Jay D'Souza: ಪೈಲಟ್ ಆಗಬೇಕು ಎಂದುಕೊಂಡಿದ್ದ ಜಯ್ ಡಿಸೋಜಾ ನಟನೆಯಲ್ಲಿ ಬ್ಯುಸಿ

By ಅನಿತಾ ಬನಾರಿ

ಪಾರ್ವತಮ್ಮ ರಾಜ್ ಕುಮಾರ್ ಅವರ ನಿರ್ಮಾಣದ 'ಮನೆದೇವ್ರು' ಧಾರಾವಾಹಿ ಒಂದು ಕಾಲದಲ್ಲಿ ಬಹಳ ಫೇಮಸ್ ಆಗಿತ್ತು. ಮುದ್ದಾದ ಲವ್ ಸ್ಟೋರಿ ಹೊಂದಿದ್ದ ಈ ಕಿರುತೆರೆ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡ ಜಯ್ ಡಿಸೋಜಾ ಅವರು ತಮ್ಮ ಮುಗ್ಧ ಅಭಿನಯದ ಮೂಲಕ ಎಲ್ಲರ ಮನಗೆದ್ದಿದ್ದರು.

ಸುಮಾರು ಎಂಟು ಒಂಬತ್ತು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿಯಲ್ಲಿ ಸೂರ್ಯ ಎಂಬ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ಜಯ್ ಡಿಸೋಜಾ ಸದ್ಯ ಅವರು ಸದ್ಯ ಪರಭಾಷೆಯ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಕಿರುತೆರೆಯಿನಮದ ದೂರವಿರುವ ಜಯ್ ಡಿಸೋಜಾ ಇಂದಿಗೂ ಕನ್ನಡದಲ್ಲಿ ಸೂರ್ಯ ಎಂದೇ ಫೇಮಸ್ಸು.

ಪೈಲಟ್ ಆಗಬೇಕೆಂದು ಬಯಸಿದ್ದರು ಜಯ್

ಅಸಲಿಗೆ ಪೈಲಟ್ ಆಗಬೇಕೆಂಬ ಮಹಾದಾಸೆ ಹೊಂದಿದ್ದ ಜಯ್ ಡಿಸೋಜಾ ಅವರು ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಮಾಡೆಲಿಂಗ್ ಕಡೆಗೆ ಕಾಲಿಟ್ಟರು. ಬಹಳಷ್ಟು ವೇದಿಕೆಗಳಲ್ಲಿ ಮಾಡಲ್ ಆಗಿ ರಾಂಪ್ ವಾಕ್ ಮಾಡಿದ ನಂತರ ನಿಧಾನಕ್ಕೆ ಜಾಹೀರಾತುಗಳ ಕಡೆಗೆ ಮುಖ ಮಾಡಿದ ಇವರು ಹಲವಷ್ಟು ಬ್ರಾಂಡ್‌ಗಳಿಗೆ ಜಾಹೀರಾತು ಮಾಡಿದ್ದಾರೆ. ಹೀಗಿರುವಾಗಲೇ ನಟನೆಯನ್ನೇ ವೃತ್ತಿಯಾಗಿ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಿದರು.

Actor Jay DSouza who wanted to become a pilot is busy in acting

ನಟನನಾಗಬೇಕು, ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಜಯ್ ಅವರು ಮುಂಬೈಗೆ ತೆರಳಿದರು. ಅಲ್ಲಿ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ನಟನಾ ತರಬೇತಿ ಪಡೆದು ಕರ್ನಾಟಕಕ್ಕೆ ವಾಪಸ್ ಬಂದ ಇವರು ಸಿಕ್ಕ ಅವಕಾಶಗಳ್ಯಾವುದನ್ನೂ ಬಿಡದೆ ಎಲ್ಲದಕ್ಕೂ ಆಡಿಶನ್‌ಗೆ ಅಪ್ಲೈ ಮಾಡುತ್ತಿದ್ದರು. ವಾಪಸು ಬಂದ ಕೆಲವೇ ದಿನಗಳಲ್ಲಿ ಅದ್ಭುತವಾದ ಅವಕಾಶ ಇವರನ್ನೇ ಕೈಬೀಸಿ ಕರೆಯಿತು ಎಂದರೆ ತಪ್ಪಾಗಲಾರದು.

ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಜಯ್ ಡಿಸೋಜಾ ನಂತರ ಹಾರಿದ್ದು ಪರಭಾಷೆಯ ಕಿರುತೆರೆಗೆ. ಅಲ್ಲಿಯೂ ಮನೋಜ್ಞ ನಟನೆಯ ಮೂಲಕ ಮನ ಸೆಳೆದ ಜಯ್ ಡಿಸೋಜಾ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕಾಶದೀಪ' ಧಾರಾವಾಹಿಯಲ್ಲಿ ನಾಯಕ ಆಕಾಶನಾಗಿ ನಟಿಸಿದರು. ಅದರಲ್ಲಿ ಕುರುಡನ ಪಾತ್ರಕ್ಕೆ ಜೀವ ತುಂಬಿದ್ದ ಜಯ್ ಡಿಸೋಜಾ ಎರಡನೇ ಬಾರಿಯೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

Actor Jay DSouza who wanted to become a pilot is busy in acting

ಸಿನಿಮಾದಲ್ಲಿಯೂ ಮೋಡಿ ಸದ್ಯ ತಮಿಳಿನ 'ಸೀತಾ ರಾಮಂ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ಜಯ್ ಡಿಸೋಜಾ 'ರಾಗ' ಹಾಗೂ 'ಹ್ಯಾಪಿ ನ್ಯೂ ಇಯರ್' ಎಂಬ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಪ್ರತಿಭೆ. ತಮ್ಮ ನಟನ ಜರ್ನಿ ಬಗ್ಗೆ ಮಾತನಾಡಿದ ಅವರು "ಇಂದು ನಾನು ಇಷ್ಟೆಲ್ಲ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರೆ ಅದಕ್ಕೆ ಮೂಲ ಕಾರಣ ಮನೆದೇವ್ರು ಧಾರಾವಾಹಿ. ಆ್ಯಕ್ಟಿಂಗ್ ಕೋರ್ಸ್ ಮುಗಿಸಿ ಬರುತ್ತಿದ್ದಂತೆ ಕೈಗೆ ಸಿಕ್ಕ ಮೊದಲ ಸುವರ್ಣ ಅವಕಾಶವಿದು. ಇಂದಿನವರೆಗೂ ನನ್ನೆಲ್ಲ ಯಶಸ್ಸುಗಳಿಗೂ ಈ ಧಾರಾವಾಹಿಯೇ ನಾಂದಿ" ಎಂದು ಹಂಚಿಕೊಂಡಿದ್ದರು ಜಯ್ ಡಿಸೋಜಾ.

More from Filmibeat

English summary
The handsome boy who dreamed of becoming a pilot is now busy in not only Kannada serial but also other language, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X