ಮತ್ತೆ ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ನವೀನ್ ಕೃಷ್ಣ
ಕನ್ನಡ ಚಿತ್ರರಂದಲ್ಲಿ ಎರಡು ದಶಕಗಳಿಂದ ಸಕ್ರಿಯವಾಗಿರುವ ನಟ ನವೀನ್ ಕೃಷ್ಣ ಅವರಿಗೆ ನಟನೆ ಕೈ ಹಿಡಿಯಲೇ ಇಲ್ಲ. ಸಾಕಷ್ಟು ಚಿತ್ರಗಳಲ್ಲಿ ನಟಿಸಿದರೂ ಯಾವುದೂ ನವೀನ್ ಕೃಷ್ಣ ಅವರಿಗೆ ಹೆಸರು ತಂದುಕೊಡಲಿಲ್ಲ.
ನಟನೆಯಂತೂ ಕೈ ಹಿಡಿಯಲಿಲ್ಲ. ಬದಲಿಗೆ ಗಾಯಕರಾಗಿ ತಮ್ಮ ಲಕ್ ಅನ್ನು ಟೆಸ್ಟ್ ಮಾಡಿದರು. ಅದೂ ಕೂಡ ನವೀನಬ್ ಕೃಷ್ಣ ಅವರ ಗೆಲುವಿಗೆ ಸಹಾಯ ಮಾಡಲಿಲ್ಲ.
ಬಳಿಕ ನಟನೆ, ಗಾಯನ ಯಾವುದೂ ಅಲ್ಲ ಎಂದು ಕೈಯಲ್ಲಿ ಪೆನ್ನು ಹಿಡಿದು ಹ್ಯಾಟ್ ಧರಿಸಿದರು. ಕಳೆದ ಕೆಲ ವರ್ಷಗಳಿಂದ ನಿರ್ದೇಶನ, ಸಾಹಿತಿಯಾಗಿ ತಮ್ಮ ವೃತ್ತಿ ಜೀವನವನ್ನು ಮುಂದುವರಿಸಿದ್ದಾರೆ.

ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ನವೀನ್
ನವೀನ್ ಕೃಷ್ಣ ಕನ್ನಡ ಚಿತ್ರರಂಗದ ನಟ, ಸಾಹಿತಿ, ಗಾಯಕ, ನಿರ್ದೇಶಕರಾಗಿದ್ದಾರೆ. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರ ಮಗ ನವೀನ್ ಕೃಷ್ಣ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನವೀನ್ ಕೃಷ್ಣ ಅವರು 'ಪರಾಜಿತ' ಚಿತ್ರಕ್ಕೆ ಮೊದಲ ಬಾರಿಗೆ ನಟಿಸಿದರು. ಬಳಿಕ 'ಮಾತೃ ದೇವೋಭವ' ಚಿತ್ರದಲ್ಲಿ ನಟಿಸಿದರು. ಮುಂದೆ 'ಕದಂಬ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮಗನ ಪಾತ್ರದಲ್ಲಿ ಮಿಂಚಿದ್ರು. 'ಹಗ್ಗದ ಕೊನೆ', 'ಆಕ್ಟರ್', 'ನೆನಪಿರಲಿ', 'ಮತ್ತೊಂದು ಮದುವೆನಾ' ಸೇರಿದಂತೆ 45ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. 'ಧಿಮಾಕು' ಚಿತ್ರ ನವೀನ್ ಕೃಷ್ಣ ಅವರಿಗೆ ಸ್ವಲ್ಪ ಯಶಸ್ಸನ್ನು ತಂದು ಕೊಟ್ಟಿತು. ಆದರೆ, ಮತ್ಯಾವ ಚಿತ್ರವೂ ನವೀನ್ ಅವರ ನಟನೆಗೆ ಗೆಲುವು ತಂದು ಕೊಡಲಿಲ್ಲ.

