For Quick Alerts
  ALLOW NOTIFICATIONS  
  For Daily Alerts

  ಪತ್ನಿ ಮೇಲೆ ಹಲ್ಲೆ ಆರೋಪ; ಖ್ಯಾತ ನಟ ಕರಣ್ ಮೆಹ್ರಾ ಅರೆಸ್ಟ್

  |

  ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಹಿಂದಿ ಕಿರುತೆರೆಯ ಖ್ಯಾತ ನಟ ಕರಣ್ ಮೆಹ್ರಾರನ್ನು ಮುಂಬೈ ಪೊಲೀಸರು ಇಂದು (ಜೂನ್ 1) ಬೆಳಗ್ಗೆ ಅರೆಸ್ಟ್ ಮಾಡಿದ್ದಾರೆ. ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕರಣ್ ನನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

  ನಿನ್ನೆ ರಾತ್ರಿ (ಮೇ 31) ಕರಣ್ ಮತ್ತು ಪತ್ನಿ, ನಟಿ ನಿಶಾ ಮೆಹ್ರಾ ಇಬ್ಬರು ಜಗಳವಾಡಿಕೊಂಡಿದ್ದರು. ಬಳಿಕ ನಿಶಾ ಪತಿ ವಿರುದ್ಧ ಹಲ್ಲೆ ಆರೋಪ ಮಾಡಿ ಗೊರೆಗಾಂವ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದರು. ಕರಣ್ ಮತ್ತು ನಿಶಾ ದಂಪತಿ ನಡುವೆ ಕೆಲವು ಸಮಯದಿಂದ ಭಿನ್ನಾಭಿಪ್ರಾಯ ಉಂಟಾಗಿದ್ದು, ಯಾವಾಗಲು ಜಗಳವಾಡುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

  ಅತ್ಯಾಚಾರ ಆರೋಪ: ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರ್ ಮಂಡ್ಯದಲ್ಲಿ ಅರೆಸ್ಟ್ಅತ್ಯಾಚಾರ ಆರೋಪ: ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರ್ ಮಂಡ್ಯದಲ್ಲಿ ಅರೆಸ್ಟ್

  ಆದರೆ ಇದೆ ಮೊದಲ ಬಾರಿಗೆ ನಿಶಾ ಪತಿ ವಿರುದ್ಧ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಇಬ್ಬರು ಜಗಳವಾಡುವ ವೇಳೆ ಕರಣ್ ಮೆಹ್ರಾ ಪತ್ನಿ ನಿಶಾರನ್ನು ಗೋಡೆಗೆ ತಳ್ಳಿದ್ದಾರೆ. ನಿಶಾ ತಲೆಗೆ ಪೆಟ್ಟಾದ ಬಳಿಕ ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ ಎಂದು ವರದಿಯಾಗಿದೆ. ಕರಣ್ ಮೆಹ್ರಾ ವಿರುದ್ಧ ಸೆಕ್ಷನ್ 336 ಮತ್ತು 337ರ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.

  ಇಬ್ಬರ ನಡುವಿನ ವೈಮನಸ್ಸಿನ ಬಗ್ಗೆ ಆಗಾಗ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕರಣ್ ಮೆಹ್ರಾ ನಿರಾಕರಿಸಿದ್ದರು. ನಿಶಾ ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದರು. ಅಲ್ಲದೆ ಇತ್ತೀಚಿಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಕರಣ್ ಪತ್ನಿ ನಿಶಾ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಇದೀಗ ಇಬ್ಬರ ಜಗಳ ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಮೂಲಕ ಇಬ್ಬರ ನಡುವಿನ ವೈಮನಸ್ಸು ಬಹಿರಂಗವಾಗಿದೆ.

  ಕರಣ್ ಮತ್ತು ನಿಶಾ ಅವರದ್ದು ಪ್ರೇಮ ವಿವಾಹ. ಅನೇಕ ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದ ಇಬ್ಬರು 2012ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ 8 ವರ್ಷಗಳಾಗಿದ್ದು, ಈ ದಂಪತಿಗೆ 4 ವರ್ಷದ ಒಬ್ಬ ಮಗನಿದ್ದಾನೆ.

  ಕರಣ್ ಮೆಹ್ರಾ ಹಿಂದಿ ಧಾರಾವಾಹಿ ಲೋಕದಲ್ಲಿ ಪ್ರಸಿದ್ಧಿಗಳಿಸಿದ್ದಾರೆ. ಜೊತೆ ಹಿಂದಿ ಬಿಗ್ ಬಾಸ್ 10ರಲ್ಲೂ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇನ್ನು ಪತ್ನಿ ನಿಶಾ ಕೂಡ ಕಿರುತೆರೆಯ ಸ್ಟಾರ್.

  Read more about: tv police ಟಿವಿ
  English summary
  Karan Mehra arrests for accused of beating wife, gets bail after arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X