ಮುದ್ದಾದ ಮಗುವಿನ ನಿರೀಕ್ಷೆಯಲ್ಲಿ ಧನರಾಜ್ ಆಚಾರ್ ದಂಪತಿ; ಸೀಮಂತ ಶಾಸ್ತ್ರದ ಫೋಟೋಗಳು ವೈರಲ್
ಧನರಾಜ್ ಆಚಾರ್ ಎಲ್ಲರನ್ನೂ ನಕ್ಕು ನಗಿಸುತ್ತಾ ಇರುವ ಹಸನ್ಮುಖಿ ವ್ಯಕ್ತಿ ಎಂದರೆ ತಪ್ಪಾಗದು. ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿರುವ ಧನರಾಜ್ ಆಚಾರ್ ಎಂದರೆ, ತುಳು ಮಂದಿಗೆ ಬಹಳ ಅಚ್ಚು ಮೆಚ್ಚು ಎಂದರೆ ಅದು ತಪ್ಪಾಗದು. ಇದೀಗ ಧನರಾಜ್ ಅವರ ಪತ್ನಿಯ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಲಾಗಿದೆ. ಬಂಧು ಮಿತ್ರರನ್ನು ಒಡಗೂಡಿದ ಈ ಕಾರ್ಯಕ್ರಮದಲ್ಲಿ ಎಲ್ಲರಲ್ಲೂ ಸಂಭ್ರಮ ಮನೆ ಮಾಡಿತ್ತು. ಧನರಾಜ್ ಆಚಾರ್ಯ ಅವರ ಪತ್ನಿ ಫೋಟೋಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿದೆ.
ತಲೆಗೆ ಮೊಗ್ಗಿನ ಜಡೆ ಹಾಗೂ ಸಾಕ್ಷಾತ್ ಸರಸ್ವತಿ ದೇವಿಯನ್ನು ನೋಡಿದ ಹಾಗೆ ಆಗುತ್ತಿದೆ. ನಮಗೆ ನಿಮ್ಮ ಇಬ್ಬರ ನೋಡಿ ಬಹಳ ಆನಂದವಾಯಿತು ಎಂದೆಲ್ಲ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ನೀವು ಮಾಲ್ಡೀವ್ಸ್ ಟ್ರಿಪ್ ಹೋಗಿದ್ದು ಒಳ್ಳೆಯದೇ ಆಯಿತು ಎಂದು ಧನರಾಜ್ ಆಚಾರ್ಯರವರ ಕಾಲು ಎಳೆಯುತ್ತಿದ್ದಾರೆ. ಬೇರೆಯವರ ಕಾಲೆಳೆದು ವೀಕ್ಷಕರಿಗೆ ಮನರಂಜನೆಯನ್ನು ಧನರಾಜ್ ಆಚಾರ್ ನೀಡಿದ್ದರು. ಆದರೆ ಇದೀಗ ನೆಟ್ಟಿಗರು ಕೂಡ ಧನರಾಜ್ ಹಾಗೂ ಪ್ರಜ್ಞಾ ಸೀಮಂತ ಫೋಟೋ ನೋಡಿ ಧನರಾಜ್ ಕಾಲು ಎಳೆಯುತ್ತಿದ್ದಾರೆ.

ಇತ್ತ ಪ್ರಜ್ಞಾ ಉಟ್ಟಿರುವ ಸೀರೆ ಹಾಗೂ ತಲೆಗೆ ಹೂವನ್ನು ಅಲಂಕಾರ ಮಾಡಿರುವ ಸ್ಟೈಲ್ ಮಾತ್ರ ಎಲ್ಲರಿಗೆ ಸಾಕಷ್ಟು ಖುಷಿ ನೀಡಿದೆ. ಲಾಕ್‌ಡೌನ್ ಆದ ಸಂದರ್ಭದಲ್ಲಿ ಕಾಮಿಡಿ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಎಲ್ಲರ ಜನ ಮನ್ನಣೆಯನ್ನು ಪಡೆದುಕೊಂಡ ಜೋಡಿ ಪ್ರಜ್ಞಾ ಹಾಗೂ ಧನರಾಜ್ ಆಚಾರ್ಯ. ಇದೀಗ ಈ ಇಬ್ಬರು ಜೋಡಿಗಳು ಮುದ್ದಾದ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹಾಗೆಯೇ ತವರು ಮನೆಯಲ್ಲಿಯೇ ಸೀಮಂತ ಶಾಸ್ತ್ರವನ್ನು ಮಾಡಲಾಗಿದೆ. ಧನರಾಜ್ ಆಚಾರ್ಯ ಹಾಗೂ ಪ್ರಜ್ಞಾ ಇಬ್ಬರು ಮಾಡಿರುವ ಫೋಟೋ ಶೂಟ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಪ್ರಜ್ಞಾ ಕ್ಯೂಟ್ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದಾರೆ.
