ಮಾತು ಬಾರದ ವ್ಯಕ್ತಿಯ ಪಾತ್ರದಲ್ಲಿ ನಟ ಕಾರ್ತಿಕ್ ಜಯರಾಮ್; ಯಾವುದು ಆ ಸಿನಿಮಾ?

By ಅನಿತಾ ಬನಾರಿ

ನಟ ಕಾರ್ತಿಕ್ ಜಯರಾಮ್ ಅವರು ಇದೀಗ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದುವೇ 'ದಿ ವೀರ್' ಸಿನಿಮಾ. ವಿಶೇಷವೆಂದರೆ ಈ ಸಿನಿಮಾದಲ್ಲಿ ನಟ ಕಾರ್ತಿಕ್ ಜಯರಾಮ ಅವರು ಮೂಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರು ಹಲವಾರು ರೀತಿಯ ಟ್ರೈನಿಂಗ್ ಅನ್ನು ಪಡೆದಿದ್ದಾರೆ.

ತಮ್ಮ ಅನುಭವವನ್ನು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡ ನಟ ಕಾರ್ತಿಕ್ ಜಯರಾಮ್ "ಹೊಸ ಭಾಷೆ ಕಲಿಯುವುದು ಸುಲಭದ ಮಾತಲ್ಲ. ಅದರಲ್ಲೂ ಮಾತು ಬಾರದ ವ್ಯಕ್ತಿಯಾಗಿ ನಾನು ನಟಿಸಬೇಕೆಂದರೆ, ಅದಕ್ಕೆ ಅದರದ್ದೇ ಆದ ಹೊಸ ರೀತಿಯ ಚಾಲೆಂಜ್‌ಗಳಿವೆ. ಸಾಮಾನ್ಯವಾಗಿ ನಾವು ಮಾತನಾಡುವಾಗ ನಮ್ಮ ಮೆದುಳು ಹಾಗೂ ಬಾಯಿಯ ಸಹಾಯದಿಂದ ಕೆಲಸ ನಡೆಯುತ್ತದೆ" ಎಂದು ಹೇಳಿಕೊಂಡಿದ್ದಾರೆ.

Actor Karthik Jayaram says learning a new language is not an easy

ಇದರ ಜೊತೆಗೆ "ಮಾತು ಬಾರದ ವ್ಯಕ್ತಿಯಾಗಿ ವರ್ತಿಸಬೇಕು ಎಂದಾಗ ಮೆದುಳು ಹಾಗೂ ಕೈ ಭಾಷೆಯ ಕನೆಕ್ಷನ್ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಅಪ್ಪಿತಪ್ಪಿಯೂ ನಾನು ತುಟಿಯನ್ನು ಬಳಸಲೇಬಾರದು. ಈ ರೀತಿಯ ಒಂದು ವಿಶೇಷ ಟ್ರೈನಿಂಗ್ ಅನ್ನು ನಾನು ಪಡೆದಿದ್ದೇನೆ. ಈಗಾಗಲೇ ನಾವು ಶೂಟಿಂಗ್ ಆರಂಭಿಸಿದ್ದೇವೆ. ಶೂಟಿಂಗ್ ಸ್ಪಾಟ್‌ನಲ್ಲಿ ನಮ್ಮೊಂದಿಗೆ ಮೂಕ ಭಾಷೆಯ ತಜ್ಞರು ಒಬ್ಬರಿದ್ದಾರೆ. ಅವರು ಶೂಟಿಂಗ್ ಸಮಯದಲ್ಲಿ ನನ್ನ ನಟನೆಯಲ್ಲಿ ಏನಾದರೂ ಬದಲಾವಣೆ ಕಂಡರೆ ಅಥವಾ ಅದನ್ನು ಇನ್ನೂ ಚೆನ್ನಾಗಿ ಪ್ರೇಕ್ಷಕರಿಗೆ ತಿಳಿಯಪಡಿಸುವ ವಿಧಾನಗಳಿದ್ದರೆ ನನಗೆ ಹೇಳಿಕೊಡುತ್ತಾರೆ" ಎಂದು ಕಾರ್ತಿಕ್ ಜಯರಾಮ್ ಅವರು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ಸಾಮಾನ್ಯವಾಗಿ ನಟನೆಗೆ ನಾವು ಹೊಸ ಪಾತ್ರಕ್ಕೆ ಸರಿಯಾದ ಬಾಡಿ ಹಾಗೂ ಲುಕ್‌ಗಳನ್ನು ಅರೇಂಜ್ ಮಾಡಿಕೊಳ್ಳುತ್ತೇವೆ. ದೇಹ ತೂಕ ಹೆಚ್ಚಿಸಿಕೊಳ್ಳುವುದು, ಇಳಿಸಿಕೊಳ್ಳುವುದು ಅಥವಾ ಅದಕ್ಕೆ ಸರಿಯಾದ ಬಟ್ಟೆ ಬರೆ ಹಾಕಿ ಲುಕ್ಸ್ ಚೇಂಜ್ ಮಾಡಿಕೊಳ್ಳುವುದು ಇತ್ಯಾದಿ. ಆದರೆ ಈ ಪಾತ್ರ ತುಂಬಾ ವಿಶೇಷವಾಗಿದ್ದು ಇದಕ್ಕೆ ನಾನು ಸೈನ್ ಲ್ಯಾಂಗ್ವೇಜ್ ಅನ್ನು ಕಲಿತಿದ್ದೇನೆ" ಎಂದಿದ್ದಾರೆ ನಟ ಕಾರ್ತಿಕ್ ಜಯರಾಮ್.

Actor Karthik Jayaram says learning a new language is not an easy

'ಅಶ್ವಿನಿ ನಕ್ಷತ್ರ' ಧಾರಾವಾಹಿಯಿಂದ ಬಹಳ ಖ್ಯಾತಿ ಪಡೆದ ನಟ ಕಾರ್ತಿಕ್ ಜಯರಾಮ್, ಅದಾದ ಮೇಲೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಕೈವ', 'ಪುಟ 109', 'ಆ ಕರಾಳ ರಾತ್ರಿ', 'ಜಸ್ಟ್ ಲವ್', 'ಓ ಪುಷ್ಪ ಐ ಹೇಟ್ ಟೀಯರ್ಸ್' ಇತ್ಯಾದಿ ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ಇವರ 'ದಿ ವೀರ್' ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಎಂಬುವುದೇ ಇಂಟ್ರೆಸ್ಟಿಂಗ್.

More from Filmibeat

English summary
Actor Karthik Jayaram will appear on screen as a dumb for the first time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X