ರಾಮ್‌ ನಟನೆಗೆ ವೀಕ್ಷಕರು ಫಿದಾ; ಅಭಿಮಾನಿಗಳಿಗೆ ಗಗನ್‌ ಚಿನ್ನಪ್ಪ ಧನ್ಯವಾದ

By ಪ್ರಿಯಾ ದೊರೆ

'ಸೀತಾರಾಮ' ಧಾರಾವಾಹಿಯಲ್ಲಿ ಸಿಹಿ ಸಾವನ್ನಪ್ಪಿ ಆತ್ಮವಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಸಿಹಿಯ ಆತ್ಮ ಮತ್ತು ಸುಬ್ಬಿ ಇಬ್ಬರೂ ಕ್ಲೋಸ್ ಆಗಿದ್ದಾರೆ. ಆದರೆ, ಇಬ್ಬರೂ ಅಕ್ಕ-ತಂಗಿಯರು ಎಂಬ ಸತ್ಯ ಈಗಷ್ಟೇ ಗೊತ್ತಾಗಿದೆ. ಸುಬ್ಬಿಗೆ ತನ್ನ ಅಪ್ಪನ ಮೇಲಿದ್ದ ಕೋಪವೂ ಕರಗಿದೆ. ಇಷ್ಟು ದಿನ ರಾಮ್ ಗಿದ್ದ ಸಂಕಷ್ಟಗಳು ಸಂಪೂರ್ಣವಾಗಿ ದೂರಾಗುವ ಸಂದರ್ಭ ಬಂದಿದೆ. ಸುಬ್ಬಿಗೆ ತನ್ನ ಸ್ವಾಮಿ ತಾತನ ಗುಣವೂ ಗೊತ್ತಾಗಿದೆ.

ಸ್ವಾಮಿ ಹಣಕ್ಕೋಸ್ಕರ ಸುಬ್ಬಿಯನ್ನು ಆಸ್ಪತ್ರೆಯಿಂದ ಕದ್ದು ತಂದಿದ್ದರು. ನಂತರ ಸುಬ್ಬಿಯನ್ನು ಮಾರಾಟ ಮಾಡಲು ಕೂಡ ಮನಸ್ಸು ಮಾಡಿದ್ದರು. ಆದರೆ, ಸಾಧ್ಯವಾಗಲಿಲ್ಲ.

Actor Gagan Chinnappathanks fans for the overwhelming response to seetha raam serial

ಸುಬ್ಬಿಯನ್ನು ತನ್ನ ಬಳಿಯೇ ಇಟ್ಟುಕೊಂಡು ಬೆಳೆಸಿದರು. ಹೀಗಾಗಿ ಇಷ್ಟು ದಿನ ಸುಬ್ಬಿ ತನ್ನ ತಂದೆ ತಾಯಿ ತನಗೋಸ್ಕರ ಇಂದಲ್ಲ ನಾಳೆ ಬಂದೇ ಬರುತ್ತಾರೆ ಎಂದು ಕಾದಿದ್ದಳು.

ಈಗ ಸುಬ್ಬಿ ತನ್ನ ತಾಯಿಯ ಮಡಿಲು ಸೇರಿದ್ದನ್ನು ಸಹಿಸದ ಸ್ವಾಮಿ ಬೇರೆಯವರಿಗೆ ಸುಬ್ಬಿಯನ್ನು ದತ್ತು ಕೊಡಲು ಮುಂದಾದ. ಇದರಿಂದ ಸತ್ಯವನ್ನು ಅರಿತ ಸುಬ್ಬಿ ಇನ್ಯಾವತ್ತೂ ಸ್ವಾಮಿ ತಾತನನ್ನು ನೋಡಬಾರದು. ಅವರ ಜೊತೆಗೆ ಇರಬಾರದು ಎಂದು ತೀರ್ಮಾನ ಮಾಡಿದ್ದಾಳೆ. ಸೀತಮ್ಮನ ಜೊತೆಗೆ ಇರಲು ಬಯಸಿರುವ ಸುಬ್ಬಿ ಈಗ ರಾಮ್ ನನ್ನು ಕೂಡ ಅಪ್ಪ ಎಂದು ಒಪ್ಪಿಕೊಂಡಿದ್ದಾಳೆ. ಹಾಗಾಗಿ ಜೋರಾಗಿ ಓಡಿ ಬಂದು ಅಪ್ಪನನ್ನು ತಬ್ಬಿಕೊಂಡಿದ್ದಾಳೆ. ಇದರಲ್ಲಿ ರಾಮ್ ಮತ್ತು ಸುಬ್ಬಿಯ ಸೀನ್ ನೋಡಿದ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ.

