ಕೋಮಲ್ ಕುರಿತ ಅಂತೆ-ಕಂತೆ ಪುರಾಣಕ್ಕೆ ಪೂರ್ಣ ವಿರಾಮವಿಟ್ಟ ಜಗ್ಗೇಶ್
'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ ಸ್ಯಾಂಡಲ್ ವುಡ್ ನ 'ಸೆನ್ಸೇಷನಲ್ ಸ್ಟಾರ್' ಕೋಮಲ್ ಸ್ಥಾನ ಪಡೆದಿದ್ದಾರೆ ಎಂಬ ಗಾಸಿಪ್ ನಿನ್ನೆಯಷ್ಟೇ ಬ್ರೇಕ್ ಆಗಿತ್ತು.
ಅಪ್ಪಿ ತಪ್ಪಿ ಈ ಅವಕಾಶವನ್ನು ನಟ ಕೋಮಲ್ ಒಪ್ಪಿಕೊಂಡರೆ, 'ಬಿಗ್ ಬಾಸ್' ಮನೆಯಲ್ಲಿ ಹಾಸ್ಯದ ಹೊನಲು ಹರಿಯುವುದು ಗ್ಯಾರೆಂಟಿ ಅಂತ ಎಲ್ಲರೂ ಭಾವಿಸಿದ್ದರು. ಕೋಮಲ್ ಕಚಗುಳಿ ಇರುವಾಗ 'ಬಿಗ್ ಬಾಸ್-4' ಟಿ.ಆರ್.ಪಿಗೆ ಏನು ಕಮ್ಮಿ ಎಂಬ ಲೆಕ್ಕಾಚಾರ ಕೂಡ ಮಾಧ್ಯಮ ವಲಯದಲ್ಲಿ ಆರಂಭ ಆಗಿತ್ತು. [ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!]
ಆದ್ರೀಗ, ಆ ಲೆಕ್ಕಾಚಾರ ಹಾಗೂ ಅಂತೆ-ಕಂತೆ ಪುರಾಣಕ್ಕೆ ಪೂರ್ಣ ವಿರಾಮ ಬಿದ್ದಂತಾಗಿದೆ. ನಟ ಕೋಮಲ್ 'ಬಿಗ್ ಬಾಸ್-4'ಗೆ ಹೋಗುವ ಬಗ್ಗೆ ಅವರ ಸಹೋದರ ನವರಸ ನಾಯಕ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ....

ಜಗ್ಗೇಶ್ ಟ್ವೀಟ್ ಮಾಡಿದ್ದಾರೆ
ತಮ್ಮ ಸಹೋದರ ಕೋಮಲ್ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ['ಬಿಗ್ ಬಾಸ್ ಕನ್ನಡ-4' ಅಡ್ಡದಿಂದ ಬಂದಿರುವ 'ಬಿಗ್' ಬ್ರೇಕಿಂಗ್ ನ್ಯೂಸ್ ಇದೇ..]

ಕೋಮಲ್ ಹೋಗ್ತಾರಾ?
''ಅಣ್ಣನಾಗಿ ಕೋಮಲ್ ನ ನನ್ನ ಖಾಸಗಿ ಕಾರ್ಯಕ್ರಮಕ್ಕೆ ಕರೆತರಲು ಏಗುತ್ತೇನೆ. ಇನ್ನೆಲ್ಲಿ ಅವನು 'ಬಿಗ್ ಬಾಸ್' ಮನೆಗೆ ಹೋಗೋದು. 'ಬಿಗ್ ಬಾಸ್'ನಲ್ಲಿ ಭಾಗವಹಿಸುತ್ತಾನೆಂದು ಕೇಳಿ ಒಬ್ಬನೇ ನಗುತ್ತಿದ್ದೆ'' ಅಂತ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಅಲ್ಲಿಗೆ, ಕೋಮಲ್ ಕತೆ ಕ್ಲಿಯರ್!
ಅಲ್ಲಿಗೆ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕೋಮಲ್ ಭಾಗವಹಿಸುವುದಿಲ್ಲ ಎಂಬುದು ಖಚಿತ.

ನಟಿ ತಾರಾ ಕೂಡ ಸ್ಪಷ್ಟಪಡಿಸಿದ್ದಾರೆ
'ಬಿಗ್ ಬಾಸ್' ಮನೆಗೆ ಹೋಗುವ ಆಸಕ್ತಿ ಇಲ್ಲ ಅಂತ ನಟಿ ಹಾಗೂ ರಾಜಕಾರಣಿ ತಾರಾ ಅನೂರಾಧ ಕೂಡ ಫೇಸ್ ಬುಕ್ ಮೂಲಕ ಸ್ಪಷ್ಟಪಡಿಸಿದ್ದಾರೆ. [ಎಲ್ಲಾ ಊಹಾಪೋಹಗಳ ಬಗ್ಗೆ ನಟಿ ತಾರಾ ಕೊಟ್ಟ ಸ್ಪಷ್ಟನೆ ಏನು?]

ಎರಡನೇ ವಿಕೆಟ್ ಡೌನ್!
ನಟಿ ತಾರಾ ಹಾಗೂ ನಟ ಕೋಮಲ್ ಸ್ಪರ್ಧಿಸುವುದಿಲ್ಲ ಅಂತ ಈಗ ಕ್ಲಿಯರ್ ಆಗಿರುವುದರಿಂದ 'ಬಿಗ್ ಬಾಸ್' ಮೂಲಗಳಿಂದ ಹೊರಬಿದ್ದ ಪ್ರಥಮ ಪಟ್ಟಿಯಲ್ಲಿ ಸದ್ಯಕ್ಕೆ ಎರಡು ವಿಕೆಟ್ ಡೌನ್ ಆದಂತಾಗಿದೆ.

ನಿಮ್ಮ ಪ್ರಕಾರ ಯಾರು ಇರಬೇಕು?
'ಬಿಗ್ ಬಾಸ್ ಕನ್ನಡ-4' ಮನರಂಜನಾತ್ಮಕವಾಗಿರಬೇಕು ಅಂದ್ರೆ ದೊಡ್ಮನೆಯಲ್ಲಿ ಯಾರೆಲ್ಲಾ ಇರಬೇಕು ಅಂತ ನೀವು ಬಯಸುತ್ತೀರಾ? ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ....


Click it and Unblock the Notifications











