತಂಡವನ್ನು ಹೊಂದಿರುವ ಈ ಧಾರಾವಾಹಿ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಪಕ್ಕಾ ಮಿಡಲ್ ಕ್ಲಾಸ್ ಜೀವನವನ್ನು ಅದ್ಭುತವಾಗಿ ತೋರಿಸುವ ಪ್ರಯತ್ನದಲ್ಲಿರುವ ಈ ಧಾರಾವಾಹಿ ಕಥೆಗೆ ಹಲವಾರು ಆಯಾಮಗಳಿದ್ದು ಪ್ರೇಕ್ಷಕರಂತೂ ಬಹಳ ಎಂಜಾಯ್ ಮಾಡುತ್ತಿದ್ದಾರೆ. ಖುಷಿಯಿಂದ ಧಾರಾವಾಹಿಯನ್ನು ನೋಡುತ್ತಿದ್ದಾರೆ.

ಧಾರಾವಾಹಿಯಲ್ಲಿ ಈಗಾಗಲೇ ಹಲವಾರು ತಿರುವುಗಳಿದ್ದು ಪ್ರತಿದಿನದ ಸಂಚಿಕೆಯೂ ವೀಕ್ಷಕರ ಮನದಲ್ಲಿ ಕುತೂಹಲವನ್ನುಂಟು ಮೂಡಿಸುತ್ತಿದೆ. ಸಿದ್ದೇಗೌಡರ ಪಾತ್ರ ಸದ್ಯಕ್ಕೆ ಜನರ ಮನ ಗೆದ್ದಿದೆ. ಹೌದು, ಹಳ್ಳಿ ಹೈದನಾಗಿ ಗೆಟ್ ಅಪ್ ನ ಸಿದ್ದಗೌಡ್ರು ಒಬ್ಬ ಮಾಸ್ ಲೀಡರ್ ಆಗಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. 'ಲಕ್ಷ್ಮಿ ನಿವಾಸ'ದ ಮನೆ ಮಗಳಾದ ಭಾವನಾಳ ಮನ ಗೆಲ್ಲುವ ಪ್ರಯತ್ನದಲ್ಲಿರುವ ಸಿದ್ದೇಗೌಡರು ತಮ್ಮ ಹಳ್ಳಿಯ ಸೊಗಡಿನಲ್ಲಿ ಇದೀಗ ಭಾವನಾಳ ಹಿಂದೆ ಬಿದ್ದಿದ್ದಾರೆ.
ಅಂದ ಹಾಗೆ ಸಿದ್ದೇಗೌಡರ ಪಾತ್ರವನ್ನು ಮಾಡುತ್ತಿರುವ ಈ ನಟನ ಬಗ್ಗೆ ಈಗಾಗಲೇ ಪ್ರೇಕ್ಷಕರಿಗೆ ಬಹಳ ಕುತೂಹಲ ಮೂಡಿದೆ. ಅವರು ಯಾರೆಂದು ನೋಡೋಣ ಬನ್ನಿ.
ಹಳ್ಳಿ ಹೈದ ಸಿದ್ದೇಗೌಡರ ಪಾತ್ರವನ್ನು ಮಾಡುತ್ತಿರುವ ಯುವ ನಟನ ಹೆಸರು ಧನಂಜಯ್. ಇದೀಗ ಕಿರುತೆರೆಗೆ ಪ್ರಥಮ ಬಾರಿ ಬಂದಿರುವ ಇವರು ಆಗಲೇ ತಮ್ಮ ಅಭಿನಯದಿಂದ ಎಲ್ಲರ ಮನ ಗೆದ್ದಿದ್ದಾರೆ. ಹಾಗೆಂದ ಮಾತ್ರಕ್ಕೆ ಇವರು ನಟನಾ ಕ್ಷೇತ್ರಕ್ಕೆ ಹೊಸಬರೇನಲ್ಲ!

ಹಲವಾರು ವರ್ಷಗಳಿಂದ ನಟನಾ ಕ್ಷೇತ್ರದಲ್ಲಿರುವ ಇವರು 'ವಾಸಂತಿ ನಲಿದಾಗ', 'ಥಗ್ ಆಫ್ ರಾಮಘಡ' ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಅದ್ಭುತ ಡಬ್ಬಿಂಗ್ ಆರ್ಟಿಸ್ಟ್ ಆದ ಇವರು ಡ್ಯಾನ್ಸರ್ ಕೂಡ ಹೌದು. ಒಟ್ಟಿನಲ್ಲಿ ಹೇಳುವುದಾದರೆ ನಟನಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಇರುವ ನಟ ಧನಂಜಯ್ ಆಲ್-ರೌಂಡರ್ ಎಂದರೆ ತಪ್ಪಾಗಲಾರದು.
ಸಿನಿಮಾಗಳಲ್ಲಿ ನಟಿಸಿದ ನಂತರ ಇದೀಗ ಕಿರುತೆರೆಯತ್ತ ಮುಖ ಮಾಡಿರುವ ಧನಂಜಯ್ ಅವರು ಸಿಕ್ಕಿರುವ ವಿಭಿನ್ನ ಪಾತ್ರವನ್ನು ಅತ್ಯಂತ ವಿಶಿಷ್ಟವಾಗಿ ಅಭಿನಯಿಸಿ ಧಾರಾವಾಹಿಗೆ ಒಳ್ಳೆ ಕಳೆಯ ತಂದಿದ್ದಾರೆ. ಜೊತೆಗೆ ಸದ್ಯ ವೀಕ್ಷಕರು ಕೂಡಾ ಅವರ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.


Click it and Unblock the Notifications











