"ನನ್ನ ಹುಟ್ಟುಹಬ್ಬವನ್ನು ನಿಮ್ಮ ಫ್ಯಾಮಿಲಿ ಡೇ ಅಂತ ಪರಿಗಣಿಸಿ" ಎಂದ ನಟ ಕಿರಣ್ ರಾಜ್

By ಅನಿತಾ ಬನಾರಿ

'ಕನ್ನಡತಿ' ಧಾರಾವಾಹಿಯ ಖ್ಯಾತಿಯ ನಟ ಕಿರಣ್ ರಾಜ್ ಅವರು ಜುಲೈ 5 ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕಿರುತೆರೆಯ ಖ್ಯಾತ ನಟರಲ್ಲಿ ಒಬ್ಬರಾದ ನಟ ಕಿರಣ್ ರಾಜ್ 'ಕನ್ನಡತಿ' ಧಾರಾವಾಹಿ ನಂತರ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿದರು. ಅದಕ್ಕೂ ಮೊದಲು 'ಕಿನ್ನರಿ' ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರೂ 'ಕನ್ನಡತಿ' ಇವರಿಗೆ ಕೊಟ್ಟ ಜನಪ್ರಿಯತೆ ಬಹು ದೊಡ್ಡದು.

'ಕನ್ನಡತಿ' ಧಾರಾವಾಹಿ ನಂತರ ಹಲವು ಸಿನಿಮಾಗಳಲ್ಲಿ ಆಫರ್ ಗಿಟ್ಟಿಸಿಕೊಂಡಿರುವ ನಟ ಕಿರಣ್ ರಾಜ್ ಅವರು ಸದ್ಯಕಂತೂ ಹಿರಿತೆರೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಇದೀಗ ವಿಶೇಷವೆಂದರೆ, ಇಂದು (ಜುಲೈ 5) ನಟ ಕಿರಣ್ ರಾಜ್ ಅವರ ಹುಟ್ಟು ಹಬ್ಬವಾಗಿದ್ದು, ಅದನ್ನು ಬಹಳ ವಿಶೇಷವಾಗಿ ಆಚರಿಸೋಣ ಎಂದು ತಮ್ಮ ಫ್ಯಾನ್ಸ್‌ ಗೆ ಕರೆ ನೀಡಿದ್ದರು ನಟ ಕಿರಣ್ ರಾಜ್.

Actor Kiran Raj about his birthday celebration

ಹೌದು, ಇಂದು ನಟ ಕಿರಣ್ 31ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಹೀಗಿರುವಾಗ ಇವರ ಅಭಿಮಾನಿಗಳು ಬಹಳ ಖುಷಿಯಿಂದ ಇವರ ಹುಟ್ಟುಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸುವ ಉತ್ಸಾಹವನ್ನು ತೋರಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ನಟ ಕಿರಣ್ ರಾಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಶೇಷವಾದ ಬೇಡಿಕೆ ಇಟ್ಟಿದ್ದರು.

"ಜುಲೈ 5 ನನ್ನ ಹುಟ್ಟುಹಬ್ಬ ನಿಮ್ಮ ಪ್ರೀತಿಯ ಆಶೀರ್ವಾದ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಆದರೆ ಈ ಬಾರಿ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸೋಣ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಎಲ್ಲರೂ ಈ ದಿನವನ್ನು ಫ್ಯಾಮಿಲಿ ಡೇ ಅಂತ ಪರಿಗಣಿಸಿ. ನಿಮ್ಮ ನಿಮ್ಮ ಕುಟುಂಬದವರೊಂದಿಗೆ ಒಳ್ಳೆಯ ಸಮಯವನ್ನು ಕಳೆಯಿರಿ. ನಿಮ್ಮ ಕುಟುಂಬಸ್ಥರನ್ನು ಹೊರಗೆ ಕರೆದುಕೊಂಡು ಹೋಗಿ ಅವರೊಂದಿಗೆ ಕ್ವಾಲಿಟಿ ಟೈಮ್ ಕಳೆಯುವ ಮೂಲಕ ಈ ದಿನವನ್ನು ಅರ್ಥಪೂರ್ಣ ಮಾಡಿ" ಎಂದು ಎರಡು ದಿನಗಳ ಹಿಂದೆ ತಮ್ಮ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ನಟ ಕಿರಣ್ ರಾಜ್ ಬರೆದುಕೊಂಡಿದ್ದರು.

