For Quick Alerts
  ALLOW NOTIFICATIONS  
  For Daily Alerts

  ನಟಿಯ ವಿರುದ್ಧ ದೂರು ನೀಡಿದ ನಟ ಮೋಹಿತ್ ರೈನಾ

  |

  ನಟ ಮೋಹಿತ್ ರೈನಾ ಸಹನಟಿ ಸೇರಿದಂತೆ ಒಟ್ಟು ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  'ದೇವೋಂಕಾ ದೇವ್ ಮಹಾದೇವ್' ಹಿಂದಿ ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ನಟಿಸುತ್ತಿದ್ದ ಮೋಹಿತ್ ರೈನಾ ನಟಿ ಸಾರಾ ಶರ್ಮಾ ಹಾಗೂ ಇನ್ನೂ ಇಬ್ಬರ ವಿರುದ್ಧ ಸುಲಿಗೆ, ಹತ್ಯೆ ಸಂಚು, ಸುಳ್ಳು ಮಾಹಿತಿ ಹಂಚಿಕೊಂಡ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.

  'ಮೋಹಿತ್ ರಾಯ್ ತೀವ್ರ ಸಂಕಷ್ಟದಲ್ಲಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್‌ರಂತೆ ಮೋಹಿತ್ ಸಹ ಆತ್ಮಹತ್ಯೆ ಮಾಡಿಕೊಳ್ಳಬಹುದು' ಎಂದು ಸಾರಾ ಶರ್ಮಾ ಟ್ವೀಟ್ ಮಾಡಿದ್ದರು.

  ಮೋಹಿತ್ ರಾಯ್‌ನ ಹಿತೈಷಿಗಳು ಎಂದು ಹೇಳಿಕೊಂಡಿದ್ದ ಇನ್ನೂ ಕೆಲವರು ಇದೇ ಮಾದರಿಯ ಟ್ವೀಟ್‌ಗಳನ್ನು ಮಾಡಿ 'ಸೇವ್ ಮೋಹಿತ್' ಹೆಸರಲ್ಲಿ ಅಭಿಯಾನ ಸಹ ಆರಂಭಿಸಿದ್ದರು. ಇದರ ಬಳಿಕ ಮೋಹಿತ್ ಕುಟುಂಬಸ್ಥರು ಮಾಧ್ಯಮಗಳನ್ನು ಸಂಪರ್ಕಿಸಿ ತಮ್ಮ ಮಗ ಆರಾಮವಾಗಿಯೇ ಇರುವುದಾಗಿ ಹೇಳಿದ್ದರು.

  ನಂತರ ಮೋಹಿತ್ ರಾಯ್ ಮುಂಬೈನ ಗೋರೆಗಾಂವ್‌ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 348 ರ ಅಡಿಯಲ್ಲಿ ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

  ಪ್ರಕರಣದ ಬಗ್ಗೆ ಮಾತನಾಡಿರುವ ಮೋಹಿತ್ ರಾಯ್, 'ನನ್ನ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿರುವವರ ವಿರುದ್ಧ ಕಾನೂನು ಹೋರಾಟ ಮಾಡಲಿದ್ದೇನೆ. ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಪ್ರಕರಣವು ಬಾಂಬೆ ಹೈಕೋರ್ಟ್‌ನಲ್ಲಿದ್ದು ತಾಳ್ಮೆಯಿಂದ ಕಾದು ತಪ್ಪು ಮಾಡಿದವರಿಗೆ ಶಿಕ್ಷೆ ಆಗುವಂತೆ ಮಾಡಲಿದ್ದೇನೆ' ಎಂದಿದ್ದಾರೆ.

  'ಮಿಹರ್' ಧಾರಾವಾಹಿಯಿಂದ ನಟನೆ ಆರಂಭಿಸಿದ ಮೋಹಿತ್ ರೈನಾ 'ದೇವೋಂಕೆ ದೇವ್ ಮಹಾದೇವ್' ಧಾರಾವಾಹಿಯ ಶಿವನ ಪಾತ್ರದಿಂದ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ನಂತರ ನಟಿ ದಿಯಾ ಮಿರ್ಜಾ ಜೊತೆಗೆ ವೆಬ್ ಸರಣಿಯಲ್ಲಿ ಸಹ ನಟಿಸಿದರು.

  ಇನ್ನು ನಟಿ ಸಾರಾ ಶರ್ಮಾ ಸಹ ಕೆಲವು ಧಾರಾವಾಹಿಗಳನ್ನು ಹಾಗೂ ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Actor Mohit Raina lodge complaint against actress Sara Sharma in Mumbai's police station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X