ಬಣ್ಣದ ಲೋಕದಿಂದ ದೂರ ಸರಿಯುತ್ತಾರಾ ಜೆಕೆ? ಜಯರಾಮ್ ಕಾರ್ತಿಕ್‌ಗೆ ಅವಕಾಶ ತಪ್ಪಿಸುತ್ತಿರುವ ವ್ಯಕ್ತಿ ಯಾರು?

ಬಣ್ಣದ ಲೋಕದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಹಾಗೆಯೇ ಅಭಿನಯ ಮಾಡುವ ವೇಳೆ ನಾನಾ ನೀನಾ ಎನ್ನುವ ರೀತಿ ನಟ ನಟಿಯರು ಬಹಳ ಅದ್ಭುತವಾಗಿ ನಟನೆ ಮಾಡುತ್ತಿದ್ದಾರೆ. ಹಾಗೆಯೇ ಚಿತ್ರರಂಗದಲ್ಲಿ ಹಲವು ಜನರು ಹೊಸಬರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಸಹ ಹೇಳುತ್ತಿದ್ದಾರೆ.
ಹೊಸಬರಿಗೆ ಅಷ್ಟಾಗಿ ಆಫರ್‌ಗಳನ್ನು ನೀಡದೇ ಕೈ ಬಿಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಅದಕ್ಕೆ ಉದಾಹರಣೆ ಜಯರಾಮ ಕಾರ್ತಿಕ್. ಜಯರಾಮ್ ಕಾರ್ತಿಕ್ ಅವರು ಕೂಡ ಚಿತ್ರ ರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ. ಅದನ್ನು ಇದೀಗ ಜೆಕೆ ಅವರೇ ಇದನ್ನು ಸ್ಪಷ್ಟ ಪಡಿಸಿದ್ದಾರೆ. ಹೌದು ಚಿತ್ರ ರಂಗದಲ್ಲಿ ತುಳಿಯುವ ಜನರಿದ್ದಾರೆ. ತಾನು ಏನಾದರು ಸಾಧನೆ ಮಾಡಬೇಕು ಎಂದುಕೊಂಡು ಬರುವ ನಟ ನಟಿಯರಿಗೆ ಬಲವಾದ ಪೆಟ್ಟು ನೀಡುತ್ತಿದೆ ಚಿತ್ರರಂಗ ಎಂದರೆ ತಪ್ಪಾಗದು. ಜಯರಾಮ್ ಕಾರ್ತಿಕ್ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಮಿಂಚಿ ಎಲ್ಲರ ಮನ ಗೆದ್ದಿದ್ದರು.
ಜೆಕೆ ಆಕ್ಟಿಂಗ್ ನೋಡಿದ ಜನರು ಮಾತ್ರ ಫಿದಾ ಆಗಿದ್ದರು. ಆ ಬಳಿಕ ಜೆಕೆ ಎಂದೇ ಫೇಮಸ್ ಆಗಿದ್ದ ನಟ ಇದೀಗ ದಿಢೀರ್ ಆಗಿ ಚಿತ್ರರಂಗದಲ್ಲಿ ಇರುವ ಒಬ್ಬ ವ್ಯಕ್ತಿಯ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಜೆಕೆ ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಧಾರವಾಹಿ ಪ್ರೇಮಿಗಳ ಹೃದಯ ಕದ್ದಿದ್ದರು. ಅಷ್ಟರವರೆಗೆ ಫೇಮಸ್ ಆದರೂ ಆ ಬಳಿಕ ಬೇರೆ ಬೇರೆ ಭಾಷೆಗಳಲ್ಲಿ ಜೆಕೆ ಆಫರ್ ಬರಲು ಶುರು ಆಗಿತ್ತು.
ಆ ಬಳಿಕ ನಾಗಿಣಿ 2ನಲ್ಲಿ ಜಯರಾಮ್ ಕಾರ್ತಿಕ್ ಆಕ್ಟಿಂಗ್ ಮಾಡಿದ್ದರು. ಇದೀಗ ಸ್ಟಾರ್ ಜೆಕೆ ಬಹಳ ಬೇಸರ ಮಾಡಿಕೊಂಡಿದ್ದಾರೆ. ಹಲವಾರು ಭಾರಿ ತನಗೆ ಅವಮಾನ ಆದಾಗ ಬೇಸರ ಮಾಡಿಕೊಂಡಿದ್ದ ಜೆಕೆ ಇದೀಗ ದಿಢೀರ್ ಆಗಿ ಚಿತ್ರರಂಗದಿಂದಲೇ ಹೊರ ನಡೆಯುವ ನಿರ್ಧಾರ ಮಾಡಿಕೊಂಡಿದ್ದಾರೆ.
