'ಡಾಲರ್ಸ್ ಪೇಟೆ'ಯ ಮತ್ತೊಂದು ಫಸ್ಟ್ ಲುಕ್ ರಿಲೀಸ್

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನಲ್ಲಿ 'ಡಾಲರ್ಸ್ ಪೇಟೆ' ಸಿನಿಮಾ ಸದ್ದು ಮಾಡುತ್ತಿದೆ. ಈ ಸಿನಿಮಾ ಒಂದೊಂದಾಗೇ ಕ್ಯಾರೆಕ್ಟರ್‌ಗಳನ್ನು ರಿವೀಲ್ ಮಾಡುವುದಕ್ಕೆ ಶುರುಮಾಡಿದೆ. ಈಗ ಮತ್ತೊಂದು ಪಾತ್ರವನ್ನು ರಿವೀಲ್ ಮಾಡಲಾಗಿದೆ.

'ಡಾಲರ್ಸ್ ಪೇಟೆ' ಸಿನಿಮಾ ಟೈಟಲ್ ಮೂಲಕ‌ ಸಿನಿಪ್ರಿಯರನ್ನು ಸೆಳೆದಿತ್ತು. ಈಗ ಚಿತ್ರತಂಡ ಹೊಸ ಅಪ್‌ಡೇಟ್‌ ಅನ್ನು ಕೊಟ್ಟಿದೆ. ಕೆಲ ದಿನಗಳ ಹಿಂದೆ ಡಾನ್ ಪಳನಿ ಫಸ್ಟ್ ಲುಕ್ ರಿವೀಲ್ ಮಾಡಿತ್ತು. ಈಗ ಮತ್ತೊಂದು ಪಾತ್ರದ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ.

'ಡಾಲರ್ಸ್ ಪೇಟೆ' ಟೀಮ್ ಈಗ ಸಿನಿಮಾದಲ್ಲಿ ನಟಿಸುತ್ತಿರುವ ಮತ್ತೊಬ್ಬ ಪ್ರಮುಖ ಪಾತ್ರಧಾರಿಯನ್ನು ಪರಿಚಯಿಸಿದೆ. ಈಗಾಗಲೇ 'ಮದಗಜ' ಹಾಗೂ 'ಜೇಮ್ಸ್' ಅಂತಹ ಸಿನಿಮಾಗಳಲ್ಲಿ ನಟಿಸಿರೋ ಕುಶಾಲ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕುಶಾಲ್ಸ್ 'ಡಾಲರ್ಸ್ ಪೇಟೆ' ಸಿನಿಮಾದಲ್ಲಿ ರಾಜ ಅನ್ನೋ ಪಾತ್ರದಲ್ಲಿ ನಟಿಸಿದ್ದಾರೆ. ಇವರದ್ದೇ ಪೋಸ್ಟರ್ ಅನ್ನು ಚಿತ್ರತಂಡ ಈಗ ಬಿಡುಗಡೆ ಮಾಡಿದೆ. ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರೋ ಈ ಫಸ್ಟ್ ಲುಕ್ ಸಿನಿಪ್ರೇಮಿಗಳನ್ನು ಸೆಳೆಯುತ್ತಿದೆ.

Actor Kushal first look from the film Dollars Pete Released

'ಡಾಲರ್ಸ್ ಪೇಟೆ' ಸಿನಿಮಾವನ್ನು 'ಮಾರ್ಫಿ' ಹಾಗೂ 'ಮದಗಜ' ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರೋ ಮೋಹನ್ ಎನ್ ಮುನಿನಾರಾಯಣಪ್ಪ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ಈಗಾಗಲೇ 'ಡಾಲರ್ಸ್ ಪೇಟೆ' ಶೂಟಿಂಗ್ ಮುಗಿದಿದ್ದು, ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಸಿನಿಮಾ ಟೀಸರ್ ರಿಲೀಸ್ ಆಗುವ ಎಲ್ಲಾ ಸಾಧ್ಯತೆಗಳೂ ಇವೆ.

ಈ ಸಿನಿಮಾ ಹೈಪರ್ ಲಿಂಕ್ ಥ್ರಿಲ್ಲರ್ ಕಥೆಯನ್ನು ಆಧರಿಸಿದ ‌ಸಿನಿಮಾ. ಈ ಚಿತ್ರದಲ್ಲಿ ನಿರ್ದೇಶಕ ಲೂಸಿಯಾ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಆಕರ್ಷ್ ಕಮಲ, ವೆಂಕಟ್, ರಾಜ್, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ದಿಯಾ ಪೃಥ್ವಿ ಅಂಬರ್ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದತ್ತು ಬಣಕರ್, ಕೌಶಿಲ್, ರಾಘವೇಂದ್ರ, ಹೊನ್ನವಳ್ಳಿ, ಡ್ರಾಮಾ ಜೂನಿಯರ್ಸ್ ಮಹೇಂದ್ರ ನಟಿಸಿದ್ದಾರೆ.

ಅಂದ್ಹಾಗೆ, 'ಡಾಲರ್ಸ್ ಪೇಟೆ' ಸಿನಿಮಾದಲ್ಲಿ ಸೂರಜ್ ಜೋಯಿಸ್ ಟ್ಯೂನ್ ಹಾಕಿದ್ದಾರೆ. ಆನಂದ್ ಸುಂದರೇಶ ಕ್ಯಾಮರಾ ವರ್ಕ್‌ ಇದೆ. ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ.

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಸಿನಿಮಾಗಳು ಹೆಚ್ಚಾಗಿ ಸೆಟ್ಟೇರುತ್ತಿವೆ. ವಿಭಿನ್ನ ಕಂಟೆಂಟ್‌ಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದು ಬಹುತೇಕ ಹೊಸಬರ ಸಿನಿಮಾ ಆಗಿದ್ದರೂ, ಮಾಸ್ ಹಾಗೂ ಕಮರ್ಷಿಯಲ್ ಕಂಟೆಂಟ್‌ನಿಂದ ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿದೆ.

More from Filmibeat

English summary
Actor Kushal first look from the film Dollars Pete Released, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X