ಧಾರಾವಾಹಿಗಳಲ್ಲಿ ಆಕ್ಟಿಂಗ್
ಇದೆಲ್ಲಾ ಸಾಕು ಎಂದು ಬೇಸರ ಮಾಡಿಕೊಂಡ ನವೀನ್ ಕೃಷ್ಣ ಅವರು ನಟನೆಯನ್ನು ಬಿಟ್ಟರು. ಆಗ ಹಲವರು ಬೇಸರ ಮಾಡಿಕೊಂಡರೂ, ನವೀನ್ ಕೃಷ್ಣ ಅವರಿಗೆ ಬೇರೆ ದಾರಿ ಇರಲಿಲ್ಲ. ಧಾರಾವಾಹಿಗಳಲ್ಲೂ ನವೀನ್ ಕೃಷ್ಣ ಅವರು ನಟನೆಯನ್ನು ಆರಂಭಿಸಿದರು. 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ನಟಿಸಿದರು. ಬಳಿಕ 'ಶ್ರೀ ವಿಷ್ಣು ದಶಾವತಾರ' ಧಾರಾವಾಹಿಯಲ್ಲಿ ಹಿರಣ್ಯ ಕಶ್ಯಪು ಪಾತ್ರದಲ್ಲಿ ಕಾಣಿಸಿಕೊಂಡು. ಇದೇ ಧಾರಾವಾಹಿ ತಮಿಳಿನಲ್ಲಿ 'ಶ್ರೀ ವಿಷ್ಣು ದಶಾವತಾರಂ' ಎಂದು ಮೂಡಿ ಬಂತು.

ಕೈ ಹಿಡಿದ ಡೈರೆಕ್ಟರ್ ಶಿಪ್
ಬಳಿಕ ಇದೂ ಬೇಡ ಎಂದು ನಿರ್ಧರಿಸಿದ ನವೀನ್ ಕೃಷ್ಣ ಅವರು ಡೈರೆಕ್ಷನ್ ಮಾಡಲು ಮುಂದಾದರು. 'ಗಿರಿಜಾ ಕಲ್ಯಾಣ' ಮತ್ತು 'ಪತ್ತೆದಾರಿ ಪ್ರತಿಭಾ' ಧಾರಾವಾಹಿಗಳನ್ನು ನಿರ್ದೇಶಿಸಿದರು. ಧಾರಾವಾಹಿಗಳು ಕೈ ಹಿಡಿಯಲು ಪ್ರಾರಂಭಿಸಿತು. ಬಳಿಕ ನವೀನ್ ಕೃಷ್ಣ ಅವರು ಸಿನಿಮಾಗಳಲ್ಲಿ ನಟಿಸುತ್ತಲೇ ಸಾಕಷ್ಟು ಧಾರಾವಾಹಿಗಳನ್ನು ನಿರ್ದೇಶಿಸಿದರು, ಜೀ ಕನ್ನಡ, ಸ್ಟಾರ್ ಸುವರ್ಣ ವಾಹಿನಿಗಳಲ್ಲಿ ನವೀನ್ ಕೃಷ್ಣ ಅವರ ಸೀರಿಯಲ್ ಗಳು ಪ್ರಸಾರ ಕಂಡಿವೆ. 'ಶ್ರೀ ಯಡಿಯೂರು ಸಿದ್ದಲಿಂಗೇಶ್ವರ', 'ಉಘೇ ಉಘೇ ಮಾದೇಶ್ವರ', 'ಕಮಲಿ', 'ರಾಧಾ ಕಲ್ಯಾಣ' ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.

ಧಾರಾವಾಹಿಯಲ್ಲಿ ನವೀನ್ ಹೀರೋ
ಇದೀಗ ನವೀನ್ ಕೃಷ್ಣ ಅವರು ಮತ್ತೊಂದು ಹೊಸ ಧಾರಾವಾಹಿಯಲ್ಲಿ ನಾಯಕ ನಟನಾಗಿ ಮಿಂಚಲಿದ್ದಾರೆ. ಜೀ ಕನ್ನಡದಲ್ಲಿ ಈಗಾಗಲೇ ಇದರ ಪ್ರೋಮೋ ಕೂಡ ರಿಲೀಸ್ ಆಗಿದೆ. 'ಭೂಮಿಗೆ ಬಂದ ಭಗವಂತ' ಎಂಬ ಧಾರಾವಾಹಿಯಲ್ಲಿ ನವೀನ್ ಕೃಷ್ಣ ಅವರು ನಟಿಸಲಿದ್ದಾರೆ. ನಟಿ ಕೃತಿಕಾ ರವೀಂದ್ರ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದು, ಪ್ರೋಮೋದಿಂದಲೇ ಪ್ರಶಂಸೆಯನ್ನೂ ಪಡೆದಿದ್ದಾರೆ. ಧಾರಾವಾಹಿ ಆದಷ್ಟು ಬೇಗ ಪ್ರೇಕ್ಷಕರು ಆಗಲಿ ಎಂದು ಪ್ರೇಕ್ಷಕರು ಬಯಸುತ್ತಿದ್ದಾರೆ.


Click it and Unblock the Notifications