ಜೆಕೆಗೆ ಇದೀಗ ಆಫರ್‌ಗಳು ಬರುತ್ತಿದೆ. ಹಾಗೆಯೇ ಕೆಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಹಾಗೆಯೇ ರಿಲೀಸ್ ಆಗಬೇಕಾಗಿರುವ ಚಿತ್ರ ಇದೇ, ಆದರೆ ಜಯರಾಮ್ ಕಾರ್ತಿಕ್ ಮುನಿಸಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೂ ಜೆಕೆಗೆ ಚಿತ್ರರಂಗದಲ್ಲಿ ನಟನೆ ಮಾಡುವ ಅವಕಾಶವನ್ನು ತಪ್ಪಿಸುತ್ತಾ ಇದ್ದಾರಂತೆ.
ಹೌದು ಮುಂಬೈಯಲ್ಲಿ ಸಿಗಬೇಕಾದ ಅವಕಾಶವನ್ನು ಬೆಂಗಳೂರಿನಲ್ಲಿ ಕುಳಿತು ಅವಕಾಶವನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಜೆಕೆ. ಆದರೆ ಆ ವ್ಯಕ್ತಿ ಯಾರು, ಜೆಕೆ ಕಂಡರೆ ಆ ವ್ಯಕ್ತಿಗೆ ಯಾಕೆ ಮುನಿಸು ಎಂಬುವುದನ್ನು ತಿಳಿಯಬೇಕಾಗಿದೆ. ಐರಾವನ್ ಸಿನಿಮಾದಲ್ಲಿ ಜೆಕೆ ನಟನೆ ಮಾಡಬೇಕಾಗಿದೆ. ಹಾಗೆಯೇ ಈ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಆಗಬೇಕಾಗಿದೆ.
ಈ ಸಿನಿಮಾ ಬಳಿಕ ಇನ್ನೊಂದು ಸಿನಿಮಾದಲ್ಲಿ ಜಯರಾಮ್ ಕಾರ್ತಿಕ್ ನಟನೆ ಮಾಡಲಿದ್ದಾರೆ. ಈ ಸಿನಿಮಾ ಮಾಡಿದ ಬಳಿಕ ಜಯರಾಮ್ ಕಾರ್ತಿಕ್ ಸಿನಿಮಾ ರಂಗದಿಂದ ಹೊರಗೆ ಉಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಗೆಯೇ ಸ್ವತಃ ಜೆಕೆ ಕೈಯಲ್ಲಿ ಇರುವ ಸಿನಿಮಾಗಳಲ್ಲಿ ನಟನೆ ಮಾಡಿ ಆ ಬಳಿಕ ಚಿತ್ರರಂಗದಿಂದ ಹೊರ ಬರುವ ನಿರ್ಧಾರ ಮಾಡಿದ್ದೇನೆ ಎಂದು ಬೇಸರ ವ್ಯಕ್ತ ಪಡಿಸುತ್ತಾ ಇದ್ದರು.
ಇನ್ನು ಜೆಕೆ ಅಭಿಮಾನಿಗಳಿಗೆ ಮಾತ್ರ ಜೆಕೆ ನಿರ್ಧಾರದಿಂದ ಬೇಸರ ಆಗಿದೆ. ಜೆಕೆ ನಟನೆಗೆ ಅನೇಕ ಜನ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಜೆಕೆ ಮಾತು ಕೇಳಿದ ಅಭಿಮಾನಿಗಳು ಮಾತ್ರ ಯಾರು ಆ ವ್ಯಕ್ತಿ ಹೇಳಿ ಎಂದೆಲ್ಲ ಜೆಕೆ ಬಳಿ ಕೇಳುತ್ತಿದ್ದಾರೆ. ಆದರೆ ಜೆಕೆ ಅದ್ಯಾವುದಕ್ಕೂ ಉತ್ತರ ಹೇಳದೇ ಮೌನಕ್ಕೆ ಶರಣಾಗಿದ್ದಾರೆ.


Click it and Unblock the Notifications











