10 ಸೆಲೆಬ್ರೆಟಿ 'ಇಸ್ಮಾರ್ಟ್ ಜೋಡಿ' ಜೊತೆ ಗಣೇಶ್ ಗೋಲ್ಡನ್ ಶೋ!

By ಎಸ್ ಸುಮಂತ್

ಗೋಲ್ಡನ್ ಸ್ಟಾರ್ ಗಣೇಶ್ ಇದ್ದ ಕಡೆ ನಗುವಿಗೇನು ಕಡಿಮೆ ಇಲ್ಲ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಯಾವುದಾದರೊಂದು ರಿಯಾಲಿಟಿ ಶೋ ನಡೆಸಿಕೊಡುತ್ತಾರೆ ಎಂದರೆ ಕಂಟೆಂಟ್ ಇಲ್ಲದೆ ಹೋದರೂ ಆ ಶೋ ನಂಬರ್ ಒನ್ ಆಗಬೇಕೆಂದರೆ ಅಲ್ಲಿ ಗಣೇಶ್ ಒಬ್ಬರಿದ್ದರೆ ಸಾಕು. ಆ ಶೋ ಸ್ವಲ್ಪವೂ ಬೇಸರ ತರಿಸದೇನೆ ಟಾಕ್ ಆಫ್ ದಿ ಶೋ ಆಗಿಯೇ ಆಗುತ್ತೆ. ಈ ವಿಚಾರ ಈಗಾಗಲೇ ಪ್ರೂವ್ ಕೂಡ ಆಗಿದೆ. ಇದೀಗ ಹೊಸ ಶೋ ಗಣೇಶ್ ಎಲ್ಲರ ಮನ ಸೆಳೆಯಲಿ, ದಂಪತಿಗಳ ನಡುವೆ ಖುಷಿ ಹೆಚ್ಚಿಸಲು ಬರುತ್ತಿದ್ದಾರೆ.

ಮದುವೆಯಾದ ಮೇಲೆ ಬೇಡವೆಂದರೂ ಒಂದಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ. ಒಂದಷ್ಟು ಬದಲಾವಣೆಗಳನ್ನು ಅನಿವಾರ್ಯವಾಗಿ ಗಂಡ ಮತ್ತು ಹೆಂಡತಿ ಇಬ್ಬರೂ ಮಾಡಿಕೊಳ್ಳಬೇಕಾಗುತ್ತದೆ. ಸರಸ-ವಿರಸದ ಜೊತೆಗೆ ಜೀವನದ ಬಂಡಿ ಸಾಗಬೇಕಾಗುತ್ತದೆ. ಮದುವೆಯ ಜೀವನದಲ್ಲಿ ಸಕ್ಸಸ್ ಆದವರು ಇದ್ದಾರೆ. ಫೇಲ್ಯೂರ್ ಆದವರು ಇದ್ದಾರೆ‌. ಮದುವೆಯಾದ ಮೇಲೂ, ಜವಾಬ್ದಾರಿಯ ಜೊತೆಗೆ ನಗು ನಗುತ್ತಾ ಹೇಗೆಲ್ಲಾ ಇರಬಹುದು ಎಂಬುದು 'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋ ನೋಡಿದರೆ ಗೊತ್ತಾಗುತ್ತದೆ.

ಉಳಿಯುವುದೆಷ್ಟು, ಕಳಚಿಕೊಳ್ಳುವುದೆಷ್ಟು?

ಉಳಿಯುವುದೆಷ್ಟು, ಕಳಚಿಕೊಳ್ಳುವುದೆಷ್ಟು?

ಇತ್ತೀಚೆಗೆ ಮದುವೆಯಾಗ ಬಯಸುವವರ ಸಂಖ್ಯೆ ಸ್ವಲ್ಪ ಕಡಿಮೆಯೇ. ಆದರೂ ವರ್ಷಕ್ಕೆ ನೂರು ಕೋಟಿ ಮದುವೆಯಾಗುತ್ತೆ ಎಂಬ ವಿಚಾರ ಯಾರಿಗಾದರೂ ಗೊತ್ತಿತ್ತಾ..? ನೋ ವೇ ಚಾನ್ಸೇ ಇಲ್ಲ. ಮದುವೆ ಆಗೋದು ಮುಖ್ಯ ಅಲ್ಲ ಸಂಸಾರ ತೂಗಿಸಿಕೊಂಡು ಹೋಗುವುದು ಮುಖ್ಯ. ಅಷ್ಟೇ ಯಾಕೆ Ismart ಜೀವನ ನಡೆಸುವುದು ಬಹಳ ಮುಖ್ಯವಾಗುತ್ತದೆ. ಅದೆಲ್ಲದರ ಮಹತ್ವ ತಿಳಿಸುವುದಕ್ಕೇನೆ 'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋ ಮೂಡಿ ಬರುತ್ತಿದೆ. ಈಗಾಗಲೇ ಸಾಕಷ್ಟು ದಿನದಿಂದ ಪ್ರೋ‌ಮೊ ಬಿಟ್ಟು, ಸ್ಟಾರ್ ದಂಪತಿಗಳ ನಗುವಿನ ಅಡ್ಡಕ್ಕೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

'ಇಸ್ಮಾರ್ಟ್ ಜೋಡಿ' ಆರಂಭ ಯಾವಾಗ?

