ನಟ ಕಿರಣ್ ರಾಜ್ ಮಾಡ್ತಿರೋ ಕೆಲಸ ನಿಮಗೂ ಸ್ಪೂರ್ತಿ!
ನಟ ಕಿರಣ್ ರಾಜ್ ಕಿರುತೆಯಲ್ಲಿ ಹೆಚ್ಚು ಹೆಸರುವಾಸಿ. ಕಿರಣ್ ಸೀರಿಯಲ್‌ಗಳ ಮೂಲಕ ಮನೆ ಮಾತಾಗಿದ್ದಾರೆ. ಇನ್ನು ಕಿರಣ್ ರಾಜ್‌ಗೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಸಿರಿಯಲ್ ಜೊತೆ ಜೊತೆಗೆ ಕಿರಣ್ ರಾಜ್ ಈಗ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಕಿರಣ್ ರಾಜ್ ಮೊದಲಿನಿಂದಲೂ ಕೇವಲ ತಮ್ಮ ನಟನೆ ಮಾತ್ರವಲ್ಲದೆ, ಸಾಮಾಜಿಕ ಕಾರ್ಯಗಳಿಂದಲೂ ಹೆಚ್ಚು ಗಮನ ಸೆಳೆದಿದ್ದಾರೆ. ಕಿರಣ್ ರಾಜ್ ತಮ್ಮದೇ ಹೆಸರಿನಲ್ಲಿ ಕಿರಣ್ ರಾಜ್ ಎನ್ನುವ ಒಂದು ಫೌಂಡೇಷನ್ ಹುಟ್ಟು ಹಾಕಿದ್ದಾರೆ. ಈ ಸಂಸ್ಥೆಯ ಮೂಲಕ ಆಗಾಗ ತಮಗೆ ಆದ ಒಂದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.
ಇದೀಗ ಕಿರಣ್ ರಾಜ್ ಶಾಲ ಮಕ್ಕಳಿಗೆ ನೆರವು ನೀಡಿದ್ದಾರೆ. ಅಂದರೆ ತಮ್ಮ ಫೌಂಡೇಶನ್ ಮೂಲಕ ಶಾಲೆ ಒಂದನ್ನು ದುರಸ್ತಿಗೊಳಿದ್ದಾರೆ. ಕಿರಣ್ ಕಾರ್ಯಕ್ಕೆ ಶಾಲಾ ಮಂಡಳಿ ಮೆಚ್ಚುಗೆ ಸೂಚಿಸಿದೆ.

ಬೆಂಗಳೂರಿನ ರಾಮಸಂದ್ರದ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳು, ಶೀತಲಗೊಂಡಿದ್ದ ತಮ್ಮ ಶಾಲೆಯನ್ನು ದುರಸ್ತಿ ಮಾಡಿಕೊಡುವಂತೆ ಕಿರಣ್ ರಾಜ್ ಫೌಂಡೇಶನ್‌ಗೆ ಮನವಿ ಮಾಡಿಕೊಂಡಿದ್ದರಂತೆ. ಮಕ್ಕಳ ಮನವಿಯಂತೆ ಶಾಲೆಯನ್ನು ದುರಸ್ತಿ ಮಾಡಿ ಹೊಸ ರೂಪಕ್ಕೆ ತರಲಾಗಿದೆ.
ಇನ್ನು ಈ ಹಿಂದೆಯೂ ಕಿರಣ್ ರಾಜ್ ಸಾಮಾಜಿಕ ಕಾರ್ಯಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಕೊರೊನಾ ಸಮಯದಲ್ಲಿ ಮಂಗಳಮುಖಿಯರಿಗೆ ಕಿರಣ್ ರಾಜ್ ಸಹಾಯ ಮಾಡಿದ್ದರು. ಇದನ್ನು ನೆನೆದು ಮಂಗಳ ಮುಖಿಯರು ಭಾವುಕರಾಗಿದ್ದರು.

ಹಾಗೆ ಬೆಂಗಳೂರಿನ ಕೆಲವೆಡೆ ತೆರಳಿ ಬಡಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ್ದರು ಕಿರಣ್ ರಾಜ್. ಬಡ ಮಕ್ಕಳನ್ನು ಸ್ವತಃ ಭೇಟಿ ಮಾಡಿದ ಕಿರಣ್ ರಾಜ್, ಮಕ್ಕಳಿಗೆ ಅವಶ್ಯವಿರುವ ನೋಟ್ ಬುಕ್‌ಗಳನ್ನು ಕೊಟ್ಟಿದ್ದರು. ಕಿರಣ್ ರಾಜ್ ತಮ್ಮ ಗಳಿಕೆಯಲ್ಲಿ ಒಂದಷ್ಟು ಪಾಲನ್ನು ಬಡವರಿಗೆ ಸಹಾಯ ಮಾಡಲೆಂದೇ ಮೀಸಲಿಡುತ್ತಾರಂತೆ.


Click it and Unblock the Notifications