"ನೀವು ಈ ರೀತಿ ನಿಮ್ಮ ಕುಟುಂಬಸ್ಥರೊಂದಿಗೆ ಸಮಯ ಕಳೆದರೆ ನನಗೆ ಅದೇ ಬಹುದೊಡ್ಡ ಉಡುಗೊರೆ. ನನಗೆ ಬೇರೆ ಬೇರೆ ರೀತಿಯ ಉಡುಗೊರೆಯನ್ನು ಕೊಡುವ ಬದಲು ಇದೊಂದು ವಿಚಾರವನ್ನು ಮಾಡಿದರೆ ನನಗೆ ಉಡುಗೊರೆ ಪಡೆದಷ್ಟೇ ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಸಾಧ್ಯವಾದರೆ ಬಡವರಿಗೆ ಅನ್ನದಾನ ಮಾಡಿ ಒಂದಷ್ಟು ಸಹಾಯವನ್ನು ಮಾಡಿ ಇದೇ ನೀವು ನನ್ನ ಬಗ್ಗೆ ಕೊಡುವ ಪ್ರೀತಿಯ ಸಂಕೇತ ಎಂದಿದ್ದಾರೆ" ನಟ ಕಿರಣ್ ರಾಜ್.

"ನೀವು ನಿಮ್ಮ ಕುಟುಂಬಸ್ಥರೊಂದಿಗೆ ಕಳೆದ ಸಂತೋಷ ಸಂತೋಷದ ಕ್ಷಣಗಳ ಫೋಟೋವನ್ನು ಕ್ಲಿಕ್ಕಿಸಿ ನನ್ನನ್ನು ಟ್ಯಾಗ್ ಮಾಡಿ ಬಹಳ ಸಂತೋಷ ಪಡುತ್ತೇನೆ" ಎಂದು ಬರೆದುಕೊಂಡಿದ್ದಾರೆ ನಟ ಕಿರಣ್ ರಾಜ್. ಅಂದಹಾಗೆ ನಟ ಕಿರಣ್ ರಾಜ್ ಅವರ ಈ ವಿಭಿನ್ನ ಕೋರಿಕೆಗೆ ಮನಸೋತ ನೆಟ್ಟಿಗರು ಅವರ ಈ ವಿಶೇಷವಾದ ಕಾನ್ಸೆಪ್ಟ್‌ಗೆ ಸೈ ಎಂದಿದ್ದಾರೆ. ಈ ಪೋಸ್ಟ್‌ಗೆ ನಾನಾ ರೀತಿಯ ಪಾಸಿಟಿವ್ ಕಾಮೆಂಟ್‌ಗಳು ಬಂದಿದೆ.

ಮೊದಲೇ ಹೇಳಿದಂತೆ ಸದ್ಯಕ್ಕೆ ನಟ ಕಿರಣ್ ರಾಜ್ ಬೆಳ್ಳಿ ತೆರೆಯ ಮೇಲೆ ಭರ್ಜರಿಯಾಗಿ ಕಾಣುವ ಕನಸು ಕಾಣುತ್ತಿದ್ದರು. ಅದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರ ಬಹುದೊಡ್ಡ ಬಜೆಟ್ ನ ಮೂವಿ ಆಗಿರುವ 'ರಾನಿ' ಬಿಡುಗಡೆಗೊಳ್ಳಲಿದ್ದು, ಬಹು ನಿರೀಕ್ಷಿತ ಸಿನಿಮಾ ಇದಾಗಿದೆ.

ಇದೇ ಆಗಸ್ಟ್‌ನಲ್ಲಿ 'ರಾನಿ' ಸಿನಿಮಾ ಬಿಡುಗಡೆಯಾಗಲಿದ್ದು, ಇದರಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಕಿರಣ್ ರಾಜ್ ತಮ್ಮ ವೃತ್ತಿ ಬದುಕಿಗೆ ಈ ಸಿನಿಮಾ ಒಳ್ಳೆಯ ತಿರುವು ಆಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

More from Filmibeat

Read more about: tv anitha banari ನಟ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X