ತಾಯಿಯ ಕರುಳನ್ನು ಕಣ್ಣಾರೆ ಕಂಡು ನಡುಗಿದ ಮೋಹನ್.!
ಉದಯ ಟಿವಿಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ತುತ್ತಾ ಮುತ್ತಾ' ಕೂಡ ಒಂದು. ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಕಾರ್ಯಕ್ರಮಗಳಲ್ಲಿ ಒಂದಾದ 'ತುತ್ತಾ ಮುತ್ತಾ'ದ ಈ ವಾರದ ಸಂಚಿಕೆಯಲ್ಲಿ ರಸದೌತಣವೇ ಕಾದಿದೆ.
ಖ್ಯಾತ ನಟ, ನಿರ್ದೇಶಕ ಮೋಹನ್ ತಮ್ಮ ಕುಟುಂಬದೊಂದಿಗೆ ಇದೇ ಶನಿವಾರ 9 ಗಂಟೆಗೆ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ಉಗ್ರ ನರಸಿಂಹ' ಎಂಬ ಆಕ್ಷನ್ ಚಿತ್ರದ ಸೆಟ್ ನಲ್ಲಿ ನಡೆದ ವಿಚಿತ್ರ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಮೋಹನ್, ತಾನು ತಿಂದ ಪೆಟ್ಟುಗಳ ಬಗ್ಗೆ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿರಿ...

'ಉಗ್ರ ನರಸಿಂಹ' ಚಿತ್ರದ ಕರಾಳ ಅನುಭವ
ನಾವು ಚಿತ್ರೀಕರಣ ಮಾಡುತ್ತಿದ್ದ ಬಂಗಲೆಯೊಂದರಲ್ಲಿ ದೆವ್ವ-ಭೂತಗಳಿವೆ ಎಂದು ಹಲವಾರು ಬಾರಿ ನಮಗೆ ಎಚ್ಚರಿಸಲಾಗಿತ್ತು. ಅದಕ್ಕೆ ಬೆಲೆ ಕೊಡದೆ ನಾವು ಕೆಲಸ ಮುಂದುವರೆಸಿದೆವು. ಅದು ಹೇಗೋ ಗೊತ್ತಿಲ್ಲ, ನನ್ನ ಕುತ್ತಿಗೆಯ ಮೇಲೆ ಒಂದು ದೊಡ್ಡ ಹಂಚು ಬಿದ್ದು ನನ್ನ ಪ್ರಜ್ಞೆ ಹೋಗಿತ್ತು. ನಂತರ ನನ್ನ ಬೆನ್ನಿನಲ್ಲಿ ಇನ್ನೊಂದು ಗಾಯವಾಗಿ ವಾರವಿಡೀ ಶೂಟಿಂಗ್ ಸ್ಪಾಟ್ ಗೆ ಡಾಕ್ಟರ್ ಬಂದು ಸೂಜಿ ಚುಚ್ಚಬೇಕಾಯಿತು. ನಾವು ಸ್ಥಳದಲ್ಲಿ ಶಾಂತಿಯುತವಾಗಿ ಚಿತ್ರೀಕರಣ ಮಾಡಲು ಸಾಧ್ಯವೇ ಆಗಲಿಲ್ಲ ಅಂತ ಮೋಹನ್ 'ಉಗ್ರ ನರಸಿಂಹ' ಚಿತ್ರದ ಅನುಭವವನ್ನು ಹೊರ ಹಾಕಿದರು.

ಮೋಹನ್ ಲವ್ ಸ್ಟೋರಿ
ರಂಗಭೂಮಿ ಕಲಾವಿದರಾದ ಮೋಹನ್ ಅವರ ಪತ್ನಿ ವಿದ್ಯಾ ಸಂಚಿಕೆಯಲ್ಲಿ ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ತಮ್ಮ ಪ್ರೇಮ ಕಥೆಯನ್ನು ನೆನೆಯುತ್ತ, ಮೋಹನ್ ರವರ ಮಹಿಳಾ ಫ್ಯಾನ್ಸ್ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಕರುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾದ ಮೋಹನ್ ತಾಯಿ
ಮೋಹನ್ ತಾಯಿ ಸತ್ಯಭಾಮ ತನ್ನ ಮಗನ ಸಕಾರಾತ್ಮಕ ವರ್ತನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಸತ್ಯಭಾಮಾ ರವರು ಕರುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿ ಬಂದ ಸಮಯದ ಬಗ್ಗೆ ವಿವರಿಸಿ, ಆಪರೇಷನ್ ನಂತರ ತಾಯಿಯ ಕರುಳನ್ನು ಕೈಯಲ್ಲಿ ಹಿಡಿದ ಕ್ಷಣವನ್ನು ನೋವಿನಿಂದ ಮೋಹನ್ ವಿವರಿಸಿದರು. ''ತಾಯಿ ಮಗುವಿನ ಕರಳು ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಆಕೆಯ ದೇಹದ ಒಂದು ಭಾಗವನ್ನು ಕೈಯಲ್ಲಿ ಹಿಡಿಯುವಂತಹ ನತದೃಷ್ಟ ಸನ್ನಿವೇಶ ಇನ್ಯಾರಿಗೂ ಬಾರದಿರಲಿ'' ಎಂದರು ಮೋಹನ್.

ಪ್ರಸಾರ ಯಾವಾಗ.?
ಮೋಹನ್, ಪತ್ನಿ ವಿದ್ಯಾ ಮತ್ತು ತಾಯಿ ಸತ್ಯಭಾಮ ಅತಿಥಿಗಳಾಗಿ ಭಾಗವಹಿಸಿರುವ, ನಿರಂಜನ್ ದೇಶಪಾಂಡೆ ನಿರೂಪಣೆ ಹೊಂದಿರುವ 'ತುತ್ತಾ ಮುತ್ತಾ' ಇದೇ ಶನಿವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











