»   » ನಟ ಕಿರಣ್ ರಾಜ್ ಬಂಧನ: ಹಾಗಾದರೆ 'ಕಿನ್ನರಿ' ಧಾರಾವಾಹಿ ನಿಂತ್ಹೋಗುತ್ತಾ.?

ನಟ ಕಿರಣ್ ರಾಜ್ ಬಂಧನ: ಹಾಗಾದರೆ 'ಕಿನ್ನರಿ' ಧಾರಾವಾಹಿ ನಿಂತ್ಹೋಗುತ್ತಾ.?

Posted By:
Subscribe to Filmibeat Kannada

ಮಾಡೆಲ್ ಕಮ್ ನಟಿ ಯಾಸ್ಮಿನ್ ಪಠಾಣ್ ದೂರು ನೀಡಿದ ಬಳಿಕ ಕಿರುತೆರೆ ನಟ ಕಿರಣ್ ರಾಜ್ ರನ್ನ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಪೊಲೀಸರು ಬಂಧಿಸಿದ್ದಾರೆ.

ಲಿವಿಂಗ್ ಟು ಗೆದರ್ ರಿಲೇಶನ್ ಶಿಪ್ ನಲ್ಲಿದ್ದ ಕಿರಣ್ ರಾಜ್ ಹಾಗೂ ಯಾಸ್ಮಿನ್ ಪಠಾಣ್ ನಡುವೆ ಕಿರಿಕ್ ಆಗಿತ್ತು. ತಮ್ಮ ಮೇಲೆ ಕಿರಣ್ ರಾಜ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಯಾಸ್ಮಿನ್ ಪಠಾಣ್ ಪೊಲೀಸ್ ಠಾಣೆ ಮೆಟ್ಟಿಲೇರದ್ದರು. ದೂರಿನ ಅನ್ವಯ ಕಿರಣ್ ರಾಜ್ ವಿರುದ್ಧ ಎಫ್.ಐ.ಆರ್ ದಾಖಲು ಮಾಡಿ ಅರೆಸ್ಟ್ ಮಾಡಲಾಯಿತು.

ಸದ್ಯ ಬಂಧನದಲ್ಲಿ ಇರುವ ಕಿರಣ್ ರಾಜ್ ಯಾವಾಗ ಬಿಡುಗಡೆ ಆಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಹಾಗಾದ್ರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕಿನ್ನರಿ' ಧಾರಾವಾಹಿಯ ಮುಂದಿನ ಕಥೆ ಏನು.? ಸೀರಿಯಲ್ ನಿಂತು ಹೋಗುತ್ತಾ.? ಅಂತ ಹಲವರು ಪ್ರಶ್ನೆ ಮಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಸಂಚಿಕೆಗಳ ಬ್ಯಾಂಕಿಂಗ್ ಆಗಿದೆ

'ಕಿನ್ನರಿ' ಸೀರಿಯಲ್ ನಲ್ಲಿ ಕಿರಣ್ ರಾಜ್ ಪಾತ್ರವೇ ಪ್ರಮುಖ. ಹೀಗಿರುವಾಗಲೇ, ಕಿರಣ್ ರಾಜ್ ರನ್ನ ಪೊಲೀಸರು ಬಂಧಿಸಿದ್ದಾರೆ. ಆದರೂ 'ಕಿನ್ನರಿ' ಧಾರಾವಾಹಿಗೆ ಯಾವುದೇ ಸಮಸ್ಯೆ ಆಗಲ್ಲ. ಹೇಗೆ ಅಂದ್ರೆ, ಅದಾಗಲೇ ಹಲವು ಸಂಚಿಕೆಗಳ ಬ್ಯಾಂಕಿಂಗ್ ಮಾಡಿಕೊಂಡಿದೆ ಸೀರಿಯಲ್ ಟೀಮ್.

'ಕಿನ್ನರಿ' ಧಾರಾವಾಹಿ ನಟ ಕಿರಣ್ ರಾಜ್ ಬಂಧನ

ಕಲರ್ಸ್ ಕನ್ನಡ ವಾಹಿನಿಗೆ ತಲೆನೋವಿಲ್ಲ

ಏನಿಲ್ಲ ಅಂದರೂ ಇನ್ನೊಂದು ತಿಂಗಳಿಗೆ ಆಗುವಷ್ಟು 'ಕಿನ್ನರಿ ಧಾರಾವಾಹಿಯ ಸಂಚಿಕೆಗಳು ಕಲರ್ಸ್ ಕನ್ನಡ ವಾಹಿನಿ ಬಳಿ ಇದೆ. ಹೀಗಾಗಿ, ಸದ್ಯಕ್ಕೆ ಕಿರಣ್ ರಾಜ್ ಬಂಧನದಿಂದ ವಾಹಿನಿಗೆ ತಲೆನೋವಿಲ್ಲ.

ನಟ ಕಿರಣ್ ರಾಜ್ ಹಾಗೂ ಯಾಸ್ಮಿನ್ ನೀಡಿದ ದೂರಿನಲ್ಲಿ ಏನಿದೆ?

ಕಥೆಯಲ್ಲಿ ಬದಲಾವಣೆ ಮಾಡಬಹುದು

ನಟ-ನಟಿಯರ ಅನುಪಸ್ಥಿತಿ ಇದ್ದಾಗ, ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ತಂತ್ರ ಸೀರಿಯಲ್ ಟೀಮ್ ಗೆ ಗೊತ್ತಿದೆ. ಹೀಗಾಗಿ ಕಿರಣ್ ರಾಜ್ ಬಿಡುಗಡೆ ಆಗುವುದು ಸ್ವಲ್ಪ ತಡವಾದರೆ, 'ಕಿನ್ನರಿ' ಧಾರಾವಾಹಿಯ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಲಾಗುತ್ತದೆ.

ಬೇರೆ ನಟ ಬರಬಹುದು

ಕಥೆ ಬದಲಾವಣೆ ಕಷ್ಟ ಆದರೆ, ಕಿರಣ್ ರಾಜ್ ಜಾಗಕ್ಕೆ ಬೇರೆ ನಟ ಬರಬಹುದು. ಸೀರಿಯಲ್ ಗಳಲ್ಲಿ ಪಾತ್ರಧಾರಿಗಳು ಬದಲಾಗುವುದು ಹೊಸದೇ.? ಪಾತ್ರಧಾರಿಗಳು ಬದಲಾದರೂ, ಹಲವು ಮೆಗಾ ಸೀರಿಯಲ್ ಗಳ ಸ್ಟೋರಿಗೆ ಮಾತ್ರ ಫುಲ್ ಸ್ಟಾಪ್ ಬೀಳಲ್ಲ.

English summary
Based on the complaint filed by Yasmin Pathan, Rajarajeshwari Nagar Police have arrested Kannada serial actor Kiran Raj. Will it affect 'Kinnari' serial.? Here is an answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X