ಧಾರಾವಾಹಿಗೆ ಫ್ಯಾನ್ಸ್ ಫಿದಾ

ರಾಮ್ ಈ ಹಿಂದೆ ಸಿಹಿ ಜೊತೆಗೆ ಅಪ್ಪ ಎನ್ನುವುದಕ್ಕಿಂತ ಮುದ್ದು ಫ್ರೆಂಡ್ ಇದ್ದ ಹಾಗೆ ನಡೆದುಕೊಳ್ಳುತ್ತಿದ್ದ. ಸೀತಾಳಿಗೆ ಪ್ರೀತಿಯ ಗಂಡನಾದ ರಾಮ್, ಅಶೋಕ್ ಜೊತೆಗೆ ಬೆಸ್ಟ್ ಫ್ರೆಂಡ್ ನಂತೆ ನಡೆದುಕೊಳ್ಳುತ್ತಿದ್ದ. ನಿಜವಾದ ಶ್ರೀರಾಮಚಂದ್ರನಂತೆ ಉತ್ತಮ ಗುಣಗಳಿರುವ ಈ ಧಾರಾವಾಹಿಯ ರಾಮ್ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಅಷ್ಟಕ್ಕೂ ಈ ರಾಮ್ ಪಾತ್ರವನ್ನು ನಿಭಾಯಿಸುತ್ತಿರುವುದು ನಟ ಗಗನ್ ಚಿನ್ನಪ್ಪ. ಈ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.

Actor Gagan Chinnappathanks fans for the overwhelming response to seetha raam serial

ರಾಮ್ ನಟನೆಗೆ ಮೆಚ್ಚುಗೆ

ಇದೀಗ ಗಗನ್ ಚಿನ್ನಪ್ಪ ಅವರ ನಟನೆಯನ್ನು ಮೆಚ್ಚಿಕೊಂಡ ಅಭಿಮಾನಿಗಳು ಕಮೆಂಟ್ ಮೇಲೆ ಕಮೆಂಟ್ ಮಾಡಿದ್ದಾರೆ. ಗಗನ್ ಚಿನ್ನಪ್ಪ ಅವರ ಆಕ್ಟಿಂಗ್ ಸೂಪರ್ ಎಂದಿದ್ದಾರೆ. ರಾಮ್ ಮತ್ತು ಸುಬ್ಬಿ ಧಾರಾವಾಹಿಯಲ್ಲಿ ಒಂದಾಗಿದ್ದಕ್ಕೆ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಇವರು ಹೀಗೆ ಇದ್ದರೆ ಚೆಂದ. ಗುಬ್ಬಿ ಈಗ ಗೂಡು ಸೇರಿತು. ಕಣ್ಣಂಚು ತುಂವಿದೆ. ಇಷ್ಟು ದಿನ ರಾಮ್ ಕಾದಿದ್ದ ದಿನ ಈಗ ಬಂದು ಎಂದೆಲ್ಲಾ ಕಮೆಂಟ್ ಗಳನ್ನು ಮಾಡಿದ್ದಾರೆ. ಈ ಕಮೆಂಟ್‌ಗಳನ್ನು ನೋಡಿದ ನಟ ಗಗನ್ ಚಿನ್ನಪ್ಪ ಅವರು ಇದೀಗ ಧನ್ಯವಾದ ತಿಳಿಸಿದ್ದಾರೆ.

ಧನ್ಯವಾದ ತಿಳಿಸಿದ ಗಗನ್ ಚಿನ್ನಪ್ಪ

ನಿನ್ನೆಯ ಸಂಚಿಕೆಗೆ ನಿಮ್ಮ ಮೆಸೇಜ್‌ಗಳು ಹಾಗೂ ಸ್ಟೋರಿ ಪೋಸ್ಟ್‌ಗಳಿಂದ ನನ್ನ ಮನಸ್ಸು ತುಂಬಿಬಂದಿದೆ. ನಿಮ್ಮ ಸಂದೇಶ ತಿಳಿಸಲು ಸಮಯ ತೆಗೆದುಕೊಂಡ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು. ನಿಮ್ಮ ಟ್ಯಾಗ್‌ಗಳನ್ನು ಪೋಸ್ಟ್ ಮಾಡದಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ, ನಾನು ಪ್ರಯಾಣದಲ್ಲಿದ್ದೆ. ನನಗೆ ಸಮಯ ಸಿಕ್ಕಾಗ ನಾನು ನನ್ನ ಕೈಲಾದಷ್ಟು ಪ್ರತಿಕ್ರಿಯಿಸಲು ಪ್ರಯತ್ನಿಸುತ್ತೇನೆ. ಸದಾ ನಿಮ್ಮನ್ನು ರಂಜಿಸಲು ಮತ್ತು ನನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ, ಜನರಿಗೆ ಧನ್ಯವಾದಗಳು. ನನ್ನಿಂದ ಒಳ್ಳೆ ನಟನೆ ಹೊರತೆಗೆದಿದ್ದಕ್ಕೆ ಜೀ ಕನ್ನಡ ವಾಹಿನಿಗೂ ಧನ್ಯವಾದ. ನಿಮ್ಮ ಗಗನ್ ಚಿನ್ನಪ್ಪ" ಎಂದು ಗಗನ್ ಬರೆದುಕೊಂಡಿದ್ದಾರೆ.

More from Filmibeat

English summary
Actor Gagan chinnappa Thanks fans For Seetharama serial sucuess;
Read more about: actor kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X