For Quick Alerts
  ALLOW NOTIFICATIONS  
  For Daily Alerts

  ಪ್ಯಾಲಿಯೋ ಡಯೆಟ್‌ನಿಂದ ಪ್ರಾಣಕ್ಕೆ ಸಂಚಕಾರ? ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ಪ್ರಿಯದರ್ಶಿನಿ ನಿಧನ

  |

  43 ವರ್ಷದ ಪ್ರಿಯದರ್ಶಿನಿ ಕೆಲ ದಿನಗಳ ಹಿಂದೆ ಕೋಮಾಗೆ ಹೋಗಿದ್ದರು. ತೀವ್ರ ನಿಗಾಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೊನ್ನೆ(ನವೆಂಬರ್ 1) ಕೊನೆಯುಸಿರು ಎಳೆದಿದ್ದಾರೆ. ಇಂದು ಪ್ರಿಯದರ್ಶನಿ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಕಲ್ಯಾಣ್‌ಕುಮಾರ್ ಪುತ್ರ ಭರತ್‌ ಕಲ್ಯಾಣ್ ಈಗ ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಪ್ರಿಯದರ್ಶಿನಿ ಪತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

  ಇತ್ತೀಚಿನ ಕಾಲದಲ್ಲಿ ಸೌಂದರ್ಯ ಹಾಗೂ ಆಕರ್ಷಕ ದೇಹಾಕಾರ ಕಾಯ್ದುಕೊಳ್ಳಲು ಜನ ನಾನಾ ಕರಸತ್ತು ನಡೆಸುತ್ತಾರೆ. ದೇಹ ತೂಕ ಕಡಿಮೆ ಮಾಡುವ ಶೇಕ್ಸ್, ಸಪ್ಲಿಮೆಂಟ್ಸ್, ಮಾತ್ರೆಗಳು ಹೀಗೆ ಏನೇನೋ ತೆಗೆದುಕೊಳ್ಳುತ್ತಾರೆ. ಕೆಲವರು ಏನೇನೊ ಡಯೆಟ್ ಮಾಡಿ ತೂಕ ಇಳಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕುತ್ತಾರೆ. ಕನ್ನಡದ ಖ್ಯಾತ ನಟ ದಿವಂಗತ ಕಲ್ಯಾಣ್ ಕುಮಾರ್ ಅವರ ಸೊಸೆ ಪ್ರಿಯದರ್ಶಿನಿ(43) ಪ್ಯಾಲಿಯೋ ಡಯಟ್‌ನಿಂದ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ.

  BBK9: ಆರ್ಯವರ್ಧನ್ ಡಬಲ್ ಗೇಮ್‌ಗೆ ಮನೆಯವರಿಂದ್ಲೇ ಕ್ಲಾಸ್.. ನಗುತ್ತಲೇ ಉತ್ತರಿಸಿದ ಗುರೂಜಿ !BBK9: ಆರ್ಯವರ್ಧನ್ ಡಬಲ್ ಗೇಮ್‌ಗೆ ಮನೆಯವರಿಂದ್ಲೇ ಕ್ಲಾಸ್.. ನಗುತ್ತಲೇ ಉತ್ತರಿಸಿದ ಗುರೂಜಿ !

  43 ವರ್ಷದ ಪ್ರಿಯದರ್ಶಿನಿ ಕೆಲ ದಿನಗಳ ಹಿಂದೆ ಕೋಮಾಗೆ ಹೋಗಿದ್ದರು. ತೀವ್ರ ನಿಗಾಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೊನ್ನೆ(ನವೆಂಬರ್ 1) ಕೊನೆಯುಸಿರು ಎಳೆದಿದ್ದಾರೆ. ಇಂದು ಪ್ರಿಯದರ್ಶನಿ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಕಲ್ಯಾಣ್‌ಕುಮಾರ್ ಪುತ್ರ ಭರತ್‌ ಕಲ್ಯಾಣ್ ಈಗ ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಪ್ರಿಯದರ್ಶಿನಿ ಪತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

  ಕೊಂಚ ದಪ್ಪ ಇದ್ದ ಪ್ರಿಯದರ್ಶಿನಿ ಕೆಲವು ತಿಂಗಳ ಹಿಂದೆ ಪ್ಯಾಲಿಯೋ ಡಯಟ್ ಆರಂಭಿಸಿದರು. ಒಮ್ಮೆಲೆ ಆಹಾರ ಸೇವಿಸುವುದರಲ್ಲಿ ಬದಲಾವಣೆ ಆಗಿದ್ದರಿಂದ ಶುಗರ್ಸ್ ಲೆವೆಲ್ ಕಮ್ಮಿ ಆಗಿ ಸೀರಿಯಸ್ ಆಗಿದ್ದರು. ಹಾಗಾಗಿ ಚೆನ್ನೈನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಕೋಮಾಕ್ಕೆ ಹೋಗಿದ್ದ ಪ್ರಿಯದರ್ಶಿನಿ ಈಗ ಕೊನೆಯುಸಿರು ಎಳೆದಿದ್ದಾರೆ. ಈ ಡಯೆಟ್ ಪ್ರಕಾರ ಆಹಾರದಲ್ಲಿ ಹಾಲಿನ ಉತ್ಪನ್ನಗಳು ಇರುವುಲ್ಲ. ಹಣ್ಣುಗಳು, ತರಕಾರಿಗಳು, ಮೀನು ರೀತಿಯ ಆಹಾರವನ್ನು ಮಾತ್ರ ಸೇವಿಸುತ್ತಿದ್ದರು. ದಿಢೀರ್ ಆಹಾರದಲ್ಲಿನ ಬದಲಾವಣೆಯಿಂದಾಗಿ, ಆಕೆಯ ರಕ್ತದಲ್ಲಿ ಸಕ್ಕರೆ ಮಟ್ಟ ಏರುಪೇರಾಗಿ ಪ್ರಿಯದರ್ಶಿನಿ ಕೋಮಾಕ್ಕೆ ಹೋದರು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.

  Actor Kalyan kumars Daughter in law Priyadarshini Death due to Paleo Diet ?

  ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಭರತ್ ಕಲ್ಯಾಣ್ 'ಸುಳ್ಳಾನ್', 'ವಸೀಗರ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 2007ರಲ್ಲಿ ಬಂದ ಶ್ರೀರಂಗ ಎಂಬ ತಮಿಳು ಚಿತ್ರದಲ್ಲಿ ನಟನಾಗಿ ಎಂಟ್ರಿ ಕೊಟ್ಟ ಭರತ್ ಮುಂದೆ ಹಲವು ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಚಿತ್ರರಂಗದಲ್ಲಿ ಯಶಸ್ಸು ಸಿಗದ ಕಾರಣ ತಮಿಳು ಕಿರುತೆರೆಯತ್ತ ಮುಖ ಮಾಡಿದ್ದರು. ಪ್ರಿಯದರ್ಶನಿ ಹಠಾತ್ ನಿಧನ ಕುಟುಂಬಕ್ಕೆ ಆಘಾತ ತಂದಿದೆ. ಸದ್ಯ ಅವರ ಪಾರ್ಥೀವ ಶರೀರವನ್ನು ಚೆನ್ನೈನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.

  English summary
  Actor Kalyan kumar's Daughter in law Priyadarshini Death due to Paleo Diet? Kana Kaanum Kaalangal fame Bharat Kalyan's wife Priyadarshini, aged 43, has reportedly passed away on November 1st morning. know more.
  Thursday, November 3, 2022, 13:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X