'ಇಸ್ಮಾರ್ಟ್ ಜೋಡಿ' ಆರಂಭ ಯಾವಾಗ?

ಸ್ಟಾರ್ ಸುವರ್ಣ ಕಳೆದ ಕೆಲವು ದಿನಗಳಿಂದ ಹೊಸ ರಿಯಾಲಿಟಿ ಶೋ ಪ್ರೋಮೊ ಬಿಟ್ಟು ಕುತೂಹಲವನ್ನು ಹೆಚ್ಚಿಸಿದೆ. ಒಂದು‌ ಕಡೆ ಸ್ಟಾರ್ ದಂಪತಿಗಳ ರಿಯಲ್ ಲೈಫ್, ಮತ್ತೊಂದು ಕಡೆ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆ ಇದೆಲ್ಲವನ್ನು ನೋಡಿದ ನೋಡುಗರಿಗೆ ಒಂದಷ್ಟು ಕೌತುಕ ಹೆಚ್ಚಾದಂತೆಯೇ ಇತ್ತು. ಹೀಗಾಗಿಯೇ ಶೋ ಆರಂಭದ ದಿನಕ್ಕಾಗಿ ಕಾಯುತ್ತಿದ್ದರು. ಇದೀಗ ಸ್ಟಾರ್ ಸುವರ್ಣ ಅದನ್ನು ಅಧಿಕೃತವಾಗಿ ತಿಳಿಸಿದೆ. ಇದೇ ತಿಂಗಳ 16ರಿಂದ ನಿಮ್ಮ ಮನೆಗಳಲ್ಲಿ 'ಇಸ್ಮಾರ್ಟ್ ಜೋಡಿ' ಕಾರ್ಯಕ್ರಮ ಮೂಡಿಬರಲಿದ್ದು, ಮನಗಳನ್ನು ಮುಟ್ಟುವುದರಲ್ಲಿ ನೋ ಡೌಟ್ ಅಂತಿದೆ ಹೊಸ ಪ್ರೋಮೊ.

ಸಂದೇಶ ಸಾರುತ್ತಲೆ ಕುಣಿದ ಗಣೇಶ್

ಸಂದೇಶ ಸಾರುತ್ತಲೆ ಕುಣಿದ ಗಣೇಶ್

ಜೋಡಿ ಶೋ ಯಾವಾಗಿನಿಂದ ಶುರುವಾಗುತ್ತೆ ಎಂಬುದಕ್ಕೆ ಇಂದು ಸ್ಟಾರ್ ಸುವರ್ಣದಿಂದ ಪ್ರೋಮೊ ಒಂದನ್ನು ರಿಲೀಸ್ ಮಾಡಲಾಗಿದೆ. ಅದರಲ್ಲಿ ಯಾವೆಲ್ಲಾ ಜೋಡಿಗಳು ಬಂದಿವೆ ಎಂಬುದು ಸ್ಪಷ್ಟವಾಗುತ್ತದೆ. 'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋನ ಟೈಟಲ್ ಟ್ರ್ಯಾಕ್‌ನಲ್ಲಿ ಸಂಸಾರ ನೌಕೆಯಲ್ಲಿ ಏನೆಲ್ಲಾ ಇರಲಿದೆ? ಎಷ್ಟು ಕಾಂಪ್ರಮೈಸ್ ಆಗಬೇಕು ಎಂಬೆಲ್ಲಾ ವಿಚಾರಗಳನ್ನು ಘೋಷಿಸಿದ್ದಾರೆ. ಅದರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಹಾಡಿನ ಮೂಲಕ, ನೃತ್ಯದ ಮೂಲಕ ಸಂಸಾರದ ಸುಖಸಾಗರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಟೈಟಲ್ ಟ್ರ್ಯಾಕ್‌ಗೆ ಫಿದಾ

ಇದೇ ತಿಂಗಳ 16 ರಂದು ಆರಂಭವಾಗುತ್ತಿರುವ 'ಇಸ್ಮಾರ್ಟ್ ಜೋಡಿ' ಶೋ ಟೈಟಲ್ ಟ್ರ್ಯಾಕ್ ಸಖತ್ ರಿಚ್ ಆಗಿ ಶೂಟ್ ಮಾಡಿದ್ದಾರೆ. ಗಣೇಶ್ ರೆಡ್ ಅಂಡ್ ವೈಟ್ ಕಾಂಬಿನೇಷನ್ ಡ್ರೆಸ್‌ನಲ್ಲೂ ಅದ್ಭುತವಾಗಿ ಕುಣಿದಿದ್ದಾರೆ. ಟೈಟಲ್ ಟ್ರ್ಯಾಕ್‌ನಲ್ಲಿ ಸಿ‌ನಿಮಾ ರೇಂಜಿನಂತೆಯೇ ಶೂಟ್ ಮಾಡಲಾಗಿದೆ. ಮದುವೆಯಾಗುವುದು ದೊಡ್ಡದ್ದಲ್ಲ 'ಇಸ್ಮಾರ್ಟ್ ಜೋಡಿ' ಯನ್ನು ಮಿಸ್ ಮಾಡದೆ ನೋಡಿ ಎಂದಿದ್ದಾರೆ.

More from Filmibeat

English summary
Actor Ganesh Hosted Star Suvarna's New Reality Show Ismart Jodi Starts From July 16th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X