ಧನರಾಜ್ ಆಚಾರ್ಯ ಕಾಮಿಡಿ ವಿಡಿಯೋ ವೈರಲ್
ಲಾಕ್‌ಡೌನ್ ವೇಳೆ ಕಾಮಿಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿ, ಎಲ್ಲರ ಮನೆ ಮಾತಾಗಿರುವ ಇವರು 'ಗಿಚ್ಚಿ ಗಿಲಿ ಗಿಲಿ' ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಆ ಬಳಿಕ 'ಅಬ್ಬಬ್ಬಾ' ಸಿನಿಮಾ ಮೂಲಕ ಮುಖ್ಯ ಪಾತ್ರದಲ್ಲಿ ನಟಿಸಿ ಎಲ್ಲರ ಮನಸನ್ನು ಗೆದ್ದಿದ್ದಾರೆ. ಇದೀಗ ಧನರಾಜ್ ಆಚಾರ್ಯ ಫ್ಯಾಮಿಲಿ ಬಹಳ ಖುಷಿಯಾಗಿ ಇದ್ದು ಮುದ್ದಾದ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ.
ಗಂಡನ ಕೆಲಸಕ್ಕೆ ಹೆಗಲು ನೀಡಿದ ಪ್ರಜ್ಞಾ
ಮಗುವಿನ ಆಗಮನದ ಖುಷಿಯಲ್ಲಿರುವ ಧನರಾಜ್ ಆಚಾರ್ಯ ಅವರ ಹೆಂಡತಿ ಪ್ರಜ್ಞಾ ಸೀಮಂತದಲ್ಲಿ ತೊಟ್ಟ ಸೀರೆ ಆಗಿರಬಹುದು, ಹಾಗೆಯೇ ಆಕೆ ಹಾಕಿದ್ದ ಜಡೆ ಆಗಿರಬಹುದು, ಬಹಳ ಅದ್ಭುತವಾಗಿ ಕಾಣಿಸುತ್ತಿತ್ತು. ಆಕೆಯ ಲುಕ್‌ಗೆ ಬೇರಗಾಗದವರೆ ಇಲ್ಲ. ಸಾಕ್ಷಾತ್ ಮಹಾಲಕ್ಷ್ಮೀ ನೋಡಿದ ಹಾಗೆಯೇ ಎಲ್ಲರಿಗೆ ಆಗುತ್ತಿತ್ತು. ಇನ್ನೂ ಪ್ರಜ್ಞಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಹೈಪ್ ಸೃಷ್ಟಿ ಮಾಡಿದವರು. ಗಂಡನ ಕೆಲಸಕ್ಕೆ ಹೇಗಲಾಗಿ ನಿಂತಾಕೆ ಎಂದರೆ ತಪ್ಪಾಗದು.
ಧನರಾಜ್ ಆಚಾರ್ಯ ಮಾಡುತ್ತಿರುವ ಕಾಮಿಡಿ ವಿಡಿಯೋಗೆ ಅವರ ಫ್ಯಾಮಿಲಿಯವರು ಕೂಡ ಸಾಥ್ ನೀಡುತ್ತಿರುವುದು ಖುಷಿಯ ಸಂಗತಿ ಆಗಿದೆ. ಅದೆಷ್ಟೇ ಕಷ್ಟವಿದ್ದರೂ ವೀಕ್ಷಕರನ್ನು ನಗಿಸುತ್ತಾ, ಒಮ್ಮೆ ನೋಡಿದ ವಿಡಿಯೋವನ್ನು ಮತ್ತೊಮ್ಮೆ ನೋಡಬೇಕು ಎನ್ನುವ ಆಸೆ ಮನದಲ್ಲಿ ಮೂಡುತ್ತದೆ.


Click it and Unblock the Notifications











