"ನಿಮ್ಮ ಮನೆ ಮಗನ ಮೊದಲ ಅವಾರ್ಡ್" ಎಂದು ಹಿಗ್ಗಿದ ಧನಂಜಯ್; 'ಲಕ್ಷ್ಮಿ ನಿವಾಸ' ನಟನ ಹಿನ್ನೆಲೆಯೇನು?
ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟ ಅನೇಕ ನಟ ನಟಿಯರು ಮುಂದೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವುದು ಮಾಮೂಲಿ. ಆದರೆ ಈ ನಟ ಹಾಗಲ್ಲ. ಹಿರಿತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಪರಿಚಿತರಾದ ಈತ ಇದೀಗ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.
ನಾವಿಂದು ಮಾತನಾಡುತ್ತಿರುವುದು 'ಲಕ್ಷ್ಮಿ ನಿವಾಸ' ಧಾರಾವಾಹಿಯ ಸಿದ್ಧೇಗೌಡರ ಬಗ್ಗೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಸಿದ್ಧೇಗೌಡರಾಗಿ ಅಭಿನಯಿಸುತ್ತಿರುವ ಈ ಹ್ಯಾಂಡ್ ಸಮ್ ಹುಡುಗನ ಹೆಸರು ಧನಂಜಯ್ ಗೌಡ.

ಹಳ್ಳಿ ಹೈದ ಸಿದ್ಧೇಗೌಡನಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಧನಂಜಯ್ ಮಾಸ್ ಲುಕ್ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಧನಂಜಯ್ ಅವರು ಇದೀಗ ಕಿರುತೆರೆಯ ಹೊಸ ಸೆನ್ಸೇಷನ್ ಸ್ಟಾರ್ ಹೌದು. ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆದಿದ್ದು ಜೀ ಕನ್ನಡದ ಹೊಸ ಸೆನ್ಸೇಷನ್ ಅವಾರ್ಡ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಧನಂಜಯ್.
"ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಪ್ರೀತಿಯ ಸಿದ್ಧೇಗೌಡ. ಫೈನಲಿ ಜೀ ಕುಟುಂಬದಲ್ಲಿ, ನಿಮ್ಮೆಲ್ಲರ ಪ್ರೀತಿ ಮತ್ತು ದೇವರ ಆಶೀರ್ವಾದದಿಂದ ನನಗೊಂದು ಅವಾರ್ಡ್ ಸಿಕ್ಕಿದೆ. ನನಗಂತೂ ತುಂಬಾ ಖುಷಿಯಾಗುತ್ತಿದೆ. ಇದು ನಿಮ್ಮ ಮನೆಯ ಮಗ ಆ್ಯಕ್ಟಿಂಗ್‌ನಲ್ಲಿ ಪಡೆದಿರುವ ಮೊದಲ ಅವಾರ್ಡ್. ಯಾವಾಗಲೂ ನಮ್ಮ ಸೀರಿಯಲ್‌ನ ನೋಡ್ತಾ ಇರಿ. ಹರಸಿ. ಆಶೀರ್ವಾದಿಸಿ" ಎಂದು ಸಿದ್ಧೇಗೌಡ ಆಲಿಯಾಸ್ ಧನಂಜಯ ಅವರು ಹೇಳಿಕೊಂಡಿದ್ದಾರೆ.
'ವಾಸಂತಿ ನಲಿದಾಗ', 'ಥಗ್ ಆಫ್ ರಾಮಘಡ' ಎಂಬ ಎರಡು ಸಿನಿಮಾಗಳಲ್ಲಿ ನಟಿಸಿರುವ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಧನಂಜಯ ಅವರು ಕಮಾಲ್ ಮಾಡಿದ್ದಾರೆ. ಇನ್ನು ಡಬ್ಬಿಂಗ್ ಆರ್ಟಿಸ್ಟ್ ಆಗಿರುವ ಧನಂಜಯ್ ಅವರು ಡ್ಯಾನ್ಸರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಆಲ್ ರೌಂಡರ್ ಆಗಿರುವ ಧಜಂಜಯ್ ಅವರು ಸಿದ್ಧೇಗೌಡರಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.

ಧಾರಾವಾಹಿಯ ಆರಂಭದಿಂದಲೇ ಭಾವನಾಳ ಹಿಂದೆ ಬಿದ್ದಿರುವ ಸಿದ್ಧೇಗೌಡರು ಆಕೆಯನ್ನು ಬಹಳ ಪ್ರೀತಿಸುತ್ತಿದ್ದರು. ಅದು ಒಂದು ಕಡೆಯ ಪ್ರೀತಿ ಹೌದು. ಸಿದ್ಧೇಗೌಡರಿಗೆ ಮನೆಯವರು ಬೇರೆ ಹುಡುಗಿಯೊಂದಿಗೆ ಮದುವೆ ನಿಶ್ಚಯ ಮಾಡಿದಾಗ ಅವರು ಕದ್ದು ಮುಚ್ಚಿ ಭಾವನಾ ಕೊರಳಿಗೆ ತಾಳಿ ಕಟ್ಟಿದ್ದರು. ಮುಂದೆ ಕೊಂಚ ಸಮಯದ ಬಳಿಕ ತಾನೇ ಭಾವನಾಳಿಗೆ ತಾಳಿ ಕಟ್ಟಿದ್ದು ಎಂದು ಅವರು ಒಪ್ಪಿಕೊಂಡರು. ಇದೀಗ ಸಿದ್ಧೇಗೌಡ ಹಾಗೂ ಭಾವನಾ ಮದುವೆಯನ್ನು ಗೌಡರ ಮನೆಯವರು ಒಪ್ಪುತ್ತಿಲ್ಲ. ಈ ಹೊಸ ಜೋಡಿಯನ್ನು ಮನೆಯವರು ಒಪ್ಪಿಕೊಳ್ಳುತ್ತಾರಾ, ಗೌಡರ ಪ್ರೀತಿಗೆ ಭಾವನಾ ಅಸ್ತು ಎನ್ನುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











